2019ರ ಎಂಟು ಅತ್ಯುತ್ತಮ ಬ್ಲೂಟೂತ್ ಸ್ಪೀಕರ್‌ಗಳು!

|

ಇತ್ತೀಚಿನ ದಿನಗಳಲ್ಲಿ ಟೆಕ್‌ಲೋಕದಲ್ಲಿ ಬ್ಲೂಟೂತ್‌ ಸ್ಪೀಕರ್‌ಗಳು ಬಾರಿ ಯಶಸ್ಸನ್ನು ಸಾಧಿಸಿವೆ. ಸಂಗೀತದ ಆಲಾಪನೆ ಜೊತೆಗೆ ಇತರೆ ಕಾರ್ಯಗಳನ್ನು ಸಹ ಮಾಡಬಲ್ಲ ಸಾಕಷ್ಟು ಸ್ಮಾರ್ಟ್‌ಬ್ಲೂಟೂತ್‌ ಸ್ಪೀಕರ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಉತ್ತಮ ಫ್ರಿಕ್ವೇನ್ಸಿ ಜೊತೆಗೆ ಅತ್ಯುತ್ತಮ ಸ್ಪೀಕರ್‌ ಸಿಸ್ಟಂ, ಹೆಚ್ಚಿನ ಧ್ವನಿ ಗುಣಮಟ್ಟ ಹೊಂದಿರುವ ಬ್ಲೂಟೂತ್ ಸ್ಪೀಕರ್‌ಗಳು ಗ್ರಾಹಕರಿಗೆ ತುಂಬಾ ಇಷ್ಟವಾಗುತ್ತವೆ. ಆದ್ರೆ ಮಾರುಕಟ್ಟೆಯಲ್ಲಿ ಸಿಗೋ ಬ್ಲೂಟೂತ್‌ ಸ್ಪೀಕರ್‌ಗಳಲ್ಲಿ ಯಾವುದು ಉತ್ತಮ ಅನ್ನೊ ಗೊಂದಲ ಎಲ್ಲರಲ್ಲೂ ಇದ್ದೆ ಇದೆ.

ಮಾರುಕಟ್ಟೆ

ಹೌದು ಮಾರುಕಟ್ಟೆಗೆ ಹೊಸಹೊಸ ಬ್ಲೂಟೂತ್‌ ಸ್ಪೀಕರ್‌ಗಳು ಲಗ್ಗೆ ಹಾಕ್ತಾನೆ ಇವೆ. ಭಿನ್ನ ವಿಭಿನ್ನ ಮಾದರಿಯ ವೈಶಿಷ್ಟ್ಯಗಳನ್ನು ಹೊಂದಿರುವ ಬ್ಲೂಟೂತ್‌ ಸ್ಪೀಕರ್‌ಗಳು ಎಲ್ಲರನ್ನು ಸೆಳೆಯುತ್ತಿವೆ. ಉತ್ತಮ ಗುಣಮಟ್ಟದ ಜೊತೆಗೆ ಬಹಳಷ್ಟು ಸ್ಮಾಟ್‌ ಆಗಿರೋ ಬ್ಲೂಟೂತ್‌ ಸ್ಪೀಕರ್‌ಗಳು ಕೂಡ ಲಭ್ಯವಿದೆ. ಆದ್ರೆ ಅವುಗಳಲ್ಲಿ ಯಾವುದು ಉತ್ತಮ, ಯಾವ ಬ್ಲೂಟೂತ್‌ ಸ್ಪೀಕರ್‌ ನಿಮಗೆ ಉತ್ತಮ ಆಯ್ಕೆಯಾಗಿರುತ್ತೆ ಅನ್ನೊದಕ್ಕೆ ಉತ್ತರವನ್ನ ಈ ಲೇಖನದಲ್ಲಿ ತಿಳಿಸಕೊಡ್ತೀವಿ ನೋಡಿ

ಅಲ್ಟಿಮೇಟ್ ಇಯರ್ ಯುಇ ಮೆಗಾಬೂಮ್ 3

ಅಲ್ಟಿಮೇಟ್ ಇಯರ್ ಯುಇ ಮೆಗಾಬೂಮ್ 3

ಅತ್ಯುತ್ತಮ ಬ್ಲೂಟೂತ್ ಸ್ಪೀಕರ್ ಗಳಲ್ಲಿ ಅಲ್ಟಿಮೇಟ್ ಇಯರ್ ಯುಇ ಮೆಗಾಬೂಮ್ 3 ಸ್ಪೀಕರ್‌ ಕೂಡ ಒಂದು. ಈ ವೈರ್‌ಲೆಸ್ ಆಡಿಯೋ ಸ್ಪೀಕರ್ ಉತ್ತಮ ವಿನ್ಯಾಸವನ್ನ ಹೊಂದಿದ್ದು ಇದು ಸಂಪೂರ್ಣವಾಗಿ ವಾಟರ್‌ ಪ್ರೂಪ್ ಮತ್ತು ಧೂಳು ನಿರೋಧಕ ಸ್ಪೀಕರ್ ಆಗಿದೆ. ಇದರ ಗಾತ್ರ 8.9 x 3.4-ಇಂಚು ಇದ್ದು 90ಕಿಲೋ ಗ್ರಾಂನಷ್ಟು ತೂಕವನ್ನ ಹೊಂದಿದೆ. ಇದನ್ನು ಐಪಿಎಕ್ಸ್ 7 ನಿಂದ ವಿನ್ಯಾಸ ಮಾಡಲಾಗಿದ್ದು. ಇದರ ಬ್ಯಾಟರಿ ಅವಧಿ 20 ಗಂಟೆಗಳಾಗಿದ್ದು ಇದರ ಗರಿಷ್ಠ ಧ್ವನಿ ಮಟ್ಟ 90 ಡೆಸಿಬಲ್‌ವರೆಗೂ ಇರಲಿದೆ. ಇದರ ಬೆಲೆ 12995 ರೂ ಆಗಿದೆ.

ಬೋಸ್ ಸೌಂಡ್‌ಲಿಂಕ್ ರಿವಾಲ್ವ್ +

ಬೋಸ್ ಸೌಂಡ್‌ಲಿಂಕ್ ರಿವಾಲ್ವ್ +

ಈ ಮಾದರಿಯ ಬ್ಲೂಟೂತ್‌ ಸ್ಪೀಕರ್‌ಗಳು ಕೂಡ ಅತ್ಯುತ್ತಮ ಬ್ಲೂಟೂತ್‌ ಸ್ಪೀಕರ್ ಆಗಿದ್ದು ಕಾಂಪ್ಯಾಕ್ಟ್ ಮತ್ತು ಪೋರ್ಟಬಲ್ ವೈರ್‌ಲೆಸ್ ಸ್ಪೀಕರ್‌ಗಳಲ್ಲಿಯೇ ಇದು ಉತ್ತಮವಾದುದ್ದಾಗಿದೆ. ಅಷ್ಟೇ ಅಲ್ಲ ಧ್ವನಿ ಮತ್ತು ವಿನ್ಯಾಸಕ್ಕೆ ಬಂದಾಗ, ಬೋಸ್ ರಿವಾಲ್ವ್ ಪ್ಲಸ್ ಅನ್ನು ಸೋಲಿಸುವುದು ಕಷ್ಟ. ಈ ಆಲ್ ರೌಂಡರ್ ವೈರ್‌ಲೆಸ್ ಬ್ಲೂಟೂತ್ ಸ್ಪೀಕರ್ ಎಲ್ಲ ರೀತಿಯಲ್ಲೂ ಉತ್ತಮವಾಗಿದೆ. ಇದು ಲ್ಯಾಂಟರ್ನ್-ಶೈಲಿಯ ಫ್ಯಾಬ್ರಿಕ್ ಹ್ಯಾಂಡಲ್ ಅನ್ನು ಹೊಂದಿದ್ದು,ಕ್ಯಾರಿ ಮಾಡಲು ಸುಲಭವಾಗಿದೆ. ಇನ್ನು ಇದು ಐಪಿಎಕ್ಸ್ 4 ರೇಟ್ ನಿಂದ ಮಾಡಲ್ಪಟ್ಟಿದ್ದು ಇದರ ಬ್ಯಾಟರಿ ಲೈಫ್‌ 16 ಗಂಟೆಗಳ ಅವಧಿಯನ್ನು ಹೊಂದಿದೆ. ಅಲ್ಲದೆ ಆಪಲ್‌ನ ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್ ಅನ್ನು ಕೂಡ ಸಕ್ರಿಯಗೊಳಿಸಬಹುದಾಗಿದೆ. ಇದರ ಬೆಲೆ 19900 ರೂ ಆಗಿದೆ.

ಅಮೆಜಾನ್ ಎಕೋ ಸ್ಮಾರ್ಟ್ ವೈರ್‌ಲೆಸ್ ಸ್ಪೀಕರ್

ಅಮೆಜಾನ್ ಎಕೋ ಸ್ಮಾರ್ಟ್ ವೈರ್‌ಲೆಸ್ ಸ್ಪೀಕರ್

ಇದು ಅತ್ಯುತ್ತಮ ವೈರ್‌ಲೆಸ್ ಸ್ಪೀಕರ್ ಆಗಿದ್ದು ಇದು ಗಾತ್ರದಲ್ಲಿ 5.9 x 3.5 ಇಂಚುಇದ್ದು 822 ಗ್ರಾಂ ತೂಕವನ್ನ ಹೊಂದಿದೆ. ಈ ಸ್ಪೀಕರ್‌ನ ನಿಜವಾದ ಆಕರ್ಷಣೆಯೆಂದರೆ ಅಲೆಕ್ಸಾ, ಅಮೆಜಾನ್‌ನ ಡಿಜಿಟಲ್ ವಾಯ್ಸ್ ಅಸಿಸ್ಟೆಂಟ್, ಇದು ನಿಮ್ಮ ಇಮೇಲ್‌ಗಳನ್ನು ಓದಲು ಹವಾಮಾನವನ್ನು ಪರೀಕ್ಷಿಸುವುದರಿಂದ ಹಿಡಿದು ತ್ವರಿತ ಧ್ವನಿ ಆಜ್ಞೆಯೊಂದಿಗೆ ಎಲ್ಲವನ್ನೂ ಮಾಡಬಹುದಾಗಿದೆ. ಅಲ್ಲದೆ ನೀವು ಅಲೆಕ್ಸಾಗೆ ಉಲ್ಲಾಸದ ಉತ್ತರಗಳನ್ನು ನೀಡುವ ಕೆಲವು ತಮಾಷೆಯ ಪ್ರಶ್ನೆಗಳನ್ನು ಸಹ ಕೇಳಬಹುದಾಗಿದೆ. ಇದರ ಬೆಲೆ 7999ರೂ ಆಗಿದೆ.

ಯುಇ ಬೂಮ್ 2

ಯುಇ ಬೂಮ್ 2

ಕಡಿಮೆ ಬೆಲೆಗೆ ಉತ್ತಮವಾದ ಆಡಿಯೊ ಹೊಂದಿರುವ ಅತ್ಯುತ್ತಮ ಪೋರ್ಟಬಲ್ ಬ್ಲೂಟೂತ್‌ ಸ್ಪೀಕರ್ ಇದಾಗಿದೆ. ಸುಧಾರಿತ ಆಡಿಯೊ ಧ್ವನಿ ಗುಣಮಟ್ಟ ಮತ್ತು ಬಾಳಿಕೆಯನ್ನ ಹೊಂದಿದ್ದು ಇದು ಸ್ಟೇನ್-ರೆಸಿಸ್ಟೆಂಟ್, ಮತ್ತು ವಾಟರ್‌ ಪ್ರೂಫ್‌ ಆಗಿದೆ. ಇದು 544ಕಿಲೋ ಗ್ರಾಂ ತೂಕವನ್ನ ಹೊಂದಿದ್ದು ಇದರ ಬ್ಯಾಟರಿ ಜೀವಿತಾವಧಿ 15 ಗಂಟೆಗಳು ಇರಲಿದೆ. ಇದರ ಫ್ರಿಕ್ವೇನ್ಸಿ ರೇಸ್ಪಾನ್ಸ್‌ 90Hz-20kHz ಆಗಿದ್ದು, ಇದು 1.75ನ ಎರಡು ಡ್ರೈವರ್‌ಗಳನ್ನ ಒಳಗೊಂಡಿದೆ. ಇದರ ವೈರ್‌ಲೆಸ್‌ ರೇಂಜ್‌ 33 ಅಡಿಯಷ್ಟು ದೂರದವರೆಗೂ ಇರಲಿದೆ. ಇನ್ನು ಇದರ ಬೆಲೆ 7,563.ರೂ ಆಗಿದೆ.

ಫ್ಯೂಗೂ ಸ್ಟೈಲ್-ಎಸ್

ಫ್ಯೂಗೂ ಸ್ಟೈಲ್-ಎಸ್

ಫ್ಯೂಗೂ ಸ್ಟೈಲ್-ಎಸ್ ಉತ್ತಮ ಗುಣಮಟ್ಟದ ಬ್ಲೂಟೂತ್ ಸ್ಪೀಕರ್ ಆಗಿದ್ದು, ಇದು ಗಾತ್ರದಲ್ಲಿ 8.3 x 2.9 x 2.5 ಇಂಚು ಇದ್ದು ಇದರ ತೂಕ 765ಗ್ರಾಂ ಇದೆ. ಇದರ ಬ್ಯಾಟರಿ ಬಾಳಿಕೆ 15 ಗಂಟೆಗಳವರೆಗೆ ಬರಲಿದ್ದು, ಇದರ ವೈರ್‌ಲೆಸ್‌ ರೇಂಜ್‌ 30+ ಅಡಿ ದೂರದವರೆಗೂ ಬರಲಿದೆ. ಇದರ ಫ್ರಿಕ್ವೇನ್ಸಿ ರೆಸ್ಪಾನ್ಸ್‌ 60Hz -20kHz ರಷ್ಟಿದೆ.ಇದು 28 ಎಂಎಂ ನಿಯೋಡೈಮಿಯಮ್ ಹೊಂದಿದೆ. ಅಲ್ಲದೆ ಇದು 43 ಎಂಎಂ ಎಕ್ಸ್ ಮತ್ತು 54 ಎಂಎಂ ನಿಷ್ಕ್ರಿಯ ರೇಡಿಯೇಟರ್‌ಗಳನ್ನ ಒಳಗೊಂಡಿದೆ. ಇದರ ಬೆಲೆ 16,255ರೂ ಆಗಿದೆ.

ಜೆಬಿಎಲ್ ಚಾರ್ಜ್ 3

ಜೆಬಿಎಲ್ ಚಾರ್ಜ್ 3

ಜೆಬಿಎಲ್ ಚಾರ್ಜ್ 3 ದಿ ಬೆಸ್ಟ್‌ ಬ್ಲೂಟೂತ್‌ ಸ್ಪೀಕರ್‌ ಎನ್ನಲಾಗುತ್ತೆ. ಈ ಪೋರ್ಟಬಲ್ ವೈರ್‌ಲೆಸ್ ಬ್ಲೂಟೂತ್‌ ಸ್ಪೀಕರ್‌ ಪ್ರಭಾವಶಾಲಿ ಆಡಿಯೊ ಧ್ವನಿಯನ್ನು ಹೊಂದಿದೆ. ಅಷ್ಟೇ ಅಲ್ಲ ಇದರಲ್ಲಿರೋ ಯುಎಸ್‌ಬಿಗೆ ಫೋನ್‌ ಕನೆಕ್ಟ್‌ ಮಾಡಿ ಚಾರ್ಜ್ ಕೂಡ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಇದು ಕಾಂಪ್ಯಾಕ್ಟ್‌ ವಿನ್ಯಾಸವನ್ನು ಹೊಂದಿದ್ದು ಗಾತ್ರದಲ್ಲಿ 798ಗ್ರಾಂ ತೂಕ ಹೊಂದಿದೆ. ಇದರ ಬ್ಯಾಟರಿ ಜೀವಿತಾವಧಿ 20 ಗಂಟೆಗಳಷ್ಟಿದ್ದು, ಇದರ ವೈರ್‌ಲೆಸ್ ರೇಂಜ್ 30 ಅಡಿ ದೂರದವರೆಗೂ ಇರತಲಿದೆ.ಇನ್ನು ಇದರ ಪ್ರೀಕ್ವೇನ್ಸಿ ರೆಸ್ಪಾನ್ಸ್‌65Hz - 20kHzನಷ್ಟಿದ್ದು

ಇದು ಐಪಿಎಕ್ಸ್ 7 ರೇಟಿಂಗ್ ಹೊಂದಿದೆ. ಇದರ ಬೆಲೆ 6,358.ರೂ ಆಗಿದೆ.

ಟ್ರಿಬಿಟ್ ಎಕ್ಸ್‌ಸೌಂಡ್ ಗೋ

ಟ್ರಿಬಿಟ್ ಎಕ್ಸ್‌ಸೌಂಡ್ ಗೋ

ದಿ ಬೆಸ್ಟ್‌ ಬ್ಲೂಟೂತ್‌ ಸ್ಪೀಕರ್‌ಗಳಲ್ಲಿ ಟ್ರಿಬಿಟ್‌ ಎಕ್ಸ್‌ಸೌಂಡ್‌ ಗೋ ಕೂಡ ಒಂದಾಗಿದೆ. ಇದು ಸರಳವಾದ ಗೋಳಾಕಾರದ ವಿನ್ಯಾಸವನ್ನು ಹೊಂದಿದೆ, ಈ ಸ್ಪೀಕರ್ ಮಿನಿ ಹೋಮ್ ಥಿಯೇಟರ್ ವ್ಯವಸ್ಥೆಯಂತೆ ಸೌಂಡ್‌ಸಿಸ್ಟಮ್‌ ಅನ್ನ ಹೊಂದಿದೆ. ಇದು ಗಾತ್ರದಲ್ಲಿ 362ಗ್ರಾಂ ತೂಕ ಹೊಂದಿದ್ದು, ಇದರ ಪ್ರೀಕ್ವೇನ್ಸಿ ಸೆನ್ಸಾರ್‌85 - 20,000 Hzರಷ್ಟಿದೆ. ಇನ್ನು ಈ ಸ್ಪೀಕರ್‌ನ ಬ್ಯಾಟರಿ ಬಾಳಿಕೆ 24 ಗಂಟೆಗಳವರೆಗೆ ಬರಲಿದ್ದು, ವೈರ್‌ಲೆಸ್ ರೇಂಜ್‌ 30 ಅಡಿ ದೂರದವರೆಗೂ ಬರಲಿದೆ. ಇದರ ಬೆಲೆ 2,332 ರೂಗಳಾಗಿದೆ.

ಬೋಸ್ ಸೌಂಡ್‌ಲಿಂಕ್ ಮಿನಿ II

ಬೋಸ್ ಸೌಂಡ್‌ಲಿಂಕ್ ಮಿನಿ II

ಬೋಸ್‌ ಸೌಂಡ್‌ಲಿಂಕ್‌ ಮಿನಿ II ಸ್ಪೀಕರ್ ಅದ್ಭುತ ಧ್ವನಿಯನ್ನು ನೀಡುತ್ತದೆ. ಇದನ್ನ ಅಲ್ಟ್ರಾ ಕಾಂಪ್ಯಾಕ್ಟ್ ಸ್ಪೀಕರ್‌ನಿಂದ ವಿನ್ಯಾಸ ಮಾಡಲಾಗಿದ್ದು ನೀವು ನಿರೀಕ್ಷಿಸುವುದಕ್ಕಿಂತ ಹೆಚ್ಚಿನ ರೀತಿಯ ಸಂಪೂರ್ಣ, ನೈಸರ್ಗಿಕ ಧ್ವನಿಯನ್ನು ನೀಡುತ್ತದೆ. ಇನ್ನು ಈ ಸ್ಪೀಕರ್‌ನಿಂದ ಆಪಲ್‌ನ ಸಿರಿ, ಗೂಗಲ್‌ ನೌ,ಆಪ್ಲೀಕೇಶನ್‌ಗಳಿಗೂ ಕನೆಕ್ಟ್‌ ಮಾಡಬಹುದಾಗಿದ್ದು, ಇದನ್ನ ಮೈಕ್ರೋಪೋನ್‌ನಿಂದ ನಿಯಂತ್ರಿಸಬಹುದಾಗಿದೆ. ಇದರ ಬ್ಯಾಟರಿ ಅವಧಿ ಸರಾಸರಿ 10 ಗಂಟೆಗಳ ಕಾಲ ಬರಲಿದ್ದು ಇದರ ಬೆಲೆ 2,332 ರೂ ಆಗಿದೆ

Most Read Articles
Best Mobiles in India

Read more about:
English summary
The best Bluetooth speakers of today are quality and portable audio wireless speakers built with top notch sounding audio, stronger battery life for longer play time and a strong wireless Bluetooth connection signal and reception for optimum performance, both in the home or outdoors.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X