Home
ಸುದ್ದಿಜಾಲ

Jio vs Airtel vs Vi: 250ರೂ, ಒಳಗಿನ ಬೆಸ್ಟ್‌ ಪ್ರಿಪೇಯ್ಡ್ ಪ್ಲ್ಯಾನ್‌ಗಳು!

ಪ್ರಸ್ತುತ ಟೆಲಿಕಾಂ ವಲಯದಲ್ಲಿ ರಿಲಯನ್ಸ್ ಜಿಯೋ, ಏರ್‌ಟೆಲ್ ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಇವುಗಳ ನಡುವೆ ವೊಡಾಫೋನ್ ಐಡಿಯಾ ಕೂಡ ಪೈಪೋಟಿಯ್ನು ನಡೆಸುತ್ತಿದೆ. ಇನ್ನು ಈ ಟೆಲಿಕಾಂ ಸಂಸ್ಥೆಗಳು ಬಳಕೆದಾರರಿಗೆ ಹಲವಾರು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿವೆ. ಇವುಗಳಲ್ಲಿ ಅಧಿಕ ಡೇಟಾ, ಅನಿಯಮಿತ ಕರೆಗಳು, ಎಸ್‌ಎಂಎಸ್‌ ಪ್ರಯೋಜನ ಹೊಂದಿರುವ ಪ್ಲ್ಯಾನ್‌ಗಳು ಜನಪ್ರಿಯತೆಯನ್ನು ಪಡೆದುಕೊಂಡಿವೆ.

ಜಿಯೋ

ಹೌದು, ರಿಲಯನ್ಸ್‌ ಜಿಯೋ, ಏರ್‌ಟೆಲ್‌, ವಿ ಟೆಲಿಕಾಂಗಳು ಹಲವು ಆಕರ್ಷಕ ಪ್ರಿಪೇಯ್ಡ್‌ ಪ್ಲ್ಯಾನ್‌ಗಳು ಲಭ್ಯವಿವೆ. ಇವುಗಳಲ್ಲಿ 250ರೂ, ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಪ್ಲ್ಯಾನ್‌ಗಳು ಹೆಚ್ಚಿನ ಗ್ರಾಹಕರನ್ನು ಸೆಳೆದಿವೆ. ಅದರಲ್ಲೂ 1GB ಗಿಂತ ಹೆಚ್ಚಿನ ಡೇಟಾವನ್ನು ಹೊಂದಿರುವ ಯೋಜನೆಗಳು ಆಕರ್ಷಕವಾಗಿವೆ. ನೀವು ಕೂಡ 250 ರೂ ಒಳಗಿನ ಪ್ಲ್ಯಾನ್‌ಗಳನ್ನು ಹುಡುಕುತ್ತಿದ್ದರೆ ಈ ಲೇಖನದಲ್ಲಿ ನಾವು ತಿಳಿಸಿಕೊಡ್ತಿವಿ ಓದಿರಿ.

250ರೂ,ಗಿಂತ ಕಡಿಮೆ ಬೆಲೆಯ ಜಿಯೋ ಪ್ರಿಪೇಯ್ಡ್ ಪ್ಲ್ಯಾನ್‌ಗಳು

250ರೂ,ಗಿಂತ ಕಡಿಮೆ ಬೆಲೆಯ ಜಿಯೋ ಪ್ರಿಪೇಯ್ಡ್ ಪ್ಲ್ಯಾನ್‌ಗಳು

ಜಿಯೋ ತನ್ನ ಬಳಕೆದಾರರಿಗೆ ವಿಭಿನ್ನ ಅಗತ್ಯಗಳಿಗಾಗಿ ವಿಭಿನ್ನ ಯೋಜನೆಗಳನ್ನು ಹೊಂದಿದೆ. ದೈನಂದಿನ ಡೇಟಾ ಮಿತಿಯೊಂದಿಗೆ 199ರೂ, ಪ್ರಿಪೇಯ್ಡ್ ಪ್ಲಾನ್ ಇದೆ. ಈ ಪ್ಲ್ಯಾನ್‌ನಲ್ಲಿ ನೀವು 1.5GB ದೈನಂದಿನ ಡೇಟಾವನ್ನು ಪಡೆಯಬಹುದಾಗಿದೆ. ಇದರಲ್ಲಿ ನೀವು ಮೂಲತಃ ಒಟ್ಟು 42GB ಡೇಟಾವನ್ನು ಪಡೆಯುತ್ತೀರಿ. ಈ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಅವಧಿಯೊಂದಿಗೆ ಬರುತ್ತದೆ. ಅಲ್ಲದೆ ಈ ಪ್ಲ್ಯಾನ್‌ನಲ್ಲಿ ನೀವು ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆಗಳನ್ನು ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಸಹ ಪಡೆಯುತ್ತೀರಿ. ಶೂನ್ಯ ದೈನಂದಿನ ಡೇಟಾ ಮಿತಿಯೊಂದಿಗೆ ಪ್ರಿಪೇಯ್ಡ್ ಯೋಜನೆಯನ್ನು ಬಯಸುವವರು 247 ರೂ, ಪ್ಲ್ಯಾನ್‌ ಅನ್ನು ಖರೀದಿಸಬಹುದು. ಆದಾಗ್ಯೂ, ಇದು ಕೇವಲ 25GB ಡೇಟಾವನ್ನು ಮಾತ್ರ ನೀಡುತ್ತದೆ. ಇದು ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಒಳಗೊಂಡಿದೆ.

ಏರ್‌ಟೆಲ್ ಪ್ರಿಪೇಯ್ಡ್ ಪ್ಲ್ಯಾನ್‌ಗಳು

ಏರ್‌ಟೆಲ್ ಪ್ರಿಪೇಯ್ಡ್ ಪ್ಲ್ಯಾನ್‌ಗಳು

ಏರ್‌ಟೆಲ್ 249ರೂ, ಪ್ರಿಪೇಯ್ಡ್ ಪ್ಲಾನ್ ಅನ್ನು ಹೊಂದಿದೆ, ಇದು ಪ್ರತಿದಿನ 1.5GB ಡೇಟಾವನ್ನು ನೀಡುತ್ತದೆ. ಈ ಯೋಜನೆಯು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಚಂದಾದಾರಿಕೆ, ಉಚಿತ ಹೆಲೋಟ್ಯೂನ್ಸ್, ಶಾ ಅಕಾಡೆಮಿಗೆ ಒಂದು ವರ್ಷದ ಉಚಿತ ಕೋರ್ಸ್, ಫಾಸ್ಟ್ಯಾಗ್‌ನ 100 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್, ಉಚಿತ ವಿಂಕ್ ಮ್ಯೂಸಿಕ್ ಮತ್ತು ಅಪೋಲೋ 24/7 ಸರ್ಕಲ್ ಅನ್ನು ಉಚಿತವಾಗಿ ನೀಡುತ್ತಿದೆ.

ವಿ ಟೆಲಿಕಾಂ ಪ್ರಿಪೇಯ್ಡ್ ಪ್ಲ್ಯಾನ್‌ಗಳು

ವಿ ಟೆಲಿಕಾಂ ಪ್ರಿಪೇಯ್ಡ್ ಪ್ಲ್ಯಾನ್‌ಗಳು

ವಿ ಟೆಲಿಕಾಂ ಕೂಡ 250 ರೂ.ಗಿಂತ ಕಡಿಮೆ ಬೆಲೆಯ ಪ್ರಿಪೇಯ್ಡ್‌ ಪ್ಲ್ಯಾನ್‌ಗಳು ಒಳಗೊಂಡಿದೆ. ಇದು 249ರೂ ಪ್ರಿಪೇಯ್ಡ್ ಪ್ಲ್ಯಾನ್‌ ಅನ್ನು ಹೊಂದಿದೆ. ಇದು ಬಳಕೆದಾರರಿಗೆ 1.5GB ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಪ್ರಯೋಜನವನ್ನು ನೀಡುತ್ತದೆ. ಅಲ್ಲದೆ ನೀವು 12:00 AM ನಿಂದ 6:00 AM ವರೆಗೆ ಉಚಿತ ರಾತ್ರಿ ಡೇಟಾವನ್ನು ಸಹ ಪಡೆಯುತ್ತೀರಿ. ಈ ಯೋಜನೆಯು ವಾರಾಂತ್ಯದ ಡೇಟಾ ರೋಲ್ಓವರ್ ಸೌಲಭ್ಯದೊಂದಿಗೆ ಬರುತ್ತದೆ. ಇದು 28 ದಿನಗಳ ವ್ಯಾಲಿಡಿಟಿ ಅವಧಿಯೊಂದಿಗೆ ಬರುತ್ತದೆ.

Best Mobiles in India

English summary
Jio vs Airtel vs Vi: Those who are looking for a plan with unlimited calls, daily SMS benefits and more than 1GB of data can check out the below listed prepaid plans.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+