ಜಿಯೋ ಪ್ಲಾನ್ ಗಳಲ್ಲಿ ನಿಮಗೆ ಲಾಭ ನೀಡುವ ಪ್ಲಾನ್ ಯಾವುದು ಗೊತ್ತಾ?
ಜಿಯೋ ಕಳೆದ ಕೆಲವು ಸಮಯದಲ್ಲಿ ಟೆಲಿಕಾಂ ಮಾರುಕಟ್ಟೆಯನ್ನು ಆಳುತ್ತಿದೆ. ಕೈಗೆಟುಕುವ ಬೆಲೆಯ ರೀಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆಗೊಳಿಸಿದೆ. ಚಂದಾದಾರಿಕೆಯ ಬೆಲೆ ಮತ್ತು ಇತರೆ ಬೆನಿಫಿಟ್ ಗಳಿಂದಾಗಿ ಟೆಲಿಕಾಂ ದುನಿಯಾದಲ್ಲಿ ವಿಭಿನ್ನ ಹವಾ ಸೃಷ್ಟಿ ಮಾಡಿರುವುದು ಜಿಯೋ. ಇತರೆ ಎಲ್ಲಾ ಆಪರೇಟರ್ ಗಳಿಗಿಂತ ಆಕರ್ಷಕವಾಗಿರುವ ಪೋಸ್ಟ್ ಪೇಯ್ಡ್ ಮತ್ತು ಪ್ರಿಪೇಯ್ಡ್ ಪ್ಲಾನ್ ಗಳನ್ನು ಜಿಯೋ ನೀಡುತ್ತದೆ. ಬೆಲೆಯ ವಿಚಾರದಲ್ಲಿ ಇತರೆ ಯಾವುದೇ ಟೆಲಿಕಾಂ ಆಪರೇಟರ್ ಗಳು ಕೂಡ ಜಿಯೋಗೆ ಸ್ಪರ್ಧೆಯೊಡ್ಡುವುದಕ್ಕೆ ಕಷ್ಟವಾಗುತ್ತದೆ.

ಒಂದು ವೇಳೆ ನೀವು ಜಿಯೋ ಚಂದಾದಾರರಾಗಿದ್ದಲ್ಲಿ ಬೆಲೆಯನ್ನು ಇಳಿಕೆ ಮಾಡಿಕೊಳ್ಳಬಹುದಾದ ಕೆಲವು ಪ್ಲಾನ್ ಗಳು ಬೇರೆಬೇರೆ ಬೆಲೆಯಲ್ಲಿ ನಿಮಗೆ ಲಭ್ಯವಾಗುತ್ತದೆ. ಹೆಚ್ಚಿನ ಚಂದಾದಾರರು ಇಷ್ಟಪಡುವ ಕೆಲವು ಜಿಯೋ ಪ್ಲಾನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.ಬೇರೆಬೇರೆ ಅಗತ್ಯತೆಗಳಿಗೆ ಅನುಸಾರವಾಗಿ ನಾವಿದ್ದನ್ನು ವಿಭಾಗಿಸಿದ್ದೇವೆ.

1.5 ಜಿಬಿ ಪ್ರತಿದಿನ ಲಭ್ಯವಾಗುವ ಪ್ಯಾಕ್ ಗಳು
Rs 449 ಪ್ಯಾಕ್: ನೀವು ಹೆಚ್ಚು ಯುಟ್ಯೂಬ್ ನೋಡುವುದು ಮತ್ತು ಇತರೆ ಅಂತರ್ಜಾಲ ಸಂಬಂಧಿ ಕೆಲಸಗಳನ್ನು ಮಾಡುತ್ತಿರುವವರಾದರೆ ಖಂಡಿತ ನಿಮಗೆ ರುಪಾಯಿ 449 ರ ಪ್ಯಾಕ್ ಬೆಸ್ಟ್ ಅನ್ನಿಸುತ್ತದೆ. ಈ ಪ್ಯಾಕ್ ನಿಮಗೆ 1.5 ಜಿಬಿ 4ಜಿ ಡಾಟಾವನ್ನು ಪ್ರತಿದಿನ ನೀಡುತ್ತದೆ. ಇದರ ವ್ಯಾಲಿಡಿಟಿ 91 ದಿನಗಳಾಗಿರುತ್ತದೆ. ಅಂದರೆ ಹೆಚ್ಚು ಕಡಿಮೆ ಮೂರು ತಿಂಗಳ ಅವಧಿಯದ್ದಾಗಿರುತ್ತದೆ ಮತ್ತು ಹೆಚ್ಚು ಲಾಭದಾಯವಾಗಿರುವ ಪ್ಲಾನ್ ಆಗಿದೆ. ಇದರಲ್ಲಿ ಉಚಿತ ವಾಯ್ಸ್ ಮತ್ತು ವೀಡಿಯೋ ಕರೆಗಳು ಕೂಡ ಲಭ್ಯವಾಗುತ್ತದೆ. ಜಿಯೋ ಆಪ್ಸ್ ಗಳಿಗೆ ಕಾಂಪ್ಲಿಮೆಂಟರಿ ಆಕ್ಸಿಸ್ ಕೂಡ ಇರುತ್ತದೆ.

2ಜಿಬಿ ಡಾಟಾ ಪ್ರತಿದಿನ ಲಭ್ಯವಾಗುವ ಪ್ಯಾಕ್ ಗಳು :
Rs 398 ಪ್ಲಾನ್: ನಿಮಗೆ ಮೊಬೈಲ್ ಡಾಟಾ ಪ್ರತಿದಿನ 2ಜಿಬಿ ವರೆಗೆ ಬೇಕಾಗುತ್ತದೆ ಎಂದರೆ ನೀವು 398 ರುಪಾಯಿ ಪ್ಲಾನ್ ನ್ನು ಪಡೆಯುವುದು ಉತ್ತಮ ಆಯ್ಕೆಯಾಗಿರುತ್ತದೆ. ಈ ಪ್ಯಾಕ್ ನಿಮಗೆ 70 ದಿನಗಳ ಅವಧಿಯನ್ನು ಹೊಂದಿದ್ದು ಪ್ರತಿದಿನ 2ಜಿಬಿ ಡಾಟಾ ಲಭ್ಯವಾಗುತ್ತದೆ.ಇದರಲ್ಲಿ ಉಚಿತ ವಾಯ್ಸ್ ಮತ್ತು ವೀಡಿಯೋ ಕರೆಗಳನ್ನು ಮಾಡುವುದಕ್ಕೆ ಅವಕಾಶವಿರುತ್ತದೆ. ಪ್ರತಿ ದಿನ 100ಎಸ್ಎಂಎಸ್ ನ್ನು ಉಚಿತವಾಗಿ ಕಳಿಸುವುದಕ್ಕೂ ಕೂಡ ಅವಕಾಶವಿರುತ್ತದೆ ಜೊತೆಗೆ ಜಿಯೋ ಆಪ್ಸ್ ಗಳಿಗೆ ಕಾಂಪ್ಲಿಮೆಂಟರಿ ಚಂದಾದಾರಿಕೆ ಸಿಗುತ್ತದೆ.

3ಜಿಬಿ ಡಾಟಾ ಪ್ರತಿದಿನ ಲಭ್ಯವಾಗುವ ಪ್ಯಾಕ್ ಗಳು:
Rs 299 ಪ್ಲಾನ್: ರುಪಾಯಿ 299 ಪ್ಲಾನ್ ನಲ್ಲಿ 3ಜಿಬಿ ಡಾಟಾ ಪ್ರತಿದಿನ ಲಭ್ಯವಾಗುತ್ತದೆ. ಯಾರು ಅತೀ ಹೆಚ್ಚು ಮೀಡಿಯಾ ಫೈಲ್ ಗಳು ಮತ್ತು ವೆಬ್ ಸಿರೀಸ್ ಮತ್ತು ಮೂವಿಗಳನ್ನು ಬಳಸುತ್ತಾರೋ ಅವರಿಗೆ ಖಂಡಿತ ಇದು ಪ್ರಯೋಜನಕಾರಿ.ಇದು ಕೇವಲ 28 ದಿನಗಳ ಅವಧಿಯನ್ನು ಹೊಂದಿರುತ್ತದೆ.ಅನಿಯಮಿತ ವಾಯ್ಸ್ ಮತ್ತು ವೀಡಿಯೋ ಕರೆಗಳಿಗೆ ಅವಕಾಶವಿರುತ್ತದೆ. 100ಎಸ್ಎಂಎಸ್ ಗಳನ್ನು ಉಚಿತವಾಗಿ ಪ್ರತಿದಿನ ಕಳುಹಿಸುವುದಕ್ಕೆ ಅವಕಾಶವಿರುತ್ತದೆ. ಜಿಯೋ ಆಪ್ಸ್ ಗಳಿಗೆ ಕಾಂಪ್ಲಿಮೆಂಟರಿ ಆಕ್ಸಿಸ್ ಇರುತ್ತದೆ. ಜಿಯೋ ಸಿನಿಮಾ, ಜಿಯೋ ಟಿವಿ, ಎಜಿಯೋ ಮತ್ತು ಜಿಯೋ ಸರ್ವೀಸ್ ಗಳನ್ನು ಬಳಸಬಹುದು.

ದೀರ್ಘಾವಧಿ ಪ್ಲಾನ್ ಗಳು:
Rs 1,699 ಪ್ಲಾನ್: ಜೀಯೋದಲ್ಲಿ ದೀರ್ಘಾವಧಿ ಪ್ಲಾನ್ ಗಳು ಕೂಡ ಲಭ್ಯವಿದ್ದು ಅದರಲ್ಲಿ ಲಾಭದಾಯಕವಾಗಿರುವುದು ಎಂದರೆ ರುಪಾಯಿ 1,699 ರುಪಾಯಿ ಪ್ಲಾನ್. ಹೆಸರೇ ಸೂಚಿಸುವಂತೆ ಇದು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಡಾಟಾ ಬಳಕೆ ಮತ್ತು ಚಂದಾದಾರಿಕೆಯ ಬಗ್ಗೆ ಹೇಳುವುದಾದರೆ 1.5ಜಿಬಿ ಡಾಟಾ ಪ್ರತಿದಿನ ಲಭ್ಯವಾಗುತ್ತದೆ. ಇದರ ಜೊತೆಗೆ ಸಾಮಾನ್ಯ ಜಿಯೋ ಬೆನಿಫಿಟ್ ಗಳೆಲ್ಲವೂ ಸಿಗುತ್ತದೆ. ಅನಿಯಮಿತ ವಾಯ್ಸ್ ಮತ್ತು ವೀಡಿಯೋ ಕರೆಗಳಿಗೆ ಅವಕಾಶವಿರುತ್ತದೆ.100 ಉಚಿತ ಮೆಸೇಜ್ ಗಳನ್ನು ಪ್ರತಿದಿನ ಕಳುಹಿಸಬಹುದು.ಜಿಯೋ ಆಪ್ಸ್ ಗಳಿಗೆ ಕಾಂಪ್ಲಿಮೆಂಟರಿ ಆಕ್ಸಿಸ್ ಇರುತ್ತದೆ.

ಕೈಗೆಟುಕುವ ಬೆಲೆಯ ಪ್ಯಾಕ್ ಗಳು:
Rs 98 ಪ್ಲಾನ್: ಕಡಿಮೆ ಬೆಲೆಯ ಮತ್ತು ಕೈಗೆಟುಕುವ ಬೆಲೆಯೇ ನಿಮ್ಮ ಮುಖ್ಯ ಆಯ್ಕೆಯಾಗಿದ್ದಲ್ಲಿ 98 ರುಪಾಯಿ ಪ್ಲಾನ್ ಉತ್ತಮ ಆಯ್ಕೆಯಾಗಿರುತ್ತದೆ.98 ರುಪಾಯಿ ಪ್ಲಾನಿನ ಅವಧಿ 28 ದಿನಗಳಾಗಿರುತ್ತದೆ. ಇದರಲ್ಲಿ 2ಜಿಬಿ ಡಾಟಾ ಲಭ್ಯವಾಗುತ್ತದೆ. 300ಎಸ್ಎಂಎಸ್ ಗಳನ್ನು ಕಳುಹಿಸುವುದಕ್ಕೆ ಅವಕಾಶವಿರುತ್ತದೆ.ವೀಡಿಯೋ ಮತ್ತು ವಾಯ್ಸ್ ಕರೆಗಳನ್ನು ಮಾಡಬಹುದು. ಜಿಯೋ ಸೇವೆಗಳಿಗೆ ಕಾಂಪ್ಲಿಮೆಂಟರಿ ಆಕ್ಸಿಸ್ ಕೂಡ ಇರುತ್ತದೆ.


Click it and Unblock the Notifications








