Home
ಸುದ್ದಿಜಾಲ

Jio, Airtel, VI: 56 ದಿನಗಳ ವ್ಯಾಲಿಡಿಟಿ ಹೊಂದಿರುವ ಉತ್ತಮ ಪ್ರಿಪೇಯ್ಡ್‌ ಪ್ಲಾನ್‌ಗಳು!

ಟೆಲಿಕಾಂ ವಲಯದಲ್ಲಿ ಏರ್‌ಟೆಲ್‌, ಜಿಯೋ, ವಿ ಟೆಲಿಕಾಂಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಚಂದಾದಾರರನ್ನು ಸೆಳೆಯುವುದಕ್ಕಗಿ ಪರಸ್ಪರ ಪೈಪೋಟಿ ನಡೆಸುತ್ತಿವೆ. ಇದಕ್ಕಾಗಿ ಹಲವು ಆಕರ್ಷಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ತಮ್ ಗ್ರಾಹಕರಿಗೆ ಬಜೆಟ್‌ ಬೆಲೆಯಲ್ಲಿ ಅಧಿಕ ಡೇಟಾ ನೀಡುವ ಪ್ಲಾನ್‌ಗಳನ್ನು ನೀಡುತ್ತಲೇ ಬಂದಿವೆ. ಇದರಲ್ಲಿ OTT ಚಂದಾದಾರಿಕೆ ಮತ್ತು ದಿನಕ್ಕೆ 100 SMS ನೊಂದಿಗೆ 56 ದಿನಗಳ ಮಾನ್ಯತೆ ಒದಗಿಸುವ ನೀಡುವ ಪ್ಲಾನ್‌ಗಳು ಕೂಡ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌, ಜಿಯೋ, ವಿ ಟೆಲಿಕಾಂಗಳು ಹಲವಾರು ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಹೊಂದಿವೆ. ಇದರಲ್ಲಿ 56 ದಿನಗಳ ಮಾನ್ಯತೆ ಹೊಂದಿರುವ ಪ್ರಿಪೇಯ್ಡ್‌ ಪ್ಲಾನ್‌ಗಳಿಗೆ ಒಳ್ಳೆಯ ಬೇಡಿಕೆ ಇದೆ. ಅಧಿಕ ಡೇಟಾ, ಅನಿಯಮಿತ ಕರೆ ಪ್ರಯೋಜನ ಜೊತೆಗೆ ಒಟಿಟಿ ಚಂದಾದಾರಿಕೆ ಬಯಸುವವರಿಗೆ ಈ ಪ್ಲಾನ್‌ಗಳು ಉತ್ತಮವಾಗಿದೆ. ಹಾಗಾದ್ರೆ 56ದಿನಗಳ ಮಾನ್ಯತೆ ನೀಡುವ ಪ್ಲಾನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌

ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌

ಏರ್‌ಟೆಲ್‌ ಕಂಪೆನಿ 56 ದಿನಗಳ ಮಾನ್ಯತೆ ನೀಡುವ ಹಲವು ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ನಿಮಗೆ ಪ್ರತಿದಿನ 1.5GB ಡೇಟಾ ಅವಶ್ಯಕತೆ ಇದ್ದರೆ 399ರೂ.ಗಳ ಪ್ರಿಪೇಯ್ಡ್ ಪ್ಲಾನ್‌ ಸೂಕ್ತವಾಗಿದೆ. ಈ ಪ್ಲಾನ್‌ನಲ್ಲಿ ನಿಮಗೆ ಒಟ್ಟು 84GB ಡೇಟಾ ಸಿಗಲಿದ್ದು, 56 ದಿನಗಳ ವಾಲಿಡಿಟಿ ಹೊಂದಿದೆ. ಈ ಪ್ಲಾನ್‌ನಲ್ಲಿ ಅನಿಯಮಿತ ಕರೆ ಮತ್ತು ಪ್ರತಿದಿನ 100 SMS ಪ್ರಯೋಜನಗಳನ್ನು ದೊರೆಯಲಿದೆ. ಇದಲ್ಲದೆ ಹೆಚ್ಚುವರಿಯಾಗಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂಗೆ ಉಚಿತ ಚಂದಾದಾರಿಕೆ, ಉಚಿತ ಹೆಲೋಟ್ಯೂನ್ಸ್, ವಿಂಕ್ ಮ್ಯೂಸಿಕ್ ಪ್ರಯೋಜನ ಕೂಡ ದೊರೆಯಲಿದೆ.

ಏರ್‌ಟೆಲ್‌ನ 449ರೂ. ಪ್ರಿಪೇಯ್ಡ್‌ ಪ್ಲಾನ್‌
ಈ ಪ್ಲಾನ್‌ ನಿಮಗೆ ದೈನಂದಿನ 2GB ಡೇಟಾವನ್ನು ನೀಡಲಿದ್ದು, 56 ದಿನಗಳವರೆಗೆ ಮಾನ್ಯತೆ ಹೊಂದಿದೆ. ಇನ್ನು ಈ ಪ್ಲಾನ್‌ನಲ್ಲಿ ನಿಮಗೆ ಅನಿಯಮಿತ ಕರೆ ಪ್ರಯೋಜನ, ದಿನಕ್ಕೆ 100 SMS, ಮೊಬೈಲ್ ಆಂಟಿವೈರಸ್ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ದೊರೆಯಲಿದೆ.

ಏರ್‌ಟೆಲ್‌ನ 558ರೂ. ಪ್ರಿಪೇಯ್ಡ್‌ ಪ್ಲಾನ್‌
ಈ ಪ್ಲಾನ್‌ ನಿಮಗೆ 56 ದಿನಗಳವರೆಗೆ ಪ್ರತಿದಿನ 3GB ಮೊಬೈಲ್ ಡೇಟಾವನ್ನು ನೀಡುತ್ತದೆ. ಇದಲ್ಲದೆ ಅನಿಯಮಿತ ಕರೆ ಪ್ರಯೋಜನ ಮತ್ತು ದಿನಕ್ಕೆ 100 SMS ಗಳನ್ನು ಪಡೆಯುತ್ತೀರಿ. ಇದಲ್ಲದೆ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ, ವಿಂಕ್ ಮ್ಯೂಸಿಕ್, 150ರೂ ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಪ್ರಯೋಜನ ಕೂಡ ದೊರೆಯಲಿದೆ.

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಪ್ಲಾನ್‌

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಪ್ಲಾನ್‌

ರಿಲಯನ್ಸ್ ಜಿಯೋದ 444ರೂ. ಪ್ರಿಪೇಯ್ಡ್ ಯೋಜನೆಯು 56 ದಿನಗಳ ಮಾನ್ಯತೆ ಹೊಂದಿದೆ. ಈ ಪ್ಲಾನ್‌ ನಿಮಗೆ ದೈನಂದಿನ 2GB ಡೇಟಾ ನೀಡುತ್ತದೆ. ನಿಮ್ಮ 2GB ಡೇಟಾ ಖಾಲಿಯಾದರೆ ನೀವು 64 ಕೆಬಿಪಿಎಸ್ ವೇಗದಲ್ಲಿ ನೆಟ್ ಸರ್ಫಿಂಗ್ ಅನ್ನು ಆನಂದಿಸಬಹುದು. ಇದು ಅನಿಯಮಿ ಕರೆ ಹಾಗೂ ನೂರು ಎಸ್‌ಎಂಎಸ್‌ ಪ್ರಯೋಜನವನ್ನು ಸಹ ಹೊಂದಿದೆ.
ಇದಲ್ಲದೆ ಜಿಯೋ 399ರೂ ಪ್ರಿಪೇಯ್ಡ್‌ ಪ್ಲಾನ್‌ ಕೂಡ 56 ದಿನಗಳ ಮಾನ್ಯತೆ ಹೊಂದಿದೆ. ಈ ಪ್ಲಾನ್‌ನಲ್ಲಿ ನೀವು ಪ್ರತಿನಿತ್ಯ 1.5GB ಡೇಟಾ ಪ್ರಯೋಜನ ಪಡೆಯಹುದಾಗಿದೆ. ಇದಲ್ಲದೆ ಅನನಿಯಮಿತ ಕರೆ ಪ್ರಯೋಜನ ಮತ್ತು 100 SMS ಪ್ರಯೋಜನವನ್ನು ಕೂಡ ಲಭ್ಯವಿದೆ.

ವೊಡಾಫೋನ್-ಐಡಿಯಾ ಪ್ರಿಪೇಯ್ಡ್ ಪ್ಲಾನ್‌

ವೊಡಾಫೋನ್-ಐಡಿಯಾ ಪ್ರಿಪೇಯ್ಡ್ ಪ್ಲಾನ್‌

ವೊಡಾಫೋನ್ ಐಡಿಯಾ 399ರೂ. ಪ್ರಿಪೇಯ್ಡ್ ಪ್ಲಾನ್ 56 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್‌ನಲ್ಲಿ ನೀವು ಪ್ರತಿನಿತ್ಯ 1.5GB ಡೇಟಾವನ್ನು ಪಡೆಯಬಹುದಾಗಿದೆ. ಇದಲ್ಲದೆ ಅನಿಯಮಿತ ಕರೆ ಪ್ರಯೋಜನ, ದಿನಕ್ಕೆ 100 SMS, Vi ಚಲನಚಿತ್ರಗಳು ಮತ್ತು ಟಿವಿ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ.
ಇದಲ್ಲದೆ ವೊಡಾಫೋನ್ ಐಡಿಯಾದ 449ರೂ. ಪ್ಲಾನ್‌ 4GB ದೈನಂದಿನ ಡೇಟಾದೊಂದಿಗೆ 56 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಹೆಚ್ಚುವರಿಯಾಗಿ, ನೀವು ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಸೌಲಭ್ಯವನ್ನು ಪಡೆಯಬಹುದಾಗಿದೆ. ಇದರೊಂದಿಗೆ Vi Movie ಮತ್ತು TV ​​ಶೋಗಳು, Binge all-night, ಮತ್ತು Weekend Data rollover. ಮಧ್ಯಾಹ್ನ 12 ರಿಂದ ಬೆಳಗ್ಗೆ 6 ರವರೆಗೆ ನೀವು ಅನಿಯಮಿತ ಡೇಟಾವನ್ನು ಬಳಸಬಹುದು

Best Mobiles in India

English summary
Here are the best Jio, Airtel Vodafone Idea prepaid plans with 56 days validity to consider.to know more visit to kannada.gizbot.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+