Airtel vs Jio vs Vi: 28 ದಿನಗಳ ಮಾನ್ಯತೆಯ ಅತ್ಯುತ್ತಮ ಪ್ರಿಪೇಯ್ಡ್ ಪ್ಲ್ಯಾನ್‌ಗಳು!
ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್‌ಟೆಲ್, ವಿ ಕಂಪೆನಿಗಳು ಮುಂಚೂಣಿಯಲ್ಲಿವೆ. ಈಗಾಗಲೇ ರಿಲಾಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಿ ಟೆಲಿಕಾಂ ಸಂಸ್ಥೆಗಳು ತಮ್ಮ ಚಂದಾದಾರಿಗೆ ಅತ್ಯುತ್ತಮ ಯೋಜನೆಗಳನ್ನು ಪರಿಚಯಿಸುತ್ತಾ ಸಾಗಿವೆ. ಇವುಗಳಲ್ಲಿ ಪ್ರೀಪೇಯ್ಡ್ ಯೋಜನೆಗಳು ಹಾಗೂ ಪೋಸ್ಟ್‌ಪೇಯ್ಡ್ ಯೋಜನೆಗಳು ಸೇರಿವೆ. ಆದರೆ ಕಡಿಮೆ ಬೆಲೆಯಲ್ಲಿ ಕೆಲವು ಪ್ರೀಪೇಯ್ಡ್ ಯೋಜನೆಗಳು ಅಧಿಕ ಪ್ರಯೋಜನಗಳೊಂದಿಗೆ ಗಮನ ಸೆಳೆದಿವೆ. ಈ ಪೈಕಿ ಹೆಚ್ಚಿನ ಬಳಕೆದಾರರು 28 ದಿನಗಳ ಮಾನ್ಯತೆ ಹೊಂದಿರುವ ಕಡಿಮೆ ಬೆಲೆಯ ಪ್ಲ್ಯಾನ್ ರೀಚಾರ್ಜ್‌ಗೆ ಮುಂದಾಗುತ್ತಾರೆ.

ಹೌದು, ಏರ್‌ಟೆಲ್, ಜಿಯೋ ಮತ್ತು ವಿ ಡೇಟಾ, ಮತ್ತು ಅನಿಯಮಿತ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ನೀಡುವ ಹಲವಾರು ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತವೆ. ಕೆಲವು ಬಳಕೆದಾರರು ಮಾಸಿಕ ಪ್ರಯೋಜನಗಳನ್ನು ಹುಡುಕುತ್ತಾರೆ ಮತ್ತು ಪ್ರತಿ ತಿಂಗಳು ರೀಚಾರ್ಜ್ ಮಾಡುತ್ತಾರೆ. ಇನ್ನು ಈ ಟೆಲಿಕಾಂ ಕಂಪನಿಗಳು 28 ದಿನಗಳ ಮಾನ್ಯತೆಯೊಂದಿಗೆ 500 ರೂ.ಗಿಂತ ಕಡಿಮೆ ಬೆಲೆಯ ಯೋಜನೆಗಳನ್ನು ನೀಡುತ್ತವೆ. ಈ ಯೋಜನೆಗಳು 1GB, 1.5GB, 2GB ಮತ್ತು 3GB ದೈನಂದಿನ ಡೇಟಾವನ್ನು ನೀಡುತ್ತವೆ. ಹಾಗಾದ್ರೆ ಏರ್‌ಟೆಲ್, ಜಿಯೋ, ವಿ ಸಂಸ್ಥೆಗಳು ಪರಿಚಯಿಸಿರುವ 28 ದಿನಗಳ ಮಾನ್ಯತೆ ಹೊಂದಿದ ಯೋಜನೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

1GB ದೈನಂದಿನ ಡೇಟಾ ಮತ್ತು 28 ದಿನಗಳ ಮಾನ್ಯತೆ ಹೊಂದಿರುವ ಪ್ರಿಪೇಯ್ಡ್ ಪ್ಲ್ಯಾನ್‌ಗಳು!
ಏರ್‌ಟೆಲ್ ಮತ್ತು ವಿ 219ರೂ, ಪ್ರಿಪೇಯ್ಡ್ ಪ್ಲ್ಯಾನ್: ಏರ್‌ಟೆಲ್ ಮತ್ತು ವಿ 219 ರೂ.ಗೆ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತವೆ, ಈ ಪ್ಲ್ಯಾನ್ 1ಜಿಬಿ ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು 28 ದಿನಗಳ ಮಾನ್ಯತೆಯೊಂದಿಗೆ ಬರಲಿದೆ. ಜೊತೆಗೆ ಟೆಲ್ಕೊ-ನಿರ್ದಿಷ್ಟ ಅಪ್ಲಿಕೇಶನ್‌ಗಳ ಸ್ಟ್ರೀಮಿಂಗ್ ಪ್ರಯೋಜನಗಳಿಗೆ ಈ ಯೋಜನೆ ಪ್ರವೇಶವನ್ನು ನೀಡುತ್ತದೆ.
ಜಿಯೋ 149ರೂ, ಪ್ರಿಪೇಯ್ಡ್ ಯೋಜನೆ: ಈ ಪ್ರಿಪೇಯ್ಡ್ ಯೋಜನೆ 1GB ದೈನಂದಿನ ಡೇಟಾವನ್ನು ನೀಡುತ್ತದೆ. ಈ ಪ್ಲ್ಯಾನ್ 24 ದಿನಗಳ ಮಾನ್ಯತೆಯನ್ನು ಹೊಂದಿದೆ.

1.5GB ದೈನಂದಿನ ಡೇಟಾ ಮತ್ತು 28 ದಿನಗಳ ಮಾನ್ಯತೆ ಹೊಂದಿರುವ ಪ್ಲ್ಯಾನ್‌ಗಳು!
ಏರ್‌ಟೆಲ್ 249ರೂ, ಪ್ರಿಪೇಯ್ಡ್ ಯೋಜನೆ: ಈ ಯೋಜನೆಯು ದಿನಕ್ಕೆ 1.5GB ಡೇಟಾವನ್ನು 28 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಈ ಯೋಜನೆಯು ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಈ ಯೋಜನೆಯು ಏರ್‌ಟೆಲ್‌ಎಕ್ಸ್‌ಸ್ಟ್ರೀಮ್, ಉಚಿತ ಹಲೋ ಟ್ಯೂನ್ಸ್ ಮತ್ತು ವಿಂಕ್ ಸಂಗೀತಕ್ಕೆ ಉಚಿತ ಚಂದಾದಾರಿಕೆಯೊಂದಿಗೆ ಬರುತ್ತದೆ. ಫಾಸ್ಟ್ಯಾಗ್ ವಹಿವಾಟಿನಲ್ಲಿ ಗ್ರಾಹಕರು 150 ರೂ.ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದು.
ಜಿಯೋ 199ರೂ, ಪ್ರಿಪೇಯ್ಡ್ ಯೋಜನೆ: ಈ ಪ್ರಿಪೇಯ್ಡ್ ಯೋಜನೆಯು 1.5GB ದೈನಂದಿನ ಡೇಟಾವನ್ನು 28 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ ಮತ್ತು ಒಟ್ಟು ಡೇಟಾವನ್ನು 42GBಗೆ ವರಗೆ ನೀಡಲಿದೆ. ಈ ಯೋಜನೆ ಅನಿಯಮಿತ ದೇಶೀಯ ಕರೆಗಳು ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಒಳಗೊಂಡಿದೆ.
Vi 249ರೂ, ಪ್ರಿಪೇಯ್ಡ್ ಯೋಜನೆ: ಈ ಪ್ರಿಪೇಯ್ಡ್ ಯೋಜನೆಯು 1.5GB ದೈನಂದಿನ ಡೇಟಾವನ್ನು 28 ದಿನಗಳ ಅನಿಯಮಿತ ಕರೆಗಳೊಂದಿಗೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ. ಈ ಯೋಜನೆಯು ವಿ ಚಲನಚಿತ್ರಗಳು ಮತ್ತು ಟಿವಿಗೆ ಪ್ರವೇಶವನ್ನು ನೀಡುತ್ತದೆ. ವಿ ಅಪ್ಲಿಕೇಶನ್‌ನಿಂದ ರೀಚಾರ್ಜ್ ಮಾಡಿದರೆ ಹೆಚ್ಚುವರಿ 5GBಯೊಂದಿಗೆ ವಾರಾಂತ್ಯದ ಡೇಟಾ ರೋಲ್‌ಓವರ್ ಡೇಟಾವನ್ನು ಯೋಜನೆ ನೀಡುತ್ತದೆ.

2GB ದೈನಂದಿನ ಡೇಟಾ ಮತ್ತು 28 ದಿನಗಳ ಮಾನ್ಯತೆ ಹೊಂದಿದ ಪ್ಲ್ಯಾನ್‌ಗಳು!
ಏರ್‌ಟೆಲ್ 298 ರೂ, ಪ್ರಿಪೇಯ್ಡ್ ಯೋಜನೆ: ಈ ಯೋಜನೆಯು ದಿನಕ್ಕೆ 2GB ಡೇಟಾವನ್ನು ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ ಮತ್ತು 28 ದಿನಗಳ ಮಾನ್ಯತೆಗೆ ಬರುತ್ತದೆ. ಈ ಯೋಜನೆಯ ಹೆಚ್ಚುವರಿ ಪ್ರಯೋಜನಗಳಲ್ಲಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಚಂದಾದಾರಿಕೆ ಮತ್ತು ಉಚಿತ ಆನ್‌ಲೈನ್ ಕೋರ್ಸ್‌ಗಳಿಗೆ ಪ್ರವೇಶ ಹೊಂದಿರುವ ವಿಂಕ್ ಸಂಗೀತ ಮತ್ತು ಫಾಸ್ಟ್ಯಾಗ್‌ನಲ್ಲಿ 150 ರೂ.ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಏರ್‌ಟೆಲ್ ಥ್ಯಾಂಕ್ ಅಪ್ಲಿಕೇಶನ್‌ನಿಂದ ರೀಚಾರ್ಜ್ ಪಡೆಯುವ ಬಳಕೆದಾರರು ಈ ಪ್ರಿಪೇಯ್ಡ್ ಯೋಜನೆಗಾಗಿ 50 ರೂ. ಮತ್ತು 2GB ಹೆಚ್ಚುವರಿ ಡೇಟಾವನ್ನು ರಿಯಾಯಿತಿ ಪಡೆಯುತ್ತಾರೆ.

ಜಿಯೋ 249ರೂ, ಪ್ರಿಪೇಯ್ಡ್ ಯೋಜನೆ: ಈ ಪ್ರಿಪೇಯ್ಡ್ ಯೋಜನೆಯು 28 ದಿನಗಳ ಮಾನ್ಯತೆಯನ್ನು ಹೊಂದಿದೆ ಮತ್ತು ದಿನಕ್ಕೆ 2GB ಡೇಟಾವನ್ನು ನೀಡುತ್ತದೆ, ಒಟ್ಟು 56GB ಡೇಟಾವನ್ನು ನೀಡುತ್ತದೆ. ಈ ಯೋಜನೆಯು ಜಿಯೋದಿಂದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ದೇಶೀಯ ಕರೆಗಳನ್ನು ತರುತ್ತದೆ. ಈ ಯೋಜನೆಯು ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯೊಂದಿಗೆ ದಿನಕ್ಕೆ 100 ಉಚಿತ ಎಸ್‌ಎಂಎಸ್ ನೀಡುತ್ತದೆ.

Vi 299ರೂ, ಪ್ರಿಪೇಯ್ಡ್ ಯೋಜನೆ: ಇದು ಡಬಲ್ ಡೇಟಾ ಪ್ರಿಪೇಯ್ಡ್ ಯೋಜನೆಯಾಗಿದೆ. ಇದು ವಾರಾಂತ್ಯದ ರೋಲ್‌ಓವರ್ ಡೇಟಾ ಲಾಭದೊಂದಿಗೆ ಬರುತ್ತದೆ. ಇದರರ್ಥ ಈ ಯೋಜನೆಯು ವಾರಾಂತ್ಯದ ರೋಲ್‌ಓವರ್ ಡೇಟಾ ಲಾಭದ ಜೊತೆಗೆ 28 ದಿನಗಳವರೆಗೆ 2 ಪ್ಲಸ್ 2, 4GB ದೈನಂದಿನ ಡೇಟಾವನ್ನು ನೀಡುತ್ತದೆ, ಇದು ಬಳಕೆದಾರರಿಗೆ ವಾರದ ದಿನಗಳಲ್ಲಿ ಡೇಟಾವನ್ನು ಸಂಗ್ರಹಿಸಲು ಮತ್ತು ವಾರಾಂತ್ಯದಲ್ಲಿ ಒಟ್ಟಿಗೆ ಬಳಸಲು ಅನುವು ಮಾಡಿಕೊಡುತ್ತದೆ, ಇದು ಸ್ಟ್ರೀಮಿಂಗ್‌ಗೆ ಸೂಕ್ತವಾಗಿದೆ.

3GB ದೈನಂದಿನ ಡೇಟಾ ಮತ್ತು 28 ದಿನಗಳ ಮಾನ್ಯತೆ ಹೊಂದಿದ ಪ್ಲ್ಯಾನ್‌ಗಳು!
ಜಿಯೋ 349ರೂ, ಪ್ರಿಪೇಯ್ಡ್ ಯೋಜನೆ: ಈ ಯೋಜನೆಯು ದಿನಕ್ಕೆ 3GB ಡೇಟಾ ಮತ್ತು ಅನಿಯಮಿತ ಆನ್-ನೆಟ್ ಕರೆ ಪ್ರಯೋಜನಗಳು ಮತ್ತು 28 ದಿನಗಳ ಮಾನ್ಯತೆ ಮತ್ತು ಅನಿಯಮಿತ ದೇಶೀಯ ಕರೆಗಳೊಂದಿಗೆ ಬರುತ್ತದೆ. ಪ್ಯಾಕ್ ಜಿಯೋ ಅಪ್ಲಿಕೇಶನ್‌ಗಳಿಗೆ ಪೂರಕ ಚಂದಾದಾರಿಕೆಯನ್ನು ಸಹ ನೀಡುತ್ತದೆ.
ಏರ್‌ಟೆಲ್ 398ರೂ, ಪ್ರಿಪೇಯ್ಡ್ ಯೋಜನೆ: ಈ ಯೋಜನೆಯು ದಿನಕ್ಕೆ 3GB ಡೇಟಾವನ್ನು 28 ದಿನಗಳ ಮಾನ್ಯತೆಯೊಂದಿಗೆ ನೀಡುತ್ತದೆ. ಈ ಯೋಜನೆಯು ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ನೀಡುತ್ತದೆ.
Vi 401 ಪ್ರಿಪೇಯ್ಡ್ ಯೋಜನೆ: Vi ನ ಪ್ರಿಪೇಯ್ಡ್ ಯೋಜನೆ 3 ದಿನಗಳ ದೈನಂದಿನ ಡೇಟಾವನ್ನು 28 ದಿನಗಳವರೆಗೆ ನೀಡುತ್ತದೆ ಮತ್ತು ದಿನಕ್ಕೆ 100 SMS ನೀಡುತ್ತದೆ. ಇದು ಡಿಸ್ನಿ + ಹಾಟ್‌ಸ್ಟಾರ್‌ಗೆ 16GB ಹೆಚ್ಚುವರಿ ಡೇಟಾ ಮತ್ತು 1 ವರ್ಷದ ವಿಐಪಿ ಚಂದಾದಾರಿಕೆಯನ್ನು ನೀಡುತ್ತದೆ. ಇದು ಹೈಸ್ಪೀಡ್ ರಾತ್ರಿಯ ಇಂಟರ್ನೆಟ್, ವಾರಾಂತ್ಯದ ರೋಲ್‌ಓವರ್ ಡೇಟಾ ಲಾಭ, ಮತ್ತು ವಿ ಚಲನಚಿತ್ರಗಳು ಮತ್ತು ಟಿವಿಯಂತಹ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತದೆ.


Click it and Unblock the Notifications








