AC ಖರೀದಿಸಬೇಕೆ? ಫ್ಲಿಪ್‌ಕಾರ್ಟ್‌ನಲ್ಲಿ ಸಿಗ್ತಾ ಇದೆ ಭರ್ಜರಿ ಡಿಸ್ಕೌಂಟ್!
ಬೀರು ಬೇಸಿಗೆಯಿಂದ ಬಸವಳಿದಿರುವ ನಾವೆಲ್ಲಾ ತಂಪಾಗಿರುವ ಜಾಗ ಸಿಕ್ಕರೆ ಸಾಕು ಅಂತಾ ಬಯಸೋದು ಕಾಮನ್. ಆದರೆ ಆಧುನಿಕತೆಯ ಬಲೆಯಲ್ಲಿರುವ ಬೆಂಗಳೂರಿನಂತಹ ನಗರದಲ್ಲಿ ಬೀಸಿಲಿನ ತಾಪದಿಂದ ರಕ್ಷಿಸಿಕೊಳ್ಳಬೇಕಾದರೆ ಏರ್ ಕಂಡಿಷನರ್‌ಗಳ ಅವಶ್ಯಕತೆ ಇದೆ. ಆದರೆ ನಿಮಗೆ ಸೂಕ್ತವಾದ ಏರ್ ಕಂಡಿಷನರ್ ಯಾವುದು ಅನ್ನೊ ಗೊಂದಲ ಇದ್ದೆ ಇದೆ.
ಹೌದು, ಮನೆಗೊಂದು ಎಸಿ ಹಾಕಿಸಬೇಕು, ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಎಸಿ ಆಗಿರಬೇಕು ಅನ್ನೊ ಯೋಚನೆ ಇದೆಯಾ? ಹಾಗಾದ್ರೆ ಈ ಬೀರು ಬೇಸಿಗೆಯ ಸಮಯದಲ್ಲಿಯೂ ನೀವು ಎಸಿಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಲು ಫ್ಲಿಪ್‌ಕಾರ್ಟ್ ಅವಕಾಶ ನೀಡಿದೆ. 30 ರಿಂದ 60% ತನಕ ಡಿಸ್ಕೌಂಟ್ ಅನ್ನು ನೀಡ್ತಾ ಇದೆ. ಹಾಗಾದ್ರೆ ನೀವು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಏರ್ ಕಂಡಿಷನರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಯಾನಾಸೋನಿಕ್ 1.5 ಟನ್ 5 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ AC
ಪ್ಯಾನಾಸೋನಿಕ್ ಕಂಪೆನಿಯ ಪ್ಯಾನಾಸೋನಿಕ್ 1.5 ಟನ್ 5 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿಯು ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿದೆ. 63,400ರೂ. ಬೆಲೆಯ ಈ ಎಸಿಯ ಮೇಲೆ 29% ಡಿಸ್ಕೌಂಟ್ ಲಭ್ಯವಿದ್ದು, ಇದನ್ನು ನೀವು ಕೇವಲ 44,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಪ್ಯಾನಾಸೋನಿಕ್ ಎಸಿ AI ಟೆಕ್ನಾಲಜಿಯ MirAie ಅಪ್ಲಿಕೇಶನ್ ಅನ್ನು ಬೆಂಬಲಿಸಲಿದೆ. ಈ ಫೀಚರ್ಸ್ ನಿಮ್ಮ ಅದ್ಯತೆಗೆ ಅನುಗುಣವಾಗಿ ಎಸಿ ಟೆಂಪ್‌ರೇಚರ್ ಅನ್ನು ಸೆಟ್ ಮಾಡಲು ಅನುಮತಿಸಲಿದೆ. ಇದಲ್ಲದೆ ಈ AC ಯಲ್ಲಿರುವ PM 0.1 ಫಿಲ್ಟರ್ ಗಾಳಿಯನ್ನು ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದು, ನಿಮಗೆ ಗುಣಮಟ್ಟದ ಗಾಳಿಯನ್ನು ನೀಡಲಿದೆ.
ವರ್ಲ್‌ಪೂಲ್ ಮ್ಯಾಜಿಕ್ ಕೂಲ್ 15T 3S INV S3K1PP0
ವರ್ಲ್‌ಪೂಲ್ ಕಂಪೆನಿಯ ಈ ACಯ ಮೇಲೆ ಫ್ಲಿಪ್‌ಕಾರ್ಟ್ 45% ಡಿಸ್ಕೌಂಟ್ ನೀಡ್ತಾ ಇದೆ. ಆದರಿಂದ ಇದನ್ನು ನೀವು ಕೇವಲ 33,790ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ವರ್ಲ್‌ಪೂಲ್ ಮ್ಯಾಜಿಕೂಲ್ ಏರ್ ಕಂಡಿಷನರ್ 6 ನೇ ಸೆನ್ಸ್ ಇಂಟೆಲಿಕೂಲ್ ಟೆಕ್ನಾಲಜಿ ಹೊಂದಿದೆ. ಈ ಟೆಕ್ನಾಲಜಿಯ ಬಟನ್ ಅನ್ನು ಟ್ಯಾಪ್ ಮಾಡುವ ಮೂಲಕ ಟೆಂಪ್‌ರೇಚರ್ ಮತ್ತು ತೇವಾಂಶವನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ. ಇನ್ನು ಏರ್ ಕಂಡಿಷನರ್ ಕಡಿಮೆ ಶಬ್ದವನ್ನು ಹೊಂದಿದ್ದು, ದೀರ್ಘಾವಧಿಯ ಕಾರ್ಯಕ್ಷಮತೆಯನ್ನು ನೀಡಲಿದೆ.

ಮಾರ್ಕ್ಯೂ by 153SIAA22BW2
ಮಾರ್ಕ್ಯೂ ಕಂಪೆನಿಯ ಈ ಎಸಿಯು 1.5 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ 4-ಇನ್-1 ಟರ್ಬೊ ಕೂಲ್ ಟೆಕ್ನಾಲಜಿ AC ಆಗಿದೆ. ಇದರ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ 37% ರಿಯಾಯಿತಿ ಲಭ್ಯವಿದೆ. ಇದನ್ನು ನೀವು ಕೇವಲ 31,999ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಎಸಿಯ ವಿಶೇಷತೆ ಎಂದರೆ ಇದರಲ್ಲಿ ನೀವು ಸ್ಲೀಪ್ ಮೋಡ್, ಪಿಸ್ ಮೋಡ್, ಟರ್ಬೊ ಮೋಡ್ ಅನ್ನು ಸಹ ನೀಡಲಾಗಿದೆ.
ವರ್ಲ್‌ಪೂಲ್ Magicool 15T 5S INV CNV S3I3AD0
ಇದು ಕನ್ವರ್ಟಿಬಲ್ 4-ಇನ್-1 ಕೂಲಿಂಗ್ 2023 ಮಾಡೆಲ್ 1.5 ಟನ್ 5 ಸ್ಟಾರ್ ಸ್ಪ್ಲಿಟ್ ಇನ್‌ವರ್ಟರ್ 6ನೇ ಸೆನ್ಸ್ ಟೆಕ್ನಾಲಜಿ AC ಆಗಿದೆ. ಇದರ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ 43% ರಿಯಾಯಿತಿ ಲಭ್ಯವಾಗ್ತಿದೆ. ಆದರಿಂದ 70,600ರೂ. ಬೆಲೆಯ ಎಸಿಯನ್ನು ನೀವು ಕೇವಲ 39,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ವರ್ಲ್‌ಪೂಲ್ ಮ್ಯಾಜಿಕೂಲ್ ಏರ್ ಕಂಡಿಷನರ್ ಸ್ಮಾರ್ಟ್ ಸೆನ್ಸರ್‌ಗಳು ಮತ್ತು ಸುಧಾರಿತ ಅಲ್ಗಾರಿದಮ್‌ಗಳನ್ನು ಸಂಯೋಜಿಸುವ 6 ನೇ ಸೆನ್ಸ್ ಇಂಟೆಲಿಕೂಲ್ ತಂತ್ರಜ್ಞಾನವನ್ನು ಹೊಂದಿದೆ. ಅಲ್ಲದೆ ಬ್ರಶ್‌ಲೆಸ್ ಡೈರೆಕ್ಟ್ ಕರೆಂಟ್ ಮೋಟಾರ್ ಫ್ಯಾನ್‌ಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಇದರಿಂದ ಸ್ಮಾರ್ಟ್ ಸ್ಪೀಡ್ ಕಂಟ್ರೋಲ್ ಮತ್ತು ಹೆಚ್ಚಿನ ಟಾರ್ಕ್ ಕಾರ್ಯಾಚರಣೆಯನ್ನು ಕಾಣಬಹುದಾಗಿದೆ.

ಪ್ಯಾನಾಸೋನಿಕ್ 1.5 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ
ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ಪಡೆದುಕೊಂಡಿರುವ ಸ್ಪ್ಲಿಟ್ ಇನ್ವರ್ಟರ್ ಎಸಿಗಳಲ್ಲಿ ಇದು ಕೂಡ ಒಂದಾಗಿದೆ. ಇದರ ಮೇಲೆ ಫ್ಲಿಪ್‌ಕಾರ್ಟ್ 33% ಡಿಸ್ಕೌಂಟ್ ನೀಡ್ತಾ ಇದೆ. ಆದರಿಂದ ಈ ಎಸಿಯನ್ನು ನೀವು ಕೇವಲ 36,990ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇನ್ನು ಈ AC ಸ್ವಯಂ-ರೋಗನಿರ್ಣಯ ಫೀಚರ್ಸ್ ಅನ್ನು ಹೊಂದಿದೆ. ಇದು ಸಮಸ್ಯೆಗಳ ಮುನ್ಸೂಚನೆ ಸಿಕ್ಕ ತಕ್ಷಣವೆ ಬಳಕೆದಾರರಿಗೆ ಎಚ್ಚರಿಕೆಯನ್ನು ನೀಡಲಿದೆ.


Click it and Unblock the Notifications








