Home
ಸುದ್ದಿಜಾಲ

ಜಿಯೋಫೈಬರ್‌ ಪರಿಚಯಿಸಿರುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳ ವಿಶೇಷತೆ ಏನು?

ಇತ್ತೀಚಿನ ದಿನಗಳಲ್ಲಿ ಬ್ರಾಡ್‌ಬ್ಯಾಂಡ್‌ ಯೋಜನೆಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ತಡೆರಹಿತ ಇಂಟರ್‌ನೆಟ್‌ ಅನುಭವ ನೀಡುವ ಈ ಪ್ಲಾನ್‌ಗಳು ಮನೆಯಿಂದಲೇ ಕೆಲಸ ಮಾಡುವವರಿಗೆ, ಆನ್‌ಲೈನ್‌ ತರಗತಿ, ಗೇಮಿಂಗ್‌ ಸೇರಿದಂತೆ ಅನೇಕ ಕಾರ್ಯಗಳಿಗೆ ಬ್ರಾಡ್‌ಬ್ಯಾಂಡ್‌ ಯೊಜನೆಗಳು ಸೂಕ್ತವಾಗಿವೆ. ಇದೇ ಕಾರಣಕ್ಕೆ ಖಾಸಗಿ ಟೆಲಿಕಾಂಗಳು ಸೇರಿದಂತೆ ಅನೇಕ ಕಂಪೆನಿಗಳು ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಜಿಯೋ ಟೆಲಿಕಾಂ ಕೂಡ ಸೇರಿದೆ. ಜಿಯೋ ಟೆಲಿಕಾಂ ಭಾರತದಲ್ಲಿ ಜಿಯೋ ಫೈಬರ್‌ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ನೀಡುತ್ತಿದೆ.

ಜಿಯೋ

ಹೌದು, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತದಲ್ಲಿ ಜಿಯೋ ಫೈಬರ್ ಹೆಸರಿನಲ್ಲಿ ಅನೇಕ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ತಿಂಗಳಿಗೆ 399ರೂ. ಬೆಲೆಯ ಆರಂಭಿಕ ಪ್ಲಾನ್‌ಗಳಿಂದ ಹಿಡಿದು 6 ತಿಂಗಳು ಮತ್ತು 12 ತಿಂಗಳ ಆಯ್ಕೆಗಳನ್ನು ಸಹ ನೀಡುತ್ತದೆ. ಸದ್ಯ ರಿಲಯನ್ಸ್ ಜಿಯೋದ JioFiber ಭಾರತದ ಅತಿದೊಡ್ಡ ಬ್ರಾಡ್‌ಬ್ಯಾಂಡ್ ಸೇವಾ ಪೂರೈಕೆದಾರರಲ್ಲಿ ಒಂದಾಗಿದೆ. JioFiber ನ ವೇಗವು 30Mbps ನಿಂದ ಹಿಡಿದು 1Gbps ವರೆಗೆ ಇರುತ್ತದೆ. ಹಾಗಾದ್ರೆ ಜಿಯೋ ಟೆಲಿಕಾಂ ಭಾರತದಲ್ಲಿ ಪರಿಚಯಿಸಿರುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ

ಜಿಯೋ ತನ್ನ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ತಿಂಗಳಿಗೆ 399ರೂ.ಗಳಿಂದ ಪ್ರಾರಂಭಿಸಿ ತಿಂಗಳಿಗೆ 8,499ರೂ.ವೆರೆಗಿನ ಪ್ಲಾನ್‌ಗಳನ್ನು ನೀಡುತ್ತಿದೆ. ಈ ಪ್ಲಾನ್‌ಗಳು ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ವೀಡಿಯೊ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ VIP, ಸೋನಿ ಲೈವ್‌, Zee5, ವೂಟ್‌ ಸೆಲೆಕ್ಟ್‌, ಲಯನ್ಸ್‌ಗೇಟ್‌ ಪ್ಲೇ, Sun NXT, hoichoi, Discovery+, ಜಿಯೋ ಸಿನಿಮಾ, Shemaroo, AltBalaji, ಇರೋಸ್‌ನೌ ಮತ್ತು ವೂಟ್‌ ಕಿಡ್ಸ್‌ ಸೇರಿದಂತೆ ಅನೇಕ OTT ಸೇವೆಗಳಿಗೆ ಪ್ರವೇಶವನ್ನು ನೀಡಲಿದೆ. ಇನ್ನು ಜಿಯೋಫೈಬರ್‌ ಬ್ರಾಡ್‌ಬ್ಯಾಂಡ್‌ಗಳನ್ನು ಅನೇಕ ಆಯ್ಕೆಗಳಾಗಿ ನೋಡಬಹುದಾಗಿದ್ದು, ಅ ಎಲ್ಲಾ ಪ್ಲಾನ್‌ಗಳ ವಿಶೇಷತೆ ಇಲ್ಲಿದೆ ಓದಿ.

ಬ್ರೊನ್ಜ್ ಪ್ಲಾನ್‌

ಬ್ರೊನ್ಜ್ ಪ್ಲಾನ್‌

ಜಿಯೋಫೈಬರ್‌ನ ಬ್ರೊನ್ಜ್ ಪ್ಲಾನ್‌ 399 ರೂ. ಬೆಲೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ನೀವು 30mbps ಇಂಟರ್ನೆಟ್ ವೇಗವನ್ನು ಪಡೆದುಕೊಳ್ಳಬಹುದು. ಜೊತೆಗೆ ಅನಿಯಮಿತ ಕರೆಯೊಂದಿಗೆ 3,300 FUP ಡೇಟಾ ಮಿತಿಯನ್ನು ನೀಡಲಿದೆ. ಆದರೆ ಈ ಬ್ರೊನ್ಜ್ ಪ್ಲಾನ್‌ ಯಾವುದೇ OTT ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ನೀಡುವುದಿಲ್ಲ ಅನ್ನೊದು ಗಮನಾರ್ಹವಾಗಿದೆ.

ಸಿಲ್ವರ್‌ ಪ್ಲಾನ್‌

ಸಿಲ್ವರ್‌ ಪ್ಲಾನ್‌

ಜಿಯೋಫೈಬರ್‌ ತಿಂಗಳಿಗೆ 699 ರೂ,ಬೆಲೆಯಲ್ಲಿ ಸಿಲ್ವರ್‌ ಪ್ಲಾನ್‌ ಅನ್ನು ನೀಡುತ್ತಿದೆ. ಈ ಪ್ಲಾನ್‌ನಲ್ಲಿ ನೀವು ತಡರಹಿತ ಇಂಟರ್‌ನೆಟ್‌ ಪ್ರಯೋಜನ ಪಡೆಯಬಹುದು. ಇದು ನಿಮಗೆ 100Mbps ವೇಗವನ್ನು ನೀಡಲಿದೆ. ಆದರೆ ಈ ಪ್ಲಾನ್‌ನಲ್ಲಿ ನಿಮಗೆ ಯಾವುದೇ ಅನಿಯಮಿತ ಕರೆ ಮತ್ತು ಯಾವುದೇ OTT ಚಂದಾದಾರಿಕೆ ಪ್ರಯೋಜನ ನೀಡುವುದಿಲ್ಲ.

ಗೋಲ್ಡ್‌ ಪ್ಲಾನ್‌

ಗೋಲ್ಡ್‌ ಪ್ಲಾನ್‌

ಜಿಯೋ ಫೈಬರ್ ಗೋಲ್ಡ್ ಪ್ಲಾನ್‌ 150Mbps FUP ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಈ ಪ್ಲಾನ್‌ ನಿಮಗೆ ಅನಿಯಮಿತ ಕರೆಗಳ ಜೊತೆಗೆ ದೈನಂದಿನ ಅನಿಯಮಿತ ಡೇಟಾ ಪ್ರಯೋಜನ ನೀಡಲಿದೆ. ಈ ಪ್ಲಾನ್‌ ತಿಂಗಳಿಗೆ 999ರೂ.ಗಳಿಂದ ಆರಂಭವಾಗಲಿದೆ. ಇನ್ನು ಈ ಪ್ಲಾನ್‌ ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಅನ್ನು ಹೊರತು ಪಡಿಸಿ ಇತರೆ 11 OTT ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಗಳನ್ನು ನೀಡುತ್ತದೆ.

ಡೈಮಂಡ್ ಪ್ಲಾನ್‌

ಡೈಮಂಡ್ ಪ್ಲಾನ್‌

ಡೈಮಂಡ್ ಪ್ಲಾನ್‌ 1,499 ರೂ. ಬೆಲೆಯನ್ನು ಹೊಂದಿದ್ದು, 300Mbps ವರೆಗಿನ ಅನಿಯಮಿತ ಇಂಟರ್‌ನೆಟ್‌ ವೇಗವನ್ನು ನೀಡಲಿದೆ. ಇನ್ನು ಈ ಪ್ಲಾನ್‌ ಅನಿಯಮಿತ ಕರೆ ಪ್ರಯೋಜನ ಜೊತೆಗೆ ತಿಂಗಳಿಗೆ 1,500 ರೂ ಮೌಲ್ಯದ 12 OTT ಅಪ್ಲಿಕೇಶನ್‌ಗಳಿಗೆ ಪೂರಕ ಪ್ರವೇಶವನ್ನು ನೀಡುತ್ತದೆ.

ಡೈಮಂಡ್ ಪ್ಲಸ್‌ ಪ್ಲಾನ್‌

ಡೈಮಂಡ್ ಪ್ಲಸ್‌ ಪ್ಲಾನ್‌

ಈ ಪ್ಲಾನ್‌ 2,499 ರೂ. ಬೆಲೆಯನ್ನು ಹೊಂದಿದ್ದು, 4,000GB ವರೆಗಿನ ಡೇಟಾಕ್ಕಾಗಿ 500Mbps ವೇಗವನ್ನು ನೀಡಲಿದೆ. ಜೊತೆಗೆ ಅನಿಯಮಿತ ಕರೆ ಪ್ರಯೋಜನ ಮತ್ತು 12 OTT ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ನೀಡುತ್ತದೆ.

ಪ್ಲಾಟಿನಂ ಪ್ಲಾನ್‌

ಪ್ಲಾಟಿನಂ ಪ್ಲಾನ್‌

ಜಿಯೋಫೈಬರ್‌ ಪ್ಲಾಟಿನಂ ಪ್ಲಾನ್‌ ತಿಂಗಳಿಗೆ 3,999 ರೂ.ಬೆಲೆಯೊಂದಿಗೆ ಪ್ರಾರಂಭವಾಗಲಿದೆ. ಈ ಪ್ಲಾನ್‌ನಲ್ಲಿ 1Gbps ವೇಗದಲ್ಲಿ 7,500GB ಡೇಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಅನಿಯಮಿತ ವಾಯ್ಸ್‌ ಕಾಲ್‌ ಮತ್ತು 12 OTT ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಒದಗಿಸುತ್ತದೆ.

ಟೈಟಾನಿಯಂ ಪ್ಲಾನ್‌

ಟೈಟಾನಿಯಂ ಪ್ಲಾನ್‌

ಈ ಪ್ಲಾನ್‌ ಜಿಯೋಫೈಬರ್‌ ನೀಡುವ ಅತ್ಯಂತ ದುಬಾರಿ ಬ್ರಾಡ್‌ಬ್ಯಾಂಡ್ ಪ್ಲಾನ್‌ ಆಗಿದ್ದು, ಜಿಯೋಫೈಬರ್‌ ಟೈಟಾನಿಯಂ ಪ್ಲಾನ್‌ 8,499ರೂ ಬೆಲೆಯನ್ನು ಹೊಂದಿದೆ. ಇನ್ನು ಈ ಪ್ಲಾನ್‌ 1Gbps ವೇಗದಲ್ಲಿ 15,000GB ಮಾಸಿಕ ಡೇಟಾ ಪ್ರಯೋಜನವನ್ನು ಹೊಂದಿದೆ.

Best Mobiles in India

English summary
Reliance Industries Limited has started Jio Fiber broadband internet plans in India.to know more visit to kannada.gizbot.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+