Just In
- 35 min ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 16 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 17 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 18 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
Don't Miss
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?
- News
ದುರಂತದ ಬಳಿಕ ಹೆಬ್ಬಾಳ-ಕೆಆರ್ ಪುರಂ ಮೆಟ್ರೋ ಕಾಮಗಾರಿ ಸ್ಥಗಿತ: ಬರುತ್ತಿಲ್ಲ ಕಾರ್ಮಿಕರು, ಪಿಲ್ಲರ್ಗಳ ಮೇಲೆ ಕಂಡುಬಂದ ಹಸು ಚಿತ್ರ
- Automobiles
ಜನಪ್ರಿಯ ಮಾರುತಿ ಸೆಲೆರಿಯೊ ಕಾರಿನ ರೀಬ್ಯಾಡ್ಜ್ ಆದ ಟೊಯೊಟಾ Vitz ಅನಾವರಣ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Movies
ಬಾಕ್ಸಾಫೀಸ್ನಲ್ಲಿ 'ಪಠಾಣ್' ಬಿರುಗಾಳಿ: ಮೂರೇ ದಿನಕ್ಕೆ ಹಲವು ದಾಖಲೆಗಳು ಉಡೀಸ್
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರ್ ಟೆಲ್ vs ವಡಾಫೋನ್ vs ರಿಲಯನ್ಸ್ ಜಿಯೋ
ನಾವು ಏರ್ ಟೆಲ್, ವಡಾಫೋನ್, ರಿಲಯನ್ಸ್ ಜಿಯೋ ಸಂಸ್ಥೆಗಳು ನೀಡುವ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಮತ್ತು 100 ರುಪಾಯಿ ಒಳಗೆ ಲಭ್ಯವಾಗುವ ರೀಚಾರ್ಜ್ ಪ್ಲಾನ್ ಗಳನ್ನು ನಾವಿಲ್ಲಿ ಪಟ್ಟಿ ಮಾಡುತ್ತಿದ್ದೇವೆ.

ಟೆಲಿಕಾಂ ಉದ್ಯಮದಲ್ಲಿ ಪ್ರತಿ ಬಳಕೆದಾರ ಸರಾಸರಿ ಆದಾಯ(ARPU)ಒಂದು ಪ್ರಮುಖ ಮೆಟ್ರಿಕ್ ಅಂಶವಾಗಿದೆ ಮತ್ತು ರಿಲಯನ್ಸ್ ಜಿಯೋ ಸಂಸ್ಥೆ ಅತೀ ಕಡಿಮೆ ಬೆಲೆಯ ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಪ್ಲಾನ್ ಗಳ ಮೂಲಕ ಅತೀ ಹೆಚ್ಚು ಚಂದಾದಾರರನ್ನು ಹೊಂದುವ ಗುರಿಯನ್ನು ಹೊಂದಿದೆ. ಭಾರತೀ ಏರ್ ಟೆಲ್ ಮತ್ತು ವಡಾಫೋನ್ ಗಳು ಕೂಡ ಎಆರ್ ಪಿಯು ಮೇಲೆ ಕಣ್ಣಿಟ್ಟಿವೆ. ಇತ್ತೀಚೆಗೆ ಏರ್ ಟೆಲ್ ಸಂಸ್ಥೆ ಇನ್ ಕಮ್ಮಿಂಗ್ ವ್ಯಾಲಿಡಿಟಿಯನ್ನು ಕಡಿಮೆ ಮಾಡಿದೆ. ಪ್ರಿಪೇಯ್ಡ್ ಪ್ಲಾನ್ ಅವಧಿ ಮುಗಿದ ನಂತರ 15 ದಿನಗಳಿಗಿದ್ದ ಇನ್ ಕಮ್ಮಿಂಗ್ ವ್ಯಾಲಿಡಿಟಿಯನ್ನು ಇದೀಗ ಕೇವಲ 7 ದಿನಗಳಿಗೆ ಸೀಮಿತಗೊಳಿಸಿದೆ.
ಈ ಹೆಜ್ಜೆಯು ಏರ್ ಟೆಲ್ ಚಂದಾದಾರರನ್ನು ಪ್ರತಿ ತಿಂಗಳು ಇನ್ ಕಮ್ಮಿಂಗ್ ಮತ್ತು ಔಟ್ ಗೋಯಿಂಗ್ ಸೌಲಭ್ಯವು ಆಕ್ಟಿವ್ ಆಗಿರುವಂತೆ ನೋಡಿಕೊಳ್ಳುವುದಕ್ಕಾಗಿ ರೀಚಾರ್ಜ್ ಮಾಡಲೇ ಬೇಕಾದ ಅನಿವಾರ್ಯತೆಗೆ ಒಡ್ಡುತ್ತದೆ. 28 ದಿನಗಳ ವ್ಯಾಲಿಡಿಟಿಗೆ ಕನಿಷ್ಟ ಮಾಸಿಕ ರೀಚಾರ್ಜ್ ಆಯ್ಕೆಯಲ್ಲಿ ಅಂದರೆ ಕೇವಲ 100 ರುಪಾಯಿ ಒಳಗೆ ರೀಚಾರ್ಜ್ ಮಾಡಿಸಿಕೊಳ್ಳಬಹುದಾದ ಕೆಲವು ಪ್ಲಾನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಭಾರತೀ ಏರ್ ಟೆಲ್ ರೂ 98, ರೂ 65, ರೂ 48, ರೂ 35, ರೂ 23 ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್
ರಿಲಯನ್ಸ್ ಜಿಯೋದಂತೆ ಏರ್ ಟೆಲ್ ನಲ್ಲೂ ಕೂಡ ಹಲವು ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ ಗಳು ಲಭ್ಯವಿದ್ದು 100 ರುಪಾಯಿ ಒಳಗೆ ಸಿಗುತ್ತದೆ ಮತ್ತು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.28 ದಿನಗಳ ವ್ಯಾಲಿಡಿಟಿಗೆ ಅಂದರೆ 98 ರುಪಾಯಿ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ ರೀಚಾರ್ಜ್ ಮಾಡಿಸಿಕೊಂಡರೆ ಏರ್ ಟೆಲ್ ನಿಮಗೆ 6ಜಿಬಿ ಇಂಟರ್ನೆಟ್ ಡಾಟಾವನ್ನು ನೀಡುತ್ತದೆ. ಇದೇ ರೀತಿ 48 ರುಪಾಯಿ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಕೂಡ ಲಭ್ಯವಿದೆ. 28 ದಿನಗಳ ವ್ಯಾಲಿಡಿಟಿಗೆ ಇದು 3ಜಿಬಿ ಡಾಟಾವನ್ನು ನೀಡುತ್ತದೆ.
65 ರುಪಾಯಿ ಪ್ರಿಪೇಯ್ಡ್ ಪ್ಲಾನ್ ನ್ನು ಏರ್ ಟೆಲ್ ನಲ್ಲಿ ರೀಚಾರ್ಜ್ ಮಾಡಿಸಿಕೊಂಡರೆ 200ಎಂಬಿ ಡಾಟಾವು 28 ದಿನಗಳ ಅವಧಿಗೆ ಲಭ್ಯವಾಗುತ್ತದೆ. ಈ ಪ್ಯಾಕ್ ಅನಿಯಮಿತ ಕರೆಯನ್ನು ಆಫರ್ ಮಾಡುವುದಿಲ್ಲ ಆದರೆ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳಿಗೆ 55 ರುಪಾಯಿ ಬೆಲೆಬಾಳುವ ಟಾಕ್ ಟೈಮ್ ಬ್ಯಾಲೆನ್ಸ್ ಜೊತೆಗೆ 60 ಪೈಸೆ ಪ್ರತಿ ನಿಮಿಷಕ್ಕೆ ಕರೆಗಳ ಬೆಲೆ ಇರುತ್ತದೆ. 35 ರುಪಾಯಿಯ ಪ್ರಿಪೇಯ್ಡ್ ಪ್ಲಾನ್ ಕೂಡ ಲಭ್ಯವಿದ್ದು 100ಎಂಬಿ ಡಾಟಾ ವ್ಯಾಲಿಡಿಟಿ 28 ದಿನಗಳ ಅವಧಿಗೆ ಇರುತ್ತದೆ. ಇದು 26.66 ರುಪಾಯಿ ಟಾಕ್ ಟೈಮ್ ಬೆಲೆಯನ್ನು ನೀಡುತ್ತದೆ.
28 ದಿನಗಳ ಅವಧಿಗೆ ಅತೀ ಕಡಿಮೆ ಬೆಲೆಯ ಮಾಸಿಕ ರೀಚಾರ್ಜ್ ಪ್ಯಾಕ್ ಏರ್ ಟೆಲ್ ಆಫರ್ ಮಾಡುವುದೆಂದರೆ ಅದು ರೂಪಾಯಿ 23 ರ ರೀಚಾರ್ಜ್ ಪ್ಲಾನ್.ಇದು ಯಾವುದೇ ಇಂಟರ್ನೆಟ್ ಡಾಟಾವನ್ನು ಆಫರ್ ಮಾಡುವುದಿಲ್ಲ ಅಥವಾ ಟಾಕ್ ಟೈಮ್ ವ್ಯಾಲ್ಯೂ ಕೂಡ ಸಿಗುವುದಿಲ್ಲ ಆದರೆ ಚಂದಾದಾರರು ಪ್ರತಿ ಸೆಕೆಂಡ್ ಗೆ 2.5 ಪೈಸೆ ಬೆಲೆಯಲ್ಲಿ ಸ್ಥಳೀಯ ಮತ್ತು ಎಸ್ ಟಿಡಿ ಕರೆಗಳನ್ನು ಈ ಅವಧಿಯಲ್ಲಿ ಮಾಡುವುದಕ್ಕೆ ಅವಕಾಶವಿರುತ್ತದೆ. ಈ ಪ್ಯಾಕ್ ನಲ್ಲಿ ಎಸ್ಎಂಎಸ್ ಗೆ 1 ರುಪಾಯಿ ಮತ್ತು ಎಸ್ ಟಿಡಿ ಎಸ್ಎಂಎಸ್ ಗೆ 1.5 ರುಪಾಯಿಯನ್ನು ಪಾವತಿ ಮಾಡಬೇಕಾಗುತ್ತದೆ.

ವಡಾಫೋನ್ ರೂ 95, ರೂ 69, ರೂ 65, ರೂ 45, ರೂ 39, ರೂ 35 ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್
ವಡಾಫೋನ್ ನಲ್ಲೂ ಕೂಡ ದಿನಗಳ ವ್ಯಾಲಿಡಿಟಿಯನ್ನು ನೀಡುವ ಅನೇಕ ಪ್ರೀಪೇಯ್ಡ್ ಪ್ಲಾನ್ ಗಳು 100 ರುಪಾಯಿ ಒಳಗೆ ಲಭ್ಯವಾಗುತ್ತದೆ. 95 ರುಪಾಯಿಯ ಪ್ರಿಪೇಯ್ಡ್ ಪ್ಯಾಕ್ 95 ರುಪಾಯಿಯ ಟಾಕ್ ಟೈಮ್ ನ್ನು ಆಫರ್ ಮಾಡುತ್ತದೆ ಮತ್ತು ಕರೆಗಳ ಬೆಲೆಯು ಪ್ರತಿ ಸೆಕೆಂಡ್ ಗೆ 1 ಪೈಸೆ ಜೊತೆಗೆ 500ಎಂಬಿ ಡಾಟಾವನ್ನು ನೀಡುತ್ತದೆ. ಇದೇ ರೀತಿ 65 ರುಪಾಯಿಯ ಪ್ರಿಪೇಯ್ಡ್ ವಡಾಫೋನ್ ಪ್ಯಾಕ್ ಕೂಡ ಲಭ್ಯವಿದ್ದು 55 ರುಪಾಯಿ ಬೆಲೆಬಾಳುವ ಟಾಕ್ ಟೈಮ್ ನ್ನು ಇದು ನೀಡುತ್ತದೆ ಮತ್ತು ಕರೆಗೆ ಪ್ರತಿ ಸೆಕೆಂಡ್ ಗೆ 1.2 ಪೈಸೆ ಬೆಲೆಯನ್ನು ನಿಗದಿ ಪಡಿಸಲಾಗಿದೆ ಜೊತೆಗೆ 200ಎಂಬಿ ಇಂಟರ್ನೆಟ್ ಡಾಟಾ ಲಭ್ಯವಾಗುತ್ತದೆ.
ಯಾರು ಇಷ್ಟು ಟಾಕ್ ಟೈಮ್ ನ್ನು ಕೂಡ ಬಯಸುವುದಿಲ್ಲವೋ ಮತ್ತು ಕೇವಲ 28 ದಿನಗಳ ಅವಧಿಯ ರೀಚಾರ್ಜ್ ಪ್ಲಾನ್ ನ್ನು ಬಯಸುತ್ತೀರೋ ಅಂತವರು 39 ರುಪಾಯಿಯ ಪ್ರಿಪೇಯ್ಡ್ ಪ್ಯಾಕ್ ನ್ನು ಹಾಕಿಸಿಕೊಳ್ಳಬಹುದು. ಇದು 30 ರುಪಾಯಿಯ ಟಾಕ್ ಟೈಮ್ ಬ್ಯಾಲೆನ್ಸ್ ಜೊತೆಗೆ 100ಎಂಬಿ ಡಾಟಾವನ್ನು ನೀಡುತ್ತದೆ. ಈ ಪ್ಯಾಕ್ ನಲ್ಲಿ ಕರೆಗಳಿಗೆ 2.5 ಪೈಸೆ ಪ್ರತಿ ಸೆಕೆಂಡ್ ಗೆ ಪಾವತಿ ಮಾಡಬೇಕಾಗುತ್ತದೆ.
ವಡಾಫೋನ್ ನಲ್ಲಿ ಲಭ್ಯವಾಗುವ ಅತ್ಯಂತ ಕನಿಷ್ಟ ಬೆಲೆಯ ಮಾಸಿಕ ರೀಚಾರ್ಜ್ ಪ್ಲಾನ್ ಅಂದರೆ ಅದು ರುಪಾಯಿ 35 ರ ಪ್ಲಾನ್.ಇದು 26 ರುಪಾಯಿ ಟಾಕ್ ಟೈಮ್ ನ್ನು ನೀಡುತ್ತದೆ ಜೊತೆಗೆ 100ಎಂಬಿ ಡಾಟಾ ಲಭ್ಯವಾಗುತ್ತದೆ ಮತ್ತು ಪ್ರತಿ ಸೆಕೆಂಡ್ ಗೆ 2.5 ಪೈಸೆ ಕರೆಗಳ ರೇಟ್ ಇರುತ್ತದೆ. ಈ ಪ್ಯಾಕ್ ನ ಅವಧಿ ಕೂಡ 28 ದಿನಗಳೇ ಆಗಿರುತ್ತದೆ.
ವಡಾಫೋನ್ ಇತ್ತೀಚೆಗೆ 45 ರುಪಾಯಿ ಮಾಸಿಕ ಕನಿಷ್ಟ ರೀಚಾರ್ಜ್ ಪ್ಲಾನ್ ನ್ನು ಬಿಡುಗಡೆಗೊಳಿಸಿದ್ದು ಇದರಲ್ಲಿ ಫುಲ್ ಟಾಕ್ ಟೈಮ್ ಅಂದರೆ 45 ರುಪಾಯಿ ಬೆಲೆಬಾಳುವ ಟಾಕ್ ಟೈಮ್ ಸಿಗುತ್ತದೆ ಮತ್ತು 28 ದಿನಗಳ ವ್ಯಾಲಿಡಿಟಿಯನ್ನು ಇದು ಹೊಂದಿದೆ. ಇದರಲ್ಲಿ ಎಸ್ ಟಿಡಿ, ಸ್ಥಳೀಯ ಮತ್ತು ರೋಮಿಂಗ್ ಕರೆಗಳ ರೇಟ್ ಪ್ರತಿ ಸೆಕೆಂಡ್ ಗೆ 1 ಪೈಸೆ ಆಗಿರುತ್ತದೆ. ಒಟ್ಟಾರೆ ಲೆಕ್ಕಾಚಾರದ ಪ್ರಕಾರ ಚಂದಾದಾರರು ಇದರಲ್ಲಿ 28 ದಿನಗಳ ಅವಧಿಗೆ 75 ನಿಮಿಷಗಳ ಕರೆಗಳ ಲಾಭವನ್ನು ಪಡೆಯಬಹುದು.
ವಡಾಫೋನ್ 69 ಪ್ಯಾಕ್ ಇದೇ ರೀತಿಯ ಹೊಸ ಪ್ಯಾಕ್ ಆಗಿದ್ದು 28 ದಿನಗಳ ಅವಧಿಗೆ 150 ಸ್ಥಳೀಯ,ಎಸ್ ಟಿಡಿ ಮತ್ತು ರೋಮಿಂಗ್ ನಿಮಿಷವನ್ನು ನೀಡುತ್ತದೆ. ಈ ಪ್ಯಾಕ್ ನಲ್ಲಿ ಇಂಟರ್ನೆಟ್ ಡಾಟಾ ಆಫರ್ ಇರುವುದಿಲ್ಲ ಆದರೆ 100ಎಸ್ಎಂಎಸ್ ಗಳನ್ನು ಉಚಿತವಾಗಿ ಕಳುಹಿಸುವುದಕ್ಕೆ ಅವಕಾಶವಿದೆ.

ರಿಲಯನ್ಸ್ ಜಿಯೋ ರೂ 98 ಪ್ರಿಪೇಯ್ಡ್ ಪ್ಲಾನ್
ರಿಲಯನ್ಸ್ ಜಿಯೋ 2ಜಿಬಿ 4ಜಿ ಇಂಟರ್ನೆಟ್ ನ್ನು 98 ರುಪಾಯಿಯ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ನಲ್ಲಿ ನೀಡುತ್ತದೆ. ಇದು ಅತ್ಯಂತ ಕೈಗೆಟುಕುವ ಬೆಲೆಯ ಪ್ಲಾನ್ ಆಗಿದ್ದು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಹೆಚ್ಚುವರಿಯಾಗಿ ಪ್ರಿಪೇಯ್ಡ್ ಪ್ಯಾಕ್ ನಲ್ಲಿ ಅನಿಯಮಿತ ಸ್ಥಳೀಯ, ಎಸ್ ಟಿಡಿ ಮತ್ತು ರೋಮಿಂಗ್ ಕರೆಗಳನ್ನು ಭಾರತದಲ್ಲಿ ಮಾಡುವುದಕ್ಕೆ ಅವಕಾಶವಿದ್ದು ಇದಕ್ಕೆ ಯಾವುದೇ ಎಫ್ ಯುಪಿ ನಿಯಮಾವಳಿಗಳು ಇರುವುದಿಲ್ಲ.98 ರುಪಾಯಿಯ ಜಿಯೋ ರೀಚಾರ್ಜ್ ಪ್ಲಾನ್ ಜಿಯೋ ಆಪ್ಸ್ ಗೆ ಕಾಂಪ್ಲಿಮೆಂಟರಿ ಚಂದಾದಾರಿಕೆಯನ್ನು ನೀಡುತ್ತದೆ ಜೊತೆಗೆ 300 ರಾಷ್ಟ್ರೀಯ ಎಸ್ಎಂಎಸ್ ಗಳನ್ನು ವ್ಯಾಲಿಡಿಟಿ ಅವಧಿಯಲ್ಲಿ ಉಚಿತವಾಗಿ ಕಳುಹಿಸುವುದಕ್ಕೆ ಅವಕಾಶವಿರುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470