ನ್ಯೂ ಇಯರ್‌ ಸೆಲೆಬ್ರೇಷನ್‌ಗೆ ಬ್ರೇಕ್‌? ವರ್ಚುವಲ್‌ ಪಾರ್ಟಿಗಳಿಗೆ ಈ ಆಪ್ಸ್‌ ಬಳಸಿ!

|

ಪ್ರಸಕ್ತ 2020ವರ್ಷ ಕ್ಕೆ ತೆರೆ ಎಳೆದು 2021ನೇ ವರ್ಷವನ್ನು ಸ್ವಾಗತಿಸುವುದಕ್ಕೆ ಕೆಲವು ಗಂಟೆಗಳಷ್ಟೇ ಬಾಕಿ ಇದೆ. 2020 ನೇ ವರ್ಷ ಹೆಚ್ಚಿನ ಸಮಯ ಕೊರೊನಾ ಹಾವಳಿಯಿಂದಲೇ ಕಳೆದಿದ್ದೇವೆ. ಇನ್ನು ಹೊಸ ವರ್ಷವನ್ನ ಸಂಭ್ರಮದಿಂದ ಸ್ವಾಗತಿಸುವುದಕ್ಕೆ ಜಗತ್ತಿನಾದ್ಯಂತ ಜನರು ಹೊಸ ಸಿದ್ದತೆಯಲ್ಲಿ ತೊಡಗಿದ್ದಾರೆ. ಆದರೆ ಕೊರೊನಾ ವೈರಸ್‌ನ ಕಾರಣದಿಂದಾಗಿ ಭಾರತದಲ್ಲಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ತೆರೆ ಬಿದ್ದಿದೆ. ದೆಹಲಿ, ಮುಂಬೈ ಮತ್ತು ಬೆಂಗಳೂರು ಸೇರಿದಂತೆ ಬಹುತೇಕ ಪ್ರಮುಖ ನರಗಳಲ್ಲಿ ರಾಜ್ಯ ಸರ್ಕಾರಗಳು ಕರ್ಫ್ಯೂ ವಿಧಿಸಲು ನಿರ್ಧರಿಸಿವೆ.

ಸೆಲೆಬ್ರೆಷನ್‌

ಹೌದು, ಹೊಸ ವರ್ಷವನ್ನು ಸ್ವಾಗತಿಸಲು ಭರ್ಜರಿ ತಯಾರಿಯಲ್ಲಿದ್ದ ಜನತೆಗೆ ಸರ್ಕಾರಗಳು ಬಿಗ್‌ ಶಾಕ್‌ ನೀಡಿವೆ. ನ್ಯೂ ಇಯರ್‌ ಸೆಲೆಬ್ರೆಷನ್‌ಗೆ ಕೊರೊನಾ ಕೊಳ್ಳಿ ಇಟ್ಟಿದೆ. ಅದರಲ್ಲೂ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನದಿಂದಲೇ ಸೆಕ್ಷನ್‌ 144 ಜಾರಿಯಲ್ಲಿದ್ದು ನಗರದಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದೆ. ಹೆಚ್ಚಿನ ಜನಸಂದಣಿ ಸೇರುವುದನ್ನು ನಿಷೇದಿಸಲಾಗಿದೆ. ಇಂತಹ ಸಂದರ್ಭದಲ್ಲಿ ನೀವು ಹೊಸ ವರ್ಷವನ್ನು ಸ್ವಾಗತಿಸಬೇಕದಾರೆ ವರ್ಚುವಲ್‌ ಪಾರ್ಟಿ ಮಾಡುವುದೊಂದೆ ದಾರಿ. ಹಾಗಾದ್ರೆ ನಿಷೇದಾಜ್ಞೆ ನಡುವೆಯೂ ಹೊಸ ವರ್ಷ ಸಂಭ್ರಮವನ್ನು ಆಚರಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಂಭ್ರಮ

ಕೊರೊನಾ ವೈರಸ್‌ನ ಕಾರಣದಿಂದಾಗಿ ಹೊಸ ವರ್ಷ ಸಂಭ್ರಮಾಚಾರಣೆಗೆ ಬೆಂಗಳೂರಿನಲ್ಲಿ ಬ್ರೇಕ್‌ ಹಾಕಲಾಗಿದೆ. ಮಧ್ಯಾಹ್ನ 12 ಗಂಟೆಯಿಂದಲೇ ನಿಷೇದಾಜ್ಞೆ ಜಾರಿ ಮಾಡುವ ಮೂಲಕ ಪಾರ್ಟಿ ಮಾಡುವ ಮೂಡ್‌ನಲ್ಲಿದ್ದ ಜನತೆಗೆ ಬಿಗ್‌ ಶಾಕ್‌ ನೀಡಲಾಗಿದೆ. ಸದ್ಯ ನಿಷೇದಾಜ್ಞೆ ಜಾರಿಯಲ್ಲಿರುವುದರಿಂದ ಈ ಹೊಸ ವರ್ಷ ಸಂಭ್ರಮವನ್ನು ಸ್ನೇಹಿತರೊಂದಿಗೆ ಆಚರಿಸಬೇಕಾದರೆ ವರ್ಚುವಲ್‌ ಪಾರ್ಟಿ ಮಾಡಬೇಕಾದ ಅನಿವಾರ್ಯತೆ ಇದೆ. ಇದಕ್ಕಾಗಿ ಜೂಮ್, ಫೇಸ್‌ಬುಕ್‌ನಂತಹ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ವರ್ಚುವಲ್ ಪಾರ್ಟಿಯನ್ನು ಆಯೋಜಿಸಬಹುದಾಗಿದೆ. ಸದ್ಯ ಹೊಸ ವರ್ಷ ಸಂಭ್ರಮವನ್ನು ಸ್ನೇಹಿತರ ಜೊತೆ ಆಚರಿಸಲು ಈ ಕೆಳಗಿನ ಅಪ್ಲಿಕೇಶನ್‌ಗಳು ಉಪಯುಕ್ತ ಎನಿಸಿಲಿವೆ.

ಹೌಸ್‌ಪಾರ್ಟಿ

ಹೌಸ್‌ಪಾರ್ಟಿ

ಸದ್ಯ ಬೆಂಗಳೂರಿನಲ್ಲಿ ನಿಷೇದಾಜ್ಞೆ ಜಾರಿಯಲ್ಲಿರುವುದರಿಂದ ನೀವು ಮನೆಯಲ್ಲಿಯೇ ಹೊಸ ವರ್ಷದ ಸಂಭ್ರಮವನ್ನು ಆಚರಿಸಬೇಕಾಗಿದೆ. ಹಾಗೊಮದು ವೇಳೆ ನ್ಯೂ ಇಯರ್‌ ಸೆಲೆಬ್ರೇಷನ್‌ ಮಾಡಬೇಕಾದರೆ ವರ್ಷುವಲ್‌ ಪಾರ್ಟಿ ಒಂದೇ ದಾರಿ. ಇದಕ್ಕಾಗಿ ನೀವು ಹೌಸ್‌ಪಾರ್ಟಿ ಅಪ್ಲಿಕೇಶನ್‌ ಅನ್ನು ಸಹ ಬಳಸಬಹುದಾಗಿದೆ. ಭಾರತಲ್ಲಿ ಲಾಕ್‌ಡೌನ್ ಘೋಷಿಸಿದಾಗ ಹೌಸ್‌ಪಾರ್ಟಿ ಅಪ್ಲಿಕೇಶನ್‌ ಕುಡ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಜೊತೆಗೆ ಸ್ನೇಹಿತರೊಂದಿಗೆ ವೀಡಿಯೊ-ಚಾಟ್ ಅನ್ನು ಸಹ ಮಾಡಬಹುದಾಗಿದೆ. ಈ ಅಪ್ಲಿಕೇಶನ್ ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಲಭ್ಯವಿದೆ. ಇನ್ನು ಮೀಟಿಂಗ್‌ ಸೇಷನ್‌ನಲ್ಲಿ ಗರಿಷ್ಠ 8 ಜನರು ಭಾಗವಹಿಸಬಹುದಾಗಿದೆ.

ಫೇಸ್‌ಬುಕ್ ಮೆಸೆಂಜರ್ ರೂಮ್ಸ್‌

ಫೇಸ್‌ಬುಕ್ ಮೆಸೆಂಜರ್ ರೂಮ್ಸ್‌

ಫೇಸ್‌ಬುಕ್ ಮೆಸೆಂಜರ್ ಮೆಸೆಂಜರ್ ರೂಮ್ಸ್ ಬಳಸಿ ಸಹ ನೀವು ವರ್ಚುವಲ್‌ ಪಾರ್ಟಿಯನ್ನು ಮಾಡಬಹುದಾಗಿದೆ. ಇದರಲ್ಲಿ ನೀವು 50 ಕಂಟ್ಯಾಕ್ಟ್‌ಗಳನ್ನು ಸೇರಿಸಬಹುದಾಗಿದೆ. ಅಲ್ಲದೆ ಫಿಲ್ಟರ್‌ಗಳನ್ನು ಬಳಸಬಹುದು, ಸಂದೇಶಗಳನ್ನು ಕಳುಹಿಸಬಹುದು ಮತ್ತು ಇತರ ಯಾವುದೇ ವೀಡಿಯೊ ಚಾಟ್ ಅಪ್ಲಿಕೇಶನ್‌ನಂತೆಯೇ ಗ್ಯಾಲರಿ ವೀಕ್ಷಣೆಯನ್ನು ನೀಡುತ್ತದೆ. ದೂರದ ಸ್ಥಳಗಳಿಂದ ಆನ್‌ಲೈನ್‌ನಲ್ಲಿ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಇದು ಉತ್ತಮ ಅಪ್ಲಿಕೇಶನ್‌ ಆಗಿದೆ.

ಇನ್‌ಸ್ಟಾಗ್ರಾಮ್‌ ಕೋ-ವಾಚಿಂಗ್‌

ಇನ್‌ಸ್ಟಾಗ್ರಾಮ್‌ ಕೋ-ವಾಚಿಂಗ್‌

ಇನ್ಸ್ಟಾಗ್ರಾಮ್ ಜಾಗತಿಕವಾಗಿ ಬಳಕೆದಾರರಿಗಾಗಿ ಕೋ-ವಾಚಿಂಗ್‌ ಫೀಚರ್ಸ್‌ ಅನ್ನು ಈಗಾಗಲೇ ಪರಿಚಯಿಸಿದೆ. ಇಲ್ಲಿ ಬಳಕೆದಾರರು ವೀಡಿಯೊ ಕಾಲ್‌ ಮೂಲಕ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಬಹುದು ಮತ್ತು ಏಕಕಾಲದಲ್ಲಿ ಹೆಚ್ಚಿನ ಸ್ನೇಹಿತರನ್ನು ಸೇರಿಸಬಹುದಾಗಿದೆ. ಅಲ್ಲದೆ ವೀಡಿಯೊ ಚಾಟ್ ಲೈವ್ ಆಗಿರುವಾಗ ಚಾಟ್ ವಿಂಡೋದಲ್ಲಿ ಸಂದೇಶಗಳು ಮತ್ತು ಫೋಟೋಗಳೊಂದಿಗೆ ಸಂವಹನ ನಡೆಸಲು ಇದು ನಿಮಗೆ ಅನುಮತಿಸುತ್ತದೆ. ಅಪ್ಲಿಕೇಶನ್‌ನ ಮೇಲಿನ ಬಲ ಮೂಲೆಯಲ್ಲಿರುವ ವೀಡಿಯೊ ಕ್ಯಾಮೆರಾ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಅಸ್ತಿತ್ವದಲ್ಲಿರುವ ವೀಡಿಯೊ ಚಾಟ್‌ನಲ್ಲಿ ಭಾಗವಹಿಸುವ ಮೂಲಕ ಈ ಫೀಚರ್ಸ್‌ ಅನ್ನು ಯಾರಾದರೂ ಸಕ್ರಿಯಗೊಳಿಸಬಹುದಾಗಿದೆ.

ಈವೆಂಟ್‌ ಬ್ರೈಟ್

ಈವೆಂಟ್‌ ಬ್ರೈಟ್

ಸದ್ಯ ಜನರು ವೈಯಕ್ತಿಕವಾಗಿ ಈವೆಂಟ್‌ಗಳಿಗೆ ಹಾಜರಾಗಲು ಸಾಧ್ಯವಾದರೂ, ಈವೆಂಟ್‌ಬ್ರೈಟ್ ಬಳಕೆದಾರರನ್ನು ಈವೆಂಟ್‌ನಲ್ಲಿ ಭಾಗವಹಿಸಿದ ಅನುಭವವನ್ನು ನೀಡಲಿದೆ. ಹೊಸ ವರ್ಷದ ಸಂಭ್ರಮವನ್ನು ನಿಮ್ಮ ಸ್ನೇಹಿತರೊಂದಿಗೆ ಕಳೆಯಲು ವರ್ಚುವಲ್‌ ಈವೆಂಟ್‌ ಆಯೋಜಿಸಲು ಈ ಅಪ್ಲಿಕೇಶನ್‌ ಕೂಡ ಉತ್ತಮ ಆಯ್ಕೆಯಾಗಿದೆ.

Best Mobiles in India

English summary
As we come closer to the final hours before the dates on the calendar read 2021, people across the globe are prepping their celebration plans for new year's eve.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X