Home
ಸುದ್ದಿಜಾಲ

ನಿಮಗೆ ಫೋಟೋಗ್ರಫಿ ಆಸಕ್ತಿ ಇದೆಯಾ? ಹಾಗಿದ್ರೆ ನಿಮಗಾಗಿ ಇಲ್ಲಿವೆ ₹30,000 ದೊಳಗಿನ ಬೆಸ್ಟ್‌ ಕ್ಯಾಮೆರಾ ಫೋನ್‌ಗಳು!

ಪ್ರಸ್ತುತ ದಿನಗಳಲ್ಲಿ ಮೊಬೈಲ್‌ ತಯಾರಿಕಾ ಕಂಪನಿಗಳು ನಾ ಮುಂದು ತಾ ಮುಂದು ಎಂಬಂತೆ ಹೊಸ ಹೊಸ ಬಗೆಯ ನೂತನ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು (Smartphones) ಬಿಡುಗಡೆ ಮಾಡುತ್ತಾ ಗ್ರಾಹಕರನ್ನು ಸೆಳೆಯುತ್ತಿವೆ. ನೀವೇನಾದರು ರೂ. 30,000 ದೊಳಗೆ ಉತ್ತಮ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಲು ಯೋಜನೆ ಹೊಂದಿದ್ದು, ಯಾವುದನ್ನು ಖರೀದಿಸಬೇಕು ಎಂಬ ಗೊಂದಲದಲ್ಲಿ ಇದ್ದರೆ ನಾವು ನಿಮಗಾಗಿ ಈ ಲೇಖನದಲ್ಲಿ ರೂ. 30,000 ದೊಳಗೆ ಖರೀದಿಸಬಹುದಾದ 5 ಬೆಸ್ಟ್‌ ಕ್ಯಾಮೆರಾ ಆಯ್ಕೆ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ನಿಮಗಾಗಿ ನೀಡಲಿದ್ದೇವೆ ನೋಡಿ.

ಭಾರತದಲ್ಲಿ ರೂ 30,000 ಕ್ಕಿಂತ ಕಡಿಮೆ ಬೆಲೆಯಲ್ಲಿ Realme, Tecno, OnePlus, Vivo, Redmi ಯಂತಹ ಬ್ರಾಂಡ್‌ನ ಪ್ರಮುಖದ ಸರಣಿಯ ಫೋನ್‌ಗಳನ್ನು ಖರೀದಿಸಬಹುದಾಗಿದೆ. ಅವು ಉತ್ತಮ ಫೀಚರ್ಸ್‌, ಕ್ಯಾಮೆರಾ ವೈಶಿಷ್ಟ್ಯ, ಅಧ್ಬುತ ಬ್ಯಾಟರಿ ಸೇರಿ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿವೆ.

₹30,000 ದೊಳಗೆ ನೀವು ಖರೀದಿಸಬಹುದಾದ ಬೆಸ್ಟ್‌ ಕ್ಯಾಮೆರಾ ಫೋನ್‌ಗಳು !

ಭಾರತದಲ್ಲಿ ₹30,000 ದೊಳಗೆ ಖರೀದಿಸಬಹುದಾದ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳು:

1-Realme 12 Pro+: ಇದು 6.7-ಇಂಚಿನ OLED ಸ್ಕ್ರೀನ್ ಜೊತೆಗೆ 93% ಸ್ಕ್ರೀನ್ ಅನುಪಾತ ಮತ್ತು 2412 x 1080 ರೆಸಲ್ಯೂಶನ್ ಹೊಂದಿದೆ. ಈ ಸಾಧನವು 120Hz ರಿಫ್ರೆಶ್ ರೇಟ್ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ನೊಂದಿಗೆ ಬರುತ್ತದೆ ಮತ್ತು ಇದು ಶಕ್ತಿಯುತ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 7s Gen ಹೊಂದಿದೆ.

ಕ್ಯಾಮೆರಾ: ಈ ಮೊಬೈಲ್ ಮುಂಭಾಗದಲ್ಲಿ 32MP ಸೆಲ್ಫಿ ಶೂಟರ್ ಮತ್ತು ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಹಿಂದಿನ ಕ್ಯಾಮೆರಾಗಳಲ್ಲಿ 64MP OV64B ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್, 50MP ಸೋನಿ IMX890 ಪ್ರಾಥಮಿಕ ಸೆನ್ಸಾರ್ ಮತ್ತು 8MP ಅಲ್ಟಾ-ವೈಡ್ ಆಂಗಲ್ ಲೆನ್ಸ್ ಸೇರಿವೆ.

2- Tecno Camon 30 5G: ಇದರ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವು ₹22,999 ಬೆಲೆಯಿಂದ ಪ್ರಾರಂಭವಾಗುತ್ತದೆ. 120Hz ರಿಫ್ರೆಶ್ ರೇಟ್ ಮತ್ತು 1080 x 2436 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ LTPS AMOLED ಡಿಸ್‌ಪ್ಲೇ ಹೊಂದಿದೆ. ಫೋನ್ 360Hz ಟಚ್ ಸ್ಯಾಂಪ್ಲಿಂಗ್ ರೇಟ್, 2160Hz PWM ಮಬ್ಬಾಗಿಸುವಿಕೆ ಮತ್ತು 1300 nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ ಜೊತೆಗೆ ಡಾಲ್ಬಿ ಧ್ವನಿ ಬೆಂಬಲ, NFC, IP53 ಧೂಳು ಮತ್ತು ನೀರಿನ ಪ್ರತಿರೋಧ, IR ಬ್ಲಾಸ್ಟರ್ ಮತ್ತು ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಜೊತೆಗೆ ಡ್ಯುಯಲ್ ಸ್ಪೀಕರ್ ಸೆಟಪ್‌ ಹೊಂದಿದೆ.

ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7020 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, 12GB ಯ LPDDR4x RAM ಮತ್ತು 512GB ವರೆಗಿನ UFS 3.1 ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯನ್ನು ಹೊಂದಿದ್ದು ಇದನ್ನು 70W ಫಾಸ್ಟ್ ಚಾರ್ಜರ್ ಮೂಲಕ ಚಾರ್ಜ್ ಮಾಡಬಹುದಾಗಿದೆ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ಕ್ಯಾಮೆರಾ: ಇದು ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ, OIS ಗೆ ಬೆಂಬಲದೊಂದಿಗೆ 50MP ಪ್ರಾಥಮಿಕ ಸಂವೇದಕ ಮತ್ತು 2MP ಇನ್‌ಸೈಡ್ ಸೆನ್ಸಾರ್‌ ಒಳಗೊಂಡಿದೆ. ಫೋನ್‌ನ ಮುಂಭಾಗದಲ್ಲಿ f/2.45 ದ್ಯುತಿರಂಧ್ರದೊಂದಿಗೆ 50MP ಆಟೋಫೋಕಸ್ ಸೆನ್ಸಾರ್ ಕ್ಯಾಮೆರಾ ಹೊಂದಿದೆ.

3-OnePlus Nord CE 4: ಇದು 2412 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ವರೆಗಿನ ರಿಫ್ರೆಶ್ ರೇಟ್ ಜೊತೆಗೆ 6.7 ಇಂಚಿನ ಫುಲ್ HD+ AMOLED ಡಿಸ್‌ಪ್ಲೇ ಹೊಂದಿದೆ. ಇದು 210Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 2160Hz PWM ಮಬ್ಬಾಗಿಸುವಿಕೆ, HDR 10+ ಕಲರ್ ಪ್ರಮಾಣೀಕರಣ ಹೊಂದಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7 Gen 3 SoC ನಿಂದ ಚಾಲಿತವಾಗಿದ್ದು, ಗ್ರಾಫಿಕ್ಸ್ ತೀವ್ರ ಕಾರ್ಯಗಳಿಗಾಗಿ Adreno 720 GPU ನೊಂದಿಗೆ ಜೋಡಿಸಲಾಗಿದೆ.

ಕ್ಯಾಮೆರಾ: ಇದು OIS ಮತ್ತು 8MP ಸೋನಿ IMX355 ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ ಬೆಂಬಲದ ಜೊತೆಗೆ 50MP ಸೋನಿ LYT600 ಪ್ರಾಥಮಿಕ ಸೆನ್ಸಾರ್ ಜೊತೆಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆನ್ಸಾರ್ ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಮುಂಭಾಗದ ಶೂಟರ್ ಹೊಂದಿದೆ.

4-Vivo V30e: ಇದು 2400 × 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌, 120Hz ರಿಫ್ರೆಶ್ ರೇಟ್ ಜೊತೆಗೆ 6.78 ಇಂಚಿನ ಫುಲ್ HD AMOLED ಡಿಸ್‌ಪ್ಲೇ ಹೊಂದಿದೆ. ಪ್ರೊಸೆಸರ್‌ನ ವಿಷಯದಲ್ಲಿ ಇದು 4nm TSMC ಪ್ರಕ್ರಿಯೆಯ ಆಧಾರದ ಮೇಲೆ Octa Core Snapdragon 6 Gen 1 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ ಮತ್ತು ಎಲ್ಲಾ ಗ್ರಾಫಿಕ್ಸ್ ತೀವ್ರವಾದ ಕಾರ್ಯಗಳಿಗಾಗಿ Adreno 710 GPU ನೊಂದಿಗೆ ಜೋಡಿಸಲಾಗಿದೆ. ಸ್ಮಾರ್ಟ್‌ಫೋನ್ 8GB ವರೆಗೆ LPDDR4x RAM ಮತ್ತು 256GB ವರೆಗಿನ UFS 2.2 ಸ್ಟೋರೆಜ್ ಜೊತೆಗೆ ಜೋಡಿಸಲಾಗಿದೆ.

ಇತ್ತೀಚಿನ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಂ ಆಧಾರಿತ ಫನ್‌ಟಚ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ Vivo ಈ ಸಾಧನಕ್ಕೆ 3 ವರ್ಷಗಳ Android ಅಪ್ಡೇಟ್ ಮತ್ತು 4 ವರ್ಷಗಳ ಭದ್ರತಾ ಪ್ಯಾಚ್‌ಗಳ ಭರವಸೆ ನೀಡುತ್ತಿದೆ.

ಕ್ಯಾಮೆರಾ: ಇದು OIS ಮತ್ತು ಔರಾ ಲೈಟ್‌ ಬೆಂಬಲದೊಂದಿಗೆ 50MP SonyIMX 882 ಪ್ರಾಥಮಿಕ ಸೆನ್ಸಾರ್ ಮತ್ತು 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಸೇರಿದಂತೆ ಹಿಂಭಾಗಕ್ಕೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದಲ್ಲದೆ, ಫೋನ್ 50MP ಮುಂಭಾಗದ ಶೂಟರ್‌ ಜೊತೆಗೆ ಬರುತ್ತದೆ.

5-Redmi Note 13 Pro+: ಈ ಸ್ಮಾರ್ಟ್‌ಫೋನ್ 6.67 ಇಂಚಿನ ಬಾಗಿದ AMOLED ಡಿಸ್‌ಪ್ಲೇ ಜೊತೆಗೆ 1.5K ರೆಸಲ್ಯೂಶನ್ ಮತ್ತು 120Hz ಅಡಾಪ್ಟಿವ್ ರಿಫ್ರೆಶ್ ರೇಟ್‌ ಬೆಂಬಲ ಹೊಂದಿದೆ. ಸ್ಮಾರ್ಟ್‌ಫೋನ್ ಡಾಲ್ಬಿ ವಿಷನ್‌ಗೆ ಬೆಂಬಲ ಪಡೆದಿದೆ ಮತ್ತು 1800 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ನೀಡುತ್ತದೆ. ಇದು ಇನ್ ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಮತ್ತು ಮುಂಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯೊಂದಿಗೆ ಬರುತ್ತದೆ.

ಕ್ಯಾಮೆರಾ: ಇದು OIS ಮತ್ತು EIS ಗೆ ಬೆಂಬಲದೊಂದಿಗೆ 200MP ಸ್ಯಾಮ್‌ಸಂಗ್ ISOCELL HP3 ಪ್ರಾಥಮಿಕ ಸೆನ್ಸಾರ್, 8MP ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಲೆನ್ಸ್ ಸೇರಿದಂತೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್‌ ಜೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16MP ಫ್ರಂಟ್ ಶೂಟರ್ ಕೂಡ ಹೊಂದಿದೆ.

Best Mobiles in India

English summary
You can buy flagship series Smartphones from brands like Realme, Tecno, OnePlus, Vivo, Redmi in India under Rs 30,000. They have good camera features, amazing battery and many more features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+