ಜನಪ್ರಿಯ ಲ್ಯಾಪ್‌ಟಾಪ್‌ಗಳಿಗೆ ಭಾರಿ ರಿಯಾಯಿತಿ ನೀಡಿದ ಅಮೆಜಾನ್!
ಇ-ಕಾಮರ್ಸ್ ದೈತ್ಯ ಅಮೆಜಾನ್‌ನ ಬಹು ನಿರೀಕ್ಷಿತ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಇಂದಿನಿಂದ ಶುರುವಾಗಿದೆ. ಸ್ವಾತಂತ್ರ ದಿನಾಚರಣೆ ಸಂಭ್ರಮದ ಹೊತ್ತಿನಲ್ಲಿ ಬಂದಿರುವ ಈ ಸೇಲ್ ಇದೇ ಆಗಸ್ಟ್ 9ರ ವರೆಗೆ ನಡೆಯಲಿದೆ. ಇನ್ನು ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ 2021 ಸೇಲ್‌ನಲ್ಲಿ ಹೊಸದಾಗಿ ಲಾಂಚ್‌ಆಗಿರುವ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೂ ರಿಯಾಯಿತಿ ಘೋಷಿಸಲಾಗಿದೆ. ಅಲ್ಲದೆ ಲ್ಯಾಪ್‌ಟಾಪ್‌ಗಳು, ಅಮೆಜಾನ್ ಡಿವೈಸ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳ ಮೇಲೆ ಬಿಗ್ ಡಿಸ್ಕೌಂಟ್ ನೀಡಲಾಗ್ತಿದೆ.

ಹೌದು, ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಭರ್ಜರಿ ರಿಯಾಯಿತಿಯನ್ನು ಹೊತ್ತು ತಂದಿದೆ. ಇತ್ತೀಚಿನ ಗ್ಯಾಜೆಟ್‌ಗಳು ಮತ್ತು ತಂತ್ರಜ್ಞಾನವನ್ನು ಬಯಸುವ ಜನರು ಉತ್ತಮ ಡೀಲ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಲ್ಯಾಪ್‌ಟಾಪ್‌ಗಳ ಮೇಲೆ ಈ ಸೇಲ್‌ನಲ್ಲಿ 33% ವರೆಗೂ ರಿಯಾಯಿತಿ ನೀಡಲಾಗ್ತಿದೆ. ಹಾಗಾದ್ರೆ ಅಮೆಜಾನ್ ಸೇಲ್‌ನಲ್ಲಿ ನೀವು ಯಾವೆಲ್ಲಾ ಲ್ಯಾಪ್‌ಟಾಪ್‌ಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

Victus by ಹೆಚ್‌ಪಿ Ryzen 5 5600H ಗೇಮಿಂಗ್ ಲ್ಯಾಪ್ಟಾಪ್
Victus by ಹೆಚ್‌ಪಿ Ryzen 5 5600H ಗೇಮಿಂಗ್ ಲ್ಯಾಪ್ಟಾಪ್ 16.1 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು 8GB RAM ಮತ್ತು 512GB ಇಂಟರ್ ಸ್ಟೋರೇಜ್ ಅನ್ನು ಪಡೆದುಕೊಂಡಿದೆ. ಇನ್ನು ಈ ಲ್ಯಾಪ್‌ಟಾಪ್ ಮೂಲ ಬೆಲೆ 78,035 ರೂ ಆಗಿದ್ದು, ರಿಯಾಯಿತಿ ದರದಲ್ಲಿ 66,990 ರೂ ಬೆಲೆಗೆ ಲಭ್ಯವಾಗಲಿದೆ. ಇದರಿಂದ ನೀವು 11,045 ರೂ ವರೆಗೆ ಉಳಿತಾಯ ಮಾಡಬಹುದಾಗಿದೆ. ಇದು 5 ನೇ ಜನರಲ್ ಎಎಮ್‌ಡಿ ರೈಜನ್ 5 5600 ಎಚ್ ಪ್ರೊಸೆಸರ್ ಹೊಂದಿದ್ದು, ವಿಂಡೋಸ್ 10 ಹೋಮ್ ಆಪರೇಟರ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

LG gram 15 Ultra-Lightweight
ಇನ್ನು ಅಮೆಜಾನ್ ಸೇಲ್‌ನಲ್ಲಿ ಎಲ್ಜಿ ಗ್ರಾಮ್ 15 ಲ್ಯಾಪ್‌ಟಾಪ್ ಮೇಲೆ 33% ರಿಯಾಯಿತಿಯನ್ನು ಘೋಷಿಸಲಾಗಿದೆ. ಇದರ ಮೂಲ ಬೆಲೆ 1,04,000 ರೂ ಆಗಿದ್ದು, ರಿಯಾಯಿತಿ ದರದಲ್ಲಿ 69,990 ರೂ ಗಳಿಗೆ ಖರೀದಿಸಬಹುದಾಗಿದೆ. ಇದರಿಂದ ನೀವು 34,010ರೂ ವರೆಗೆ ಉಳಿತಾಯ ಮಾಡಬಹುದಾಗಿದೆ. ಇದು 10 ನೇ ಜೆನ್ ಇಂಟೆಲ್ ಕೋರ್ ಐ 5-1035 ಜಿ 7 ಪ್ರೊಸೆಸರ್ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ 15 ಇಂಚಿನ ಐಪಿಎಸ್ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಈ ಲ್ಯಾಪ್‌ಟಾಪ್ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಪಡೆದುಕೊಂಡಿದೆ.
HP ಪೆವಿಲಿಯನ್ 15 ಇಂಚಿನ ಗೇಮಿಂಗ್ ಲ್ಯಾಪ್ಟಾಪ್
ಹೆಚ್‌ಪಿ ಪೆವಿಲಿಯನ್ ಗೇಮಿಂಗ್ ಲ್ಯಾಪ್ಟಾಪ್ 15.6 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ಸಮಯದಲ್ಲಿ 66,490 (MRP ರೂ. 77,549) ಗಳಿಗೆ ಲಭ್ಯವಾಗಲಿದೆ. ಈ ಲ್ಯಾಪ್ಟಾಪ್ ಒಂದು ಬಂಡಲ್ ಎಕ್ಸ್ಚೇಂಜ್ ಆಫರ್ ನೊಂದಿಗೆ ಬರುತ್ತದೆ.


Click it and Unblock the Notifications








