ಸಿಇಎಸ್ 2013 ಪ್ರದರ್ಶನದಲ್ಲಿ ಮೆಚ್ಚುಗೆಗಳಿಸಿದ ಉತ್ಪನ್ನಗಳಿವು

ನಮ್ಮಲ್ಲಿ ಹೇಗೆ ವಸ್ತುಪ್ರದರ್ಶನ ನಡೆಯುತ್ತದೋ ಅದೇ ರೀತಿಯಲ್ಲಿ ವರ್ಷಕ್ಕೊಮ್ಮೆ ವಿಶ್ಚದ ಒಂದು ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಪ್ರದರ್ಶನ ನಡೆಯುತ್ತದೆ. ಈ ವರ್ಷದ ಗ್ರಾಹಕರ ಎಲೆಕ್ಟ್ರಾನಿಕ್ಸ್ ಪ್ರದರ್ಶನ (Consumer Electronics Show) ಅಮೇರಿಕಾದ ಲಾಸ್ ವೆಗಾಸ್ ಮತ್ತು ನೆವಡಾದಲ್ಲಿ ನಿನ್ನೆಯಿಂದ ಆರಂಭಗೊಂಡಿದೆ.
ಈ ಎಲೆಕ್ಟ್ರಾನಿಕ್ಸ್ ಪ್ರದರ್ಶನದಲ್ಲಿ ವಿಶ್ವದ ಟೆಕ್ಕಿ ಪಂಡಿತರು, ಎಲೆಕ್ಟ್ರಾನಿಕ್ಸ್ ವಿಷಯದ ಪಂಡಿತರು, ಹಾರ್ಡ್‌ವೇರ್ ತಂತ್ರಜ್ಞರು,ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸುವ ದೊಡ್ಡ ದೊಡ್ಡ ಕಂಪೆನಿಗಳ ಅಧಿಕಾರಿಗಳು ಪಾಲ್ಗೊಂಡು ಚರ್ಚೆ, ಸಂವಾದ ನಡೆಸುತ್ತಾರೆ. ಇದೇ ಸಂದರ್ಭಲ್ಲಿ ಎಲೆಕ್ಟ್ರಾನಿಕ್ಸ್ ಕಂಪೆನಿಗಳು ತಾವು ತಯಾರಿಸಿದ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತವೆ. ಈ ವರ್ಷ ಸಹ ಅನೇಕ ಕಂಪೆನಿಗಳು ತಾವು ತಯಾರಿಸಿದ ಉತ್ಪನ್ನಗಳನ್ನು ಬಿಡುಗಡೆ ಮಾಡಿವೆ. ಬನ್ನಿ ಯಾವ ಯಾವ ಕಂಪೆನಿ ಯಾವ ಹೊಸ ತಂತ್ರಜ್ಞಾನದಿಂದ ನಿರ್ಮಾಣಮಾಡಿದ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ ಎಂಬುದನ್ನು ನೋಡೋಣ. ಒಂದೊಂದೆ ಪುಟ ತಿರುವಿ ನೋಡಿಕೊಂಡು ಹೋಗಿ .


Click it and Unblock the Notifications








