ಶೇರ್ ಇಟ್ ಅಪ್ಲಿಕೇಶನ್‌ಗೆ ಬದಲಿಯಾಗಿ ಲಭ್ಯವಿರುವ 5 ಆಪ್‌ಗಳು!

|

ಭಾರತ ಸರ್ಕಾರ ಚೀನಾ ಮೂಲದ ಆಪ್‌ಗಳನ್ನ ಬ್ಯಾನ್‌ ಮಾಡುವ ಚೀನಾಗೆ ಭರ್ಜರಿ ಹೊಡೆತ ನೀಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಭಾರತೀಯ ಬಳಕೆದಾರರು ಬಳಸುತ್ತಿದ್ದ 59 ಆಪ್‌ಗಳನ್ನ ಬ್ಯಾನ್‌ ಮಾಡಲಾಗಿದೆ. ಇದರಿಂದ ಚೀನಾ ದೇಶಕ್ಕೆ ಬರೆ ಹಾಕಿದಂತೆ ಆಗಿದೆ. ಭಾರತದಲ್ಲಿ ಚೀನಾ ಆಪ್‌ಗಳು ಭಾರಿ ಜನಪ್ರಿಯತೆಯನ್ನ ಹೊಂದಿದ್ದು, ಅದರಲ್ಲೂ ಜನಪ್ರಿಯ ಅಪ್ಲಿಕೇಶನ್‌ಗಳಾದ ಟಿಕ್‌ಟಾಕ್, ಶೇರ್‌ಇಟ್, ಮಿ ವಿಡಿಯೋ ಕಾಲ್, ಶೀನ್, ಹೆಲೋ, ಕ್ಸೆಂಡರ್ ನಂತಹ ಆಪ್‌ಗಳನ್ನ ಜನರು ನಿಯಮಿತವಾಗಿ ಬಳಸುತ್ತಿದ್ದರು ಮತ್ತು ಹಠಾತ್ ನಿಷೇಧವು ನಮ್ಮ ಕೆಲವು ಕಾರ್ಯಗಳಿಗೆ ಅಡಚಣೆ ಉಂಟು ಮಾಡಬಹುದು.

ಆಪ್‌

ಹೌದು, ಚೀನಾದ ಆಪ್‌ಗಳನ್ನ ಭಾರತದಲ್ಲಿ ಬ್ಯಾನ್‌ ಮಾಡಲಾಗಿದೆ. ಇದರಿಂದ ಕೆಲವು ಪ್ರಮುಖ ಕಾರ್ಯಗಳಿಗೆ ಬಳಸಲಾಗುತ್ತಿದ್ದ ಆಪ್‌ಗಳನ್ನು ಸಹ ನಿಷೇದಿಸಲಾಗಿದೆ. ಇನ್ನು ಇದರಲ್ಲಿ ಶೇರ್‌ಇಟ್‌ ಆಪ್‌ ಕೂಡ ಒಂದಾಗಿದೆ. ನಿಮಗೆಲ್ಲಾ ತಿಳಿದಿರುವ ಹಾಗೇ SHAREit ಆಪ್‌ ಫೈಲ್ ಟ್ರಾನ್ಸಪರ್‌, ವೀಡಿಯೋ, ಫೋಟೋ ಹಂಚಿಕೆ ಯಂತಹ ರ್ಕಾಗಳಿಗೆ ಬಹುತೇಕ ಬಳಕೆದಾರರು ಇದನ್ನೇ ಬಳಸುತ್ತಿದ್ದರು. ಆದರೆ ಇದೀಗ ಇದನ್ನ ಬ್ಯಾನ್‌ ಮಾಡಿರುವುದರಿಂದ SHAREit ಆಪ್‌ ಬದಲಿಗೆ ಬದಲಿಯಾಗಿ ಲಭ್ಯವಿರುವ ಇತರೆ ಫೈಲ್ ಹಂಚಿಕೆ ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Files By Google

Files By Google

Files By Google ಆಪ್ SHAREit ಗೆ ಪರ್ಯಾಯವಾಗಿ ಲಭ್ಯವಿರುವ ಜನಪ್ರಿಯ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಈ ಅಪ್ಲಿಕೇಶನ್ ಇತರ ಫೋನ್‌ಗಳೊಂದಿಗೆ ಫೈಲ್‌ಗಳನ್ನು ವಾಯರ್‌ಲೆಸ್‌ ಆಗಿ ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಆದರೆ ಫೈಲ್‌ ಸ್ವಿಕರಿಸುವ ವ್ಯಕ್ತಿಗೆ ಮಾತ್ರ ಬ್ಲೂಟೂತ್‌ನೊಂದಿಗೆ ಫೈಲ್ಸ್ ಅಪ್ಲಿಕೇಶನ್ ಅಗತ್ಯವಿರುತ್ತದೆ. ಗೂಗಲ್‌ನ ಫೈಲ್‌ಗಳು ಸಂಪೂರ್ಣವಾಗಿ ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಇನ್ನು ಈ ಅಪ್ಲಿಕೇಶನ್‌ ಮೂಲಕ ಇಂಟರ್ನೆಟ್ ಇಲ್ಲದೆ ಏನನ್ನೂ ಹಂಚಿಕೊಳ್ಳಬೇಕಾದರೆ ಇದು ಪ್ಲಸ್‌ ಪಾಯಿಂಟ್‌ ಆಗಿದೆ. ಇದರಲ್ಲಿ ಫೈಲ್‌ಗಳನ್ನು ಬ್ರೌಸ್ ಮಾಡಲು ಅಥವಾ ನಿಮ್ಮ ಫೋನ್ ಅನ್ನು ಅಸ್ತವ್ಯಸ್ತಗೊಳಿಸಲು ಫೈಲ್ ಮ್ಯಾನೇಜರ್ ಆಗಿ ಮತ್ತು ಜಂಕ್ ಕ್ಲೀನರ್ ಆಗಿ ಸಹ ಇದನ್ನು ಬಳಸಬಹುದಾಗಿದೆ.

ShareAll

ShareAll

ಚೀನೀ ಅಪ್ಲಿಕೇಶನ್‌ ಆದ SHAREit ಗೆ ಪರ್ಯಾಯವಾದ ಅಪ್ಲಿಕೇಶನ್‌ಗಳಲ್ಲಿ ShareAll ಕೂಡ ಒಂದಾಗಿದೆ. ಇನ್ನು ಇದೊಂದು ಭಾರತೀಯ ಅಪ್ಲಿಕೇಶನ್ ಆಗಿದ್ದು, ಶೇರ್ಆಲ್ ಅನ್ನು ದೆಹಲಿ ಮೂಲದ ಕಂಪನಿಯೊಂದು ಅಭಿವೃದ್ಧಿಪಡಿಸಿದೆ. ಇದರಲ್ಲಿ ಬಳಕೆದಾರರು ವೀಡಿಯೊಗಳು, ಚಿತ್ರಗಳು, ಚಲನಚಿತ್ರಗಳು, ಅಪ್ಲಿಕೇಶನ್‌ಗಳು ಮುಂತಾದ ಫೈಲ್‌ಗಳನ್ನು ಹಂಚಿಕೊಳ್ಳಲು ಮತ್ತು ಸ್ವೀಕರಿಸಬಹುದಾಗಿದೆ. ಇದಲ್ಲದೆ ಶೇರ್‌ಅಲ್ ಅಪ್ಲಿಕೇಶನ್ ಸಹ ಇಂಟರ್ನೆಟ್ ಅಥವಾ ಯಾವುದೇ ಮಿತಿಗಳಿಲ್ಲದೆ ಕಾರ್ಯನಿರ್ವಹಿಸುತ್ತದೆ. ಶೇರ್‌ಅಲ್ ಫೈಲ್ ಹಂಚಿಕೆ ಅಪ್ಲಿಕೇಶನ್ ಸಹ ಪಾಸ್‌ವರ್ಡ್ ರಕ್ಷಿತವಾಗಿದೆ.

Send Anywhere

Send Anywhere

ಚೀನಾದ SHAREit ಅಪ್ಲಿಕೇಶನ್‌ಗೆ ಪರ್ಯಾಯವಾದ ಅಪ್ಲಿಕೇಶನ್‌ ಗಳಲ್ಲಿ Send Anywhere ಅಪ್ಲಿಕೇಶನ್‌ ಕೂಡ ಒಂದಾಗಿದೆ. ಇನ್ನು ಈ ಅಪ್ಲಿಕೇಶನ್ ಬಳಕೆದಾರರು ವೈ-ಫೈ ಡೈರೆಕ್ಟ್ ಮೂಲಕ ಫೈಲ್‌ಗಳನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತದೆ. ಇದರಲ್ಲಿ ಫೈಲ್‌ಗಳನ್ನು ಹಂಚಿಕೊಳ್ಳುವಾಗ ವರ್ಧಿತ ಸುರಕ್ಷತೆಗಾಗಿ ಅಪ್ಲಿಕೇಶನ್ ಬಳಕೆದಾರರು 256-ಬಿಟ್ ಬಲವರ್ಧಿತ ಫೈಲ್ ಎನ್‌ಕ್ರಿಪ್ಶನ್ ಅನ್ನು ಸಹ ಬಳಸುತ್ತಾರೆ. ಅಲ್ಲದೆ ಬಳಕೆದಾರರು ತಾವು ಹಂಚಿಕೊಳ್ಳಲು ಬಯಸುವ ಫೈಲ್‌ಗಳಿಗೆ ಲಿಂಕ್ ಅನ್ನು ರಚಿಸಬಹುದು. ಅದನ್ನು ಬಹು ಜನರಿಗೆ ಕಳುಹಿಸಬಹುದು ಅಥವಾ ಸಾಮಾಜಿಕ ಮಾಧ್ಯಮ ಮತ್ತು ಸಂದೇಶ ಪ್ಲಾಟ್‌ಫಾರ್ಮ್‌ಗಳ ಮೂಲಕ ಹಂಚಿಕೊಳ್ಳಬಹುದು.

Nearby Sharing

Nearby Sharing

ಹೆಸರೇ ಸೂಚಿಸುವಂತೆ, ಇದು ಬಳಕೆದಾರರಿಗೆ ಫೈಲ್‌ಗಳು, ಚಿತ್ರಗಳು, ವೀಡಿಯೊಗಳನ್ನು ಇತರ ವಿಷಯಗಳ ನಡುವೆ ಹತ್ತಿರದ ಡಿವೈಸ್‌ಗಳಿಗೆ ಹಂಚಿಕೊಳ್ಳಲು ಅನುಮತಿಸುತ್ತದೆ. ಅಲ್ಲದೆ, Nearby Sharing ಅಪ್ಲಿಕೇಶನ್ ವಿಂಡೋಸ್, ಮ್ಯಾಕ್, ಲಿನಕ್ಸ್ ಮತ್ತು ಕ್ರೋಮ್ ಓಎಸ್‌ನೊಂದಿಗೆ ಹೊಂದಿಕೊಳ್ಳುತ್ತದೆ. ಪ್ರಸ್ತುತ, Nearby Sharing ಇನ್ನೂ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಲಭ್ಯವಾಗುವ ಸಾಧ್ಯತೆ ಇದೆ.

Superbeam

Superbeam

Superbeam ಅಪ್ಲಿಕೇಶನ್‌ ಶೇರ್‌ ಇಟ್‌ ಗೆ ಬದಲಿಯಾದ ಫೈಲ್-ಶೇರ್‌ ಅಪ್ಲಿಕೇಶನ್ ಆಗಿದ್ದು ಇದು ಸಹ SHAREit ನಂತೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಫೈಲ್‌ಗಳನ್ನು ಹಂಚಿಕೊಳ್ಳುವಾಗ ವರ್ಧಿತ ವೇಗಕ್ಕಾಗಿ ಸೂಪರ್‌ಬೀಮ್ ವೈ-ಫೈ ನೇರ ತಂತ್ರಜ್ಞಾನವನ್ನು ಸಹ ಬಳಸುತ್ತದೆ. ಸೂಪರ್‌ಬೀಮ್ ಮೂಲಕ ಫೈಲ್‌ಗಳನ್ನು ಹಂಚಿಕೊಳ್ಳಲು, ಬಳಕೆದಾರರು ಇಂಟರ್‌ಬಿಲ್ಟ್‌ ಕ್ಯೂಆರ್ ಕೋಡ್ ಸ್ಕ್ಯಾನರ್‌ ಜೊತೆಗೆ ಕ್ಯೂಆರ್ ಕೋಡ್ ಅನ್ನು ಬಳಸಬಹುದು ಇಲ್ಲವೇ ನಿಮಗೆ ಬೇಕದಾ ವರ್ಡ್‌ಗಳನ್ನ ಟೈಪ್ ಮಾಡಬಹುದಾಗಿದೆ.

Best Mobiles in India

English summary
Indian government has banned 59 Chinese apps, However, there are a couple of alternatives. Here are some of the file-sharing apps as alternatives to SHAREit and Xender.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X