Home
ಸುದ್ದಿಜಾಲ

ಪ್ರತಿನಿತ್ಯ 3GB ಡೇಟಾ ಪ್ರಯೋಜನ ಬೇಕಿದ್ದರೆ ಈ ಪ್ಲಾನ್‌ಗಳು ಬೆಸ್ಟ್‌!

ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿರುವ ಜಿಯೋ, ಏರ್‌ಟೆಲ್‌, ವಿ ಟೆಲಿಕಾಂಗಳು ತಮ್ಮ ಪ್ರಿಪೇಯ್ಡ್‌ ಪ್ಲಾನ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿವೆ. ತಮ್ಮ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆ ಹೆಚ್ಚಳದ ನಂತರವೂ ಅನೇಕ ಪ್ಲಾನ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಹೆಚ್ಚಿನ ಡೇಟಾ ಪ್ರಯೋಜನವನ್ನು ನೀಡಲು ಮುಂದಾಗಿದೆ. ಇನ್ನು ಖಾಸಗಿ ಟೆಲಿಕಾಂಗಳು ಅನಿಯಮಿತ ಕರೆ, ದೈನಂದಿನ ಡೇಟಾ ಪ್ರಯೋಜನ ನೀಡುವ ಪ್ಲಾನ್‌ಗಳನ್ನು ನೀಡುತ್ತಾ ಬಂದಿದೆ. ಇದರಲ್ಲಿ ದೈನಂದಿನ 1.5GB, 2GB, 3GB ಡೇಟಾ ನೀಡುವ ಪ್ಲಾನ್‌ಗಳು ಸೇರಿವೆ.

3GB ಡೇಟಾ

ಹೌದು, ಖಾಸಗಿ ಟೆಲಿಕಾಂಗಳಾದ ಜಿಯೋ, ಏರ್‌ಟೆಲ್, ವಿ ಟೆಲಿಕಾಂ ಕಂಪೆನಿಗಳು ದೈನಂದಿನ 3GB ಡೇಟಾ ನೀಡುವ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ.ಇತ್ತೀಚಿನ ದಿನಗಳಲ್ಲಿ ದೈನಂದಿನ 3GB ಡೇಟಾ ನೀಡುವ ಪ್ರಿಪೇಯ್ಡ್‌ ಪ್ಲಾನ್‌ಗಳು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿವೆ. ಮನೆಯಿಂದಲೇ ಕಾರ್ಯನಿರ್ವಹಿಸುವವರಿಗೆ, ಆನ್‌ಲೈನ್‌ ಕ್ಲಾಸ್‌ನಲ್ಲಿ ಭಾಗವಹಿಸವುವವರಿಗೆ ಈ ಪ್ಲಾನ್‌ಗಳು ಸೂಕ್ತವಾಗಿವೆ. ಹಾಗಾದ್ರೆ ದೈನಂದಿನ 3GB ಡೇಟಾ ಪ್ರಯೋಜನ ನೀಡುವ ಪ್ರಿಪೇಯ್ಡ್‌ ಪ್ಲಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ 419ರೂ ಪ್ರೀಪೇಯ್ಡ್‌ ಪ್ಲಾನ್

ಜಿಯೋ 419ರೂ ಪ್ರೀಪೇಯ್ಡ್‌ ಪ್ಲಾನ್

ಜಿಯೋ 419ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಯನ್ನು ನೀಡಲಿದೆ. ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನವನ್ನು ನೀಡಲಿದೆ. ಇನ್ನು ಈ ಪ್ಲಾನಿನಲ್ಲಿ ಅನಿಯಮಿತ ಕರೆ ಪ್ರಯೋಜನವನ್ನು ನೀಡಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ.

ಜಿಯೋ 601ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ 601ರೂ. ಪ್ರೀಪೇಯ್ಡ್‌ ಪ್ಲಾನ್

ಜಿಯೋ ಟೆಲಿಕಾಂನ 601ರೂ. ಪ್ರೀಪೇಯ್ಡ್‌ ಪ್ಲ್ಯಾನ್ ನಿಮಗೆ 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ನೀಡಲಿದೆ. ಈ ಅವಧಿಯಲ್ಲಿ ನಿಮಗೆ ಪ್ರತಿದಿನ 3GB ಡೇಟಾ ಪ್ರಯೋಜನವನ್ನು ನೀಡಲಿದೆ. ಜೊತೆಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆ ಪ್ರಯೋಜನ ನೀಡಲಿದೆ. ಹಾಗೆಯೇ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಹೆಚ್ಚುವರಿಯಾಗಿ 6 GB ಡೇಟಾ ಸಿಗಲಿದ್ದು, ಹಾಗೆಯೇ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್ ಚಂದಾದಾರಿಕೆಯ ಪ್ರಯೋಜನ ಸಹ ಲಭ್ಯವಾಗಲಿದೆ.

ಏರ್‌ಟೆಲ್ 699ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್ 699ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂನ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ವೀಕೆಂಡ್ ಡೇಟಾ ರೋಲ್ ಓವರ್ ಪ್ರಯೋಜನ ಜೊತೆಗೆ ವಿ ಆಪ್ಸ್‌ ಸಹ ಲಭ್ಯವಾಗಲಿದೆ.

ಏರ್‌ಟೆಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್‌

ಏರ್‌ಟೆಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್‌

ಏರ್‌ಟೆಲ್‌ 599ರೂ. ಪ್ರೀಪೇಯ್ಡ್‌ ಪ್ಲ್ಯಾನ್‌ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ಅವಧಿಯಲ್ಲಿ FUP ಲಿಮಿಟ್‌ ಇಲ್ಲದೇ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನೆ ಲಭ್ಯವಾಗಲಿದೆ. ಇದರೊಂದಿಗೆ ಬಳಕೆದಾರರು ಪ್ರತಿದಿನ 3GB ಡೇಟಾ ಪ್ರಯೋಜನ ಹಾಗೂ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ ಸೌಲಭ್ಯಗಳು ಲಭ್ಯವಾಗಲಿವೆ. ಹೆಚ್ಚುವರಿಯಾಗಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಚಂದಾದಾರಿಕೆ ಲಭ್ಯ. ಹಾಗೂ ಏರ್‌ಟೆಲ್ Xstream ಪ್ರೀಮಿಯಂ, ವಿಂಕ್ ಮ್ಯೂಸಿಕ್, ಫಾಸ್ಟ್ಯಾಗ್ ಕ್ಯಾಶ್‌ಬ್ಯಾಕ್ ಸೇವೆಗಳು ಲಭ್ಯ.

ವಿ ಟೆಲಿಕಾಂ 699ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ 699ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂನ 699ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 56 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದ್ದು, ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹೆಚ್ಚುವರಿಯಾಗಿ ವೀಕೆಂಡ್ ಡೇಟಾ ರೋಲ್ ಓವರ್ ಪ್ರಯೋಜನ ಜೊತೆಗೆ ವಿ ಆಪ್ಸ್‌ ಸಹ ಲಭ್ಯವಾಗಲಿದೆ.

ವಿ ಟೆಲಿಕಾಂ 901ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ 901ರೂ. ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂನ 901ರೂ. ಪ್ರಿಪೇಯ್ಡ್‌ ಪ್ಲಾನ್‌ 70 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿನಿತ್ಯ 3GB ಡೇಟಾ, 100 SMS ಹಾಗೂ ಅನಿಯಮಿತ ಕರೆ ಪ್ರಯೋಜನವನ್ನು ನೀಡಲಿದೆ. ಹಾಗೆಯೇ Vi ಚಲನಚಿತ್ರಗಳು ಮತ್ತು ಲೈವ್ ಟಿವಿಯಂತಹ ಪ್ರಯೋಜನಗಳನ್ನು ಹೊಂದಿದೆ.

Best Mobiles in India

English summary
Telecom operators Airtel, Jio, and Vi, offer prepaid plans that offer 3GB of data per day.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+