Home
ಸುದ್ದಿಜಾಲ

Best Fitness Band: ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಫಿಟ್ನೆಸ್‌ಬ್ಯಾಂಡ್‌ಗಳು!

ಪ್ರಸ್ತುತ ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳಂತೆ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ಗಳಿಗೂ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದ್ದು, ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ಗಳು ಫಿಟ್ನೆಸ್‌ ಪ್ರಿಯರನ್ನು ಹೆಚ್ಚಾಗಿ ಆಕರ್ಷಿಸುತ್ತಿವೆ. ಈಗಾಗ್ಲೆ ಟೆಕ್‌ ಮಾರುಕಟ್ಟೆಯಲ್ಲಿ ವೈವಿದ್ಯಬಗೆಯ ಸ್ಮಾರ್ಟ್‌ ಬ್ಯಾಂಡ್‌ಗಳಿದ್ದರೂ, ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡ ಉತ್ತಮ ಬೆಲೆಯಲ್ಲಿ ಲಭ್ಯವಾಗುವ ಫಿಟ್ನೆಸ್‌ ಬ್ಯಾಂಡ್‌ಗಳು ಗ್ರಾಹಕರನ್ನ ಬಹುಬೇಗ ಆಕರ್ಷಿಸುತ್ತವೆ.

ಹೌದು

ಹೌದು ಜಾಗತಿಕ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಡಿವೈಸ್‌ಗಳಿಗೆ ಬಾರಿ ಬೇಡಿಕೆ ಇದೆ. ಅದರಲ್ಲೂ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ ಬ್ಯಾಂಡ್‌ಗಳಿಗೆ ಉತ್ತಮ ಬೇಡಿಕೆ ಇದ್ದು, ಫಿಟ್ನೆಸ್‌ ಪ್ರಿಯರನ್ನ ಆಕರ್ಷಿಸುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಫಿಟ್ನೆಸ್‌ ಬ್ಯಾಂಡ್‌ಗಳಿವೆ ನಿಜ. ಅವುಗಳಲ್ಲಿ ಯಾವುದನ್ನ ಆಯ್ಕೆ ಮಾಡಿಕೊಂಡರೆ ಉತ್ತಮ ಅನ್ನೊ ಅನುಮಾನ ನಿಮಗೆ ಬರಬಹುದು. ಅದಕ್ಕೆ ನೀವು ಚಿಂತೆ ಮಾಡಬೇಕಿಲ್ಲ. ಭಾರತದಲ್ಲಿ ಲಭ್ಯವಾಗುವ ಅತ್ಯುತ್ತಮ ಫಿಟ್ನೆಸ್‌ ಬ್ಯಾಂಡ್‌ಗಳು ಯಾವುವು ಅನ್ನೊದರ ಮಾಹಿತಿಯನ್ನ ಈ ಲೇಖನದ ಮೂಲಕ ನಾವು ತಿಳಿಸಿಕೊಡ್ತೀವಿ ಓದಿ.

ಫಿಟ್‌ಬಿಟ್ ಚಾರ್ಜ್ 3

ಫಿಟ್‌ಬಿಟ್ ಚಾರ್ಜ್ 3

ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಫಿಟ್ನೆಸ್‌ ಬ್ಯಾಂಡ್‌ಗಳಲ್ಲಿ ಫಿಟ್‌ಬಿಟ್‌ ಚಾರ್ಜ್‌ 3 ಫಿಟ್ನೆಸ್‌ ಆಕ್ಟಿವಿಟಿ ಟ್ರ್ಯಾಕರ್‌ ಕೂಡ ಒಂದಾಗಿದೆ. ಈ ಫಿಟ್ನೆಸ್‌ ಬ್ಯಾಂಡ್‌ ನಿಮ್ಮ ಆರೋಗ್ಯ ಸ್ಥಿತಿಯನ್ನು ನಿಯಮಿತವಾಗಿ ಪರೀಕ್ಷಿಸುವುದು ಹಾಗೂ ನಿಮ್ಮ ಫಿಟ್‌ನೆಸ್ ಮಟ್ಟವನ್ನು ಪತ್ತೆಹಚ್ಚುವ ಕಾರ್ಯವನ್ನು ಮಾಡುತ್ತದೆ. ಹೃದಯ ಬಡಿತ, ಕ್ಯಾಲೋರಿ ಮಟ್ಟವನ್ನ ಬರ್ನ್‌ ಮಾಡುವಲ್ಲಿ ಹಾಗೂ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಮೌಲ್ಯಯುತ ಮಾಹಿತಿಯನ್ನು ಅಳೆಯಲು ಇದು ಉತ್ತಮ ಆಯ್ಕೆಯಾಗಿದೆ. ಇನ್ನು ಈ ಫಿಟ್ನೆಸ್‌ಬ್ಯಾಂಡ್‌ 24/7 ಹಾರ್ಟ್‌ಬೀಟ್‌ ಟ್ರ್ಯಾಕಿಂಗ್, 15+ ವ್ಯಾಯಾಮ ವಿಧಾನಗಳು, ಜೊತೆಗೆ ನಿದ್ರೆಯ ಸಮಯವನ್ನು ರೆಕಾರ್ಡ್‌ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಸದ್ಯ ಇದರ ಬೆಲೆ 10,695 ರೂ,ಆಗಿದೆ.

ಸ್ಯಾಮ್‌ಸಂಗ್ ಗೇರ್ ಫಿಟ್ 2 ಪ್ರೊ

ಸ್ಯಾಮ್‌ಸಂಗ್ ಗೇರ್ ಫಿಟ್ 2 ಪ್ರೊ

ಇದು ಕೂಡ ಅತ್ಯುತ್ತಮ ಫಿಟ್ನೆಸ್‌ ಬ್ಯಾಂಡ್‌ಗಳಲ್ಲಿ ಒಂದಾಗಿದ್ದು, ಈ ಬ್ಯಾಂಡ್ ಪಂಚ್ ಹೋಲ್‌ ಮಾದರಿಯ 1.5 ಇಂಚಿನ ಅಮೋಲ್ಡ್‌ಡಿಸ್‌ಪ್ಲೇಯನ್ನ ಹೊಂದಿದ್ದು, ಆಟೋ ಆಕ್ಟಿವಿಟಿ ಡಿಟೆಕ್ಷನ್ ಟೆಕ್ನಾಲಜಿಯನ್ನ ಒಳಗೊಂಡಿದೆ. ಇನ್ನು ಇದರಲ್ಲಿ ಜಿಪಿಎಸ್ ಅನ್ನು ಅಳವಡಿಸಲಾಗಿದ್ದು, ಇದು ನಿಮ್ಮ ವಾಕಿಂಗ್ ಮಾಡುವ ಮಾರ್ಗವನ್ನು ಟ್ರ್ಯಾಕ್ ಮಾಡುತ್ತದೆ. ಇನ್ನು ಇದರಲ್ಲಿ ಹಾರ್ಟ್ ರೇಟ್ ಸೆನ್ಸರ್, ಬಾರೋಮೀಟರ್, ಆಕ್ಸಿಲರೊಮೀಟರ್ ಮತ್ತು ಗೈರೊ ಸೆನ್ಸಾರ್‌ನಂತಹ ಅನೇಕ ಉಪಯುಕ್ತ ಸೆನ್ಸಾರ್‌ಗಳನ್ನ ಅಳವಡಿಸಲಾಗಿದ್ದು, ಇದು 4GB ಮ್ಯೂಸಿಕ್ ಸ್ಟೋರೇಜ್‌ ಅನ್ನು ಸಹ ನೀಡಲಾಗಿದ್ದು, ಇದರ ಬೆಲೆ 27,999. ರೂ, ಆಗಿದೆ.

ಫಿಟ್‌ಬಿಟ್ ಚಾರ್ಜ್ 2 ವೈರ್‌ಲೆಸ್ ಟ್ರ್ಯಾಕರ್

ಫಿಟ್‌ಬಿಟ್ ಚಾರ್ಜ್ 2 ವೈರ್‌ಲೆಸ್ ಟ್ರ್ಯಾಕರ್

ಈ ಸ್ಮಾರ್ಟ್‌ಬ್ಯಾಂಡ್‌ ವೈರ್‌ಲೆಸ್‌ ಟ್ರ್ಯಾಕರ್‌ ಆಗಿದ್ದು ಇದು ಮಲ್ಟಿ-ಸ್ಪೋರ್ಟ್ ಟ್ರ್ಯಾಕಿಂಗ್ ಬ್ಯಾಂಡ್ ಆಗಿದೆ. ಇದರಲ್ಲಿ ನಿಮ್ಮ ಉಸಿರಾಟ ಮತ್ತು ಕಾರ್ಡಿಯೋ ಫಿಟ್‌ನೆಸ್ ಅನ್ನು ಅಳೆಯಬಲ್ಲ ಸ್ಮಾರ್ಟ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇನ್ನು ಈ ಸ್ಮಾರ್ಟ್‌ ಬ್ಯಾಂಡ್‌ ಒಎಲ್ಇಡಿ ಸ್ಕ್ರೀನ್‌ ಅನ್ನು ಹೊಂದಿದ್ದು, ಫೋನ್ ಕಾಲ್‌, ಪಠ್ಯಗಳು, ಆಲರ್ಟ್, ನೋಟಿಫಿಕೇಶನ್‌ ತಿಳಿದುಕೊಳ್ಳಬಹುದಾಗಿದೆ. ಈ ಫಿಟ್‌ಬಿಟ್ ಚಾರ್ಜ್ 2 ಯುನಿಸೆಕ್ಸ್ ಮಾದರಿಯಾಗಿದ್ದು ಸ್ಟೇನ್‌ಲೆಸ್ ಸ್ಟೀಲ್ ನಿಂದ ತಯಾರಿಸಲಾಗಿದೆ. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಜೊತೆ ಹೊಂದಿಕೊಳ್ಳಲಿದೆ. ಇದರಲ್ಲಿ 24/7 ಹಾಟ್‌ ರೇಟ್‌ ಟ್ರ್ಯಾಕಿಂಗ್‌ ವ್ಯವಸ್ಥೆ ನೀಡಲಾಗಿದ್ದು , 5ದಿನಗಳ ವರೆಗೂ ಬಾಳಿಕೆ ಬರುವ ಬ್ಯಾಟರಿ ಪ್ಯಾಕ್‌ಆಪ್‌ ನೀಡಲಾಗಿದೆ. ಇದರ ಬೆಲೆ 12,999.ರೂ,ಆಗಿದೆ.

ಫಿಟ್‌ಬಿಟ್ ಇನ್‌ಸ್ಫೈರ್‌ ಎಚ್‌ಆರ್

ಫಿಟ್‌ಬಿಟ್ ಇನ್‌ಸ್ಫೈರ್‌ ಎಚ್‌ಆರ್

ಹೆಸರೇ ಸೂಚಿಸುವಂತೆ ಆರೋಗ್ಯ ಹಾಗೂ ಫಿಟ್ನೆಸ್‌ಗೆ ಇನ್‌ಸ್ಫೈರ್‌ ಆಗುವಂತಹ ಫಿಟ್ನೆಸ್‌ ಬ್ಯಾಂಡ್‌ ಗಳಲ್ಲಿ ಇದು ಒಂದಾಗಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನ ಒಳಗೊಂಡ ಬ್ಯಾಂಡ್‌ ್ಇದಾಗಿದೆ. ಈ ಫಿಟ್ನೆಸ್‌ ಬ್ಯಾಂಡ್‌ ಪ್ರತಿನಿತ್ಯವೂ ನಿಮ್ಮ ಹೃದಯ ಸಂಬಂಧಿ ಮಾಹಿತಿಯನ್ನ ಟ್ರ್ಯಾಕ್‌ ಮಾಡುವುದಲ್ಲದೆ, ನಿದ್ರೆ, ಚಟುವಟಿಕೆ, ವ್ಯಾಯಾಮ,ರನ್ನಿಂಗ್‌ ಎಲ್ಲಾ ವಿಚಾರಗಳನ್ನು ಟ್ರ್ಯಾಕ್‌ ಮಾಡಲಿದೆ. ಅಲ್ಲದೆ ರಕ್ತಶುದ್ದತೆಯ ಮಟ್ಟವನ್ನ ನಿಖರವಾಗಿ ತಿಳಿಸುವ ಟೆಕ್ನಾಲಜಿಯನ್ನ ಒಳಗೊಂಡಿದೆ. ಇನ್ನು ಈ ಬ್ಯಾಂಡ್‌ ಒಎಲ್‌ಇಡಿ ಡಿಸ್‌ಪ್ಲೇಯನ್ನ ಹೊಂದಿದ್ದು, ವಾಟರ್‌ಪ್ರೂಪ್‌ ವ್ಯವಸ್ಥೆಯನ್ನ ಒಳಗೊಂಡಿದೆ. ಜೊತೆಗೆ ದೀರ್ಘಬಾಳಿಕೆಯ ಬ್ಯಾಟರಿ ಪ್ಯಾಕ್‌ಆಪ್‌ ಅನ್ನ ಹೊಂದಿದ್ದು, ಇದರ ಬೆಲೆ 7,590.ರೂ ಆಗಿದೆ.

ಹಾನರ್ ಬ್ಯಾಂಡ್ 5

ಹಾನರ್ ಬ್ಯಾಂಡ್ 5

ಹಾನರ್‌ ಬ್ಯಾಂಡ್ 5, 2.41 ಸೆಂ.ಮೀ. ಅಮೋಲ್ಡ್ ಡಿಸ್‌ಪ್ಲೇಯನ್ನ ಹೊಂದಿದ್ದು, ಫಿಟ್‌ನೆಸ್ ವಿಚಾರ ಸಂಬಂಧಿ ಮಾಹಿತಿಯನ್ನ ಸುಲಭವಾಗಿ ವಿಕ್ಷಿಸಬಹುದಾಗಿದೆ. ಇನ್ನು ಈ ಬ್ಯಾಂಡ್‌ ಹಾರ್ಟ್‌ಬೀಟ್‌ಗೆ ಸಂಬಂಧಿಸಿದ ಮಾಹಿತಿಯನ್ನ ನಿರಂತರವಾಗಿ ಕಲೆಹಾಖುವುದಲ್ಲದೆ, ಪಿಟ್ನೆಸ್‌ಗೆ ಸಂಬಂದಿಸಿದ ವ್ಯಾಯಾಮಗಳ ಬಗ್ಗೆ ಮಾಹಿತಿ ನೀಡಲಿದೆ. ಜೊತೆಗೆ ನಿದ್ರೆಯ ವ್ಯವಸ್ಥೆ, ನಿದ್ರೆಯ ಅವಧಿಯ ಬಗ್ಗೆ ನಿಮಗೆ ಆಲರ್ಟ್‌ನೋಟಿಫೀಕೇಶನ್‌ಗಳನ್ನ ನೀಡುತ್ತದೆ. ಇದಲ್ಲದೆ ಇದು ರಕ್ತದ ಶುದ್ದತೆಯ ಮಟ್ಟ ಹಾಗೂ ಆಮ್ಲಜನಕದ ಶುದ್ದತೆಯ ಬಗ್ಗೆ ಟ್ರ್ಯಾಕ್‌ ಮಾಡುತ್ತದೆ. ಇನ್ನು ಈ ಫಿಟ್ನೆಸ್‌ ಬ್ಯಾಂಡ್‌ ನಿರಂತರವಾಗಿ 14 ದಿನಗಳ ವರೆಗೆ ಬ್ಯಾಟರಿಪ್ಯಾಕ್‌ಆಪ್‌ ನೀಡುವ ಸಾಮರ್ಥ್ಯವನ್ನ ಹೊಂದಿದೆ. ಇದರ ಬೆಲೆ ಕೇವಲ 2,399.ರೂ, ಆಗಿದೆ.

Best Mobiles in India

English summary
We have selected the top 5 fitness bands that are popular in India.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+