Home
ಸುದ್ದಿಜಾಲ

ವಾರ್ಷಿಕ ವ್ಯಾಲಿಡಿಟಿ ಬಯಸೋರಿಗೆ ಜಿಯೋದ ಈ ಪ್ರಿಪೇಯ್ಡ್‌ ಪ್ಲಾನ್‌ಗಳು ಬೆಸ್ಟ್‌!

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ ಟೆಲಿಕಾಂ ಇಂದಿಗೂ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ತನ್ನ ವಿಶೇಷ ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳ ಮೂಲಕ ಏರ್‌ಟೆಲ್‌ ಮತ್ತು ವಿ ಟೆಲಿಕಾಂಗೆ ಸೆಡ್ಡು ಹೊಡೆದಿದೆ. ಅಗ್ಗದ ಬೆಲೆಯಲ್ಲಿ ಅಧಿಕ ಡೇಟಾ ಪ್ರಯೋಜನಗಳನ್ನು ನೀಡುವ ಮೂಲಕ ಜಿಯೋ ಗ್ರಾಹಕರನ್ನು ಸೆಳೆದಿದೆ. ಇನ್ನು ಜಿಯೋ ಪರಿಚಯಿಸಿರುವ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ದೀರ್ಘಾವಧಿ ಮತ್ತು ಅಲ್ಫಾವಧಿ ಪ್ಲಾನ್‌ಗಳು ಕೂಡ ಸೇರಿವೆ. ಇದರಲ್ಲಿ ದೀರ್ಘಾವಧಿಯ ಪ್ಲಾನ್‌ಗಳು ಒಂದು ವರ್ಷದ ಮಾನ್ಯತೆಯನ್ನು ಕೂಡ ಪಡೆದಿವೆ.

ಜಿಯೋ

ಹೌದು, ಜಿಯೋ ಟೆಲಿಕಾಂ ಪರಿಚಯಿಸಿರುವ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ದೀರ್ಘಾವಧಿಯ ಪ್ಲಾನ್‌ಗಳು ಸಾಕಷ್ಟು ಗಮನಸೆಳೆದಿವೆ. ಇದರಲ್ಲಿ ವಾರ್ಷಿಕ ಮಾನ್ಯತೆ ನೀಡುವ ಪ್ಲಾನ್‌ಗಳು ಬಳಕೆದಾರರ ನೆಚ್ಚಿನ ಆಯ್ಕೆಯಾಗಿವೆ. ಇನ್ನು ಈ ಪ್ಲಾನ್‌ಗಳಲ್ಲಿ ಉಚಿತ ಒಟಿಟಿ ಚಂದಾದಾರಿಗೆ, ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶ ಮತ್ತು ಆಡ್-ಆನ್ ಪ್ರಯೋಜನಗಳು ಕೂಡ ದೊರೆಯಲಿವೆ. ಇದಲ್ಲದೆ ಅನಿಯಮಿತ ಕರೆ ಹಾಗೂ ಅನಿಯಮಿತ ದೈನಂದಿನ ಡೇಟಾ, ಧ್ವನಿ ಮತ್ತು SMS ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಒಂದು ವರ್ಷದ ಮಾನ್ಯತೆ ನೀಡುವ ಜಿಯೋ ಪ್ರಿಪೇಯ್ಡ್‌ ಪ್ಲಾನ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ 2545ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ 2545ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ ಟೆಲಿಕಾಂನ 2545ರೂ. ಪ್ರಿಪೇಯ್ಡ್‌ ಪ್ಲಾನ್‌ 336 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಒಂದು ವರ್ಷದ ಅವಧಿಗೆ ಸ್ವಲ್ಪ ಕಡಿಮೆ ಆದರೂ ವಾರ್ಷಿಕ ಪ್ಲಾನ್‌ ಅಂತಾನೇ ಇದನ್ನು ಪರಿಗಣಿಸಬಹುದಾಗಿದೆ. ಈ ಪ್ಲಾನ್‌ನಲ್ಲಿ ಪ್ರತಿನಿತ್ಯ 1.5GB ಡೇಟಾ ಪ್ರಯೋಜನ ಸಿಗಲಿದ್ದು, ಒಟ್ಟು ಅವಧಿಗೆ 504 GB ಡೇಟಾ ಪ್ರಯೋಜನ ದೊರೆಯಲಿದೆ. ಇದರಲ್ಲಿ ದೈನಂದಿನ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದಾಘಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ ಜಿಯೋಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್‌ಗೆ ಪ್ರವೇಶವನ್ನು ಪಡೆದುಕೊಳ್ಳಬಹುದಾಗಿದೆ.

ಜಿಯೋ 2879ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ 2879ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ 2879ರೂ. ಪ್ರಿಪೇಯ್ಡ್‌ ಪ್ಲಾನ್ ನಿಮಗೆ ಒಟ್ಟು 365 ದಿನಗಳ ಮಾನ್ಯತೆಯನ್ನು ನೀಡಲಿದೆ. ಅಂದರೆ ಒಂದು ವರ್ಷದ ಅವಧಿಯ ಮಾನ್ಯತೆಯನ್ನು ಈ ಪ್ಲಾನ್‌ ನೀಡಲಿದೆ. ಈ ಅವಧಿಯಲ್ಲಿ ಪ್ರತಿನಿತ್ಯ 2GB ಡೇಟಾ ಪ್ರಯೋಜನ ನೀಡಲಿದೆ. ಒಟ್ಟು ಅವಧಿಗೆ 730GB ಡೇಟಾ ಪ್ರಯೋಜನ ದೊರೆಯಲಿದೆ. ಇನ್ನು ಈ ಪ್ಲಾನ್‌ನಲ್ಲಿ ನಿಮಗೆ ಅನಿಯಮಿತ ಧ್ವನಿ ಕರೆಗಳು ಮತ್ತು ದೈನಂದಿನ 100 SMS ಪ್ರಯೋಜನ ಲಭ್ಯವಿದೆ. ಇದಲ್ಲದೆ ಆಡ್-ಆನ್ ಪ್ರಯೋಜನಗಳಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್‌ಗೆ ಪ್ರವೇಶವನ್ನು ನೀಡಲಿದೆ.

ಜಿಯೋ 2999ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ 2999ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ ಟೆಲಿಕಾಂ ನೀಡುವ ವಾರ್ಷಿಕ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ 2999ರೂ. ಪ್ರಿಪೇಯ್ಡ್‌ ಪ್ಲಾನ್‌ ಕೂಡ ಒಂದಾಗಿದೆ. ಈ ಪ್ಲಾನ್‌ನಲ್ಲಿ ಒಟ್ಟು ಅವಧಿಗೆ 912.5GB ಡೇಟಾ ಪ್ರಯೋಜನ ಸಿಗಲಿದ್ದು, ದೈನಂದಿನ ಮಿತಿ 2.5GB ಡೇಟಾ ಸಿಗಲಿದೆ. ಇನ್ನು ಈ ಅವಧಿಯಲ್ಲಿ ಪ್ರತಿನಿತ್ಯ ಅನಿಯಮಿತ ವಾಯ್ಸ್‌ ಕಾಲ್‌ ಮತ್ತು ಡೈಲಿ 100 SMS ಪ್ರಯೋಜನ ದೊರೆಯಲಿದೆ. ಇದಲ್ಲದೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್‌ ಪ್ರಯೋಜನ ಕೂಡ ದೊರೆಯಲಿದೆ. ಜೊತೆಗೆ ಈ ಪ್ಲಾನ್‌ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ಗೆ ವಾರ್ಷಿಕ ಚಂದಾದಾರಿಕೆಯನ್ನು ಲಭ್ಯವಾಗಲಿದೆ.

ಜಿಯೋ 4199ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ 4199ರೂ. ಪ್ರಿಪೇಯ್ಡ್‌ ಪ್ಲಾನ್‌

ಜಿಯೋ ಟೆಲಿಕಾಂನ 4199ರೂ ಅತ್ಯಂತ ದುಬಾರಿ ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ ಆಗಿದ್ದು, 365 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಈ ಪ್ಲಾನ್‌ನಲ್ಲಿ ನೀವು ದೈನಂದಿನ 3GB ಡೇಟಾ ಪ್ರಯೋಜನ ನೀಡಲಿದೆ. ಅಂದರೆ ಒಟ್ಟು ಅವಧಿಗೆ 1095GB ಡೇಟಾವನ್ನು ನೀಡಲಿದೆ. ಇದರ ಜೊತೆಗೆ ಈ ಪ್ರಿಪೇಯ್ಡ್‌ ಪ್ಲಾನ್‌ ನಿಮಗೆ ದೈನಂದಿನ ಅನಿಯಮಿತ ಕರೆ ಪ್ರಯೋಜನ ಹಾಗೂ ಪ್ರತಿನಿತ್ಯ 100 SMS ಸೌಲಭ್ಯವನ್ನು ನೀಡಲಿದೆ. ಇದಲ್ಲದೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ, ಜಿಯೋ ಕ್ಲೌಡ್‌ಗೆ ಹೆಚ್ಚುವರಿ ಪ್ರವೇಶವನ್ನು ನೀಡಲಿದೆ. ಜೊತೆಗೆ 1 ವರ್ಷದ ಅವಧಿಗೆ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಜಿಯೋದ ಇತರೆ ಜನಪ್ರಿಯ ಪ್ರಿಪೇಯ್ಡ್‌ ಪ್ಲಾನ್‌ಗಳು

ಜಿಯೋದ ಇತರೆ ಜನಪ್ರಿಯ ಪ್ರಿಪೇಯ್ಡ್‌ ಪ್ಲಾನ್‌ಗಳು

ಜಿಯೋ 601ರೂ. ಪ್ರೀಪೇಯ್ಡ್‌ ಪ್ಲಾನ್ ಪ್ರಯೋಜನಗಳು
ಜಿಯೋ ಟೆಲಿಕಾಂನ 601 ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಅಲ್ಪಾವಧಿಯ ಯೋಜನೆ ಆಗಿದ್ದು, 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಪ್ರತಿದಿನ 3GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ 6 GB ಡೇಟಾ ಸಿಗಲಿದ್ದು, ಹಾಗೆಯೇ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಚಂದಾದಾರಿಕೆಯ ಪ್ರಯೋಜನ ಸಹ ಲಭ್ಯವಾಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 90GB ಡೇಟಾ ಪ್ರಯೋಜನ ದೊರೆಯಲಿದೆ.

ಜಿಯೋ 479ರೂ. ಪ್ರಿಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು

ಜಿಯೋ 479ರೂ. ಪ್ರಿಪೇಯ್ಡ್ ಪ್ಲ್ಯಾನ್ ಪ್ರಯೋಜನಗಳು

ಜಿಯೋ ಟೆಲಿಕಾಂನ ಈ ಪ್ರೀಪೇಯ್ಡ್‌ ಪ್ಲಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿರುವ ಜಿಯೋದ 399ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಬಳಕೆದಾರರಿಗೆ ಪ್ರತಿದಿನ 1.5 GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಇದರೊಂದಿಗೆ ಜಿಯೋ ದಿಂದ ಜಿಯೋಗೆ ಸೇರಿದಂತೆ ಇತರೆ ನೆಟವರ್ಕ್‌ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯ ಪಡೆದಿವೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ನೀಡುತ್ತದೆ.

Best Mobiles in India

English summary
Best Jio prepaid plans with the validity of 365 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+