Home
ಸುದ್ದಿಜಾಲ

Airtel, Jio and Vi: 200ರೂ. ಒಳಗೆ ಲಭ್ಯವಾಗುವ ಪ್ರಿಪೇಯ್ಡ್‌ ಪ್ಲಾನ್‌ಗಳು!

ಭಾರತದ ಟೆಲಿಕಾಂ ವಲಯದಲ್ಲಿ ಏರ್‌ಟೆಲ್‌, ಜಿಯೋ, ವೋಡಾಫೋನ್‌ ಐಡಿಯಾ ಕಂಪೆನಿಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಪ್ರತಿ ಟೆಲಿಕಾಂ ಆಪರೇಟರ್‌ ಕೂಡ ತಮ್ಮ ಗ್ರಾಹಕರ ಅನುಕೂಲಕ್ಕಾಗಿ ಹಲವು ವಿಧದ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿದ್ದಾರೆ. ಅಲ್ಲದೆ ಪರಸ್ಪರ ಪೈಪೋಟಿಯಲ್ಲಿ ಸಾಗುತ್ತಿರುವ ಟೆಲಿಕಾಂ ವಲಯ ಅಗ್ಗದ ಬೆಲೆಯಲ್ಲಿ ಅಧಿಕ ಡೇಟಾ ನೀಡುವ ಪ್ಲಾನ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ. ಇದಕ್ಕೆ ತಕ್ಕಂತೆ ವಿ, ಜಿಯೋ, ಏರ್‌ಟೆಲ್‌ ಟೆಲಿಕಾಂಗಳು ತಮ್ಮ ಗ್ರಾಹಕರನ್ನು ಸೆಳೆಯುತ್ತಿವೆ.

 Airtel, Jio and Vi: 200ರೂ. ಒಳಗೆ ಲಭ್ಯವಾಗುವ ಪ್ರಿಪೇಯ್ಡ್‌ ಪ್ಲಾನ್‌ಗಳು!

ಹೌದು, ಏರ್‌ಟೆಲ್‌,ಜಿಯೋ, ವಿ ಟೆಲಿಕಾಂಗಳು ವಿಭಿನ್ನ ಬೆಲೆಯ ರೀಚಾರ್ಜ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಇವುಗಳಲ್ಲಿ ಗ್ರಾಹಕರು ತಮಗೆ ಸೂಕ್ತವಾದ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಹ ನೀಡಿವೆ. ಇದರಲ್ಲಿ ಅಗ್ಗದ ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಸದ್ಯ ಭಾರತದಲ್ಲಿ ಅಗ್ಗದ ಬೆಲೆಯಲ್ಲಿ ಲಭ್ಯವಾಗುವ ಪ್ರಿಪೇಯ್ಡ್‌ ಪ್ಲಾನ್‌ಗಳು ಯಾವುವು? ಈ ಪ್ಲಾನ್‌ಗಳಲ್ಲಿ ನಿಮಗೆ ಏನೆಲ್ಲಾ ಪ್ರಯೋಜನ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

 Airtel, Jio and Vi: 200ರೂ. ಒಳಗೆ ಲಭ್ಯವಾಗುವ ಪ್ರಿಪೇಯ್ಡ್‌ ಪ್ಲಾನ್‌ಗಳು!

ಜಿಯೋ: 200ರೂ. ಒಳಗೆ ಲಭ್ಯವಾಗುವ ಪ್ರಿಪೇಯ್ಡ್‌ ಪ್ಲಾನ್‌ಗಳು!
ಜಿಯೋ ಟೆಲಿಕಾಂ ನೀಡುತ್ತಿರುವ ಅಗ್ಗದ ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ ಅಂದರೆ ಅದು 149ರೂ. ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌. ಈ ಪ್ಲಾನ್‌ ನಿಮಗೆ ಒಟ್ಟು 20 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಈ ಅವಧಿಯಲ್ಲಿ ದೈನಂದಿನ 100 SMS ಮತ್ತು 1GB ಮೊಬೈಲ್ ಡೇಟಾ ಸೌಲಭ್ಯ ನೀಡಲಿದೆ. ಅಲ್ಲದೆ ಅನಿಯಮಕಿತ ಕರೆ ಪ್ರಯೋಜನಗಳನ್ನು ನೀಡಲಿದೆ.
ಜಿಯೋ 179ರೂ.ಪ್ರಿಪೇಯ್ಡ್‌ ಪ್ಲಾನ್‌: ಈ ಪ್ಲಾನ್‌ ನಿಮಗೆ ಒಟ್ಟು 24 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಈ ಅವಧಿಯಲ್ಲಿ ದೈನಂದಿನ 100 SMS ಮತ್ತು 1GB ಡೇಟಾ ಪ್ರಯೋಜನ ದೊರೆಯಲಿದೆ. ಜೊತೆಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಕೂಡ ಲಭ್ಯವಾಗಲಿದೆ.

 Airtel, Jio and Vi: 200ರೂ. ಒಳಗೆ ಲಭ್ಯವಾಗುವ ಪ್ರಿಪೇಯ್ಡ್‌ ಪ್ಲಾನ್‌ಗಳು!

ಏರ್‌ಟೆಲ್‌: 200ರೂ. ಒಳಗೆ ಲಭ್ಯವಾಗುವ ಪ್ರಿಪೇಯ್ಡ್‌ ಪ್ಲಾನ್‌ಗಳು
* ಏರ್‌ಟೆಲ್‌ 155ರೂ.ಪ್ರಿಪೇಯ್ಡ್‌ ಪ್ಲಾನ್: ಏರ್‌ಟೆಲ್‌ ಟೆಲಿಕಾಂನ ಈ ಪ್ಲಾನ್‌ ನಿಮಗೆ 24 ದಿನಗಳ ವ್ಯಾಲಿಡಿಯನ್ನು ನೀಡಲಿದೆ. ಇದರಲ್ಲಿ 1GB ಡೇಟಾ ಒಟ್ಟು 300 SMS ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
* ಏರ್‌ಟೆಲ್‌ 179ರೂ. ಪ್ರಿಪೇಯ್ಡ್‌ ಪ್ಲಾನ್‌: ಏರ್‌ಟೆಲ್‌ ಟೆಲಿಕಾಂ ನೀಡುತ್ತಿರುವ ಅಗ್ಗದ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಇದು ಕೂಡ ಒಂದು. ಈ ಪ್ಲಾನ್‌ ನಿಮಗೆ ಒಟ್ಟು 28 ದಿನಗಳ ಮಾನ್ಯತೆ ನೀಡಲಿದೆ. ಈ ಅವಧಿಯಲ್ಲಿ ಅನಿಯಮಿತ ಕರೆ ಪ್ರಯೋಜನ ದೊರೆಯಲಿದೆ. ಜೊತೆಗೆ ಒಟ್ಟು ಅವಧಿಗೆ 300 SMS ಮತ್ತು 2GB ಡೇಟಾ ಸೌಲಭ್ಯ ಸಿಗಲಿದೆ.
* ಏರ್‌ಟೆಲ್‌ 199ರೂ.ಪ್ರಿಪೇಯ್ಡ್‌ ಪ್ಲಾನ್‌: ಈ ಪ್ಲಾನ್‌ ನಿಮಗೆ ಒಟ್ಟು 30 ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಸಮಯದಲ್ಲಿ ಅನಿಯಮಿತ ಕರೆ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ಒಟ್ಟು ಅವಧಿಗೆ 300 SMS ಮತ್ತು 3GB ಡೇಟಾ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

 Airtel, Jio and Vi: 200ರೂ. ಒಳಗೆ ಲಭ್ಯವಾಗುವ ಪ್ರಿಪೇಯ್ಡ್‌ ಪ್ಲಾನ್‌ಗಳು!

ವೊಡಾಫೋನ್ ಐಡಿಯಾ: 200ರೂ. ಒಳಗೆ ಲಭ್ಯವಾಗುವ ಪ್ರಿಪೇಯ್ಡ್‌ ಪ್ಲಾನ್‌ಗಳು

* ವೊಡಾಫೋನ್‌ ಐಡಿಯಾ 149ರೂ.ಪ್ರಿಪೇಯ್ಡ್‌ ಪ್ಲಾನ್‌: ಈ ಪ್ಲಾನ್‌ನಲ್ಲಿ ನೀವು ಒಟ್ಟು 21 ದಿನಗಳ ವ್ಯಾಲಿಡಿಯನ್ನು ಪಡೆಯಬಹುದು. ಇದರಲ್ಲಿ ಒಟ್ಟು 300 SMS ಮತ್ತು 1GB ಡೇಟಾ ಸೌಲಭ್ಯ ದೊರೆಯಲಿದೆ. ಅಲ್ಲದೆ ಅನಿಯಮಿತ ಕರೆ ಪ್ರಯೋಜನ ಕೂಡ ಲಭ್ಯವಾಗಲಿದೆ.
* ವೊಡಾಫೋನ್‌ ಐಡಿಯಾ 179ರೂ.ಪ್ರಿಪೇಯ್ಡ್‌ ಪ್ಲಾನ್‌: ಈ ಪ್ರಿಪೇಯ್ಡ್‌ ಪ್ಲಾನ್‌ ನಿಮಗೆ 28 ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಅವಧಿಯಲ್ಲಿ ಅನಿಯಮಿತ ಕರೆ ಪ್ರಯೋಜನ ಹಾಗೂ 300 SMS ಸೌಲಭ್ಯ ದೊರೆಯಲಿದೆ. ಜೊತೆಗೆ ಒಟ್ಟು ಅವಧಿಗೆ 2GB ಡೇಟಾ ಪ್ರಯೋಜನ ಕೂಡ ಲಭ್ಯವಾಗಲಿದೆ.
* ವೊಡಾಫೋನ್‌ ಐಡಿಯಾ 195ರೂ.ಪ್ರಿಪೇಯ್ಡ್‌ ಪ್ಲಾನ್‌ : ಕೈಗೆಟಕುವ ಬೆಲೆಯಲ್ಲಿ ಅಧಿಕ ಪ್ರಯೋಜನ ನೀಡುವ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಇದು ಒಂದಾಗಿದೆ. ಈ ಪ್ಲಾನ್‌ ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ದೈನಂದಿನ ಅನಿಯಮಿತ ಕರೆ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ 300 SMS ಮತ್ತು ಒಟ್ಟು ಅವಧಿಗೆ 2GB ಡೇಟಾ ಸೌಲಭ್ಯ ದೊರೆಯಲಿದೆ. ಈ ಪ್ಲಾನ್‌ ಅನ್ನು ನೀವು ವಿ ಅಪ್ಲಿಕೇಶನ್‌ ಮೂಲಕ ರೀಚಾರ್ಜ್‌ ಮಾಡಿದರೆ 2GB ಹೆಚ್ಚುವರಿ ಡೇಟಾ ಪ್ರಯೋಜನ ಸಿಗಲಿದೆ.

Best Mobiles in India

English summary
Best Prepaid plans from Airtel, Jio and Vi under Rs 200: Benifits and Details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+