Home
ಸುದ್ದಿಜಾಲ

ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಲ್ಯಾಪ್‌ಟಾಪ್‌ಗಳ ವಿವರ ಇಲ್ಲಿದೆ!

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ ಖರೀದಿಸುವ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಹಲವು ಆಕರ್ಷಕ ಲ್ಯಾಪ್‌ಟಾಪ್‌ಗಳು ಎಂಟ್ರಿ ನೀಡಿವೆ. ಇದರಲ್ಲಿ ಬಜೆಟ್‌ ಲ್ಯಾಪ್‌ಟಾಪ್‌ಗಳು ಸೇರಿದಂತೆ ಹೈ ಎಂಡ್‌ ಮಾಡೆಲ್‌ ಲ್ಯಾಪ್‌ಟಾಪ್‌ಗಳು ಕೂಡ ಸೇರಿವೆ. ಇವುಗಳಲ್ಲಿ ಜನಪ್ರಿಯ ಬ್ರ್ಯಾಂಡ್‌ ಲ್ಯಾಪ್‌ಟಾಪ್‌ಗಳು ಸಾಕಷ್ಟು ಗಮನಸೆಳೆದಿವೆ.

ಹೌದು, ಬಜೆಟ್‌ ಬೆಲೆಯಲ್ಲಿ ಲ್ಯಾಪ್‌ಟಾಪ್‌ ಖರೀದಿಸಬೇಕೆಂದುಕೊಂಡಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ನಿಮ್ಮ ಬಜೆಟ್‌ಗೆ ತಕ್ಕ ಲ್ಯಾಪ್‌ಟಾಪ್‌ಗಳ ಬಗ್ಗೆ ಮಾಹಿತಿಯನ್ನು ನಾವು ತಿಳಿಸಿಕೊಡುತ್ತಿದ್ದೆವೆ. ಅದರಲ್ಲೂ 30,000 ಕ್ಕಿಂತ ಕಡಿಮೆ ಬೆಲೆಗೆ ಲ್ಯಾಪ್‌ಟಾಪ್‌ ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಿಕೊಡ್ತೀವಿ ಓದಿರಿ.

ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಲ್ಯಾಪ್‌ಟಾಪ್‌ಗಳ ವಿವರ ಇಲ್ಲಿದೆ!

Lenovo IdeaPad 1 AMD Ryzen 3 ಲ್ಯಾಪ್‌ಟಾಪ್‌
Lenovo IdeaPad 1 AMD Ryzen 3 7320U ಲ್ಯಾಪ್‌ಟಾಪ್‌ ಬಜೆಟ್‌ ಬೆಲೆಯಲ್ಲಿ ಖರೀದಿಸುವವರಿಗೆ ಸೂಕ್ತವಾದ ಆಯ್ಕೆಯಾಗಿದೆ. ಈ ಲ್ಯಾಪ್‌ಟಾಪ್‌ 15.6 ಇಂಚಿನ HD ಥಿನ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ ಪೋರ್ಟಬಲ್‌ ಲ್ಯಾಪ್‌ಟಾಪ್‌ ಆಗಿದ್ದು, 8 GB RAM ಮತ್ತು ವಿಶಾಲವಾದ 512 GB SSD ಅನ್ನು ಹೊಂದಿದೆ. ಇದು ವಿಂಡೋಸ್ 11 ಹೋಮ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಕ್ಲೌಡ್ ಗ್ರೇ ಫಿನಿಶ್ ಉತ್ತಮವಾಗಿ ಕಾರ್ಯನಿರ್ವಹಿಸುವ ಉತ್ತಮವಾದ ಲ್ಯಾಪ್‌ಟಾಪ್ ಅನ್ನು ಬಯಸುವವರಿಗೆ ಇದು ಸೂಕ್ತವಾಗಿದೆ. ಇದು ಪ್ರಸ್ತುತ ಅಮೆಜಾನ್‌ನಲ್ಲಿ 27990ರೂ ಬೆಲೆಗೆ ಲಭ್ಯವಾಗಲಿದೆ.

TECNO MEGABOOK T1 ಲ್ಯಾಪ್‌ಟಾಪ್‌
TECNO MEGABOOK T1 ಲ್ಯಾಪ್‌ಟಾಪ್‌ ಕೂಡ ಮಧ್ಯಮ ಶ್ರೇಣಿಯ ಬಜೆಟ್‌ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಈ ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಐ ಕಂಫರ್ಟ್ ಡಿಸ್‌ಪ್ಲೇ ಇದಾಗಿದೆ. ಇನ್ನು ಲ್ಯಾಪ್‌ಟಾಪ್‌ ಇಂಟೆಲ್‌ ಕೋರ್‌ 11th Gen i5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 512GB SSD ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ 70 Wh ಸಾಮರ್ಥ್ಯದ ಬಿಗ್‌ ಬ್ಯಾಟರಿಯನ್ನು ಒಳಗೊಂಡಿದೆ. ಈ ಲ್ಯಾಪ್‌ಟಾಪ್‌ ಅಲ್ಟ್ರಾ ಸ್ಲಿಮ್ ವಿನ್ಯಾಸವನ್ನು ಹೊಂದಿದ್ದು, ವಿಂಡೋಸ್ 11ನಲ್ಲಿ ರನ್ ಆಗಲಿದೆ. ಇದು ಮೂನ್‌ಶೈನ್ ಸಿಲ್ವರ್ ಬಣ್ಣದಲ್ಲಿ ಬರುತ್ತದೆ. ಈ ಲ್ಯಾಪ್‌ಟಾಪ್‌ ಅಮೆಜಾನ್‌ನಲ್ಲಿ 29990ರೂ ಬೆಲೆಗೆ ಖರೀದಿಸಬಹುದಾಗಿದೆ.

ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಲ್ಯಾಪ್‌ಟಾಪ್‌ಗಳ ವಿವರ ಇಲ್ಲಿದೆ!

ZEBRONICS NBC 1S ಕೋರ್ I3 11ನೇ ಜನ್ 1125G4 ಲ್ಯಾಪ್‌ಟಾಪ್‌
ZEBRONICS NBC 1S ಕೋರ್ I3 11ನೇ ಜನ್ 1125G4 ಲ್ಯಾಪ್‌ಟಾಪ್‌ 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 11th Gen ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ವಿಂಡೋಸ್‌ 11 ಹೋಮ್‌ನಲ್ಲಿ ರನ್‌ ಆಗಲಿದೆ. ಈ ಲ್ಯಾಪ್‌ಟಾಪ್‌ನ ಇಂಟೆಲ್ ಪ್ರೊಸೆಸಿಂಗ್ ಪವರ್ ಮತ್ತು ಸಾಕಷ್ಟು ಮೆಮೊರಿಯೊಂದಿಗೆ ಲೋಡ್ ಆಗಿದೆ. ಅಂದರೆ 8GB RAM ಮತ್ತು 512GB M.2 SSD ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ ಸುಗಮ ಕಾರ್ಯಕ್ಷಮತೆಯನ್ನು ನೀಡಲಿದೆ. USB ಟೈಪ್-C ಪೋರ್ಟ್ ಮತ್ತು ಹೆಚ್ಚಿನ ಭದ್ರತೆಗಾಗಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಕೂಡ ಪಡೆದಿದೆ. ಈ ಲ್ಯಾಪ್‌ಟಾಪ್‌ ನಿಮಗೆ ಅಮೆಜಾನ್‌ನಲ್ಲಿ 27990ರೂ ಬೆಲೆಗೆ ಲಭ್ಯವಾಗಲಿದೆ.

Lenovo IdeaPad Slim 3
ಲೆನೊವೊ ಕಂಪೆನಿಯ ಈ ಲ್ಯಾಪ್‌ಟಾಪ್‌ ಕೂಡ ನಿಮಗೆ ಮಿಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನಲ್ಲಿ ಲಭ್ಯವಾಗಲಿದೆ. ಇದು 15.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, Intel Celeron N4020 ಪ್ರೊಸೆಸರ್ ವೇಗವನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ ವಿಂಡೋಸ್ 11 ನಲ್ಲಿ ರನ್‌ ಆಗಲಿದೆ. ಹಾಗೆಯೇ 8GB RAM ಮತ್ತು 256GB SSD ಸಾಮರ್ಥ್ಯವನ್ನು ಪಡೆದಿದೆ. ಈ ಲ್ಯಾಪ್‌ಟಾಪ್‌ ಅನ್ನು ಅಮೆಜಾನ್‌ನಲ್ಲಿ 28000ರೂ ಬೆಲೆಗೆ ಖರೀದಿಸಹುದಾಗಿದೆ.

Best Mobiles in India

English summary
Best laptops in the under 30000 rs in india: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+