Home
ಸುದ್ದಿಜಾಲ

ಟೆನ್ಷನ್ ಬೇಡ! ಪಾತ್ರೆ ತೊಳೆಯುವ ಕೆಲಸದಿಂದ ಮುಕ್ತಿ.. ಕೆಲಸದಾಕೆಯ ಅಗತ್ಯವಿಲ್ಲ.. ಸೂಪರ್ ಡಿಶ್‌ವಾಶರ್‌ಗಳಿವು

ಆಧುನಿಕ ಜೀವನ ಅಂದ್ರೆ ಬಿಡುವಿಲ್ಲದ ಜೀವನ ಎಂದರ್ಥ. ಹಣ ಸಂಪಾದಿಸುವುದು, ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಪೂರೈಸುವುದೇ ನಿತ್ಯದ ಕಾಯಕವಾಗಿದೆ. ಇದರ ಮಧ್ಯೆ ಮನೆ ಕೆಲಸಕ್ಕೂ ಸಮಯ ಇರುವುದಿಲ್ಲ. ಹೌದು, ಮನೆಯಲ್ಲಿ ಕೆಲಸದಾಕೆ ಇಲ್ಲದೆ ಪಾತ್ರೆ ತೊಳೆಯುವುದು ಹೇಗೆ? ಅಂತ ಯೋಚಿಸುವಷ್ಟರ ಮಟ್ಟಿಗೆ ಬಂದಿದ್ದೇವೆ. ನಿಮಗೂ ಸಹ ಈ ರೀತಿ ಚಿಂತೆಯಿದ್ದರೆ, ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಡಿಶ್‌ವಾಶರ್ (Dishwasher) ನಿಮ್ಮ ಎಲ್ಲಾ ಕೆಲಸಗಳನ್ನು ಸುಲಭಗೊಳಿಸುತ್ತದೆ. ಇದು ಮನೆ ಕೆಲಸದಾಕೆ ಇಲ್ಲದಿದ್ದರೂ ಸಹ ನಿಮ್ಮ ಹಣವನ್ನು ಉಳಿಸುತ್ತದೆ. ನೀವು 35 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಜನರು ತಮ್ಮ ಬಿಡುವಿಲ್ಲದ ಜೀವನದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಡುವುದಿಲ್ಲ. ಅಂತಹವರಿಗಾಗಿ ನಾವು ಈ ಲೇಖನದಲ್ಲಿ ಡಿಶ್‌ವಾಶರ್ ಬಗ್ಗೆ ತಿಳಿಸಿದ್ದೇವೆ. ಡಿಶ್‌ವಾಶರ್ ಯಾವುದೇ ಅಡುಗೆಮನೆಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. 4 ಅಥವಾ ಹೆಚ್ಚಿನ ಕುಟುಂಬಗಳನ್ನು ಹೊಂದಿರುವ ಕುಟುಂಬಕ್ಕೆ ಇದು ತುಂಬಾ ಪ್ರಯೋಜನಕಾರಿ. ಡಿಶ್‌ವಾಶರ್ ಬಳಸುವುದರಿಂದ ಪಾತ್ರೆಗಳನ್ನು ಕೈಯಿಂದ ಸ್ವಚ್ಛಗೊಳಿಸುವ ತೊಂದರೆ ನಿವಾರಣೆಯಾಗುತ್ತದೆ. ಇದು ವಿವಿಧ ರೀತಿಯ ಪಾತ್ರೆಗಳನ್ನು ಸಂಗ್ರಹಿಸಲು ಸಾಕಷ್ಟು ಸ್ಥಳಾವಕಾಶವನ್ನು ಹೊಂದಿದೆ. ಹಾಗಿದ್ರೆ, ಡಿಶ್‌ವಾಶರ್ ಹೇಗೆ ಕೆಲಸ ಮಾಡುತ್ತದೆ? ಮತ್ತು ಬೆಲೆ ಎಷ್ಟು? ಅಂತ ತಿಳಿಯಲು ಮುಂದೆ ಓದಿ.

ಟೆನ್ಷನ್ ಬೇಡ! ಪಾತ್ರೆ ತೊಳೆಯುವ ಕೆಲಸದಿಂದ ಮುಕ್ತಿ.. ಸೂಪರ್ ಡಿಶ್‌ವಾಶರ್‌ಗಳಿವು

ಡಿಶ್‌ವಾಶರ್‌ಗಳಿಂದ ಇಷ್ಟೊಂದು ಅನುಕೂಲ ಇದ್ಯಾ?

ಮೊದಲಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತ್ತೀಚಿನ ವಿನ್ಯಾಸದ ಡಿಶ್‌ವಾಶರ್‌ಗಳ ಬಗ್ಗೆ ತಿಳಿಯೋಣ. ಈ ಡಿಶ್‌ವಾಶರ್‌ಗಳನ್ನು ಯಾವುದೇ ಜಿಡ್ಡಿನ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ತೊಳೆದ ಪಾತ್ರೆಗಳು ಬ್ಯಾಕ್ಟೀರಿಯಾ ಮುಕ್ತವಾಗಿರುತ್ತವೆ. ಆಧುನಿಕ ತಂತ್ರಜ್ಞಾನದಿಂದ ಸುಸಜ್ಜಿತವಾದ ಈ ಪಾತ್ರೆ ತೊಳೆಯುವ ಯಂತ್ರಗಳು ಬಹುತೇಕ ಎಲ್ಲರಿಗೂ ಅಗತ್ಯವಾಗಿವೆ. ಇವುಗಳನ್ನು ನಿಮ್ಮ ಅಡುಗೆ ಮನೆಯಲ್ಲಿ ಸುಲಭವಾಗಿ ಅಳವಡಿಸಬಹುದು. ಆನ್‌ಲೈನ್‌ ಶಾಪಿಂಗ್ ಸೈಟ್‌ನಲ್ಲಿ ಡಿಶ್‌ವಾಶರ್‌ಗಳು ಯಾವ ಬೆಲೆ ಸಿಗುತ್ತವೆ ಅಂತ ನೋಡೋಣ ಬನ್ನಿ.

ತೋಷಿಬಾ 14 ಪ್ಲೇಸ್ ಸೆಟ್ಟಿಂಗ್‌ಗಳು

ನೀವು ಈ ತೋಷಿಬಾ 14 ಪ್ಲೇಸ್ ಸೆಟ್ಟಿಂಗ್‌ಗಳು (Toshiba 14 Place Settings) ಡಿಶ್‌ವಾಶರ್ ಅನ್ನು ಶೇ.15 ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಇದು ಕೇವಲ 33,990 ರೂ.ಗೆ ಲಭ್ಯವಿದೆ. ನೀವು ಒಂದೇ ಬಾರಿಗೆ ಅಷ್ಟು ಹಣವನ್ನು ಪಾವತಿಸಲು ಸಾಧ್ಯವಾಗದಿದ್ದರೆ, ಅಮೆಜಾನ್‌ನಲ್ಲಿ ನೋ ಕಾಸ್ಟ್ ಇಎಂಐ (EMI) ಆಯ್ಕೆಯ ಪ್ರಯೋಜನ ಪಡಯಬಹುದು. ಇದರಿಂದ ನಿಮಗೆ 1,648 ರೂ. ಉಳಿತಾಯವಾಗುತ್ತದೆ. ಈ ಡಿಶ್‌ವಾಶರ್ ಹೆಚ್ಚುವರಿ ಒಣಗಿಸುವ ಸಾಮರ್ಥ್ಯದೊಂದಿಗೆ ಬರುತ್ತದೆ. ಇದು ನಿಮ್ಮ ಪಾತ್ರೆಗಳನ್ನು ತೊಳೆದು ಒಣಗಿಸಬಹುದು. ಇದು ಪಾತ್ರೆಗಳಿಂದ ಎಣ್ಣೆ ಮತ್ತು ಮಸಾಲೆ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ.

ಫೇಬರ್ 12 ಪ್ಲೇಸ್ ಸೆಟ್ಟಿಂಗ್ಸ್ ಡಿಶ್‌ವಾಶರ್

ನೀವು ಫೇಬರ್ 12 ಪ್ಲೇಸ್ ಸೆಟ್ಟಿಂಗ್ಸ್ ಡಿಶ್‌ವಾಶರ್ (Faber 12 Place Settings Dishwasher) ಯಂತ್ರದ ಮೂಲಕ ನಿಮಿಷಗಳಲ್ಲಿ ಹಲವಾರು ಪಾತ್ರೆಗಳನ್ನು ತೊಳೆಯಬಹುದು. ಇದು ಪೋರ್ಟಬಲ್ ವೈಶಿಷ್ಟ್ಯದೊಂದಿಗೆ ಬರುತ್ತದೆ. ನೀವು, ಪ್ರಸ್ತುತ ಇದನ್ನು ಶೇ.27 ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಬಹುದು. ಅಂದರೆ, ಇದು ಕೇವಲ 29,210 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು. ಇದು 12 ಲೀಟರ್ ಸಾಮರ್ಥ್ಯ ಹೊಂದಿದೆ. ಒಟ್ಟಾರೆ, ತಂತ್ರಜ್ಞಾನದ ನೆರವಿನಿಂದ ಹಲವರು ಪಾತ್ರೆ ತೊಳೆಯುವ ಕೆಲಸದಿಂದ ಮುಕ್ತಿಯನ್ನು ಪಡೆದಿದ್ದಾರೆ.

ಪ್ರಸ್ತುತ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿರುವ ಪಾತ್ರೆ ತೊಳೆಯುವ ಯಂತ್ರಗಳು ಸ್ಮಾರ್ಟ್‌ ತಂತ್ರಜ್ಞಾನದಿಂದ ಈ ಕೆಲಸವನ್ನು ಮತ್ತಷ್ಟು ಸಲೀಸು ಮಾಡುತ್ತಿವೆ. ನಿಮಗೆ 30 ರಿಂದ 40 ಸಾವಿರ ರೂ.ಗಳ ನಡುವೆ ಇನ್ನೂ ಅನೇಕ ಆಯ್ಕೆಗಳು ಲಭ್ಯವಿದೆ. ನೀವು ಆನ್‌ಲೈನ್ ಶಾಪಿಂಗ್ ಸೈಟ್‌ಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಕ್ರೋಮಾ ಸೇರಿದಂತೆ ಇನ್ನಿತರ ಪ್ಲಾಟ್‌ಫಾರ್ಮ್‌ಗಳ ಮೂಲಕ ರಿಯಾಯಿತಿ ದರದಲ್ಲಿ ಖರೀದಿಸಬಹುದು.

Best Mobiles in India

English summary
Best Dishwasher In India: how it will work and beneficial for big family: check price and more Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+