ಬೆಲೆ ಏರಿಕೆ ನಂತರ ಹೆಚ್ಚಿನ ವ್ಯಾಲಿಡಿಟಿ ನೀಡುವ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್‌ಗಳು!
ದೇಶದ ಟೆಲಿಕಾಂ ವಲಯದಲ್ಲಿ ಒಂದು ವಾರದ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿವೆ. ದೇಶದ ಪ್ರಮುಖ ಮೂರು ಟೆಲಿಕಾಂ ಕಂಪೆನಿಗಳು ಕೂಡ ತಮ್ಮ ಪ್ರಿಪೆಯ್ಡ್ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಳ ಮಾಡಿವೆ. ಈ ಮೂಲಕ ಮೂರು ಟೆಲಿಕಾಂಗಳ ಪ್ರಿಪೇಯ್ಡ್ ಪ್ಲಾನ್‌ಗಳು ಹೊಸ ಬೆಲೆಯನ್ನು ಪಡೆದುಕೊಂಡಿವೆ. ಈ ಮೂಲಕ 20 ರಿಂದ 25%ರಷ್ಟು ಬೆಲೆ ಹೆಚ್ಚಳವನ್ನು ಮಾಡಿವೆ. ಪ್ರಿಪೇಯ್ಡ್ ಪ್ಲಾನ್‌ಗಳ ಬೆಲೆ ಮಾತ್ರ ಹೆಚ್ಚಳವಾಗಿದೆ. ಆದರೆ ಪ್ರಯೋಜನಗಳು ಮಾತ್ರ ಎಂದಿನಂತೆ ಇರಲಿವೆ.

ಹೌದು, ಟೆಲಿಕಾಂ ವಲಯದಲ್ಲಿ ಪ್ರಮುಖ ಮೂರು ಟೆಲಿಕಾಂಗಳು ಕೂಡ ಬೆಲೆ ಹೆಚ್ಚಳವನ್ನು ಮಾಡಿವೆ. ಸದ್ಯ ಟೆಲಿಕಾಂ ಕಂಪೆನಿಗಳು ಬೆಲೆ ಏರಿಕೆ ಮಾಡಿರುವುದರಿಂದ ಈಗ ನಿಮ್ಮ ಆಯ್ಕೆಯ ಪ್ಲಾನ್‌ಗಳು ಬದಲಾಗುವ ಸಾದ್ಯತೆ ಇದೆ. ಅದರಲ್ಲೂ ದೀರ್ಘಾವಧಿ ವ್ಯಾಲಿಡಿಟಿ ಪ್ಲಾನ್ ಬಯಸುವ ಗ್ರಾಹಕರು ಹಲವು ಆಯ್ಕೆಗಳನ್ನು ಪಡೆಯಬಹುದು. ಹಾಗಾದ್ರೆ ಬೆಲೆ ಹೆಚ್ಚಳದ ನಂತರ ಲಭ್ಯವಿರುವ ಅತ್ಯುತ್ತಮ ದೀರ್ಘಾವಧಿಯ ವ್ಯಾಲಿಡಿಟಿ ಪ್ಲಾನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ ಟೆಲಿಕಾಂ
ಏರ್‌ಟೆಲ್ ಟೆಲಿಕಾಂ ದೀರ್ಘಾವಧಿಯ ಪ್ಲಾನ್‌ಗಳಲ್ಲಿ 56 ದಿನಗಳ ಮಾನ್ಯತೆ ನೀಡುವ ಎರಡು ಪ್ಲಾನ್‌ಗಳನ್ನು ನೀಡುತ್ತದೆ. ಇದರಲ್ಲಿ ಏರ್‌ಟೆಲ್ ಟೆಲಿಕಾಂನ 479ರೂ. ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್ ಇಲ್ಲದೇ ಅನಿಯಮಿತ ವಾಯಿಸ್ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 1.5 GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಜೊತೆಗೆ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಕೂಡ ಲಭ್ಯವಾಗಲಿದೆ.
ಏರ್‌ಟೆಲ್ ಟೆಲಿಕಾಂನ 549ರೂ. ಪ್ಲ್ಯಾನ್
ಇನ್ನು ಏರ್‌ಟೆಲ್ ಟೆಲಿಕಾಂನ 549ರೂ. ಪ್ಲ್ಯಾನ್ 56 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಈ ಪ್ಲಾನ್ ಅನಿಯಮಿತ ವಾಯಿಸ್ ಕರೆ, ದೈನಂದಿನ 2GB ಡೇಟಾ ಪ್ರಯೋಜನ ಹಾಗೂ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಜೊತೆಗೆ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯವಾಗಲಿದೆ.
ಏರ್‌ಟೆಲ್ 719ರೂ. ಪ್ರಿಪೇಯ್ಡ್ ಯೋಜನೆ
ಏರ್‌ಟೆಲ್‌ನ ಜನಪ್ರಿಯ ಪ್ರಿಪೇಯ್ಡ್ ಪ್ಯಾನ್‌ಗಳಲ್ಲಿ 719ರೂ. ಪ್ಲ್ಯಾನ್ ಸಹ ಒಂದಾಗಿದೆ. ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಇನ್ನು ಈ ಪ್ಲಾನ್‌ನಲ್ಲಿ ಅನಿಯಮಿತ ಕರೆ, ದೈನಂದಿನ 1.5 GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಕೂಡ ದೊರೆಯಲಿದೆ.
ಏರ್‌ಟೆಲ್ ಟೆಲಿಕಾಂನ 839ರೂ. ಪ್ಲ್ಯಾನ್
ಈ ಪ್ಲಾನ್ 84 ದಿನಗಳ ಮಾನ್ಯತೆಯನ್ನು ಪಡೆದಿದೆ. ಇದು ಬಳಕೆದಾರರಿಗೆ ಪ್ರತಿದಿನ 2GB ಡೇಟಾ, ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್ ಹಾಗೂ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಪ್ರಯೋಜನವನ್ನು ನೀಡಲಿದೆ. ಜೊತೆಗೆ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ವಿ ಟೆಲಿಕಾಂ
ವಿ ಟೆಲಿಕಾಂ 479ರೂ. ಪ್ರಿಪೇಯ್ಡ್ ಪ್ಲ್ಯಾನ್
ವಿ ಟೆಲಿಕಾಂನ ಈ ಪ್ರಿಪೇಯ್ಡ್ ಪ್ಲ್ಯಾನಿನಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಪ್ಲ್ಯಾನಿನಲ್ಲಿ ಬಳಕೆದಾರರು ಹೆಚ್ಚುವರಿ 5GB ಡೇಟಾವನ್ನು ಪಡೆಯಬಹುದು.
ವಿ ಟೆಲಿಕಾಂ 539ರೂ.ಪ್ರಿಪೇಯ್ಡ್ ಪ್ಲ್ಯಾನ್
ಈ ಪ್ಲ್ಯಾನ್‌ನಲ್ಲಿ ಪ್ರತಿದಿನ 2GB ಡೇಟಾ ಮತ್ತು ಡಬಲ್ ಡೇಟಾ ಆಫರ್‌ನಿಂದಾಗಿ ಹೆಚ್ಚುವರಿ 2GB ಡೇಟಾ ಸೇರಿ ಒಟ್ಟು 4GB ಡೇಟಾ ಸಿಗುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.
ವಿ ಟೆಲಿಕಾಂ 1799ರೂ.ಪ್ರೀಪೇಯ್ಡ್ ಪ್ಲಾನ್
ವಿ ಟೆಲಿಕಾಂನ ಈ ಪ್ರೀಪೇಯ್ಡ್ ಪ್ಲ್ಯಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ ಒಟ್ಟು 24GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೂ ಒಟ್ಟು 3600 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಲಭ್ಯವಾಗುತ್ತದೆ. ಇನ್ನು ಹೆಚ್ಚುವರಿಯಾಗಿ ವಿ ಟೆಲಿಕಾಂ ಆಪ್ ಸೇವೆ ಲಭ್ಯ. ಹೆಚ್ಚಿನ ಡೇಟಾ ಅಗತ್ಯ ಇರದ ಆದರೆ ವಾರ್ಷಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಈ ಯೋಜನೆ ಸೂಕ್ತ ಎನಿಸಲಿದೆ.
ಇದಲ್ಲದೆ ವೊಡಾಫೋನ್ ಐಡಿಯಾ ಟೆಲಿಕಾಂ 84 ದಿನಗಳ ಮಾನ್ಯತೆ ಹೊಂದಿರುವ ಮೂರು ಪ್ಲಾನ್‌ಗಳನ್ನು ನೀಡುತ್ತಿದೆ. ಇದರಲ್ಲಿ 459ರೂ. ಪ್ಲಾನ್ 6GB ಡೇಟಾ ಪ್ರಯೋಜನ ನೀಡಲಿದೆ. ಹಾಗೆಯೆ 719ರೂ ಪ್ಲಾನ್ ದಿನಕ್ಕೆ 1.5GB ಡೇಟಾ ಪ್ರಯೋಜನ ದೊರೆಯಲಿದೆ. ಇನ್ನು 839ರೂ.ಬೆಲೆಯಲ್ಲಿ ದಿನಕ್ಕೆ 2GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ಜಿಯೋ ಟೆಲಿಕಾಂ
ಜಿಯೋ ಟೆಲಿಕಾಂ 395ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋದ 395ರೂ. ಪ್ರೀಪೇಯ್ಡ್ ಪ್ಲಾನ್ ಒಟ್ಟು 6GB ಡೇಟಾ ಪ್ರಯೋಜನ ನೀಡಲಿದೆ. ಇನ್ನು ಈ ಪ್ಲ್ಯಾನಿನಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಸೌಲಭ್ಯ ದೊರೆಯಲಿದೆ. ಜೊತೆಗೆ ಅನಿಮಿತ ಕರೆ ಪ್ರಯೋಜನ ಸಿಗಲಿದ್ದು, ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ.
ಜಿಯೋದ 479ರೂ. ಪ್ರೀಪೇಯ್ಡ್ ಪ್ಲಾನ್
ಜಿಯೋ ಟೆಲಿಕಾಂನ 479ರೂ. ಬೆಲೆಯ ಈ ಪ್ರೀಪೇಯ್ಡ್ ಪ್ಲಾನ್ ಒಟ್ಟು 56 ದಿನಗಳ ಮಾನ್ಯತೆಯನ್ನು ಪಡೆದಿದೆ. ಈ ಪ್ಲಾನ್‌ನಲ್ಲಿ ದೈನಂದಿನ 1.5GB ಡೇಟಾ, ಅನಿಯಮಿತ ಕರ, ಪ್ರಯೋಜನ ಸಿಗಲಿದೆ. ಜೊತೆಗೆ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ನೀಡುತ್ತದೆ.


Click it and Unblock the Notifications








