ಉತ್ತಮ ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಖರೀದಿಸಬೇಕೆ..? ಇಲ್ಲಿವೆ ಅತ್ಯುತ್ತಮ ಆಯ್ಕೆಗಳು!
ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಆಗಾಗ ಹೊಸ ಹೊಸ ಆವಿಷ್ಕಾರಗಳು ಬರುತ್ತಲೇ ಇರುತ್ತವೆ ಆದರೆ ಬ್ಯಾಟರಿ ವಿಭಾಗದಲ್ಲಿ ಆ ರೀತಿಯ ಪರಿಣಾಮಕಾರಿ ಬದಲಾವಣೆ ಬಂದಿರುವುದು ಕಮ್ಮಿ ಎಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಗೆ ಅನುಕೂಲವಾಗಲೆಂದು ಸ್ಮಾರ್ಟ್‌ಫೋನ್ (Smartphones) ತಯಾರಿಕಾ ಕಂಪನಿಗಳು ತಮ್ಮ ಮೊಬೈಲ್‌ಗಳಿಗೆ ಉತ್ತಮ ಬ್ಯಾಟರಿ ಅಳವಡಿಸಿಕೊಳ್ಳುತ್ತಿರುವುದನ್ನು ನೋಡಿದ್ದೇವೆ. ಅದರಲ್ಲೂ ಪ್ರಮುಖವಾಗಿ ವಿವೊ, ಐಕ್ಯೂ, ಒನ್‌ಪ್ಲಸ್, ಮೊಟೊರೊಲಾ, ಸ್ಯಾಮ್‌ಸಂಗ್ ಕಂಪನಿಗಳು ಉತ್ತಮ ಬ್ಯಾಟರಿ ಅಳಡಿಸಿಕೊಳ್ಳುತ್ತಿವೆ. ಹಾಗಿದ್ರೆ ಜೂನ್ ತಿಂಗಳಲ್ಲಿ ಬಿಡುಗಡೆಯಾಗಿರುವ ಅತ್ಯುತ್ತಮ ಶ್ರೇಣಿಯ ಬ್ಯಾಟರಿ ಸೌಲಭ್ಯ ಹೊಂದಿರುವ ಕೆಲವು ಫೋನ್‌ಗಳ ಕುರಿತು ಈ ಲೇಖನದಲ್ಲಿ ನಾವು ಮಾಹಿತಿ ನೀಡಿದ್ದೇವೆ ನೋಡಿ.
ಅತ್ಯುತ್ತಮ ಬ್ಯಾಟರಿ ಫೋನ್‌ಗಳ ಪಟ್ಟಿ (ಜೂನ್ 2024):
Vivo Y58 5G:
6.72 ಇಂಚಿನ ಫುಲ್ HD+ (1,080x2,408 ಪಿಕ್ಸೆಲ್‌ಗಳ) LCD ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 1024 nits ಗರಿಷ್ಠ ಬ್ರೈಟ್‌ನೆಸ್ ಹೊಂದಿರುವ ಈ ಸಾಧನವು 44W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ಬೃಹತ್ 6,000 mAh ಬ್ಯಾಟರಿ ಹೊಂದಿದೆ. ಇದು 8GB ಯ LPDDR4X RAM ಮತ್ತು 128GB UFS 2.2 ಸಂಗ್ರಹಣೆ ಸಾಮರ್ಥ್ಯ ಹಾಗೂ ಸ್ನಾಪ್‌ಡ್ರಾಗನ್ 4 Gen 2 SoC ನಿಂದ ರನ್ ಆಗುತ್ತದೆ.

iQOO Z9x 5G:
6.72 ಇಂಚಿನ ಫುಲ್ HD+ IPS LCD ಡಿಸ್‌ಪ್ಲೇ, 120Hz ರಿಫ್ರೆಶ್ ರೇಟ್ ಮತ್ತು 1,000 nits ನ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಸಾಧನವು 8GB ವರೆಗಿನ LPDDR4x RAM ಮತ್ತು 128GB UFS 2.2 ಸಂಗ್ರಹಣೆಯೊಂದಿಗೆ ಸ್ನಾಪ್‌ಡ್ರಾಗನ್ 6 Gen 1 SoC ನಿಂದ ರನ್ ಆಗಲಿದೆ. ಈ ಸ್ಮಾರ್ಟ್‌ಫೋನ್ 44W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6,000 mAh ಉತ್ತಮ ಬ್ಯಾಟರಿ ವ್ಯವಸ್ಥೆ ಹೊಂದಿದೆ. ಚಿತ್ರಣಕ್ಕಾಗಿ 50MP ಡ್ಯುಯಲ್ ಕ್ಯಾಮೆರಾ ಸಿಸ್ಟಮ್ ಮತ್ತು 8MP ಸೆಲ್ಫಿ ಕ್ಯಾಮೆರಾ ಹೊಂದಿದೆ.
Vivo V30e:
6.78 ಇಂಚಿನ ಕರ್ವ್ಡ್ AMOLED ಡಿಸ್‌ಪ್ಲೇ ಜೊತೆಗೆ ಫುಲ್ HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಹೊಂದಿದೆ. ಸಾಧನವು 8GB RAM ಮತ್ತು 256GB ವರೆಗಿನ ಆಂತರಿಕ ಸಂಗ್ರಹಣೆ ಜೊತೆಗೆ ಸ್ನಾಪ್‌ಡ್ರಾಗನ್ 6 Gen 1 SoC ನಿಂದ ರನ್ ಆಗಲಿದೆ. ಇನ್ನು ಈ ಫೋನ್ 5,500 mAh ಬ್ಯಾಟರಿ ಘಟಕದ ಜೊತೆಗೆ 44W ವೇಗದ ಚಾರ್ಜಿಂಗ್ ಬೆಂಬಲ ಹೊಂದಿದೆ. ಚಿತ್ರಣಕ್ಕಾಗಿ OIS ಬೆಂಬಲದೊಂದಿಗೆ 50MP Sony IMX882 ಪ್ರಾಥಮಿಕ ಸೆನ್ಸಾರ್ ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ಕ್ಯಾಮೆರಾ ಹೊಂದಿದೆ. ಮುಂಭಾಗದಲ್ಲಿ, ಆಟೋಫೋಕಸ್ ಜೊತೆಗೆ 50MP ಸೆಲ್ಫಿ ಕ್ಯಾಮೆರಾ ಇದೆ.
OnePlus Nord CE4 5G:
6.7 ಇಂಚಿನ ಫುಲ್ HD+ (1,080x2,412 ಪಿಕ್ಸೆಲ್‌ಗಳು) AMOLED ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಹೊಂದಿದೆ. ಸಾಧನವು 8GB LPDDR4x RAM ಮತ್ತು 256GB ವರೆಗಿನ UFS 3.1 ಸಂಗ್ರಹಣೆಯೊಂದಿಗೆ ಸ್ನಾಪ್‌ಡ್ರಾಗನ್ 7 Gen 3 SoC ನಿಂದ ರನ್ ಆಗಲಿದೆ. 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,500 mAh ಬ್ಯಾಟರಿಯನ್ನು ಸಹ ಪ್ಯಾಕ್ ಮಾಡುತ್ತದೆ. 50MP ಮುಖ್ಯ ಕ್ಯಾಮೆರಾ ಮತ್ತು 8MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಹೊಂದಿದೆ. 16MP ಮುಂಭಾಗದ ಕ್ಯಾಮೆರಾ ಸೆನ್ಸಾರ್ ಹೊಂದಿದೆ ಮತ್ತು ಅಧಿಕೃತ IP54 ರೇಟಿಂಗ್ ಹೊಂದಿದೆ.
Vivo T3X 5G:
6.72-ಇಂಚಿನ ಫುಲ್ HD+ IPS LCD ಡಿಸ್‌ಪ್ಲೇ ಜೊತಗೆ 1,000 nits ನ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ರೇಟ್ ಜೊತೆಗೆ ಬರುತ್ತದೆ. ಡಿವೈಸ್ 8GB ವರೆಗಿನ LPDDR4x RAM ಮತ್ತು 128GB UFS 2.2 ಸಂಗ್ರಹಣೆಯೊಂದಿಗೆ ಸ್ನಾಪ್‌ಡ್ರಾಗನ್ 6 Gen 1 ಚಿಪ್‌ಸೆಟ್‌ನಿಂದ ನಡೆಸಲ್ಪಡುತ್ತದೆ. Vivo T3X 5G ಸಹ 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬೃಹತ್ 6,000 mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಛಾಯಾಚಿತ್ರಕ್ಕಾಗಿ ಇದು 50MP ಡ್ಯುಯಲ್ ಕ್ಯಾಮೆರಾ ಸೆಟಪ್ ಮತ್ತು 8MP ಸೆಲ್ಫಿ ಕ್ಯಾಮೆರಾ ಹೊಂದಿದೆ.
Moto G64 5G:
120Hz ರಿಫ್ರೆಶ್ ರೇಟ್ ಜೊತೆಗೆ 6.5 ಇಂಚಿನ ಫುಲ್ HD+ LCD ಡಿಸ್‌ಪ್ಲೇ ಹೊಂದಿದೆ. ಸಾಧನವು MediaTek ಡೈಮೆನ್ಸಿಟಿ 7025 SoC ಮೂಲಕ 12GB RAM ಮತ್ತು 256GB ವರೆಗಿನ ಆಂತರಿಕ ಸಂಗ್ರಹಣೆಯ ಆಯ್ಕೆ ಹೊಂದಿದೆ. 6,000 mAh ಬ್ಯಾಟರಿಯು 33W ವೇಗದ ಚಾರ್ಜಿಂಗ್‌ನೊಂದಿಗೆ ಸಾಧನವನ್ನು ಹೊಂದಿದೆ. ಇದು Android 14-ಆಧಾರಿತ My UX ಅನ್ನು ರನ್ ಮಾಡುತ್ತದೆ ಮತ್ತು OIS ಜೊತೆಗೆ 50MP ಪ್ರಾಥಮಿಕ ಸೆನ್ಸಾರ್ ಮತ್ತು 8MP ಅಲ್ಟ್ರಾವೈಡ್ ಲೆನ್ಸ್ ಸೇರಿದಂತೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 16MP ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಹೊಂದಿದೆ.
Samsung Galaxy M15 5G:
90Hz ರಿಫ್ರೆಶ್ ರೇಟ್ ಜೊತೆಗೆ 6.5 ಇಂಚಿನ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಹ್ಯಾಂಡ್‌ಸೆಟ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಜೊತೆಗೆ 6GB RAM ಮತ್ತು 128GB ROM ನೊಂದಿಗೆ ಸಂಯೋಜಿತವಾಗಿದೆ. ಇದು Android 14 OS ರಲ್ಲಿ ರನ್ ಮಾಡುತ್ತದೆ ಮತ್ತು 25W ಚಾರ್ಜಿಂಗ್ ಅನ್ನು ಬೆಂಬಲಿಸುವ 6,000 mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 50MP ಮುಖ್ಯ ಸೆನ್ಸಾರ್, 5MP ಅಲ್ಟ್ರಾ ವೈಡ್ ಸೆನ್ಸಾರ್ ಮತ್ತು 2MP ಮ್ಯಾಕ್ರೋ ಸೆನ್ಸಾರ್ ಸೇರಿದಂತೆ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.


Click it and Unblock the Notifications








