ಸಿಇಎಸ್ 2013 ಪ್ರದರ್ಶನದಲ್ಲಿ ಮೆಚ್ಚುಗೆಗಳಿಸಿದ ಉತ್ಪನ್ನಗಳಿವು

ಈಗ ನಾವು ಬಳಸುವಂತಹ ಟ್ಯಾಬ್ಲೆಟ್‌ನ್ನು ಹೇಗೆ ಬೇಕಾದ್ರೂ ಮಡಚಲು ಸಾಧ್ಯವಿಲ್ಲ.ಆದರೆ ಈ ಪೇಪರ್ ಟ್ಯಾಬ್ ಬಹಳ ತೆಳುವಾಗಿದ್ದು ನೀವು ಹೇಗೆ ಬೇಕಾದ್ರೂ ಮಡಚಬಹುದು. ಈಗ ನೀವು ಹೇಗೆ ಲ್ಯಾಪ್‌ಟಾಪ್, ಟ್ಯಾಬ್ಲೆಟ್‌ನಲ್ಲಿ ಸ್ಕ್ರೀನ್ ಇದೆಯೋ ಅದೇ ರೀತಿಯಲ್ಲಿ ಇಲ್ಲಿ ಹೊಸ ತೆಳು ಗ್ಲಾಸ್ ಮಿಶ್ರಿತ ಸ್ಕ್ರೀನ್ ಇದೆ.
ಇದರಲ್ಲಿ ನೀವು ಇ ಪುಸ್ತಕವನ್ನು ಚೆನ್ನಾಗಿ ಓದಬಹುದು. ಹೇಗೆ ಇಂದು ನೀವು ಪುಸ್ತಕದ ಪುಟ ತಿರುಗಿಸುತ್ತೀರಿ ಅದೇ ರೀತಿಯಲ್ಲಿ ಇಲ್ಲಿ ನೀವು ಟ್ಯಾಬಿನ ಪುಟ ಬೆಂಡ್ ಮಾಡಿದ್ರೆ ಮುಂದಿನ ಪುಟಕ್ಕೆ ಹೋಗಬಹುದು.
ಲಾಸ್ವೇಗಾಸ್‌ನಲ್ಲಿ ನಡೆಯುತ್ತಿರುವ ಗ್ರಾಹಕರ ಎಲೆಕ್ಟ್ರಾನಿಕ್ಸ್ ಶೋದಲ್ಲಿ ಈ ಟ್ಯಾಬ್ ತಂತ್ರಜ್ಞರ ಮೆಚ್ಚುಗೆ ಗಳಿಸಿದೆ. ಪ್ಲಾಸ್ಟಿಕ್ ಲಾಜಿಕ್ ಮತ್ತು ಇಂಟೆಲ್ ಲ್ಯಾಬ್ಸ್ ಸಹಯೋಗದೊಂದಿಗೆ ಕೆನಡಾದ ಕ್ವೀನ್ಸ್ ವಿಶ್ವವಿದ್ಯಾಲಯ ಈ ಪೇಪರ್ ಟ್ಯಾಬ್‌ನ್ನು ವಿನ್ಯಾಸಪಡಿಸಿದ್ದು. 10.7 ಇಂಚಿನ ಪ್ಲಾಸ್ಟಿಕ್ ಹೈ ರೆಸೂಲ್ಯೂಷನ್ ದರ್ಶಕ, ಟಚ್ ಸ್ಕ್ರೀನ್, ಇಂಟೆಲ್ ಕೋರ್ TM i5 ಪ್ರೊಸೆಸರ್ ಈ ಟ್ಯಾಬ್ಲೆಟ್‌ನಲ್ಲಿದೆ.


Click it and Unblock the Notifications








