ಅಮೆಜಾನ್ ಸೇಲ್: ಸ್ಮಾರ್ಟ್‌ಫೋನ್ ಖರೀದಿಸಲು ಇದುವೇ ಬೆಸ್ಟ್ ಟೈಂ!
ಅಮೆಜಾನ್ ಆಯೋಜಿಸಿರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಶುರುವಾಗಿ ಮೂರು ದಿನ ಕಳೆದಿದೆ. ಈ ಸೇಲ್ ಇನ್ನು ಎರಡೂ ದಿನಗಳ ಕಾಲ ಮುಂದುವರೆಯಲಿದ್ದು,ಆನ್‌ಲೈನ್ ಶಾಪಿಂಗ್ ಪ್ರಿಯರಿಗರ ಬಿಗ್ ಡಿಸ್ಕೌಂಟ್ ನೀಡುತ್ತಿದೆ. ಅದರಲ್ಲೂ ನಿಮ್ಮ ಮನಸ್ಸಿನಲ್ಲಿರುವ ಡಿವೈಸ್‌ಗಳನ್ನು ತೆಗೆದುಕೊಳ್ಳಲು ಇದು ನಿಮಗೆ ಮತ್ತೊಂದು ಉತ್ತಮ ಅವಕಾಶವಾಗಿದೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಸ್ಮಾರ್ಟ್ ವಾಚ್, ಮತ್ತು ಇತರ ಡಿವೈಸ್‌ಗಳ ಮೇಲೆ ಕೆಲವು ದೊಡ್ಡ ರಿಯಾಯಿತಿಗಳನ್ನು ನೀಡಲಾಗ್ತಿದೆ.

ಹೌದು, ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ 2021 ಸೇಲ್‌ನಲ್ಲಿ ಬಿಗ್ ಡಿಸ್ಕೌಂಟ್ ದೊರೆಯಲಿದೆ. ಭರ್ಜರಿ ರಿಯಾಯಿತಿಗಳ ಜೊತೆಗೆ, ಅಮೆಜಾನ್ ತನ್ನ ಎಲ್ಲಾ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 10% ತ್ವರಿತ ರಿಯಾಯಿತಿ ನೀಡಲು SBI ಕಾರ್ಡ್ ಜೊತೆ ಕೈಜೋಡಿಸಿದೆ. ಲ್ಲದೆ ಈಸಿ ಇಎಂಐ ಆಯ್ಕೆಗಳು ಸೈಟ್ ಮತ್ತು ಬೇರೆ ಬೇರೆ ಬ್ಯಾಂಕುಗಳಿಂದಲೂ ಲಭ್ಯವಿವೆ. ಇನ್ನು ಈ ಸೇಲ್‌ನಲ್ಲಿ ಯಾವೆಲ್ಲಾ ಡಿವೈಸ್‌ಗಳಿಗೆ ಬಿಗ್ ಡಿಸ್ಕೌಂಟ್ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಐಫೋನ್ 11
ಅಮೆಜಾನ್‌ನ ಗ್ರೇಟ್ ಫ್ರೀಡಮ್ ಫೆಸ್ಟಿವಲ್ 2021 ಸೇಲ್‌ನಲ್ಲಿ ನೀವು 54,900 ರೂ ಮೂಲ ಬೆಲೆಯ ಆಪಲ್ ಐಫೋನ್ 11 ಅನ್ನು ರಿಯಾಯಿತಿ ದರದಲ್ಲಿ 49,999 ರೂ,ಗಳಿಗೆ ಖರೀದಿಸಬಹುದಾಗಿದೆ. ಅಲ್ಲದೆ ಅಮೆಜಾನ್‌ನ ಬಂಡಲ್ ವಿನಿಮಯ ಕೊಡುಗೆಯು ಈ ಡೀಲ್ ಅನ್ನು 13,400 ವರೆಗೆ ರಿಯಾಯಿತಿ ನೀಡಲಿದೆ. ಜೊತೆಗೆ ನೀವು ಪ್ರಮುಖ ಕ್ರೆಡಿಟ್ ಕಾರ್ಡ್ ಪೂರೈಕೆದಾರರೊಂದಿಗೆ ಲಭ್ಯವಿರುವ ನೋ ಕಾಸ್ಟ್ EMI ಪಾವತಿ ಆಯ್ಕೆಯನ್ನು ಕೂಡ ಆರಿಸಿಕೊಳ್ಳಬಹುದು.

ಐಫೋನ್ 12
ಇನ್ನು ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್‌ನಲ್ಲಿ ಐಫೋನ್ 12 ಅನ್ನು 67,999ರೂ,ಗಳಿಗೆ ಖರೀದಿಸಬಹುದಾಗಿದೆ. ಇದರ ಮೂಲ ಬೆಲೆ 79,900 ರೂ,ಆಗಿದೆ. ಇನ್ನು ಇದಕ್ಕಿರುವ ಏಕೈಕ ಕ್ಯಾಚ್ ಎಂದರೆ ನೀವು ಕಾಯಬೇಕಾಗಬಹುದು, ಏಕೆಂದರೆ ಕೆಲವು ಮಾದರಿಗಳು ಸ್ವಲ್ಪ ಸಮಯದ ನಂತರ ಮಾತ್ರ ಸ್ಟಾಕ್‌ಗೆ ಬರುತ್ತವೆ. ಅಲ್ಲದೆ ಅಮೆಜಾನ್‌ನಲ್ಲಿ ನಿಮ್ಮ ಹಳೆಯ ಸ್ಮಾರ್ಟ್ ಫೋನ್ ಅನ್ನು ವಿನಿಮಯ ಮಾಡಿಕೊಂಡರೆ 13,400 ವರೆಗೆ ಹೆಚ್ಚುವರಿ ತ್ವರಿತ ರಿಯಾಯಿತಿ ನೀಡುತ್ತದೆ.
ಒನ್‌ಪ್ಲಸ್ 9 5G
ಒನ್‌ಪ್ಲಸ್ 9 5G ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಬಿಗ್ ಡಿಸ್ಕೌಂಟ್ ಅನ್ನು ಪಡೆದುಕೊಂಡಿದೆ. ಹಾಗಂತ ಅಮೆಜಾನ್ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಮೇಲೆ ನೇರ ರಿಯಾಯಿತಿಯನ್ನು ನೀಡುತ್ತಿಲ್ಲ. ಆದರೆ ನೀವು ಪೇಜ್‌ನಲ್ಲಿರುವ ಸರಳ ಚೆಕ್‌ಬಾಕ್ಸ್ ಆಧಾರಿತ ಕೂಪನ್ ಅನ್ನು ಟ್ಯಾಪ್ ಮಾಡಬಹುದು. ಅಲ್ಲದೆ ಚೆಕ್‌ಔಟ್‌ನಲ್ಲಿ 4,000 ರಿಯಾಯಿತಿಯನ್ನು ಪಡೆಯಬಹುದು. ನೀವು ನಿಮ್ಮ ಪ್ರಸ್ತುತ ಸ್ಮಾರ್ಟ್ ಫೋನ್ ವಿನಿಮಯ ಮಾಡಿಕೊಳ್ಳಬಹುದು. ಇದರ ಮೂಲಕ 13,400ರೂ, ವರೆಗಿನ ಮತ್ತೊಂದು ತ್ವರಿತ ರಿಯಾಯಿತಿ ಪಡೆಯಬಹುದು.

ಸ್ಯಾಮ್ಸಂಗ್ ನ ಗ್ಯಾಲಕ್ಸಿ ನೋಟ್ 20
ಸ್ಯಾಮ್ಸಂಗ್ ನ ಗ್ಯಾಲಕ್ಸಿ ನೋಟ್ 20 ಪ್ರಸ್ತುತ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ 2021 ಸೇಲ್ ಆಫರ್‌ನಲ್ಲಿ 54,999ರೂ ಗಳಿಗೆ ದೊರೆಯಲಿದೆ. ಇದರ ಮೂಲ ಬೆಲೆ 86,000ರೂ,ಆಗಿದೆ ಅನ್ನೊದು ಗಮನಿಸಬೇಕಾದ ವಿಚಾರ. ಇನ್ನು ಅಮೆಜಾನ್ ಕೂಡ ಯಾವುದೇ ವೆಚ್ಚವಿಲ್ಲದ EMI ಪಾವತಿ ಆಯ್ಕೆ ಮತ್ತು ಎಕ್ಸ್ಚೇಂಜ್ ಆಫರ್ ಅನ್ನು ನೀಡುತ್ತಿದೆ.
ನೋಕಿಯಾ G20
ಅಮೆಜಾನ್‌ನ ಗ್ರೇಟ್ ಫ್ರೀಡಮ್ ಫೆಸ್ಟಿವಲ್ 2021 ಸೇಲ್‌ನಲ್ಲಿ ನೋಕಿಯಾ G20 ಸ್ಮಾರ್ಟ್‌ಫೋನ್ 11,990ರೂ,ಗಳಿಗೆ ಖರೀದಿಸಬಹುದು. ಅಮೆಜಾನ್ ನಿಮ್ಮ ಕಾರ್ಟ್‌ಗೆ ಡಿವೈಸ್ ಅನ್ನು ಸೇರಿಸುವಾಗ ಒಮ್ಮೆ ಕೂಪನ್ ಚೆಕ್‌ಬಾಕ್ಸ್ ಅನ್ನು ಟ್ಯಾಪ್ ಮಾಡಿದ ನಂತರ ಚೆಕ್‌ಔಟ್‌ನಲ್ಲಿ ಸ್ವಯಂಚಾಲಿತವಾಗಿ ಅನ್ವಯವಾಗುವ 1,000ರೂ, ಮೌಲ್ಯದ ಕೂಪನ್ ಅನ್ನು ನೀಡುತ್ತಿದೆ.


Click it and Unblock the Notifications








