ಭಾರತದಲ್ಲಿ ನೀವು ಖರೀದಿಸಬಹುದಾದ ಐದು ಅತ್ಯುತ್ತಮ ಸ್ಮಾರ್ಟ್ ಪ್ರೊಜೆಕ್ಟರ್‌ಗಳು!
ಸ್ಮಾರ್ಟ್ ಪ್ರೊಜೆಕ್ಟರ್‌ಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದಕ್ಕೆ ತಕ್ಕಂತೆ ಜನಪ್ರಿಯ ಬ್ರ್ಯಾಂಡ್‌ಗಳು ವಿವಿಧ ಮಾದರಿಯ ಸ್ಮಾರ್ಟ್ ಪ್ರೊಜೆಕ್ಟರ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಬಜೆಟ್ ಬೆಲೆಯಿಂದ ಹಿಡಿದು ಹೈ ಎಂಡ್ ಮಾದರಿಯ ಪ್ರೊಜೆಕ್ಟರ್‌ಗಳು ಕೂಡ ಸೇರಿವೆ. ಗಾತ್ರದ ಆಯ್ಕೆಗೆ ತಕ್ಕಂತೆ ಇವುಗಳ ಬೆಲೆಯನ್ನು ಕಾಣಬಹುದಾಗಿದೆ.
ಹೌದು, ಭಾರತದಲ್ಲಿ ಸ್ಮಾರ್ಟ್ ಪ್ರೊಜೆಕ್ಟರ್ (smart projector)ಗಳು ಭಾರಿ ಡಿಮ್ಯಾಂಡ್‌ನಲ್ಲಿವೆ. ಇದರಲ್ಲಿ ಬೆನ್‌ಕ್ಯೂ, ಎಲ್‌ಜಿ, ಝೆಬ್ರಾನಿಕ್ಸ್ ಸಂಸ್ಥೆಯ ಪ್ರೊಜೆಕ್ಟರ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ. ತಮ್ಮ ವಿಭಿನ್ನ ಶೈಲಿಯ ವಿನ್ಯಾಸದ ಪ್ರೊಜೆಕ್ಟರ್‌ಗಳಿಂದ ಎಲ್ಲರ ಗಮನಸೆಳೆದಿವೆ. ಹಾಗಾದ್ರೆ ಭಾರತದಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್ ಪ್ರೊಜೆಕ್ಟರ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

BenQ MH560
BenQ MH560 ಸ್ಮಾರ್ಟ್ ಪ್ರೊಜೆಕ್ಟರ್ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇನ್ನು ಈ ಪ್ರೊಜೆಕ್ಟರ್ ನೀವು ಮುಖ್ಯವಾಗಿ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸುವುದಕ್ಕೆ ಸರಳವಾದ 1080p ಪ್ರೊಜೆಕ್ಟರ್ ಸರ್ಚ್ ಮಾಡುವವರಿಗೆ ಸೂಕ್ತವಾಗಿದೆ. ಇದರಲ್ಲಿ 200 ಇಂಚುಗಳಷ್ಟು ಪರದೆಯ ಗಾತ್ರವನ್ನು ಪ್ರೊಜೆಕ್ಟ್ ಮಾಡಬಹುದಾಗಿದೆ. ಅಲ್ಲದೆ 3800 ANSI ಗರಿಷ್ಠ ಬ್ರೈಟ್‌ನೆಸ್ ಲೆವೆಲ್ ಜೊತೆಗೆ 16ms ನ ಲೋ ಇನ್ಪುಟ್ ಲ್ಯಾಗ್ ಅನ್ನು ಹೊಂದಿದೆ. ಇದು ಎರಡು ಪೂರ್ಣ-ಗಾತ್ರದ HDMI ಪೋರ್ಟ್‌ಗಳನ್ನು ಹೊಂದಿದ್ದು, ಇನ್‌ಬಿಲ್ಟ್ 10W ಸ್ಪೀಕರ್ ಅನ್ನು ಸಹ ಹೊಂದಿದೆ. ಈ ಪ್ರೊಜೆಕ್ಟರ್ 59,990ರೂ ಬೆಲೆಯನ್ನು ಹೊಂದಿದೆ.
LG PH30N CineBeam
LG PH30N CineBeam ಒಂದು ಪೋರ್ಟಬಲ್ ಪ್ರೊಜೆಕ್ಟರ್ ಆಗಿದ್ದು, ಇಂಟಿಗ್ರೇಟೆಡ್ ಬ್ಯಾಟರಿಯನ್ನು ಒಳಗೊಂಡಿದೆ. ಈ ಪ್ರೊಜೆಕ್ಟರ್ 720p ಪ್ರೊಜೆಕ್ಟರ್ ಆಗಿದ್ದು, 2 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇದು ಎಲ್ಇಡಿ ಬೆಳಕಿನ ಮೂಲದಿಂದ ನಡೆಸಲ್ಪಡುವ 100,000:1 ರ ಅತ್ಯುತ್ತಮ ಕಾಂಟ್ರಾಸ್ಟ್ ಅನುಪಾತವನ್ನು ಹೊಂದಿದೆ. ಇದು ತನ್ನ ವರ್ಗದ ಅತ್ಯಂತ ಕಾಂಪ್ಯಾಕ್ಟ್ ಪ್ರೊಜೆಕ್ಟರ್‌ಗಳಲ್ಲಿ ಒಂದಾಗಿದ್ದು, 35,990 ರೂ.ಬೆಲೆಯಲ್ಲಿ ಬರಲಿದೆ.

ಝೆಬ್ರಾನಿಕ್ಸ್ ಪಿಕ್ಸಾಪ್ಲೇ 18
ಝೆಬ್ರಾನಿಕ್ಸ್ ಪಿಕ್ಸಾಪ್ಲೇ 18 ನೀವು ಖರೀದಿಸಬಹುದಾದ ಅತ್ಯುತ್ತಮವಾದ ಪ್ರೊಜೆಕ್ಟರ್‌ಗಳಲ್ಲಿ ಒಂದಾಗಿದೆ. ಝೆಬ್ರಾನಿಕ್ಸ್ ಪಿಕ್ಸಾಪ್ಲೇ 18 1080p ಪ್ರೊಜೆಕ್ಟರ್ Android OS ನಲ್ಲಿ ಕಾರ್ಯನಿರ್ವಹಿಸಲಿದೆ. ಬಳಕೆದಾರರು ಈ ಪ್ರೊಜೆಕ್ಟರ್‌ನಲ್ಲಿ ನೆಟ್‌ಫ್ಲಿಕ್ಸ್ ಮತ್ತು ಪ್ರೈಮ್ ವಿಡಿಯೋದಂತಹ ಅಪ್ಲಿಕೇಶನ್‌ಗಳನ್ನು ಬಳಸುವುದಕ್ಕೆ ಅನುಮತಿಸಲಿದೆ. ಇದು ಸ್ಕ್ರೀನ್ ಮಿರರಿಂಗ್ ಅನ್ನು ಸಹ ಬೆಂಬಲಿಸಲಿದ್ದು, ತಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್‌ನಿಂದ ವಿಷಯವನ್ನು ಪ್ರತಿಬಿಂಬಿಸಲು ಅನುವು ಮಾಡಿಕೊಡುತ್ತದೆ. ಇದರ ಬೆಲೆ 19,999ರೂ ಆಗಿದೆ.
ಆಪ್ಟೋಮಾ UHD50X ಟ್ರೂ 4K UHD ಪ್ರೊಜೆಕ್ಟರ್
Optoma UHD50X ಟ್ರೂ 4K UHD ಪ್ರೊಜೆಕ್ಟರ್ ಬೆಸ್ಟ್ ಡಿವೈಸ್‌ಗಳಲ್ಲಿ ಒಂದಾಗಿದೆ. ಇನ್ನು ಈ ಪ್ರೊಜೆಕ್ಟರ್ 240Hz ರಿಫ್ರೆಶ್ ರೇಟ್ ಮತ್ತು ಸ್ಥಳೀಯ 4K ರೆಸಲ್ಯೂಶನ್ ಔಟ್‌ಪುಟ್ನೊಂದಿಗೆ ಬರಲಿದ್ದು, ಅತ್ಯುತ್ತಮ ಗೇಮಿಂಗ್ ಪ್ರೊಜೆಕ್ಟರ್ ಆಗಿದೆ. ಇದನ್ನು PS5, Xbox Series X/S ಅಥವಾ PC ಯೊಂದಿಗೆ ಜೋಡಿಸಬಹುದಾಗಿದೆ. ಇನ್ನು ಈ ಪ್ರೊಜೆಕ್ಟರ್ ಬೆಲೆ 2,39,999ರೂ ಆಗಿದೆ. ಇದು ಗೇಮಿಂಗ್ ಮತ್ತು ಕಂಟೆಂಟ್ ಬಳಕೆಗೆ ಉತ್ತಮ ಆಯ್ಕೆಯಾಗಿದೆ.

ವ್ಯೂಸಾನಿಕ್ X1000-4K
Viewsonic X1000-4K ಕಾಂಪ್ಯಾಕ್ಟ್ ಮತ್ತು ಪ್ರೀಮಿಯಂ-ಕಾಣುವ 4K ರೆಸಲ್ಯೂಶನ್ ಶಾರ್ಟ್-ಥ್ರೋ ಪ್ರೊಜೆಕ್ಟರ್‌ಗಳಲ್ಲಿ ಒಂದೆನಿಸಿಕೊಂಡಿದೆ. ಇದನ್ನು ಕಂಟೆಂಟ್ ಬಳಕೆ ಮತ್ತು ಗೇಮಿಂಗ್ ಎರಡಕ್ಕೂ ಕೂಡ ಬಳಸಬಹುದಾಗಿದೆ. ಗೇಮಿಂಗ್ ಅಥವಾ ವಿಷಯ ಬಳಕೆಯ ಅನುಭವವನ್ನು ಆನಂದಿಸಲು ಈ ಪ್ರೊಜೆಕ್ಟರ್ ಅನ್ನು ಸ್ಕ್ರೀನ್ ಮೇಲೆ ಇರಿಸಬಹುದು. ಇದು ಇಂಟಿಗ್ರೇಟೆಡ್ ಸೌಂಡ್‌ಬಾರ್ ಅನ್ನು ಸಹ ಹೊಂದಿದೆ. ಜೊತೆಗೆ ವೈ-ಫೈ ಮತ್ತು ಬ್ಲೂಟೂತ್ ನೆಟ್‌ವರ್ಕ್‌ಗಳಿಗೆ ಬೆಂಬಲದೊಂದಿಗೆ ಸ್ಮಾರ್ಟ್ ಸ್ಟ್ರೀಮಿಂಗ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದರ ಬೆಲೆ ಇದರ ಬೆಲೆ 2,29,000ರೂ ಆಗಿದೆ.


Click it and Unblock the Notifications








