ಭಾರತದಲ್ಲಿ ಲಭ್ಯವಿರುವ ಟಾಪ್‌‌8 ಇಯರ್ ಫೋನ್‌ಗಳು!

|

ಮೊಬೈಲ್‌ ಅಂದ ಮೇಲೆ ಜೊತೆಗೆ ಇಯರ್ ಫೋನ್‌ ಇರಲೇಬೇಕು. ಮ್ಯೂಸಿಕ್‌ ಕೇಳೊದಕ್ಕೆ ಆಗಲಿ, ಮಾತನಾಡೋದಕ್ಕೆ ಆಗಲಿ, ಎಲ್ಲರೂ ಇಯರ್ ಫೋನ್‌ ಮೊರೆ ಹೋಗುತ್ತಾರೆ. ಜಿಮ್‌ನಲ್ಲಿ ಕಸರತ್ತು ಮಾಡುವಾಗ, ರನ್ನಿಂಗ್‌ ಮಾಡುವಾಗ, ವಾಕಿಂಗ್‌ ಮಾಡುವಾಗ, ಎಲ್ಲಾ ಸಮಯದಲ್ಲೂ ಕಿವಿಗೆ ಇಂಪಾದ ಸಂಗೀತ ಕೇಳುವಂತಿದ್ದರೆ ಯಾವುದೇ ಆಯಾಸದ ಅನುಭವ ಆಗೋದೇ ಇಲ್ಲ. ಇದೇ ಕಾರಣಕ್ಕೆ ಎಲ್ಲರೂ ಇಯರ್‌ಪೋನ್‌ಗಳನ್ನ ಬಳಸೊದಕ್ಕೆ ಟ್ರೈ ಮಾಡ್ತಾರೆ.

ಇಯರ್ ಫೋನ್‌

ಹೌದು ಇಯರ್ ಫೋನ್‌ಗಳು ಮೊಬೈಲ್‌ ಜೊತೆಗೆ ಇರಲೇಬೇಕಾದ ಅನಿವಾರ್ಯತೆ ಇದೆ. ಅದರಲ್ಲೂ ಆಡಿಯೋ ಗುಣಮಟ್ಟ, ಧ್ವನಿಯ ಸ್ಪಷ್ಟತೆಯುಳ್ಳ ಇಯರ್ ಫೋನ್‌ಗಳಿಗೆ ಬೇಡಿಕೆ ಇದ್ದೆ ಇದೆ. ಹಾಗಾಗಿ ಕೆಲ ಮೊಬೈಲ್‌ ಕಂಪೆನಿಗಳು ಸೇರಿದಂತೆ ಇನ್ನುಳಿದ ಕಂಪೆನಿಗಳು ಇಯರ್ ಫೋನ್‌ಗಳ ತಯಾರಿಸಿ ಮಾರುಕಟ್ಟೆಗೆ ಬಿಡುತ್ತವೆ. ಹಾಗಾದ್ರೆ ಇಯರ್ ಫೋನ್‌ ಪ್ರಿಯರಿಗಾಗಿಯೇ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಟಾಪ್‌ 8 ಇಯರ್ ಫೋನ್‌ಗಳು ಯಾವುವು ಅನ್ನೊದರ ಡಿಟೇಲ್‌ ಈ ಲೇಖನದಲ್ಲಿ ನೀಡಿದ್ದೀವಿ ನೋಡಿ

ಒನ್‌ ಮೋರ್‌ ಇನ್-ಇಯರ್

ಒನ್‌ ಮೋರ್‌ ಇನ್-ಇಯರ್

ಈ ಇಯರ್ ಫೋನ್‌ ಒನ್‌ ಆಫ್‌ದಿ ಬೆಸ್‌ ಇಯರ್‌ ಹೆಡ್‌ ಪೋನ್‌ ಆಗಿದೆ. ಇನ್ನು ಈ ಇಯರ್ ಫೋನ್‌ನಲ್ಲಿ ಆಡಿಯೋ ಫ್ರೀಕ್ವೇನ್ಸಿ ರೆಸ್ಪಾನ್ಸ್‌20 - 40,000Hz ಇದ್ದು ಕಿವಿಗೆ ಇಂಪಾದ ಸಂಗೀತ ಆಲಿಸಲು ಅವಕಾಶ ನೀಡುತ್ತದೆ. ಇದು ಡೈನಾಮಿಕ್‌ ಮಾದರಿಯನ್ನ ಹೊಂದಿದ್ದು 99 dB at 1KHz ವರೆಗೂ ಸೆನ್ಸಿಟಿವಿಟಿಯನ್ನ ಒಳಗೊಂಡಿದೆ. ಜೊತೆಗೆ 32 ohms ಇಂಪೆಡನ್ಸ್‌ ಅನ್ನ ಹೊಂದಿದ್ದು ಇಯರ್ ಫೋನ್‌ ಖರೀದಿಗಾರರಿಗೆ ಬೆಸ್ಟ್‌ ಚಾಯ್ಸ್‌ ಆಗಬಲ್ಲದು.

ಮಿ ನೆಕ್‌ಬ್ಯಾಂಡ್

ಮಿ ನೆಕ್‌ಬ್ಯಾಂಡ್

ಮಿ ನೆಕ್‌ ಬ್ಯಾಂಡ್‌ ಇಯರ್ ಫೋನ್‌ ಉತ್ತಮ ಇಯರ್‌ಫೋನ್‌ಗಳಲ್ಲಿ ಒಂದಾಗಿದೆ. ಕ್ವಾಲಿಟಿ ಉತ್ತಮ ಸ್ಥಾನ ಪಡೆದುಕೊಂಡಿದ್ದು ಗಾತ್ರದಲ್ಲಿ 13.6ಗ್ರಾಂಗಳಷ್ಟು ತೂಕವಿದೆ. ಇನ್ನು ಈ ಮಾದರಿಯ ಹೆಡ್‌ಫೋನ್‌ನ ಫ್ರೀಕ್ವೆನ್ಸಿ ರೆಸ್ಪಾನ್ಸ್‌ 16 - 22,000Hz ಇದ್ದು ಕಿವಿಗೆ ಉತ್ತಮ ಸಂಗೀತದ ಅನುಭವ ನೀಡುತ್ತದೆ. ಇದರ ವೈರ್‌ಲೆಸ್‌ ರೇಂಜ್‌ 10m ಆಗಿದ್ದು ಈ ಇಯರ್ ಫೋನ್‌ ಡೈನಾಮಿಕ್‌ ಮಾದರಿಯನ್ನ ಹೊಂದಿದೆ. ಇನ್ನು 100dB ಸೆನ್ಸಿಟಿವಿಟಿಯನ್ನು ಹೊಂದಿದ್ದು ಇದರ ಬ್ಯಾಟರಿ ಸಾಮರ್ಥ್ಯ 8ಗಂಟೆಗಳ ತನಕ ಇರಲಿದೆ.

ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ 2

ಒನ್‌ಪ್ಲಸ್ ಬುಲೆಟ್ಸ್ ವೈರ್‌ಲೆಸ್ 2

ಒನ್‌ಪ್ಲಸ್‌ ಬುಲೆಟ್ಸ್ ವೈರ್‌ಲೆಸ್ 2 ಇಯರ್ ಫೋನ್‌ ಉತ್ತಮ ಕ್ವಾಲಿಟಿಯನ್ನ ಒಳಗೊಂಡ ವೈಯಾರ್‌ಲೆಸ್‌ ಇಯರ್‌ ಹೆಡ್‌ಫೋನ್‌ ಆಗಿದೆ. ಇದು ಗಾತ್ರದಲ್ಲಿ 308ಗ್ರಾಂ ತೂಕವನ್ನ ಒಳಗೊಂಡಿದ್ದು ಸಮತೋಲಿತ ಆರ್ಮೆಚರ್‌ ಅನ್ನ ಒಳಗೊಂಡಿದೆ. ಇದರ ಬ್ಯಾಟರಿ ಸಾಮರ್ಥ್ಯ 14ಗಂಟೆಗಳವರೆಗೂ ಇರಲಿದ್ದು ಇದರ ವೈಯರ್‌ಲೆಸ್‌ ರೇಂಜ್‌ 10mಆಗಿದೆ.

ಸೋನಿ ಎಂಡಿಆರ್-ಎಕ್ಸ್‌ಬಿ 510 ಎಎಸ್

ಸೋನಿ ಎಂಡಿಆರ್-ಎಕ್ಸ್‌ಬಿ 510 ಎಎಸ್

ಈ ಮಾದರಿಯ ಇಯರ್ ಫೋನ್‌ಗಳು ಸಂಗೀತ ಕೇಳುವುದಕ್ಕೆ ಉತ್ತಮವಾಗಿದ್ದು ಬಳಕೆದಾರರಿಗೆ ಒನ್‌ ಆಫ್‌ ದಿ ಬೆಸ್ಟ್‌ ಚಾಯ್ಸ್‌ ಇಯರ್‌ ಹೆಡ್‌ ಫೋನ್‌ ಆಗಿದೆ. ಇದು ಗಾತ್ರದಲ್ಲಿ 9ಗ್ರಾಂ ತೂಕವಿದ್ದು ಇದು 1.2m ಉದ್ದದ ಕೇಬಲ್‌ ಒಳಗೊಂಡಿದೆ. ಜೊತೆಗೆ ಇದರ ಫ್ರೀಕ್ವೆನ್ಸಿ ರೆಸ್ಪಾನ್ಸ್‌ 20-20kHz ಆಗಿದ್ದು ನಿಯೋಡೈಮಿಯಮ್ ಡ್ರೈವರ್ಸ್‌ ಅನ್ನ ಹೊಂದಿದೆ. ಅಲ್ಲದೆ ಇದರ ಸೆನ್ಸಿಟಿವಿಟಿ 111dB at 1kHz ಆಗಿದ್ದು 16 ohms ಇಂಪೆಡನ್ಸ್‌ ಹೊಂದಿದೆ. ಇದರ ವೈರ್‌ಲೆಸ್‌ ರೇಂಜ್‌ 10m ಆಗಿದೆ.

ಜೆಬಿಎಲ್ ಇ 25 ಬಿಟಿ

ಜೆಬಿಎಲ್ ಇ 25 ಬಿಟಿ

ಇಯರ್ ಫೋನ್‌ ಪ್ರಿಯರಿಗೆ ಈ ಮಾದರಿಯ ಇಯರ್ ಫೋನ್‌ ಕೂಡ ಉತ್ತಮ ಆಯ್ಕೆಯಾಗಿದೆ. ಈ ಇಯರ್ ಫೋನ್‌ಗಳು ಗಾತ್ರದಲ್ಲಿ 16.5ಗ್ರಾಂ ತೂಕವನ್ನು ಹೊಂದಿರುತ್ತವೆ. ಇವುಗಳ ಫ್ರೀಕ್ವೆನ್ಸಿ ರೆಸ್ಪಾನ್ಸ್‌ 20-20,000Hz ಆಗಿದ್ದು 8mm ಡ್ರೈವರ್ಸ್‌ಗಳನ್ನ ಒಳಗೊಂಡಿದೆ. ಇದು ಡೈನಾಮಿಕ್‌ ಮಾದರಿಯನ್ನ ಹೊಂದಿದ್ದು ಇವುಗಳ ಇಂಪೆಡನ್ಸ್‌ 16 ohms ಆಗಿದೆ. ಇದರ ಬ್ಯಾಟರಿ ಸಾಮರ್ಥ್ಯ 8 ಗಂಟೆಗಳ ವರೆಗೂ ಇರಲಿದೆ.

ಸ್ಕಲ್ ಕ್ಯಾಂಡಿ ಇಂಕ್ಡ್‌

ಸ್ಕಲ್ ಕ್ಯಾಂಡಿ ಇಂಕ್ಡ್‌

ಇಯರ್ ಫೋನ್‌ಗಳಲ್ಲಿ ಇದು ಕೂಡ ಉತ್ತಮ ಆಯ್ಕೆಯ ಇಯರ್‌ಫೋನ್‌ ಆಗಿದೆ. ಸಾಮಾನ್ಯವಾಗಿ ಈ ಮಾದರಿಯ ಇಯರ್ ಫೋನ್‌ಗಳು 59ಗ್ರಾಂ ತೂಕವನ್ನು ಹೊಂದಿದ್ದು, ಇವುಗಳ ಪ್ರೀಕ್ವೆನ್ಸಿ ರೆಸ್ಪಾನ್ಸ್‌ 20 - 20,000Hz ತನಕ ಇರುತ್ತೆ. ಇದರ ಸೆನ್ಸಿಟಿವಿಟಿ 85dB ಆಗಿದ್ದು ಇದರ ಬ್ಯಾಟರಿ ಸಾಮರ್ಥ್ಯ 8 ಗಂಟೆಗಳವರೆಗೂ ಇರಲಿದೆ.

ಬೇಯರ್‌ಡೈನಾಮಿಕ್ ಐಡಿಎಕ್ಸ್ 200 ಐಇ

ಬೇಯರ್‌ಡೈನಾಮಿಕ್ ಐಡಿಎಕ್ಸ್ 200 ಐಇ

ಈ ಮಾದರಿಯ ಇಯರ್ ಫೋನ್‌ಗಳು ಆಪಲ್‌ ಸ್ಮಾರ್ಟ್‌ಫೋನ್‌ಗಳಿಗೆ ಹೇಳಿ ಮಾಡಿಸಿದಂತಿವೆ. ಆಪಲ್‌ ಫೋನ್‌ಗಳಿಗೆ ಉತ್ತಮ ಇಯರ್‌ ಇಯರ್ ಫೋನ್‌ ಅನ್ನೊ ಖ್ಯಾತಿ ಇವುಗಳಿಗಿದ್ದು ಇದರ ತೂಕ ಸಾಮಾನ್ಯವಾಗಿ 45ಗ್ರಾಂ ಆಗಿದೆ. 4 ಅಡಿ ಉದ್ದದ ಕೇಬಲ್‌ ಹೊಂದಿದ್ದು ಇವುಗಳ ಫ್ರೀಕ್ವೆನ್ಸಿ ರೆಸ್ಪಾನ್ಸ್‌10 - 27,000Hz ತನಕ ಇರಲಿದೆ. ಇದು ನಿಯೋಡೈಮಿಯಮ್ ಡ್ರೈವರ್ಸ್‌ ಅನ್ನ ಒಳಗೊಂಡಿದ್ದು ಇವುಗಳ ಇಂಪೆಡನ್ಸ್‌35 ohms ಆಗಿದೆ.

ಕ್ಲಿಪ್ಸ್ ರೆಫೆರೆನ್ಸ್‌ X6i

ಕ್ಲಿಪ್ಸ್ ರೆಫೆರೆನ್ಸ್‌ X6i

ಪ್ರಯಾಣ ಮಾಡುವ ವೇಳೆಯಲ್ಲಿ ಇಂಪಾದ ಹಾಡುಗಳನ್ನ ಕೇಳೊದಕ್ಕೆ ಈ ಮಾದರಿಯ ಇಯರ್ ಫೋನ್‌ಗಳು ಉತ್ತಮ ಆಯ್ಕೆಯಾಗಿವೆ. ಇದು ಗಾತ್ರದಲ್ಲಿ 18ಗ್ರಾಂನಷ್ಟು ತೂಕವನ್ನ ಹೊಂದಿದ್ದು ಫ್ರೀಕ್ವೆನ್ಸಿ ರೆಸ್ಪಾನ್ಸ್‌ 10-19,000Hz ಆಗಿದೆ. ಜೊತೆಗೆ ಇವುಗಳ ಸೆನ್ಸಿಟಿವಿಟಿ 110dB ಆಗಿದ್ದು 50 ohms ಇಂಪೆಡನ್ಸ್‌ ಆಗಿದೆ.

Most Read Articles
Best Mobiles in India

English summary
In-ear headphones are a complicated category – some users find them to be relieving them while others don’t like something being placed right in their ears. However, they have their own benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X