Home
ಸುದ್ದಿಜಾಲ

OTT ಪ್ರಯೋಜನ ಬೇಕೆ? 500ರೂ ಒಳಗಿನ ಬೆಸ್ಟ್‌ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳು ಇಲ್ಲಿವೆ!

ಇಂದಿನ ದಿನಗಳಲ್ಲಿ OTT ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಟೆಲಿಕಾಂ ಕಂಪೆನಿಗಳು ಕೂಡ ತಮ್ಮ ಪ್ಲಾನ್‌ಗಳಲ್ಲಿ OTT ಪ್ಲಾಟ್‌ಫಾರ್ಮ್‌ ಚಂದಾದಾರಿಕೆಗಳನ್ನು ನೀಡುತ್ತಾ ಬಂದಿವೆ. ಇದರಿಂದ ಸೋನಿಲೈವ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ನೆಟ್‌ಫ್ಲಿಕ್ಸ್‌, ಅಮೆಜಾನ್‌ ಪ್ರೈಮ್‌ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡಲಿವೆ.

ಹೌದು, OTT ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನೀಡುವ ಹಲವು ಪ್ರಿಪೇಯ್ಡ್‌ ಮತ್ತು ಪೊಸ್ಟ್‌ಪೇಯ್ಡ್‌ ಪ್ಲಾನ್‌ಗಳಿವೆ. ಇದರಲ್ಲಿ 500ರೂ. ಒಳಗಿನ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳು ಸಾಕಷ್ಟು ಗಮನಸೆಳೆದಿವೆ. ಹಾಗಾದ್ರೆ OTT ಪ್ರಯೋಜನ ನೀಡುವ 500ರೂ. ಒಳಗಿನ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

OTT ಪ್ರಯೋಜನ ಬೇಕೆ? 500ರೂ ಒಳಗಿನ ಬೆಸ್ಟ್‌ ಪೋಸ್ಟ್‌ಪೇಯ್ಡ್‌ ಪ್ಲಾನ್‌ ಇಲ್ಲಿವೆ!

ಏರ್‌ಟೆಲ್ 499ರೂ. ಪೋಸ್ಟ್‌ಪೇಯ್ಡ್ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂ 499ರೂ. ಪೋಸ್ಟ್‌ಪೇಯ್ಡ್‌ ಪ್ಲಾನ್‌ ನಿಮಗೆ ಹಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆಯನ್ನು ನೀಡಲಿದೆ. ಇದರಲ್ಲಿ ಅಮೆಜಾನ್‌ ಪ್ರೈಮ್‌, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಮತ್ತು ಏರ್‌ಟೆಲ್‌ ಎಕ್ಸ್‌ಟ್ರಿಮ್‌ ಸ್ಟ್ರಿಮಿಂಗ್‌ ಅಪ್ಲಿಕೇಶನ್‌ಗಳು ಸೇರಿವೆ. ಇದು ಮಂತ್ಲಿ ರೆಂಟ್‌ ಪ್ಲಾನ್‌ ಆಗಿದ್ದು, ಅನಿಯಮಿತ ಕರೆ ಪ್ರಯೋಜನ, ದೈನಂದಿನ 100 SMS ಹಾಗೂ ಒಂದು ತಿಂಗಳ ಅವಧಿಗೆ 75GB ಡೇಟಾ ಪ್ರಯೋಜನವನ್ನು ನೀಡಲಿದೆ. ಜೊತೆಗೆ 200GB ಡೇಟಾ ರೋಲ್‌ಓವರ್ ಸೌಲಭ್ಯವನ್ನು ನೀಡುತ್ತದೆ.

OTT ಪ್ರಯೋಜನ ಬೇಕೆ? 500ರೂ ಒಳಗಿನ ಬೆಸ್ಟ್‌ ಪೋಸ್ಟ್‌ಪೇಯ್ಡ್‌ ಪ್ಲಾನ್‌ ಇಲ್ಲಿವೆ!

ವಿ ಟೆಲಿಕಾಂ 401ರೂ. ಪೋಸ್ಟ್‌ಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ 401ರೂ. ಬೆಲೆಯಲ್ಲಿ ಮಂತ್ಲಿ ರೆಂಟ್‌ ಪೋಸ್ಟ್‌ಪೇಯ್ಡ್‌ ಪ್ಲಾನ್‌ ಅನ್ನು ನೀಡುತ್ತಿದೆ. ಈ ಪ್ಲಾನ್‌ನಲ್ಲಿ ನೀವು ಸೋನಿ ಲೈವ್‌, ಜೀ5 ಮತ್ತು ವಿ ಮೂವೀಸ್‌ ಮತ್ತು ಟಿವಿಗೆ ಪೂರಕ ಚಂದಾದಾರಿಕೆಯನ್ನು ನೀಡಲಿದೆ. ಇನ್ನು ಈ ಪ್ಲಾನ್‌ನಲ್ಲಿ ನೀವು ಅನಿಯಮಿತ ಕರೆ, ದೈನಂದಿನ 100 SMS ಜೊತೆಗೆ 50GB ಮಾಸಿಕ ಡೇಟಾ ಪ್ರಯೋಜನ ಪಡೆದುಕೊಳ್ಳಬಹುದು. ಇದರೊಂದಿಗೆ 200GB ವರೆಗೆ ಡೇಟಾ ರೋಲ್‌ಓವರ್‌ಗಳನ್ನು ನೀಡುತ್ತದೆ.

OTT ಪ್ರಯೋಜನ ಬೇಕೆ? 500ರೂ ಒಳಗಿನ ಬೆಸ್ಟ್‌ ಪೋಸ್ಟ್‌ಪೇಯ್ಡ್‌ ಪ್ಲಾನ್‌ ಇಲ್ಲಿವೆ!

ಜಿಯೋ 399ರೂ. ಮತ್ತು 299ರೂ. ಪೋಸ್ಟ್‌ಪೇಯ್ಡ್‌ ಪ್ಲಾನ್‌

ಜಿಯೋ ಟೆಲಿಕಾಂ ಕೂಡ 500ರೂ ಒಳಗೆ ಎರಡು ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳನ್ನು ನೀಡುತ್ತಾ ಬಂದಿದೆ. ಇದರಲ್ಲಿ 399ರೂ. ಮತ್ತು 299 ರೂ. ಮಂತ್ಲಿ ರೆಂಟ್‌ ಪೋಸ್ಟ್‌ ಪೇಯ್ಡ್‌ ಪ್ಲಾನ್‌ಗಳು ಸೇರಿವೆ. ಆದರೆ ಈ ಎರಡು ಪ್ಲಾನ್‌ಗಳು ಕೂಡ ಯಾವುದೇ ಒಟಿಟಿ ಪ್ಲಾಟ್‌ಫಾರ್ಮ್‌ ಚಂದಾದಾರಿಕೆಗಳನ್ನು ನೀಡುವುದಿಲ್ಲ. ಇನ್ನು 299 ರೂ ಪೋಸ್ಟ್‌ಪೇಯ್ಡ್‌ ಪ್ಲಾನ್‌ ಅನಿಯಮಿತ ಕರೆ, ದೈನಂದಿನ 100SMS ಮತ್ತು 30GB ಡೇಟಾ ಪ್ರಯೋಜನ ನೀಡಲಿದೆ. ಹಾಗೆಯೇ 399ರೂ ಪೋಸ್ಟ್‌ಪೇಯ್ಡ್‌ ಪ್ಲಾನ್‌ ಡೈಲಿ 100SMS, ಅನಿಯಮಿತ ಕರೆ ಪ್ರಯೋಜನ ಮತ್ತು 75GB ಯ ಮಾಸಿಕ ಡೇಟಾ ಮಿತಿಯನ್ನು ನೀಡಲಿದೆ.

OTT ಪ್ರಯೋಜನ ಬೇಕೆ? 500ರೂ ಒಳಗಿನ ಬೆಸ್ಟ್‌ ಪೋಸ್ಟ್‌ಪೇಯ್ಡ್‌ ಪ್ಲಾನ್‌ ಇಲ್ಲಿವೆ!

ಬಿಎಸ್‌ಎನ್‌ಎಲ್‌ 399ರೂ. ಮತ್ತು 199ರೂ. ಪೋಸ್ಟ್‌ಪೇಯ್ಡ್‌ ಪ್ಲಾನ್‌

ಬಿಎಸ್‌ಎನ್‌ಎಲ್‌ ಟೆಲಿಕಾಂ ಅತಿ ಕಡಿಮೆ ಬೆಲೆಗೆ ಎಂದರೆ 399ರೂ. ಮತ್ತು 199ರೂ. ಬೆಲೆಯಲ್ಲಿ ಮಾಸಿಕ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳನ್ನು ನೀಡುತ್ತಿದೆ. ಈ ಪ್ಲಾನ್‌ಗಳು ಯಾವುದೇ ಪೂರಕ ಒಟಿಟಿ ಚಂದಾದಾರಿಕೆಯನ್ನು ನೀಡುವುದಿಲ್ಲ. ಆದರೆ 199ರೂ. ಪ್ಲಾನ್‌ನಲ್ಲಿ ನಿಮಗೆ 25GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಅಲ್ಲದೆ 399ರೂ. ಪೋಸ್ಟ್‌ಪೇಯ್ಡ್‌ ಪ್ಲಾನ್‌ 75GB ಮಾಸಿಕ ಡೇಟಾ ಮಿತಿಯೊಂದಿಗೆ ಬರಲಿದೆ.

ಇದೆಲ್ಲದರ ನಡುವೆ ಜಿಯೋ ಟೆಲಿಕಾಂ ಇತ್ತೀಚಿಗೆ ಕ್ರಿಕೆಟ್‌ ಪ್ರಿಯರಿಗಾಗಿ ಮೂರು ಹೊಸ ಆಡ್‌ ಆನ್‌ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಇವುಗಳು ಕ್ರಮವಾಗಿ 219ರೂ, 399ರೂ ಮತ್ತು 999ರೂ. ಬೆಲೆಯ ಪ್ಲಾನ್‌ಗಳಾಗಿವೆ. ಈ ಪ್ಲಾನ್‌ಗಳು ಮುಖ್ಯವಾಗಿ ಐಪಿಎಲ್‌ ಕ್ರಿಕೆಟ್‌ ಪ್ರಿಯರನ್ನು ಆಕರ್ಷಿಸುವ ಸಲುವಾಗಿ ಪರಿಚಯಿಸಲಾಗಿದೆ.

Best Mobiles in India

English summary
Best postpaid plans under Rs 500 with OTT benefits: full details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+