ದೀಪಾವಳಿ ಸೇಲ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಬ್ಯಾಂಡ್‌ಗಳು!
ಹಬ್ಬದ ಸೀಸನ್ ಶುರುವಾಗ್ತಿದ್ದ ಹಾಗೇ ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಆನ್‌ಲೈನ್ ಗ್ರಾಹಕರಿಗೆ ಆಫರ್‌ಗಳ ಸುರಿಮಳೆಯನ್ನೇ ಸುರಿಸುತ್ತವೆ. ಅದರಲ್ಲಿಯೂ ಹಬ್ಬದ ದಿನಗಳಲ್ಲಿ ಡಿಸ್ಕೌಂಟ್ ಪ್ರಮಾಣ ಹೆಚ್ಚನ ಪ್ರಮಾಣದಲ್ಲಿಯೇ ಇರುತ್ತದೆ. ಸದ್ಯ ಇದೀಗ ದೀಪಾವಳಿ ಪ್ರಯುಕ್ತ ಗ್ರಾಹಕರು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ತಾಣಗಳ ಮೂಲಕ ಆಫರ್‌ನಲ್ಲಿ ಸಾಕಷ್ಟು ಪ್ರಾಡಕ್ಟ್‌ಗಳನ್ನ ಖರೀದಿಸಬಹುದಾಗಿದೆ. ಇನ್ನು ನೀವು ಸ್ಮಾರ್ಟ್‌ಬ್ಯಾಂಡ್ ಖರೀದಿಸಬೇಕು ಎಂದು ಕೊಂಡರೆ ಸ್ಮಾರ್ಟ್‌ಬ್ಯಾಂಡ್‌ಗಳು ಕೂಡ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.

ಹೌದು, ದೀಪಾವಳಿ ಪ್ರಯುಕ್ತ ಇ-ಕಾಮರ್ಸ್ ತಾಣಗಳಲ್ಲಿ ವಿಶೇಷ ಸೇಲ್ ಶುರು ಆಗಿವೆ. ಇನ್ನು ಈ ರಿಯಾಯಿತಿ ದರದ ಸೇಲ್‌ನಲ್ಲಿ ಸ್ಮಾರ್ಟ್‌ಬ್ಯಾಂಡ್‌ಗಳ ಮೇಲೂ ಆಪರ್‌ಗಳನ್ನ ನೀಡಲಾಗಿದೆ. ಹೀಗಾಗಿ ರಿಯಾಯಿತಿ ದರದಲ್ಲಿ ಸ್ಮಾರ್ಟ್‌ಬ್ಯಾಂಡ್ ಖರೀದಿಸಬೇಕು ಎನ್ನುವ ಗ್ರಾಹಕರಿಗೆ ಇದು ಸದಾವಕಾಶವಾಗಿದೆ. ಹಾಗಾದರೇ ದೀಪಾವಳಿ ಸಮಯದಲ್ಲಿ ನಿವು ಖರೀದಿಸಬಹುದಾದ ಸ್ಮಾರ್ಟ್‌ಬ್ಯಾಂಡ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಿ ಸ್ಮಾರ್ಟ್ ಬ್ಯಾಂಡ್ 3i
ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 3i ಡಿವೈಸ್ 0.78(1.9cm) ಇಂಚಿನ ಟಚ್‌ಸ್ಕ್ರೀನ್ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಬ್ಲ್ಯಾಕ್ ಮತ್ತು ವೈಟ್ ಮಾದರಿಯಲ್ಲಿದ್ದು, ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವು 128 x 80 ಆಗಿದೆ. ಡಿಸ್‌ಪ್ಲೇಯು ನೋಡಲು ಆಕರ್ಷಕ ಲುಕ್‌ನಲ್ಲಿದ್ದು, ನೋಟಿಫಿಕೇಶನ್‌ಗಳನ್ನು ವೀಕ್ಷಿಸಲು ಬೆಂಬಲಿಸುತ್ತದೆ. ಶಿಯೋಮಿ ಮಿ ಸ್ಮಾರ್ಟ್ ಬ್ಯಾಂಡ್ 3i ಡಿವೈಸ್ 5ATM ಸಾಮರ್ಥ್ಯದ ವಾಟರ್ ರೆಸಿಸ್ಟೆನ್ಸ್ ಸೌಲಭ್ಯವನ್ನು ಪಡೆದಿದ್ದು, ಡಿವೈಸ್ ಧರಿಸಿ ಸ್ವಿಮ್ಮ ಮಾಡಬಹುದಾಗಿದೆ. ರಿಯಲ್ ಟೈಮ್ ಆಕ್ಟಿವಿಟಿ ಟ್ರಾಕರ್, ಆಪ್ ನೋಟಿಫಿಕೇಶನ್, ಸ್ಲಿಪ್ ಮಾನಿಟರ್, ಇವೆಂಟ್ ರಿಮೈಂಡರ್, ಸೇರಿದಂತೆ ಅಗತ್ಯ ಫಿಟ್ನೆಸ್ ಸೌಲಭ್ಯಗಳನ್ನು ಒಳಗೊಂಡಿದೆ. ಇದರ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ 1,299 ರೂ ಆಗಿದೆ.

ಮಿ ಸ್ಮಾರ್ಟ್ ಬ್ಯಾಂಡ್ 4
ಶಿಯೋಮಿಯ ಮಿ ಬ್ಯಾಂಡ್ 4, 39.9% ದೊಡ್ಡದಾದ AMOLED ಕಲರ್ 4 ಡಿಸ್‌ಪ್ಲೇಯನ್ನು ಹೊಂದಿದ್ದು, ಬಳಕೆದಾರರ ಅಗತ್ಯಗಳನ್ನು ಆಧರಿಸಿ ಹೊಂದಿಸಬಹುದಾಗಿದೆ. ಈ ಸ್ಮಾರ್ಟ್‌ಬ್ಯಾಂಡ್ ಆಂಡ್ರಾಯ್ಡ್ 4.4, ಐಒಎಸ್ 9.0 ನೊಂದಿಗೆ ಹೊಂದಿಕೊಳ್ಳುತ್ತದೆ. ಅಲ್ಲದೆ ನಿಮ್ಮ ಫೋನ್ ಅನ್ನು ಸಹ ಮುಟ್ಟದೆ ಮ್ಯೂಸಿಕ್ ಎಫೆಕ್ಟ್ ಮತ್ತು ಮ್ಯೂಸಿಕ್ ಅನ್ನು ಬದಲಾಯಿಸುವಂತಹ ಇತರ ಸಂಬಂಧಿತ ಚಟುವಟಿಕೆಗಳನ್ನು ಈ ಬ್ಯಾಂಡ್ ಬಳಸಿ ಕಂಟ್ರೋಲ್ ಮಾಡಬಹುದಾಗಿದೆ. ಇದು ಅತ್ಯುತ್ತಮ ಫಿಟ್ನೆಸ್ ಡಿವೈಸ್ ಆಗಿದ್ದು, 'ಹಾರ್ಟ್‌ರೇಟ್ ಮಾನಿಟರಿಂಗ್' ಆಯ್ಕೆಯನ್ನು ಒಳಗೊಂಡಿದೆ. ನಿರಂತರ ಹೃದಯ ಬಡಿತದ ಕುರಿತು ಮಾಹಿತಿ ಒದಗಿಸುತ್ತದೆ. ಹಾಗೆಯೇ ಫೋಟೊಥೆಸ್ಮೊಗ್ರಾಫಿ (PPG) ಎಂಬ ಹೊಸ ಆಯ್ಕೆಯನ್ನು ಹೊಂದಿದ್ದು, ಇದು ರಕ್ತದ ಕುರಿತು ಕೇಲವು ಸೂಕ್ಷ್ಮ ಅಂಶಗಳನ್ನು ಗ್ರಹಿಸಿ ಮಾಹಿತಿಯನ್ನು ನೀಡಲಿದೆ. ಸದ್ಯ ದೀಪಾವಳಿ ಸಮಯದಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ 1,899 ರೂ.ಗೆ ಖರೀದಿಸಬಹುದಾಗಿದೆ.

ಹಾನರ್ ಬ್ಯಾಂಡ್ 4
ಹಾನರ್ ಬ್ಯಾಂಡ್ 0.95-ಇಂಚಿನ ಟಚ್ ಸ್ಕ್ರೀನ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಬ್ಯಾಂಡ್‌ನಲ್ಲಿ ಡಿಜಿಟಲ್ ಕ್ಲಾಕ್ ಫೇಸ್, ಇಮೇಲ್ ಸೇವೆಗಳು, ಬ್ಲೂಟೂತ್ ಸೇವೆ, ನೀರಿನ ಪ್ರತಿರೋಧ, ಹೃದಯ ಬಡಿತ ಟ್ರ್ಯಾಕಿಂಗ್, 100 mAh ಬ್ಯಾಟರಿ ಸಾಮರ್ಥ್ಯ ಅನ್ನು ಹೊಂದಿದೆ. ಈ ಬ್ಯಾಂಡ್ ಕಪ್ಪು, ನೀಲಿ, ಗುಲಾಬಿ ರೂಪಾಂತರಗಳಲ್ಲಿ ಬರುತ್ತದೆ. ಇದರ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ 2,790 ರೂ ಆಗಿದೆ.

ರಿಯಲ್‌ಮಿ ಬ್ಯಾಂಡ್
ರಿಯಲ್ ಮಿ ಬ್ಯಾಂಡ್ 0.96 ಇಂಚಿನ ಕಲರ್ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ 80x160 ಆಗಿದೆ. ಡಿಸ್‌ಪ್ಲೇಯಲ್ಲಿ ನ್ಯಾವಿಗೇಶನ್ನಗಾಗಿ ಒಂದು ಬಟನ್ ನೀಡಲಾಗಿದೆ. ಇದರೊಂದಿಗೆ 5 ಡಯಲ್ ಫೇಸ್ ಅನ್ನು ಹೊಂದಿದೆ. ಡಿಸ್‌ಪ್ಲೇ ಬೆಳಕನ್ನು ಅಡ್ವಸ್ಟ್ ಮಾಡುವ ಆಯ್ಕೆ ಸಹ ಪಡೆದುಕೊಂಡಿದೆ. ಫ್ಲಿಪ್‌ಕಾರ್ಟ್‌ನಲ್ಲಿ ದೀಪಾವಳಿ ಪ್ರಯುಕ್ತ ಇದರ ಬೆಲೆ 999 ರೂ ಆಗಿದೆ.

ಫಾಸ್ಟ್‌ಟ್ರಾಕ್ ರಿಫ್ಲೆಕ್ಸ್
ಸ್ಮಾರ್ಟ್‌ಬ್ಯಾಂಡ್ ವಲಯದಲ್ಲಿ ಫಾಸ್ಟ್ರ್ಯಾಕ್ ರಿಫ್ಲೆಕ್ಸ್ ಸ್ಮಾರ್ಟ್ ಬ್ಯಾಂಡ್ ಅತ್ಯುತ್ತಮ ಮಾದರಿಯಾಗಿದೆ. ಇದು ಯುನಿಸೆಕ್ಸ್ ವಿನ್ಯಾಸ, ಥರ್ಮೋಪ್ಲಾಸ್ಟಿಕ್ ಬಾಡಿ ಮತ್ತು ಡಿಜಿಟಲ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಬ್ಯಾಂಡ್ 10 ದಿನಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಬ್ಲೂಟೂತ್ ಸೆಟ್ಟಿಂಗ್ಸ್ ಅನ್ನು ಬೆಂಬಲಿಸಲಿದೆ. ಇದರ ಬೆಲೆ 1,995 ರೂ ಗಳಿಗೆ ಲಭ್ಯವಾಗಲಿದೆ.


Click it and Unblock the Notifications








