ಐದು ಉತ್ತಮ ಬ್ಲೂಟೂತ್ ವಾಯರ್‌ಲೆಸ್‌ ಸ್ಪೀಕರ್‌ಗಳು!

|

ತಂತ್ರಜ್ಞಾನದ ಮುಂದುವರಿದ ಭಾಗವೆಂದರೆ ವೈರ್‌ ಕಲೆಕ್ಷನ್ ಇಲ್ಲದ ಸ್ಪೀಕರ್‌ಗಳು ಈಗಾಗಲೇ ಮಾರುಕಟ್ಟೆಗೆ ದಾಂಗುಡಿ ಇಟ್ಟಿವೆ. ವೈರುಗಳಿಲ್ಲದ ವೈಫೈ, ಬ್ಲೂಟೂತ್ ಸಾಧನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಯುವಜನತೆ ತಮ್ಮ ನೆಚ್ಚಿನ ಹಾಡುಗಳನ್ನ ಕೇಳೋದಕ್ಕೆ ಇಯರ್ ಫೋನ್ ಬದಲಿಗೆ ಬ್ಲೂಟೂತ್ ಸ್ಪೀಕರ್‌ಗಳ ಬಳಕೆ ಜಾಸ್ತಿಯಾಗಿದೆ. ಸಧ್ಯ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸಗಳು, ವೈಶಿಷ್ಟ್ಯಗಳೊಂದಿಗೆ ಹಲವಾರು ಬ್ಲೂಟೂತ್‌ ಸ್ಪೀಕರ್‌ ಲಭ್ಯ ಇವೆ.

ಸ್ಪೀಕರ್‌

ಬ್ಲೂಟೂತ್ ಸ್ಪೀಕರ್‌ಗಳು ಮಾರುಕಟ್ಟೆಗೆ ಬಂದು ವರ್ಷಗಳೇ ಕಳೆದಿವೆ, ಜೊತೆಗೆ ಈ ಸ್ಪೀಕರ್‌ಗಳು ಕೇವಲ ಹಾಡು ಕೇಳಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಕೆಲವು ಬ್ಲೂಟೂತ್ ಸ್ಪೀಕರ್‌ಗಳಲ್ಲಿ ಬ್ಯಾಟರಿಯೂ ಇದ್ದು, ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿರುತ್ತವೆ. ಇದರಿಂದ ಸ್ಮಾರ್ಟ್ ಫೋನ್‌ಗಳನ್ನು ಚಾರ್ಜ್ ಮಾಡಬಹುದು. ಇನ್ನು ಕೆಲವು ಸ್ಪೀಕರ್‌ಗಳಲ್ಲಿ ಎಫ್ಎಂ ರೇಡಿಯೋ, ಟಾರ್ಚ್ ಸೌಲಭ್ಯಗಳೂ ಇರುತ್ತವೆ. ಕೆಲವು ಸ್ಪೀಕರ್‌ಗಳು ವಾಟರ್-ಪ್ರೂಫ್ ಆಗಿದ್ದು ಈಜುಕೊಳದಲ್ಲಿ ಈಜುತ್ತಾ ಹಾಡುಗಳನ್ನು ಕೇಳಲು ಸಾಧ್ಯವಿದೆ.

ಬ್ಲೂಟೂತ್

ಇನ್ನು ಬ್ಲೂಟೂತ್ ಸ್ಪೀಕರ್‌ಗಳಲ್ಲಿ ಎಲ್ಲಕ್ಕಿಂತ ಮುಖ್ಯವಾಗಿರೋದು ಅದರ ಸಿಸ್ಟಮ್‌ ಸೌಂಡ್‌. ಇದರಿಂದ ಮೋನೋಗಿಂತಲೂ ಸ್ಟೀರಿಯೋ ಸಿಸ್ಟಮ್‌ ಇರುವ ಸ್ಪೀಕರ್‌ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತೆ. ಅಲ್ಲದೆ ಸಾಧ್ಯವಾದಷ್ಟು ಹಗುರವಾದ, ಮತ್ತು ಒಯ್ಯಲು ಸುಲಭವಾದ ಗಾತ್ರದಲ್ಲಿದ್ದರೆ ಉತ್ತಮ. ಅಷ್ಟೇ ಅಲ್ಲದೆ, ಹೆಚ್ಚುವರಿ ವೈಶಿಷ್ಟ್ಯಗಳ ಬಗ್ಗೆ ಕೂಡ ಗಮನ ನೀಡಬೇಕಾಗುತ್ತೆ. ಸಧ್ಯ ಮಾರುಕಟ್ಟೆಯಲ್ಲಿ ಯಾವೆಲ್ಲ ಬ್ಲೂಟೂತ್‌ ಸ್ಪೀಕರ್‌ಗಳಿವೆ, ಅವುಗಳ ವಿಶೇಷತೆಯೇನು ಅನ್ನೊದನ್ನ ತಿಳಿಯೋಣ ಬನ್ನಿ.

ಜೆಬಿಎಲ್ ಜಾರ್ಜ್ 3

ಜೆಬಿಎಲ್ ಜಾರ್ಜ್ 3

ಜೆಬಿಎಲ್ ಜಾರ್ಜ್‌ 3 ಬ್ಲೂಟೂತ್‌ ಸ್ಪೀಕರ್‌ ಧ್ವನಿ ಮತ್ತು ಸಂಗೀತದ ನಡುವೆ ಸಮತೋಲನವನ್ನ ಕಾಪಾಡುತ್ತದೆ. ಇನ್ನು ಇದು ಗಾತ್ರದಲ್ಲಿ ಹಗುರವಾಗಿದ್ದು 798ಗ್ರಾಂ ತೂಕ ಹೊಂದಿದೆ.ಇದರ ಬ್ಯಾಟರಿ ಸಾಮರ್ಥ್ಯವು ಉತ್ತಮವಾಗಿದ್ದು 20ಗಂಟೆಗಳ ಕಾಲ ಕಾರ್ಯನಿರ್ವಹಣೆ ಮಾಡಲಿದೆ. ಇದರ ವೈರ್‌ಲೆಸ್‌ ರೇಂಜ್‌ 30+ ಫೀಟ್‌ ಹೊಂದಿದ್ದು ಫ್ರೀಕ್ವೆನ್ಸಿ 65Hz - 20kHz ಆಗಿದೆ.ಇದರ ಬ್ಲೂಟೂತ್‌ ವರ್ಷನ್‌ 3.0ಆಗಿದ್ದು ಯುಎಸ್‌ಬಿ ಚಾರ್ಜಿಂಗ್‌ ಆಪ್ಸನ್‌ ಕೂಡ ಹೊಂದಿದೆ.

ಬೋಸ್‌ ಸೌಂಡ್‌ಲಿಂಕ್‌ ಮಿನಿ II

ಬೋಸ್‌ ಸೌಂಡ್‌ಲಿಂಕ್‌ ಮಿನಿ II

ಇದು ಇತ್ತೀಚಿನ ಬ್ಲೂಟೂತ್‌ ಸ್ಪೀಕರ್‌ ಆಗಿದ್ದು ಉತ್ತಮ ಸೌಂಡಿಂಗ್‌ ಸಿಸ್ಟಮ್‌ ಹೊಂದಿರುವ ವೈರ್‌ಲೆಸ್‌ ಸ್ಪೀಕರ್‌ ಆಗಿದೆ. ಗಾತ್ರದಲ್ಲೂ ಕೂಡ ಹಗರುವಾಗಿದ್ದು ಕೇವಲ 667ಗ್ರಾಂ ತೂಕವಿದೆ. ಇದರ ಉದ್ದ ಆಗಲ 2 x 7.1 x 2.3 inche ಆಗಿದೆ. ಇದರ ಬ್ಯಾಟರಿ ಸಾಮರ್ಥ್ಯ 10ಗಂಟೆಗಳವರೆಗೂ ಕಾರ್ಯನಿರ್ವಹಿಸುತ್ತದೆ. ಇನ್ನು ವೈರ್‌ಲೆಸ್‌ ರೆಂಜ್‌ 30 ft (10 m)ಆಗಿದ್ದು ಫ್ರಿಕ್ವೇನ್ಸಿ ರೆಸ್ಪಾನ್ಸ್‌ ಉತ್ತಮವಾಗಿದೆ.

ಯುಇ ವಂಡರ್‌ಬೂಮ್‌

ಯುಇ ವಂಡರ್‌ಬೂಮ್‌

ಯುಇ ವಂಡರ್‌ಬೂಮ್‌ ಬ್ಲೂಟತ್‌ ಸ್ಪೀಕರ್‌ ಒನ್‌ ಆಫ್‌ದಿ ಬೆಸ್ಟ್‌ ಸೌಂಡಿಂಗ್‌ ವಾಟರ್‌ ಪ್ರೂಪ್‌ ಸ್ಪೀಕರ್‌ ಆಗಿದೆ. ಇದರ ತೂಕ ಕೇವಲ 425 ಗ್ರಾಂಗಳಿದ್ದು ಉದ್ದ-ಅಗಲ 102 x 93.5mm ಆಗಿದೆ. ಇನ್ನು ಇದರ ಬ್ಯಾಟರಿ ಸಾಮರ್ಥ್ಯ 10ಗಂಟೆಗೂ ಅಧಿಕವಿದ್ದು 100ಫಿಟ್‌ ವೈರ್‌ಲೆಸ್‌ ರೇಂಜ್‌ ಹೊಂದಿದೆ.ಅಲ್ಲದೆ ಫ್ರಿಕ್ವೆನ್ಸಿ ರೆಸ್ಪಾನ್ಸ್‌ 80 Hz - 20 kHz ಆಗಿದೆ.

ಬೋಸ್‌ ಸೌಂಡ್‌ಲಿಂಕ್‌ ಕಲರ್‌ II

ಬೋಸ್‌ ಸೌಂಡ್‌ಲಿಂಕ್‌ ಕಲರ್‌ II

ಈ ಮಾದರಿಯ ಸ್ಪೀಕರ್‌ಗಳು ವೈಬ್ರಂಟ್‌ ಬ್ಲೂಟೂತ್‌ ಸ್ಪೀಕರ್‌ ಆಗಿದ್ದು. ಉತ್ತಮ ಗುಣಮಟ್ಟದ ಸೌಂಡ್‌ ಸಿಸ್ಟಮ್‌ ನಿಂದ ಕೂಡಿವೆ. ಅಲ್ಲದೆ ಇದರ ಗಾತ್ರ 544 ಗ್ರಾಂಗಳಾಗಿದ್ದು ಹಗರುವಾಗಿದೆ. ಇನ್ನು 5.25 x 5 x 2.25 ಇಂಚು ಉದ್ದ-ಅಗಲವಿದ್ದು ಬ್ಯಾಟರಿ ಸಾಮರ್ಥ್ಯ 8 ಗಂಟೆಗಳಷ್ಟಿದೆ. ಅಲ್ಲದೆ ಇದರ ವೈರ್‌ಲೆಸ್‌ ರೇಂಜ್‌ 30 ಫೀಟ್‌ ಆಗಿದೆ.

ಮಾರ್ಷಲ್‌ ಕಿಲ್‌ಬರ್ನ್‌

ಮಾರ್ಷಲ್‌ ಕಿಲ್‌ಬರ್ನ್‌

ವಿಟೆಂಜ್‌ ಮಾದರಿಯನ್ನ ಹೊಂದಿರುವ ಈ ಬ್ಲೂಟೂತ್‌ ಸ್ಪೀಕರ್‌ ಉತ್ತಮ ಸೌಂಡ್‌ ಸಿಸ್ಟಮ್‌ ಹೊಂದಿದೆ. ಇದು ಗಾತ್ರದಲ್ಲಿ 3kg ತೂಕವಿದೆ.ಅಲ್ಲದೆ ಇದರ ಬ್ಯಾಟರಿ ಸಾಮರ್ಥ್ಯ 20ಗಂಟೆಗಳವರೆಗೂ ಇರಲಿದೆ. ಇದರ ಫ್ರಿಕ್ವೆನ್ಸಿ ರೆಸ್ಪಾನ್ಸ್‌ 62 - 20,000Hz ಆಗಿದೆ.

Best Mobiles in India

English summary
Bluetooth speakers have come a long way from being tinny and weak. They are now good enough to be used for your personal needs as well as a house party. All you need to worry about is charging them up, connecting them with your phone and tapping that play button.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X