Home
ಸುದ್ದಿಜಾಲ

ಭಾರತದಲ್ಲಿ 50,000ರೂ, ಒಳಗೆ ನೀವು ಖರೀದಿಸಬಹುದಾದ ಬೆಸ್ಟ್‌ ಲ್ಯಾಪ್‌ಟಾಪ್‌ಗಳು!

ಕೊರೊನಾ ಬಂದ ನಂತರ ಮನೆಯಿಂದಲೇ ಕಾರ್ಯನಿರ್ವಹಿಸುವ ಉದ್ಯೋಗಿಗಳ ಸಂಖ್ಯೆ ಜಾಸ್ತಿಯಾಗಿದೆ. ಇದೇ ಕಾರಣಕ್ಕೆ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಉದ್ಯೋಗಿಗಳು, ಆನ್‌ಲೈನ್‌ ತರಗತಿಗಾಗಿ ವಿದ್ಯಾರ್ಥಿಗಳು ಎಲ್ಲರೂ ಕೂಡ ಲ್ಯಾಪ್‌ಟಾಪ್‌ಗಳ ಮೊರೆಹೋಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವು ಕಂಪನಿಗಳು ವಿಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಸಹ ಪರಿಚಯಿಸಿವೆ.

ಲ್ಯಾಪ್‌ಟಾಪ್‌

ಹೌದು, ಲ್ಯಾಪ್‌ಟಾಪ್‌ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಒಂದು ವೇಳೆ ನೀವು ಸ್ಕೈಪ್ ಅಥವಾ ಗೂಗಲ್ ಮೀಟ್‌ನಂತಹ ಅಪ್ಲಿಕೇಶನ್‌ಗಳನ್ನು ಚಲಾಯಿಸಲು ಪೋರ್ಟಬಲ್ ಪಿಸಿಯನ್ನು ಹುಡುಕುತ್ತಿದ್ದರೆ ಮತ್ತು ಅಂತರ್ಜಾಲದಲ್ಲಿ ಇತರ ದೈನಂದಿನ ಕೆಲಸಗಳನ್ನು ಮಾಡಿದರೆ ಅತ್ಯುತ್ತಮ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದಾಗಿದೆ. ನೀವು ನಿಮ್ಮ ಬೆಲೆಯಲ್ಲಿ ಅದರಲ್ಲೂ 50,000ರೂ, ಒಳಗೆ ಭಾರತದಲ್ಲಿ ಖರೀದಿಸಬಹುದಾದ ಐದು ಲ್ಯಾಪ್‌ಟಾಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಸುಸ್ ವಿವೋಬುಕ್ ಅಲ್ಟ್ರಾ 15

ಆಸುಸ್ ವಿವೋಬುಕ್ ಅಲ್ಟ್ರಾ 15

ಆಸುಸ್ ವಿವೋಬುಕ್ ಅಲ್ಟ್ರಾ 15 (2020) ಲ್ಯಾಪ್‌ಟಾಪ್‌ 47,800 ರೂ. ಬೆಲೆ ಹೊಂದಿದೆ. ಇನ್ನು ಈ ಲ್ಯಾಪ್ಟಾಪ್ 11 ನೇ ಜನ್ ಇಂಟೆಲ್ ಕೋರ್ i3-1115G4 ಪ್ರೊಸೆಸರ್ ಅನ್ನು ಹೊಂದಿದೆ. ಇದು ಇಂಟೆಲ್ UHD ಗ್ರಾಫಿಕ್ಸ್ ಅನ್ನು ಹೊಂದಿದ್ದು, 8GB RAM ಮತ್ತು 256GB SSD ಸ್ಟೋರೇಜ್ ಜೊತೆಯಲ್ಲಿ ಹೊಂದಿದೆ. ಇದು ವಿಂಡೋಸ್ 10 ಔಟ್-ಆಫ್-ದಿ-ಬಾಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ನಮ್-ಪ್ಯಾಡ್ ಬಳಸಿ ಆನಂದಿಸುವ ಬಳಕೆದಾರರು ಚಿಕ್ಲೆಟ್-ಶೈಲಿಯ ಬ್ಯಾಕ್ಲಿಟ್ ಕೀಬೋರ್ಡ್ ಅನ್ನು ಬಳಸಬಹುದು. ಇದು ಅಮೆಜಾನ್‌ನಲ್ಲಿ ಖರೀದಿಸಲು ಲಭ್ಯವಿದೆ.

HP 15s

HP 15s

ಸಿಲ್ವರ್ ಕಲರ್ ಫಿನಿಶ್ ನಲ್ಲಿ ಬರುವ ಮತ್ತು ಕೇವಲ 1.69 ಕೆಜಿ ತೂಕವಿರುವ HP 15 ಲ್ಯಾಪ್‌ಟಾಪ್‌ ನಿಮಗೆ ಕೇವಲ 45,490ರೂ ಬೆಲೆ ಹೊಂದಿದೆ. ಇದು 15.6 ಇಂಚಿನ ಫುಲ್-ಹೆಚ್‌ಡಿ ಡಿಸ್‌ಪ್ಲೇ ಹೊದಿದೆ. ಇನ್ನು ಈ ಲ್ಯಾಪ್‌ಟಾಪ್‌ 11 ನೇ ಜನ್ ಇಂಟೆಲ್ ಕೋರ್ i3-1115G4 ಪ್ರೊಸೆಸರ್ ನಿಂದ 4.1 GHz ವರೆಗಿನ ಇಂಟೆಲ್ UHD GPU ಯೊಂದಿಗೆ ಶಕ್ತಿಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ 8GB RAM ಮತ್ತು 512GB SSD ಸ್ಟೋರೇಜ್ ಜೊತೆಯಲ್ಲಿ ಬರುತ್ತದೆ. ಇದು ಅಮೆಜಾನ್ ಇಂಡಿಯಾದಲ್ಲಿ ಲಭ್ಯವಿದೆ.

ಎಂಎಸ್‌ಐ ಮಾಡರ್ನ್ 14

ಎಂಎಸ್‌ಐ ಮಾಡರ್ನ್ 14

ಎಂಎಸ್‌ಐ ಮಾಡರ್ನ್ 14 ಲ್ಯಾಪ್‌ಟಾಪ್‌ 49,990 ರೂ, ಬೆಲೆ ಹೊಂದಿದೆ. ಫುಲ್‌ ಹೆಚ್‌ಡಿ ರೆಸೊಲ್ಯೂಶನ್‌ ಅನ್ನು ಪಡೆದುಕೊಂಡಿದೆ. 14 ಇಂಚಿನ ಸ್ಕ್ರೀನ್ ಮತ್ತು 10 ನೇ-ಜೆನ್ ಕೋರ್ i5-10210U ಪ್ರೊಸೆಸರ್‌ನೊಂದಿಗೆ ಇಂಟೆಲ್ UHD GPU ಅನ್ನು ಒಳಗೊಂಡಿದೆ. ಹಾಗೆಯೇ 8GB RAM ಮತ್ತು 512GB SSD ಸ್ಟೋರೇಜ್‌ ಅನ್ನು ಪಡೆದುಕೊಂಡಿದೆ. HD ವೆಬ್‌ಕ್ಯಾಮ್ ಮತ್ತು ಬ್ಯಾಕ್‌ಲಿಟ್ ಕೀಬೋರ್ಡ್. ಲ್ಯಾಪ್ಟಾಪ್ ಫ್ಲಿಪ್ ಕಾರ್ಟ್ ನಲ್ಲಿ ಗ್ರೇ ಕಲರ್ ಫಿನಿಶ್ ನಲ್ಲಿ ಲಭ್ಯವಿದೆ.

ಲೆನೊವೊ ಥಿಂಕ್‌ಪ್ಯಾಡ್ E15

ಲೆನೊವೊ ಥಿಂಕ್‌ಪ್ಯಾಡ್ E15

ಲೆನೊವೊ ಥಿಂಕ್‌ಪ್ಯಾಡ್ E15 (2021) ಲ್ಯಾಪ್‌ಟಾಪ್‌ 44,490ರೂ, ಬೆಲೆಗೆ ಲಭ್ಯವಾಗಲಿದೆ. ಕ್ಲಾಸಿಕ್ ಲೆನೊವೊ ಥಿಂಕ್‌ಪ್ಯಾಡ್ ವಿನ್ಯಾಸವನ್ನು ಹೊಂದಿದೆ. ಇದು 15.6-ಇಂಚಿನ ಫುಲ್-ಹೆಚ್‌ಡಿ ಡಿಸ್‌ಪ್ಲೇ ಮತ್ತು 11 ನೇ ಜೆನ್ ಇಂಟೆಲ್ ಕೋರ್ i3-1115G4 ಪ್ರೊಸೆಸರ್ ಅನ್ನು 4GB RAM ಮತ್ತು 256GB SSD ಸ್ಟೋರೇಜ್‌ನೊಂದಿಗೆ ಜೋಡಿಸಿದೆ. ಇದು ಬಯೋಮೆಟ್ರಿಕ್ ಭದ್ರತೆಗಾಗಿ ಗ್ರಾಹಕರು ಸಂಯೋಜಿತ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಸಹ ಪಡೆಯುತ್ತಾರೆ. ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ವೆಬ್‌ಕ್ಯಾಮ್ ಅನ್ನು ಶಟರ್‌ನಿಂದ ಮುಚ್ಚಬಹುದು. ಲೆನೊವೊ ಥಿಂಕ್‌ಪ್ಯಾಡ್ ಇ 15 (2021) ಅಮೆಜಾನ್‌ನಲ್ಲಿ ಲಭ್ಯವಿದೆ.

ಶಿಯೋಮಿ ಮಿ ನೋಟ್ಬುಕ್ 14

ಶಿಯೋಮಿ ಮಿ ನೋಟ್ಬುಕ್ 14

ಶಿಯೋಮಿ ಮಿ ನೋಟ್ಬುಕ್ 14 ಇದರ ಬೆಲೆ 44,999ರೂ, ಹೊಂದಿದೆ. 14 ಇಂಚಿನ ಫುಲ್ HD HD ಡಿಸ್ಪ್ಲೇ ಹೊಂದಿದೆ. ಇದು 10 ನೇ ತಲೆಮಾರಿನ ಇಂಟೆಲ್ ಕೋರ್ i5-10210U CPU ಅನ್ನು ಇಂಟೆಲ್ UHD GPU ಒಳಗೊಂಡಿದೆ. 8GB RAM ಮತ್ತು 256GB ಇಂಟರ್‌ನಲ್ SSD ಸಂಗ್ರಹದೊಂದಿಗೆ ಜೋಡಿಸುತ್ತದೆ. ಉತ್ಪಾದಕ ಮತ್ತು ಮನರಂಜನಾ ಉದ್ದೇಶಗಳಿಗಾಗಿ ಲ್ಯಾಪ್‌ಟಾಪ್ ಸೂಕ್ತವಾಗಿದೆ ಎಂದು ಶಿಯೋಮಿ ಹೇಳಿಕೊಂಡಿದೆ. ಇದು ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಲು ಲಭ್ಯವಿದೆ.

Best Mobiles in India

English summary
Here are five laptops under Rs 50,000 you check out in India.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+