Home
ಸುದ್ದಿಜಾಲ

ಇವತ್ತು ಒಂದು ಸರಿಯಾದರು ಅಮೆಜಾನ್ ಓಪನ್ ಮಾಡಿ..! ಯಾಕೆ ಅಂದ್ರಾ..?

By Srinidhi

ಅಮೆಜಾನ್ ಮತ್ತೊಂದು ಹೊಸ ಸೇಲ್‌ನೊಂದಿಗೆ ಕಾಣಿಸಿಕೊಂಡಿದ್ದು, ಸದ್ಯ ಇ ಕಾರ್ಮಸ್ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದೆ. ಕೇವಲ ತನ್ನ ಪ್ರೈಮ್ ಬಳಕೆದಾರರಿಗೆ ಮಾತ್ರವೇ ಖರೀದಿಸಲು ಆಫರ್ ನೀಡಿರುವ ಅಮೆಜಾನ್ ಸಾಕಷ್ಟು ಹೊಸ ವಸ್ತುಗಳನ್ನು ಸೇಲಿಗೆ ಇಟ್ಟಿದೆ. ಇದರಲ್ಲಿ ಬಳಕೆದಾರರಿಗೆ ಸಾಕಷ್ಟು ಜೇಬಿಗೆ ಲಾಭವನ್ನು ಮಾಡಿಕೊಡುವ ಪ್ರಯತ್ನದಲ್ಲಿದೆ.

ಇವತ್ತು ಒಂದು ಸರಿಯಾದರು ಅಮೆಜಾನ್ ಓಪನ್ ಮಾಡಿ..! ಯಾಕೆ ಅಂದ್ರಾ..?

ಕೇವಲ 36 ಗಂಟೆಗಳ ಮಾತ್ರವೇ ನಡೆಯಲಿರುವ ಅಮೆಜಾನ್ ಪ್ರೈಮ್ ಸೇಲ್ ನಲ್ಲಿ ಹೊಸದಾಗಿ ಒಟ್ಟು 200 ಬ್ರಾಂಡ್ ಹೊಸ ವಸ್ತುಗಳನ್ನು ಸೇಲ್ ಮಾಡುತ್ತಿದೆ. ಇದಲ್ಲದೇ ಎಲೆಕ್ಟ್ರಾನಿಕ್ ಸೇರಿದಂತೆ ಎಲ್ಲಾ ಮಾದರಿಯ ವಸ್ತುಗಳನ್ನು ಆಫರ್ ನಲ್ಲಿ ಖರೀದಿ ಮಾಡಬಹುದಾಗಿದೆ. ಇದಲ್ಲದೇ ಹೊಸ ವಿಡಿಯೋಗಳನ್ನು ಮತ್ತು ಮ್ಯೂಸಿಕ್ ಗಳನ್ನು ಆಡ್ ಮಾಡಿದೆ. ಈ ಹಿನ್ನಲೆಯಲ್ಲಿ ಅಮೆಜಾನ್ ಸೇಲ್ ನಲ್ಲಿ ನಿಮಗೆ ದೊರೆಯುತ್ತಿರುವ ಆಫರ್ ಗಳ ಕುರಿತು ಮಾಹಿತಿಯೂ ಮುಂದಿದೆ.

HDFC ಕಾರ್ಡುದಾರರು:

HDFC ಕಾರ್ಡುದಾರರು:

ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ಖರೀದಿ ಮಾಡುವವರಿಗೆ ಅನೇಕ ಆಫರ್ ಗಳು ಲಭ್ಯವಿದ್ದು, ಇದೇ ಮಾದರಿಯಲ್ಲಿ HDFC ಕಾರ್ಡುದಾರರಿಗೆ ಶೇ.10 ರಷ್ಟು ಕಡಿತವನ್ನು ನೀಡಲಾಗಿದೆ. ಇದಲ್ಲದೇ ಹೆಚ್ಚು ಪ್ರಮಾಣದಲ್ಲಿ ಖರೀದಿ ಮಾಡಿದರೆ ಹೆಚ್ಚು ಲಾಭವಾಗಲಿದೆ.

ಅಮೆಜಾನ್​ ಇಕೋ:

ಅಮೆಜಾನ್​ ಇಕೋ:

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಅಮೆಜಾನ್ ಅವರದ್ದೇ ಆದ ಅಮೆಜಾನ್ ಇಕೋ ಸ್ಮಾರ್ಟ್ ಸ್ಪೀಕರ್ ಬೆಲೆಯಲ್ಲಿ ಭಾರೀ ಕಡಿತ ಮಾಡಲಾಗಿದ್ದು, ರೂ.9999ಕ್ಕೆ ಈ ಹಿಂದಿ ಮಾರಾಟವಾಗುತ್ತಿತ್ತು. ಆದರೆ ಅಮೆಜಾನ್ ಪ್ರೈಮ್ ಡೇ ಸೇಲ್ ನಲ್ಲಿ ರೂ.6999ಕ್ಕೆ ದೊರೆಯುತ್ತಿದೆ. ಪ್ರೈಮ್​ ಡೇ ಆಫರ್​ನಲ್ಲಿ 2,499ಕ್ಕೆ ಈ ಇಕೋ ಡಾಟ್ ಅನ್ನು ಖರೀದಿ ಮಾಡಬಹುದಾಗಿದೆ.

ಸ್ಮಾರ್ಟ್ ವಾಚ್:

ಸ್ಮಾರ್ಟ್ ವಾಚ್:

ಮಾರುಕಟ್ಟೆಯಲ್ಲಿ ಉತ್ತಮವಾದ ಸ್ಮಾರ್ಟ್ ವಾಚ್ ಖರೀದಿ ಮಾಡಲು ಬಯಸುವವರಿಗೆ ಇಲ್ಲೊಂದು ಉತ್ತಮ ಆಫರ್ ಲಭ್ಯವಿದ್ದು, ಸ್ಯಾಮ್ ಸಂಗ್ ಗೇರ್ S3 ಸ್ಮಾರ್ಟ್ ವಾಚ್ ಬೆಲೆಯಲ್ಲಿ ರೂ.5000ದ ವರೆಗೂ ಕಡಿತ ಪಡೆಯಬಹುದಾಗಿದ್ದು, ರೂ.23500ಕ್ಕೆ ಮಾರಾಟವಾಗುತ್ತಿದೆ.

ಬೋಸ್ ಹೆಡ್ ಫೋನ್:

ಬೋಸ್ ಹೆಡ್ ಫೋನ್:

ಇದಲ್ಲದೇ ಬೆಸ್ಟ್ ಹೆಡ್ ಫೋನ್ ತಯಾರಿಕೆಯಲ್ಲಿ ಮುಂದಿರುವ ಬೋಸ್ ಹೆಡ್ ಫೋನ್ ಗಳನ್ನು ಪ್ರೈಮ್ ಡೇ ಸೇಲ್ ನಲ್ಲಿ ಆಫರ್ ಬೆಲೆಗೆ ಪಡೆದುಕೊಳ್ಳಬಹುದಾಘಿದೆ. ಬೋಸ್​ QC 25 ಹೆಡ್​ಫೋನ್​ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಮಾಡಿದ್ದು, ರೂ.25200ಕ್ಕೆ ಮಾರಾಟವಾಗುವ ಬೋಸ್​ QC 25 ಹೆಡ್​ಫೋನ್, ಪ್ರೈಮ್ ಡೇ ಸೇಲ್ ನಲ್ಲಿ ರೂ.12,600ಕ್ಕೆ ಮಾರಾಟವಾಗಲಿದೆ.

ಹುವಾವೆ P20 ಲೈಟ್:

ಹುವಾವೆ P20 ಲೈಟ್:

ಮಾರುಕಟ್ಟೆಯಲ್ಲಿ 24 MP ಸೆಲ್ಫಿ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡ ಹುವಾವೆ P20 ಲೈಟ್ ಸ್ಮಾರ್ಟ್ ಫೋನ್ ಬೆಲೆಯಲ್ಲಿ ರೂ.5000ದ ವರೆಗೂ ಕಡಿತವನ್ನು ಕಾಣಬಹುದಾಗಿದೆ. ಹುವಾವೆ P20 ಲೈಟ್ ಸ್ಮಾರ್ಟ್ ಫೋನ್ ಅನ್ನು ರೂ.17990ಕ್ಕೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
Best Amazon Prime Day 2018 deals. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+