Home
ಸುದ್ದಿಜಾಲ

ಬೆಸ್ಟ್ ಆಫ್‌ಲೈನ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

By Shwetha

ಇಂದಿನ ದಿನಗಳಲ್ಲಿ ಪ್ರತಿಯೊಬ್ಬ ಅಪ್ಲಿಕೇಶನ್ ಬಳಕೆದಾರನಿಗೂ ಇಂಟರ್ನೆಟ್ ಸಂಪರ್ಕ ಅತ್ಯಗತ್ಯವಾಗಿದೆ. ಆದರೆ ನೀವು ಹೋದಲ್ಲೆಲ್ಲಾ ಇಂಟರ್ನೆಟ್ ಅಥವಾ ವೈಫೈ ಸೇವೆ ಇರಬೇಕೆಂದೇನಿಲ್ಲ ಅಲ್ಲವೇ? ಆಗ ನಿಮ್ಮ ಈ ಅಪ್ಲಿಕೇಶನ್‌ಗಳು ನಿರುಪಯುಕ್ತ ಎಂದು ನಿಮಗನ್ನಿಸಬಹುದು. ಈ ಸಂದರ್ಭದಲ್ಲಿ ನಾವು ನೀಡುತ್ತಿರುವ ಉತ್ತಮ ಆಫ್‌ಲೈನ್ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ನಿಮಗೆ ಸಹಕಾರಿಯಾಗಲಿವೆ

ಹಾಗಿದ್ದರೆ ಇಂಟರ್ನೆಟ್ ಬಳಸದೆಯೇ ನಿಮಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಲಿರುವ ಆ ಅಪ್ಲಿಕೇಶನ್‌ಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಉತ್ತಮ ಹವಾಮಾನ ಅಪ್ಲಿಕೇಶನ್

ಉತ್ತಮ ಹವಾಮಾನ ಅಪ್ಲಿಕೇಶನ್

ನಿರ್ದಿಷ್ಟವಾದ 15 ದಿನಗಳ ಹವಾಮಾನ ವರದಿಯನ್ನು ಇದು ಒದಗಿಸುತ್ತದೆ. ಅಂದರೆ ಎರಡು ವಾರಗಳ ಸಮಯ ಇಂಟರ್ನೆಟ್ ಇಲ್ಲದಿದ್ದರೂ ನಿಮಗೆ ಹವಾಮಾನ ವರದಿ ದೊರೆಯುತ್ತದೆ.

ಇ ಬುಕ್ ರೀಡರ್ ಅಪ್ಲಿಕೇಶನ್

ಇ ಬುಕ್ ರೀಡರ್ ಅಪ್ಲಿಕೇಶನ್

ಸಾವಿರಾರು ಡಿಜಿಟಲ್ ಪುಸ್ತಕಗಳಿಗೆ ಕಿಂಡಲ್ ಪ್ರವೇಶವನ್ನು ಒದಗಿಸುತ್ತಿದ್ದರೂ ನಿಮ್ಮ ಓದಿನ ಅನುಭವವನ್ನು ಇದು ಮಹತ್ವದ್ದಾಗಿಸುತ್ತದೆ.

ಟ್ರಾವೆಲ್ ಅಪ್ಲಿಕೇಶನ್

ಟ್ರಾವೆಲ್ ಅಪ್ಲಿಕೇಶನ್

ಟ್ರಾವೆಲ್ ಅಪ್ಲಿಕೇಶನ್‌ಗೆ ಇದು ಹೇಳಿ ಮಾಡಿಸಿರುವಂಥದ್ದು. ವಿಮರ್ಶೆ, ಫೋಟೋಗಳು ಮತ್ತು ಫೀಡ್‌ಬ್ಯಾಕ್ ಅನ್ನು ಇದು ಒಸಗಿಸುತ್ತದೆ.

ಡಾಕ್ಯುಮೆಂಟ್ಸ್ ಅಪ್ಲಿಕೇಶನ್

ಡಾಕ್ಯುಮೆಂಟ್ಸ್ ಅಪ್ಲಿಕೇಶನ್

ನಿಮ್ಮ ಡಿವೈಸ್‌ಗೆ ಫೈಲ್‌ಗಳನ್ನು ಮತ್ತು ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡಲು ಇದು ಸಹಕಾರಿ. ಆಫ್‌ಲೈನ್‌ನಲ್ಲೂ ಈ ಫೈಲ್‌ಗಳಲ್ಲಿ ನಿಮಗೆ ಕಾರ್ಯನಿರ್ವಹಿಸಬಹುದು.

ವಿಷಯಗಳನ್ನು ನಂತರ ಉಳಿಸಲು ಸಹಕಾರಿಯಾಗಿರುವ ಅಪ್ಲಿಕೇಶನ್

ವಿಷಯಗಳನ್ನು ನಂತರ ಉಳಿಸಲು ಸಹಕಾರಿಯಾಗಿರುವ ಅಪ್ಲಿಕೇಶನ್

ಪ್ಲೇ ಸ್ಟೋರ್‌ನಲ್ಲಿ ಹೆಚ್ಚು ಜನಪ್ರಿಯ ಆಫ್‌ಲೈನ್ ರೀಡಿಂಗ್ ಅಪ್ಲಿಕೇಶನ್ ಆಗಿ ಪಾಕೆಟ್ ಹೆಸರುವಾಸಿಯಾಗಿದೆ. ಲೇಖನಗಳು, ವೀಡಿಯೊಗಳು ಮತ್ತು ಇತರ ವಿಷಯಗಳನ್ನು ಡೌನ್‌ಲೋಡ್ ಮಾಡುತ್ತದೆ, ನಂತರ ಅದನ್ನು ಆಫ್‌ಲೈನ್‌ನಲ್ಲಿ ನಿಮಗೆ ಓದಬಹುದಾಗಿದೆ.

ಆಫ್‌ಲೈನ್ ಡಿಕ್ಶನರಿ ಅಪ್ಲಿಕೇಶನ್

ಆಫ್‌ಲೈನ್ ಡಿಕ್ಶನರಿ ಅಪ್ಲಿಕೇಶನ್

ನೀವು ವಿದೇಶದಲ್ಲಿದ್ದು ಅಲ್ಲಿನ ಭಾಷೆ ಮಾತನಾಡಲು ಬರಲಿಲ್ಲ ಎಂದಾದಲ್ಲಿ, ಸ್ಥಳೀಯರೊಂದಿಗೆ ಸಂವಾದ ನಡೆಸಲು ಈ ಅಪ್ಲಿಕೇಶನ್ ಸಹಕಾರಿಯಾಗಿದೆ. 50 ಕ್ಕಿಂತಲೂ ಹೆಚ್ಚಿನ ಭಾಷೆಗಳಿಗೆ ಇದು ಬೆಂಬಲವನ್ನು ನೀಡುತ್ತದೆ.

ಆಫ್‌ಲೈನ್ ಟ್ರಾನ್ಸ್‌ಲೇಶನ್ ಅಪ್ಲಿಕೇಶನ್

ಆಫ್‌ಲೈನ್ ಟ್ರಾನ್ಸ್‌ಲೇಶನ್ ಅಪ್ಲಿಕೇಶನ್

ಇದೊಂದು ಹೆಚ್ಚು ಸರಳವಾಗಿರುವ ಮತ್ತು ಪರಿಣಾತ್ಮಕ ಟ್ರಾನ್ಸಲೇಟರ್ಸ್ ಟೂಲ್ ಆಗಿದೆ. ನೀವು ಇದನ್ನು ಬಳಸಿ ಟೈಪ್ ಮಾಡಬಹುದು ಮತ್ತು ಮಾತನಾಡಲೂ ಬಳಸಿಕೊಳ್ಳಬಹುದು ಇದು 90 ಕ್ಕಿಂತಲೂ ಹೆಚ್ಚಿನ ಭಾಷೆಗಳನ್ನು ಅನುವಾದಿಸಿ ನೀಡುತ್ತದೆ.

ಆಫ್‌ಲೈನ್ ಮ್ಯಾಪ್ ಅಪ್ಲಿಕೇಶನ್

ಆಫ್‌ಲೈನ್ ಮ್ಯಾಪ್ ಅಪ್ಲಿಕೇಶನ್

ಗೂಗಲ್ ಮ್ಯಾಪ್ಸ್‌ನ ಹಳೆಯ ಆವೃತ್ತಿಯನ್ನು ಬಳಸುವುದಕ್ಕಿಂತ ಈಗ ಲೇಟೆಸ್ಟ್ ಆಗಿರುವ ನವೀಕೃತ ಮ್ಯಾಪ್ ಅನ್ನು ಬಳಸಿಕೊಳ್ಳಬಹುದು. ಸೆಟ್ಟಿಂಗ್ಸ್ ಮೆನುವಿನಲ್ಲಿ ಆಫ್‌ಲೈನ್ ಏರಿಯಾಗಳಿಗೆ ಭೇಟಿ ನೀಡುವುದರ ಮೂಲಕ ಡೌನ್‌ಲೋಡ್ ಮಾಡುವುದು ಸರಳವಾಗಿದೆ.

ಆಫ್‌ಲೈನ್ ಮ್ಯೂಸಿಕ್ ಅಪ್ಲಿಕೇಶನ್

ಆಫ್‌ಲೈನ್ ಮ್ಯೂಸಿಕ್ ಅಪ್ಲಿಕೇಶನ್

ಸ್ಪಾಟಿಫೈ ಅಪ್ಲಿಕೇಶನ್ ಮಿಲಿಯಗಟ್ಟಲೆ ಟ್ರ್ಯಾಕ್‌ಗಳನ್ನು ಪ್ರವೇಶಿಸಲು ಅನುಮತಿಯನ್ನು ನೀಡುವುದಲ್ಲದೆ, ಹಿನ್ನಲೆಯಲ್ಲಿ ನಿಮ್ಮ ಪ್ಲೇಲಿಸ್ಟ್‌ಗಳನ್ನು ಸಿಂಕ್ ಮಾಡಲು ಇವುಗಳನ್ನು ನಿಮಗೆ ಹೊಂದಿಸಿಕೊಳ್ಳಬಹುದು.

ಆಫ್‌ಲೈನ್ ಪೋಡ್‌ಕಾಸ್ಟ್ ಅಪ್ಲಿಕೇಶನ್

ಆಫ್‌ಲೈನ್ ಪೋಡ್‌ಕಾಸ್ಟ್ ಅಪ್ಲಿಕೇಶನ್

ಆನ್‌ಲೈನ್ ಸ್ಟ್ರೀಮಿಂಗ್‌ನೊಂದಿಗೆ ಪೋಡ್‌ಕಾಸ್ಟ್‌ಗಳನ್ನು ನಿಮಗೆ ಸಂಯೋಜಿಸಬಹುದಾಗಿದೆ. ನೀವು ನಿಮ್ಮ ಮೆಚ್ಚಿನ ಪೋಡ್‌ಕಾಸ್ಟ್‌ಗಳನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ, ಇದು ಗಂಟೆಗಟ್ಟಲೆ ಆಲಿಸುವ ಸವಿಯನ್ನು ನಿಮಗೆ ನೀಡುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

Best Mobiles in India

English summary
you need our list of the best offline Android apps, which has now been updated with our favorite eBook reader and weather app.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+