Home
ಸುದ್ದಿಜಾಲ

Flipkart Big Saving Days sale: ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಇದೇ ರೈಟ್‌ ಟೈಂ!

ಇ-ಕಾಮರ್ಸ್‌ ದಿಗ್ಗಜ ಫ್ಲಿಪ್‌ಕಾರ್ಟ್‌ ತನ್ನ ವಿಶೇಷ ರಿಯಾಯಿತಿ ಸೇಲ್‌ಗಳ ಮೂಲಕ ಆನ್‌ಲೈನ್‌ ಪ್ರಿಯರನ್ನು ಆಕರ್ಷಿಸಿದೆ. ವಿಶೇಷ ದಿನಗಳು , ಹಬ್ಬ ಹರಿದಿನಗಳು, ವಿಕೆಂಡ್‌, ಮಂತ್‌ ಎಂಡ್‌ ಹೀಗೆ ಹಲವು ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಸದ್ಯ ಇದೀಗ ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ನಡೆಯುತ್ತಿದೆ. ಇನ್ನು ಈ ಸೇಲ್‌ನಲ್ಲಿ ವಿಶೇಷ ಆಫರ್‌, ಡಿಸ್ಕೌಂಟ್‌ಗಳನ್ನು ನೀಡಲಾಗಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ದೊರೆಯುತ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಜೂನ್‌ 13ರಿಂದ ಪ್ರಾರಂಭವಾಗಿದ್ದು, ಜೂನ್ 16 ರವರೆಗೆ ಮುಂದುವರಿಯುತ್ತದೆ. ಈ ಸೇಲ್‌ನಲ್ಲಿ ವಿವಿಧ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಫ್ಲಿಪ್‌ಕಾರ್ಟ್ ಹಲವು ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, ವೆರಿಯೆಬಲ್ಸ್‌ ಪ್ರಾಡಕ್ಟ್‌ಗಳ ಮೇಲೆ ಮತ್ತು ಇತರ ಎಲೆಕ್ಟ್ರಾನಿಕ್ ಡಿವೈಸ್‌ಗಳಿಗೆ ಭಾರಿ ಆಫರ್‌ ನೀಡಿದೆ. ಇನ್ನು ಈ ಸೇಲ್‌ನಲ್ಲಿ ರೆಡ್‌ಮಿ, ರಿಯಲ್ಮೆ, ಗೂಗಲ್, ಒಪ್ಪೊ, ಆಪಲ್ ಮತ್ತು ಇನ್ಫಿನಿಕ್ಸ್‌ನಂತಹ ಬ್ರಾಂಡ್‌ಗಳ ವಿವಿಧ ಸ್ಮಾರ್ಟ್‌ಫೋನ್‌ಗಳಲ್ಲಿ ಡೀಲ್‌ಗಳನ್ನು ನೀಡುತ್ತಿದೆ. ಹಾಗಾದ್ರೆ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಪಿಕ್ಸೆಲ್ 4A

ಗೂಗಲ್ ಪಿಕ್ಸೆಲ್ 4A

ಕಳೆದ ವರ್ಷದಿಂದ ಒಂದೇ ರೂಪಾಂತರದಲ್ಲಿ ಲಭ್ಯವಿರುವ ಗೂಗಲ್ ಡಿವೈಸ್‌ ಫ್ಲಿಪ್‌ಕಾರ್ಟ್‌ನ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ ಕೇವಲ 26,999ರೂ ಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 31,999ರೂ,ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 5.8 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಗೂಗಲ್ ಪಿಕ್ಸಲ್ 4a ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್ ಬಲವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 10 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಇದು ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 12.2 ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 3300 mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ.

ಪೊಕೊ M3

ಪೊಕೊ M3

ಪೊಕೊ M3 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ 10,499ರೂ,ಗೆ ಮಾರಾಟವಾಗುತ್ತಿದೆ. ಹೆಚ್ಚುವರಿಯಾಗಿ, ಎಕ್ಸಚೇಂಜ್‌ ಆಫರ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು 9,900ರೂ,ಗಳಿಗೆ ಪಡೆದುಕೊಳ್ಳಬಹುದಾಗಿಇದೆ. ಇನ್ನು ಈ ಸ್ಮಾರ್ಟ್‌ಫೋನ್‌ 64 GB ಮತ್ತು 128 GB ಸ್ಟೋರೇಜ್ ಹೊಂದಿರುವ ಎರಡು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಾಗಲಿದೆ.

ಐಫೋನ್ 11

ಐಫೋನ್ 11

ಐಫೋನ್ 11 ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ದರದಲ್ಲಿ 64GB ಶೇಖರಣಾ ರೂಪಾಂತರಕ್ಕೆ, 49,999 ರೂ ಬೆಲೆಯಲ್ಲಿ ಮಾರಾಟವಾಗುತ್ತಿದೆ. 128GB ರೂಪಾಂತರವು, 56,999ರೂ, ಬೆಲೆಯಲ್ಲಿ ಮಾರಾಟವಾಗಿದ್ದರೆ, 256GB ಶೇಖರಣಾ ರೂಪಾಂತರವು 66,999 ಕ್ಕೆ ಲಭ್ಯವಿದೆ.

ಐಫೋನ್ ಎಕ್ಸ್‌ಆರ್

ಐಫೋನ್ ಎಕ್ಸ್‌ಆರ್

ಐಫೋನ್ ಎಕ್ಸ್‌ಆರ್ ಅನ್ನು ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ಲ್ಲಿ 64GB ಸ್ಟೋರೇಜ್ ರೂಪಾಂತರಕ್ಕೆ 39,999ರೂ, ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಹಾಗೆಯೇ ಎಕ್ಸಚೇಂಜ್‌ ಆಫರ್‌ನಲ್ಲಿ 15,300 ವರೆಗಿನ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇನ್ನು ಐಫೋನ್ ಎಕ್ಸ್‌ಆರ್‌ನ 128GB ರೂಪಾಂತರವು 42,999 ರೂ, ಬೆಲೆಯಲ್ಲಿ ಮಾರಾಟವಾಗಲಿದೆ.

ರೆಡ್‌ಮಿ 9 ಪವರ್

ರೆಡ್‌ಮಿ 9 ಪವರ್

ರೆಡ್‌ಮಿ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ರೂಪಾಂತರ ಹೊಂದಿರುವ ಆಯ್ಕೆಗೆ 9,999 ರೂ, ಬೆಲೆಯನ್ನು ಹೊಂದಿದೆ. ಇದರ 128GB ಇಂಟರ್‌ ಸ್ಟೋರೇಜ್‌ ರೂಪಾಂತರವು 11,999ರೂ,ಗೆ ಲಭ್ಯವಾಗಲಿದೆ.

Best Mobiles in India

English summary
Here are some of the smartphone offers available on Flipkart during the Big Saving Days sale.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+