Home
ಸುದ್ದಿಜಾಲ

ನಾಯಿಸ್‌ ಕ್ಯಾನ್ಸಲಿಂಗ್‌ ಹೊಂದಿರುವ ಐದು ಅತ್ಯುತ್ತಮ ಹೆಡ್‌ಫೋನ್‌ಗಳು!

ನಾಯಿಸ್‌ಕ್ಯಾನ್ಸಲಿಂಗ್‌ ಹೆಡ್‌ಫೋನ್‌ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟ್ರೆಂಡ್‌ ಸೃಷ್ಟಿಸಿರುವ ಹೆಡ್‌ಫೋನ್‌. ಟೆಕ್ನಾಲಜಿ ಮುಂದುವರೆದಂತೆ ಹೇಗೆ ಸ್ಮಾರ್ಟ್‌ಫೋನ್‌ಗಳ ವಿನ್ಯಾಸದಲ್ಲಿ ಬದಲಾವಣೆ ಆಗ್ತಾ ಇದೆಯೋ ಆದೇ ರೀತಿ ಹೆಡ್‌ಫೋನ್‌ಗಳ ವಿನ್ಯಾಸದಲ್ಲೂ ಬದಲಾವಣೆ ಆಗ್ತಾ ಇದೆ. ಪ್ರತಿ ನಿತ್ಯವೂ ಟೆಕ್‌ವಲಯದಲ್ಲಿ ಹೊಸ ಮಾದರಿಯ ಆಕರ್ಷಕ ಫೀಚರ್ಸ್‌ಗಳ ಹೆಡ್‌ಫೋನ್‌ಗಳು ಲಾಂಚ್‌ ಆಗುತ್ತಲೇ ಇರುತ್ತವೆ. ಸದ್ಯ ನಾಯಿಸ್‌ ಕ್ಯಾನ್ಸೆಲಿಂಗ್‌ ಹೆಡ್‌ಫೋನ್‌ಗಳ ಭರಾಟೆ ಜೋರಾಗಿದೆ.

ಹೌದು

ಹೌದು, ಪ್ರಸ್ತುತ ದಿನಗಳಲ್ಲಿ ಕಿವಿಗೆ ಹೆಡ್‌ಫೋನ್‌ ಹಾಕಿಕೊಂಡು ಮ್ಯೂಸಿಕ್‌ ಪ್ಲೇ ಮಾಡಿಕೊಂಡು ಯಾವುದೇ ಶಬ್ದವನ್ನ ಕೇಳದೆ ಸಾಗೋದು ಅಂದರೆ ಇತ್ತಿಚೀನ ಯುವಜನತೆಗೆ ಒಂದು ರೀತಿಯ ಫ್ಯಾಷನ್‌ ಆಗಿ ಬಿಟ್ಟಿದೆ. ಇದಕ್ಕೆ ತಕ್ಕಂತೆ ಇಂದು ನಾಯಿಸ್‌ ಕ್ಯಾನ್ಸಲಿಂಗ್‌ ಹೆಡ್‌ಫೋನ್‌ಗಳು ಲಭ್ಯವಿವೆ. ಆದರೆ ಸಾಕಷ್ಟು ಕಂಪೆನಿಗಳ ಹೆಡ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಯಾವುದನ್ನ ಆಯ್ಕೆ ಮಾಡಿಕೊಳ್ಳಬೇಕು ಅನ್ನೊ ಗೊಂದಲ ನಿಮ್ಮನ್ನು ಕಾಡುತ್ತದೆ. ಆದರೆ ನೀವು ಗೊಂದಲ ಪಡಬೇಕಿಲ್ಲ. ನಿಮಗಾಗಿ ಮಾರುಕಟ್ಟೆಯಲ್ಲಿ ಲಭ್ಯವಾಗುವ ಐದು ಅತ್ಯುತ್ತಮ ನಾಯಿಸ್‌ ಕ್ಯಾನ್ಸೆಲಿಂಗ್‌ ಹೆಡ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಬೋಸ್‌ ನಾಯಿಸ್‌ ಕ್ಯಾನ್ಸಲಿಂಗ್‌ ಹೆಡ್‌ಫೋನ್‌

ಬೋಸ್‌ ನಾಯಿಸ್‌ ಕ್ಯಾನ್ಸಲಿಂಗ್‌ ಹೆಡ್‌ಫೋನ್‌

ಅತ್ಯುತ್ತಮ ನಾಯಿಸ್‌ ಕ್ಯಾನ್ಸಲಿಂಗ್‌ ಹೆಡ್‌ಫೋನ್‌ಗಳಲ್ಲಿ ಇದು ಕೂಡ ಒಂದಾಗಿದೆ. ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್‌ಗಾಗಿ ಈ ಹೆಡ್‌ಫೋನ್‌ ಅನ್ನು ಆಪ್ಟಿಮೈಸ್ ಮಾಡಲಾಗಿದೆ. ಅಲ್ಲದೆ ಈ ಹೆಡ್‌ಫೋನ್‌ನಲ್ಲಿ ಬಟನ್‌ ಅನ್ನು ಒತ್ತುವ ಮೂಲಕ ವಾಯಿಸ್‌ ಅಸಿಸ್ಟೆಂಟ್‌ ಕಾರ್ಯನಿರ್ವಹಿಸುವಂತೆ ಮಾಡಲು ಅವಕಾಶ ನೀಡಲಾಗಿದೆ. ಇನ್ನು ಈ ಹೆಡ್‌ಫೋನ್‌ಗಳು 33 ಅಡಿ ದೂರದ ಬ್ಲೂಟೂತ್ ರೇಂಜ್‌ ಅನ್ನು ಹೊಂದಿದೆ. ಅಲ್ಲದೆ ನಾಲ್ಕು ಮೈಕ್ರೊಫೋನ್ ಅನ್ನು ಸಹ ಒಳಗೊಂಡಿದೆ. ಇನ್ನು ಇದು ಬಳಕೆದಾರರ ಧ್ವನಿಯನ್ನು ಮಾತ್ರ ಕೇಳುವಂತೆ ಅವಕಾಶ ಕಲ್ಪಿಸಲಾಗಿದ್ದು, ಸುತ್ತಲಿನ ಶಬ್ದವನ್ನು ಕಿವಿಗೆ ಬಿಳದಂತೆ ತಡೆಯುತ್ತದೆ. ಇನ್ನು ಈ ಬೋಸ್ ಹೆಡ್‌ಫೋನ್‌ನಲ್ಲಿ ಎಆರ್‌ ಡಿವೈಸ್‌ ಅನ್ನು ನೀಡಲಾಗಿದ್ದು, ಇದು ಬಳಕೆದಾರನ ದೃಷ್ಟಿಕೋನವನ್ನು ಕಂಡುಹಿಡಿಯಲು ಸೆನ್ಸಾರ್‌ ಅನ್ನು ಹೊಂದಿದೆ. ಈ ಹೆಡ್‌ಫೋನ್‌ಗಳ ಬೆಲೆ 34,500 ರೂ, ಆಗಿದೆ.

ಸೆನ್‌ಹೈಸರ್ HD 4.50 SE BT NC

ಸೆನ್‌ಹೈಸರ್ HD 4.50 SE BT NC

ಈ ಹೆಡ್‌ಫೋನ್‌ ನಮ್ಮ ಸುತ್ತಲಿನ ಸದ್ದು, ಗದ್ದಲ ಯಾವುದು ಕೂಡ ಬಳಕೆದಾರನ ಕಿವಿಗೆ ಬೀಳದಂತ ವ್ಯವಸ್ಥೆಯನ್ನ ಹೊಂದಿದೆ. ಇದ್ದರಲ್ಲಿ ನಾಯಿಸ್‌ಗಾರ್ಡ್ ಆಕ್ಟಿವ್‌ ನಾಯಿಸ್‌ ಕ್ಯಾನ್ಸೆಲೇಶನ್‌ ಇದ್ದು, ಇದು ಮ್ಯೂಸಿಕ್‌ ಕೇಳುವ ಅನುಭವವನ್ನು ಇನ್ನಷ್ಟು ಸುಧಾರಿಸುತ್ತದೆ. ಇನ್ನು ಈ ಹೆಡ್‌ಫೋನ್‌ ಬ್ಲೂಟೂತ್ 4.0 ಗೆ ಹೊಂದಿಕೊಳ್ಳಲಿದ್ದು, ಇದು ಮ್ಯೂಸಿಕ್‌ ಟ್ರ್ಯಾಕ್‌ಗಳನ್ನು ಬದಲಾಯಿಸಲು ಮತ್ತು ಕನೆಕ್ಟಿವಿಟಿ ಹೊಂದಿರುವ ಮೈಕ್ರೊಫೋನ್ ಮೂಲಕ ಕರೆಗಳನ್ನು ಮಾಡಲು ಅವಕಾಶವನ್ನ ಕಲ್ಪಿಸುತ್ತದೆ. ಇದಕ್ಕಾಗಿ ಇಯರ್-ಕಪ್ ಕಂಟ್ರೋಲ್‌ ಅನ್ನು ಒಳಗೊಂಡಿದೆ. ಇನ್ನು ಈ ಹೆಡ್‌ಫೋನ್‌ 19 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, ಇದರ ಬೆಲೆ 7,999 ರೂ.ಆಗಿದೆ.

ಆಡಿಯೋ-ಟೆಕ್ನಿಕಾ ATH-M20x

ಆಡಿಯೋ-ಟೆಕ್ನಿಕಾ ATH-M20x

ಇದು ಓವರ್-ಇಯರ್ ಪ್ರೊಫೆಷನಲ್ ಸ್ಟುಡಿಯೋ ಮಾನಿಟರ್ ಹೆಡ್‌ಫೋನ್‌ ಆಗಿದ್ದು, ಉತ್ತಮ ಅನುಭವವನ್ನು ನೀಡುತ್ತದೆ. ಈ ಹೆಡ್‌ಫೋನ್‌ 40mm ಆಡಿಯೋ ಡ್ರೈವರ್‌ಗಳಿಗೆ ಬೆಂಬಲ ನೀಡಲಿದೆ. ಅಲ್ಲದೆ ಇದರಲ್ಲಿ ಅರ್ಥ್‌ ಮ್ಯಾಗ್ನೆಟ್ಸ್‌ ಮತ್ತು ಕಾಪರ್‌ ಹೊದಿಕೆ ಅಲ್ಯೂಮಿನಿಯಂ ವಾಯರ್‌ ವಾಯಿಸ್‌ ಕಂಟ್ರೋಲ್‌ ಅನ್ನು ಹೊಂದಿದೆ. ಇದರಿಂದ 40mm ಆಡಿಯೋ ಡ್ರೈವರ್‌ಗಳಲ್ಲಿ ಲೋ ಫ್ರೀಕ್ವೆನ್ಸಿ ಟ್ಯೂನ್‌ ಮತ್ತು ಸ್ಟುಡಿಯೋ ಟ್ರ್ಯಾಕಿಂಗ್ ನಲ್ಲಿ ಉತ್ತಮ ಅನುಭವ ನೀಡಲಿದೆ. ಇದರ ಬೆಲೆ 4,228 ರೂ ಆಗಿದೆ.

ಜೆಬಿಎಲ್ ಟ್ಯೂನ್ 600 BTNC

ಜೆಬಿಎಲ್ ಟ್ಯೂನ್ 600 BTNC

ಈ ಹೆಡ್‌ಫೋನ್‌ ಆನ್-ಇಯರ್ ವೈರ್‌ಲೆಸ್ ಬ್ಲೂಟೂತ್ ನಲ್ಲಿ ಉತ್ತಮ ಹೆಡ್‌ಫೋನ್‌ ಆಗಿದೆ. ಬಳಕೆದಾರರಿಗೆ ಉತ್ತಮ ಮ್ಯೂಸಿಕ್‌ ಅನುಭವದ ಜೊತೆಗೆ ಸುತ್ತಲಿನ ಶಬ್ದವನ್ನ ಕಂಟ್ರೋಲ್‌ ಮಾಡುತ್ತದೆ. ಇನ್ನು ಈ ಹೆಡ್‌ಫೋನ್‌ 12-ಗಂಟೆಗಳ ಬ್ಯಾಟರಿ ಅವಧಿಯನ್ನ ಹೊಂದಿದ್ದು, ಬ್ಲೂಟೂತ್‌ 4.1 ಜೊತೆಗೆ ಹೊಂದಿಕೊಳ್ಳುತ್ತದೆ. ಇದಲ್ಲದೆ ಈ ಹೆಡ್‌ಫೋನ್‌ ಜೆಬಿಎಲ್ ಪ್ಯೂರ್ ಬಾಸ್ ಸೌಂಡ್ ಅನ್ನು ಬೆಂಬಲಿಸುತ್ತದೆ ಮತ್ತು ವೈರ್‌ಲೆಸ್ ಬ್ಲೂಟೂತ್ ಸ್ಟ್ರೀಮಿಂಗ್ ಸೌಲಭ್ಯವನ್ನು ಹೊಂದಿದೆ. ಇದರ ಬೆಲೆ 3,999 ರೂ.ಆಗಿದೆ.

ಸೋನಿ MDR-XB450

ಸೋನಿ MDR-XB450

ಸೋನಿMDR-XB450 ಆನ್-ಇಯರ್ ಎಕ್ಸ್ಟ್ರಾ ಬಾಸ್ ಹೆಡ್‌ಫೋನ್‌ ಉತ್ತಮ ಫೀಚರ್ಸ್ ಹೊಂದಿದ್ದು ಬಳಕೆದಾರರ ನೆಚ್ಚಿನ ಹೆಡ್‌ಫೋನ್‌ಗಳ್ಳಲ್ಲಿ ಒಂದಾಗಿದೆ. ಈ ಹೆಡ್‌ಫೋನ್‌ ಪವರ್‌ಫುಲ್‌ ಬೀಟ್‌ ರೆಸ್ಪಾನ್ಸ್‌ ಕಂಟ್ರೋಲ್‌ ಅನ್ನು ಹೊಂದಿದ್ದು, ಲೋ ಫ್ರೀಕ್ವೆನ್ಸಿ ಸೌಂಡ್ಸ್‌ ಅನ್ನು ಹೆಚ್ಚಿಸುತ್ತದೆ. ಅಲ್ಲದೆ ಈ ಹೆಡ್‌ಫೋನ್‌ ಸೌಂಡ್‌ ಸಿಸ್ಟಂ ಬಳಕೆದಾರರಿಗೆ ಮ್ಯೂಸಿಕ್‌ ಆರಾಮವಾಗಿ ಕೇಳಲು ಅನುವು ಮಾಡಿಕೊಡುತ್ತದೆ. ಇನ್ನು ಈ ಡಿವೈಸ್‌ ಎಪಿ ರಿಮೋಟ್‌ ಕಂಟ್ರೋಲ್‌ ಹೊಂದಿದ್ದು, ಹ್ಯಾಡ್ಸ್‌ ಪ್ರೀ ಕರೆಗಳನ್ನ ಸ್ವೀಕರಿಸಲು ಅನುವು ಮಾಡಿಕೊಡಲಿದೆ.ಅಲ್ಲದೆ ಈ ಹೆಡ್‌ಫೋನ್‌ ಸ್ವಿವೆಲ್‌ ಫೋಲ್ಟಿಂಗ್‌ ವಿನ್ಯಾಸವನ್ನು ಹೊಂದಿದೆ. ಇದರ ಬೆಲೆ 1,760 ರೂ. ಆಗಿದೆ.

Best Mobiles in India

English summary
With more and more offices moving away from cubicles and opting for a shared-space concept, noise is increasingly becoming an issue of concern.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+