Home
ಸುದ್ದಿಜಾಲ

40,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಲ್ಯಾಪ್‌ಟಾಪ್‌ಗಳು!

ಜಗತ್ತಿನಾದ್ಯಂತ ಕೊರೊನಾ ವೈರಸ್‌ ಹರಡಿದ ನಂತರ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂದಿ ಇದೀಗ ಮನೆಯಿಂದಲೇ ಕೆಲಸ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳೆಲ್ಲಾ ಇಂದು ಆನ್‌ಲೈನ್‌ ಕ್ಲಾಸ್‌ ಮೊರ ಹೋಗುತ್ತಿದ್ದಾರೆ. ಸದ್ಯ ಇದರಿಂದಾಗಿ ಲ್ಯಾಪ್‌ಟಾಪ್‌ಗಳ ಬಳಕೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಸಾಕಷ್ಟು ಈ ಶ್ರೇಣಿಯ ಲ್ಯಾಪ್‌ಟಾಪ್‌ಗಳನ್ನ ಕಾಣಬಹುದಾಗಿದೆ. ಇನ್ನು ನೀವು ಅಲ್ಟ್ರಾ- ಥಿನ್‌ ಬೆಜೆಲ್ಸ್‌, ಹೊಂದಿರುವ ಲ್ಯಾಪ್‌ಟಾಪ್‌ಗಳನ್ನ ಸಹ ಕಾಣಬಹುದಾಗಿದೆ.

ಲ್ಯಾಪ್‌ಟಾಪ್‌

ಹೌದು, ಇದೀಗ ಎಲ್ಲೆಡೆ ವರ್ಕ್‌ಫ್ರಮ್‌ ಹೋಮ್‌, ಆನ್‌ಲೈನ್‌ ಕ್ಲಾಸ್, ಆನ್‌ಲೈನ್‌ ಕೋಚಿಂಗ್‌ ಇತ್ಯಾದಿ ಕಾರ್ಯಕ್ರಮಗಳು ಜಾಸ್ತಿಯಾಗಿರುವುದರಿಂದ ಲ್ಯಾಪ್‌ಟಾಪ್‌ಗಳ ಅವಶ್ಯಕತೆ ಹೆಚ್ಚಿದೆ. ಸ್ಮಾರ್ಟ್‌ಫೊನ್‌ಗಳಿಗಿಂತ ಲ್ಯಾಪ್‌ಟಾಪ್‌ನಲ್ಲಿಯೇ ಆನ್‌ಲೈನ್‌ ಕ್ಲಾಸ್ ಉತ್ತಮವಾಗಿರಲಿದೆ. ಅಲ್ಲದೆ ವರ್ಕಫ್ರಮ್‌ ಹೋಮ್‌ ಸುಲಭವಾಗಲಿದೆ. ಇದರಿಂದ ನೀವು ಕಡಿಮೆ ಬಜೆಟ್‌ ಬೆಲೆಯಲ್ಲಿ ಉತ್ತಮ ಗೇಮಿಂಗ್‌ ಅನುಭವ ನೀಡುವ, ಒಟಿಟಿ ಪ್ಲಾಟ್‌ಫಾರ್ಮ್‌ಗಳನ್ನ ಬೆಂಬಲಿಸುವ 40,000 ರೂ.ಗಿಂತ ಕಡಿಮೆ ಬೆಲೆಯ ಲ್ಯಾಪ್‌ಟಾಪ್‌ಗಳನ್ನ ಖರೀದಿಸುವುದಾದರೆ ಯಾವುದು ಉತ್ತಮ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Dell Inspiron 3493

Dell Inspiron 3493

ಲ್ಯಾಪ್‌ಟಾಪ್‌ಗಳ ಕಾರ್ಯಕ್ಷಮತೆಯ ವಿಚಾರಕ್ಕೆ ಬಂದಾಗ ಡೆಲ್ ಅತ್ಯಂತ ವಿಶ್ವಾಸಾರ್ಹ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. Dell Inspiron 3493 ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ ಹೆಚ್‌ಡಿ ಎಲ್ಇಡಿ ಡಿಸ್‌ಪ್ಲೇ ಹೊಂದಿದ್ದು,ಆಂಟಿ-ಗ್ಲೇರ್ ಹೊಂದಿದೆ. ಅಲ್ಲದೆ ಇದು 10 ನೇ ತಲೆಮಾರಿನ ಇಂಟೆಲ್ ಕೋರ್ I3 ಅನ್ನು ಹೊಂದಿದ್ದು ಅದು 3.4GHz ವರೆಗೆ ಗಡಿಯಾರವನ್ನು ಹೊಂದಿರುತ್ತದೆ. ಈ ಲ್ಯಾಪ್‌ಟಾಪ್‌ ಫುಲ್‌ ಚಾರ್ಜ್ ಮಾಡಿದ ನಾಲ್ಕು ಗಂಟೆಗಳ ನಂತರ ಸರಾಸರಿ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದು ಪ್ರಸ್ತುತ ಅಮೆಜಾನ್‌ನಲ್ಲಿ 38,867 ರೂಗಳಿಗೆ ಲಭ್ಯವಿದೆ.

ಲೆನೊವೊ ಥಿಂಕ್‌ಬುಕ್ 14

ಲೆನೊವೊ ಥಿಂಕ್‌ಬುಕ್ 14

ಲೆನೊವೊ ಥಿಂಕ್‌ಬುಕ್ 14 14 ಇಂಚಿನ ಪೂರ್ಣ ಎಚ್‌ಡಿ ಎಲ್ಇಡಿ ಡಿಸ್ಪ್ಲೇಯನ್ನು ಆಂಟಿ-ಗ್ಲೇರ್ ಹೊಂದಿದೆ. ಇದು 10 ನೇ ತಲೆಮಾರಿನ ಇಂಟೆಲ್ ಕೋರ್ ಐ 3 1.2 ಗಿಗಾಹರ್ಟ್ಸ್ ಪ್ರೊಸೆಸರ್ ಹೊಂದಿದೆ. ಇದು 4GB RAM ಮತ್ತು 1TB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ ಡಾಲ್ಬಿ ಆಡಿಯೊ ಹೊಂದಿರುವ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದೆ. ಅಲ್ಲದೆ ಇದು ಸಿಂಗಲ್ ಚಾರ್ಜ್‌ನಲ್ಲಿ 9 ಗಂಟೆಗಳವರೆಗೆ ಉಳಿಯುವ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ಪ್ರಸ್ತುತ ಅಮೆಜಾನ್‌ನಲ್ಲಿ 37,999 ರೂಗಳಿಗೆ ಲಭ್ಯವಿದೆ.

ASUS ವಿವೊಬುಕ್

ASUS ವಿವೊಬುಕ್

ಆಸುಸ್ ವಿವೋಬುಕ್ 15.6-ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು I3 6320 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಜೊತೆಗೆ 4GB RAM ಮತ್ತು 1TB ಹಾರ್ಡ್ ಡಿಸ್ಕ್ ಹೊಂದಿದೆ. ಅಲ್ಲದೆ ಇದು ವಿಂಡೋಸ್ 10 ಹೋಮ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಲ್ಯಾಪ್‌ಟಾಪ್ ಪ್ರಸ್ತುತ ಅಮೆಜಾನ್‌ನಲ್ಲಿ 36,999 ರೂಗಳಿಗೆ ಲಭ್ಯವಿದೆ.

HP 15s du2069TU

HP 15s du2069TU

HP15s ಲ್ಯಾಪ್‌ಟಾಪ್ 15.6 ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು 1.2GHz ಇಂಟೆಲ್ i3-1005G1 10 ನೇ ಜನ್ ಪ್ರೊಸೆಸರ್ ಅನ್ನು ಹೊಂದಿದೆ. ಇದು ಡ್ಯುಯಲ್ ಸ್ಪೀಕರ್ ಮತ್ತು ಇಂಟೆಲ್ UHD ಇಂಟಿಗ್ರೇಟೆಡ್ ಗ್ರಾಫಿಕ್ಸ್ ಅನ್ನು ಹೊಂದಿದೆ. ಇದು ವಿಂಡೋಸ್ 10 ಹೋಮ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಇದು ಆರು ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ಒದಗಿಸುತ್ತದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ ಅಮೆಜಾನ್‌ನಲ್ಲಿ 37,549 ರೂಗಳಿಗೆ ಲಭ್ಯವಿದೆ.

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3I

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3I

ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3i 10 ನೇ ತಲೆಮಾರಿನ ಇಂಟೆಲ್ ಕೋರ್ I3 ಪ್ರೊಸೆಸರ್‌ ಹೊಂದಿದ್ದು, 15.6-ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ ವಿಂಡೋಸ್ 10 ಹೋಮ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ 5.0 ಅನ್ನು ಸಹ ಹೊಂದಿದೆ. ಪ್ರಸ್ತುತ ಈ ಲ್ಯಾಪ್‌ಟಾಪ್‌ ಬೆಲೆ 34,990 ರೂಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
You won't get ultra-thin bezels, huge battery, or powerful processors in this range. These laptops are good for basic work, video calling, streaming content from OTT platforms, and very casual gaming.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+