ಪ್ರತಿನಿತ್ಯ 2GB ಡೇಟಾ ಬೇಕಿದ್ದರೆ ಈ ಪ್ಲಾನ್‌ಗಳನ್ನು ಪರಿಶೀಲಿಸಿ!
ಟೆಲಿಕಾಂ ವಲಯದಲ್ಲಿ ಜಿಯೋ, ಏರ್‌ಟೆಲ್ ಪರಸ್ಪರ ಪೈಪೋಟಿ ನಡೆಸುತ್ತಿವೆ. ಹೆಚ್ಚಿನ ಗ್ರಾಹಕರನ್ನು ತಮ್ಮ ಕಡೆ ಸೆಳೆಯಲು ಆಕರ್ಷಕ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸುತ್ತಲೇ ಬಂದಿವೆ. ಅಗ್ಗದ ಬೆಲೆಯಲ್ಲಿ ಅಧಿಕ ಡೇಟಾ, ಅನಿಯಮಿತ ಕರೆ ಪ್ರಯೋಜನ ನೀಡುವ ಪ್ಲಾನ್‌ಗಳನ್ನು ಪರಿಚಯಿಸಿವೆ. ಈ ಪೈಕಿ ದೈನಂದಿನ 2GB ಡೇಟಾ ನೀಡುವ ಪ್ಲಾನ್‌ಗಳು ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಮನೆಯಿಂದಲೇ ಕಾರ್ಯನಿರ್ವಹಿಸುವ ಹಾಗೂ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳುವವರಿಗೆ ಈ ಪ್ಲಾನ್‌ಗಳು ಸೂಕ್ತವಾಗಿವೆ.

ಹೌದು, ಪ್ರತಿದಿನ 2GB ಡೇಟಾವನ್ನು ನೀಡುವ ಪ್ರಿಪೇಯ್ಡ್ ಪ್ಲಾನ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಈ ಕಾರಣಕ್ಕಾಗಿ ಏರ್‌ಟೆಲ್, ಜಿಯೋ ಟೆಲಿಕಾಂಗಳು ಅನೇಕ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿವೆ. ಈ ಪ್ಲಾನ್‌ಗಳು ದೈನಂದಿನ ಡೇಟಾ ಮಾತ್ರವಲ್ಲದೆ, ಅನಿಯಮಿತ ಕರೆ ಪ್ರಯೋಜನ ಹಾಗೂ ದಿನಕ್ಕೆ 100 SMS ಪ್ರಯೋಜನಗಳನ್ನು ನೀಡಲಿದೆ. ಹಾಗಾದ್ರೆ ದೈನಂದಿನ 2GB ಡೇಟಾ ಪ್ರಯೋಜನ ನೀಡುವ ಪ್ಲಾನ್‌ಗಳು ಯಾವುವು? ಇವುಗಳಲ್ಲಿ ಯಾವುದು ಉತ್ತಮ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಜಿಯೋ 2,599ರೂ. ಪ್ರಿಪೇಯ್ಡ್ ಪ್ಲಾನ್
ಈ ಪ್ಲಾನ್ ವಾರ್ಷಿಕ ಪ್ಲಾನ್ ಆಗಿದ್ದು, 365 ದಿನಗಳ ಮಾನ್ಯತೆಯನ್ನು ಪಡೆದಿದೆ. ಈ ಪ್ಲಾನ್‌ನಲ್ಲಿ ದೈನಂದಿನ 2GB ಡೇಟಾ ಜೊತೆಗೆ 10GB ಹೆಚ್ಚುವರಿ ಡೇಟಾ ಪ್ರಯೋಜನ ಕೂಡ ದೊರೆಯಲಿದೆ. ಅಲ್ಲದೆ ಅನಿಯಮಿತ ಕರೆ ಹಾಗೂ ದಿನಕ್ಕೆ 100 SMS ಪ್ರಯೋಜನ ಸಿಗಲಿದೆ. ಅಲ್ಲದೆ ಇದು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡಲಿದೆ.
ಜಿಯೋ 888ರೂ. ಪ್ರಿಪೇಯ್ಡ್ ಪ್ಲಾನ್
ಈ ಪ್ಲಾನ್ 2GB ಡೇಟಾವನ್ನು 84 ದಿನಗಳ ಅವಧಿಗೆ 5GB ಹೆಚ್ಚುವರಿ ಡೇಟಾದೊಂದಿಗೆ ನೀಡುತ್ತದೆ, ಇದು ಒಟ್ಟು 173GB ಡೇಟಾವನ್ನು ನೀಡುತ್ತದೆ. ಇದು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯೊಂದಿಗೆ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಗಳನ್ನು ಸಹ ನೀಡುತ್ತದೆ.
ಜಿಯೋ 666ರೂ. ಪ್ರಿಪೇಯ್ಡ್ ಪ್ಲಾನ್
ಈ ಪ್ಲಾನ್ 56 ದಿನಗಳ ಮಾನ್ಯತೆಯನ್ನು ಹೊಂದಿದ್ದು, ದೈನಂದಿನ 2GB ಡೇಟಾ ಪ್ರಯೋಜನವನ್ನು ನೀಡಲಿದೆ. ಇದು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯೊಂದಿಗೆ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಗಳನ್ನು ಸಹ ನೀಡುತ್ತದೆ.

ಜಿಯೋ 599ರೂ. ಪ್ರಿಪೇಯ್ಡ್ ಪ್ಲಾನ್
ಇನ್ನು 599ರೂ. ಪ್ರಿಪೇಯ್ಡ್ ಪ್ಲಾನ್ ದಿನಕ್ಕೆ 2GB ಡೇಟಾವನ್ನು ನೀಡಲಿದ್ದು, 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದಲ್ಲದೆ ಈ ಪ್ಲಾನ್‌ನಲ್ಲಿ ಅನಿಯಮಿತ ಕರೆ ಪ್ರಯೋಜನ ಸೇರಿದಂತೆ ದೈನಂದಿನ 100 SMS ಪ್ರಯೋಜನ ದೊರೆಯಲಿದೆ. ಇದು ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ನೀಡಲಿದೆ.
ಜಿಯೋ 444ರೂ. ಪ್ರಿಪೇಯ್ಡ್ ಪ್ಲಾನ್
ಜಿಯೋ 444ರೂ. ಪ್ರಿಪೇಯ್ಡ್ ಪ್ಲಾನ್ ನಿಮಗೆ 56 ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಪ್ಲಾನ್‌ನಲ್ಲಿ ನಿಮಗೆ ದೈನಂದಿನ 2GB ಡೇಟಾ, ಅನಿಮಿತ ಕರೆ ಹಾಗೂ ಡೈಲಿ 100 SMS ಪ್ರಯೋಜನ ದೊರೆಯಲಿದೆ. ಅಲ್ಲದೆ ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ.
ಜಿಯೋ 249ರೂ. ಪ್ರಿಪೇಯ್ಡ್ ಪ್ಲಾನ್
ಈ ಯೋಜನೆಯು ನಿಮಗೆ ಕೇವಲ 28 ದಿನಗಳ ಮಾನ್ಯತೆಯನ್ನು ನೀಡಲಿದೆ. ಆದರೆ ಈ ಪ್ಲಾನ್‌ನಲ್ಲಿ ಸಹ ನೀವು ದೈನಂದಿನ 2GB ಡೇಟಾವನ್ನು ಪಡೆಯಬಹುದಾಗಿದೆ. ಜೊತೆಗೆ ಅನಿಯಮಿತ ಕರೆ ಪ್ರಯೋಜನ, ದಿನನಿತ್ಯ 100 SMS ಪ್ರಯೋಜನ ಸಿಗಲಿದೆ. ಅಲ್ಲದೆ ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಏರ್‌ಟೆಲ್ 699ರೂ. ಪ್ರಿಪೇಯ್ಡ್ ಪ್ಲಾನ್
ಏರ್‌ಟೆಲ್ ಟೆಲಿಕಾಂನ ಈ ಪ್ಲಾನ್ 56 ದಿನಗಳ ಮಾನ್ಯತೆ ಹೊಂದಿದೆ. ಇದು ದೈನಂದಿನ 2GB ಡೇಟಾವನ್ನು ನೀಡುತ್ತದೆ. ಜೊತೆಗೆ ಅನಿಯಮಿತ ಧ್ವನಿ ಕರೆಗಳು, ದಿನನಿತ್ಯ 100 SMS ಪ್ರಯೋಜನವನ್ನು ನೀಡಲಿದೆ. ಅಲ್ಲದೆ ಅಮೆಜಾನ್ ಪ್ರೈಮ್ ವೀಡಿಯೋ ಮೊಬೈಲ್ ಆವೃತ್ತಿಗೆ ಒಂದು ತಿಂಗಳ ಫ್ರೀ ಟ್ರಯಲ್ ಅನ್ನು ನೀಡಲಿದೆ.
ಏರ್‌ಟೆಲ್ 698ರೂ. ಪ್ರಿಪೇಯ್ಡ್ ಪ್ಲಾನ್
ಈ ಪ್ಲಾನ್ ದೈನಂದಿನ 2GB ಡೇಟಾ ನೀಡಲಿದ್ದು, 84 ದಿನಗಳ ಮಾನ್ಯತೆ ಹೊಂದಿದೆ. ಇದು ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಗಳು, ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿಗೆ ಒಂದು ತಿಂಗಳ ಫ್ರೀ ಟ್ರಯಲ್ ಅನ್ನು ನೀಡಲಿದೆ. ವಿಂಕ್ ಮ್ಯೂಸಿಕ್, ಫ್ರೀ ಹಲೋಟ್ಯೂನ್ಸ್ ಪ್ರಯೋಜನವನ್ನು ಸಹ ನೀಡಲಿದೆ.

ಏರ್‌ಟೆಲ್ 449ರೂ. ಪ್ರಿಪೇಯ್ಡ್ ಪ್ಲಾನ್
ಏರ್‌ಟೆಲ್ 449ರೂ. ಪ್ರಿಪೇಯ್ಡ್ ಪ್ಲಾನ್ 56 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದು ದೈನಂದಿನ 2GB ಡೇಟಾ ಜೊತೆಗೆ ಅನಿಯಮಿತ ಕರೆಗಳು, ದಿನಕ್ಕೆ 100 SMS ಗಳು, ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿಯ ಫ್ರೀ ಟ್ರಯಲ್ ಅನ್ನು ನೀಡಲಿದೆ.
ಏರ್‌ಟೆಲ್ 298ರೂ. ಪ್ರಿಪೇಯ್ಡ್ ಪ್ಲಾನ್
ಇನ್ನು ಈ ಪ್ಲಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದ್ದು, ದೈನಂದಿನ 2GB ಡೇಟಾವನ್ನು ನೀಡುತ್ತದೆ. ಇದು ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 SMS ಗಳು, ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿಯ ಒಂದು ತಿಂಗಳ ಫ್ರೀ ಟ್ರಯಲ್ ಅನ್ನು ನೀಡಲಿದೆ.


Click it and Unblock the Notifications








