Home
ಸುದ್ದಿಜಾಲ

ಜಿಯೋ ಮತ್ತು ಏರ್‌ಟೆಲ್‌ನ ಈ ಪ್ಲಾನ್‌ಗಳಲ್ಲಿ ಸಿಗಲಿದೆ ಕ್ಯಾಶ್‌ಬ್ಯಾಕ್‌ ಆಫರ್‌!

ಪ್ರಸ್ತುತ ಟೆಲಿಕಾಂ ವಲಯದಲ್ಲಿ ಖಾಸಗಿ ಟೆಲಿಕಾಂ ಕಂಪೆನಿಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಅದರಲ್ಲೂ ಏರ್‌ಟೆಲ್‌, ಜಿಯೋ ನಡುವೆ ಸಾಕಷ್ಟು ಪೈಪೋಟಿ ಇದೆ. ಇದೇ ಕಾರಣಕ್ಕೆ ಗ್ರಾಹಕರನ್ನು ತಮ್ಮ ಕಡೆ ಸೆಳೆಯಲು ಹಲವು ಆಕರ್ಷಕ ಪ್ರಿಪೇಯ್ಡ್‌ ಹಾಗೂ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಅಷ್ಟೇ ಅಲ್ಲ ಕೆಲವು ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಕ್ಯಾಶ್‌ಬ್ಯಾಕ್‌ ಆಫರ್‌ ಅನ್ನು ಕೂಡ ನೀಡುತ್ತಿವೆ. ಜೊತೆಗೆ ಸ್ಟ್ರೀಮಿಂಗ್‌ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತ ಪ್ರವೇಶವನ್ನು ಸಹ ನೀಡುತ್ತಿವೆ.

ಟೆಲಿಕಾಂ

ಹೌದು, ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂ ಕಂಪೆನಿಗಳು ಸಾಕಷ್ಟು ಪೈಪೋಟಿ ನಡೆಸುತ್ತಿವೆ. ಇದಕ್ಕಾಗಿ ಕ್ಯಾಶ್‌ಬ್ಯಾಕ್‌ ಆಫರ್‌ ನೀಡುವ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಜಿಯೋ ಕಂಪೆನಿ ಸೆಪ್ಟೆಂಬರ್‌ನಲ್ಲಿ ಕೆಲವು ಪ್ರಿಪೇಯ್ಡ್ ಯೋಜನೆಗಳಲ್ಲಿ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಪರಿಚಯಿಸಿತ್ತು. ಸದ್ಯ ಈ ಆಫರ್‌ ಇನ್ನು ಕೂಡ ಮಾನ್ಯವಾಗಿದ್ದು, ಬಳಕೆದಾರರನ್ನು ಆಕರ್ಷಿಸುತ್ತಿದೆ. ಇದಕ್ಕೆ ಏರ್‌ಟೆಲ್‌ ಕೂಡ ಹೊರತಾಗಿಲ್ಲ. ಹಾಗಾದ್ರೆ ಏರ್‌ಟೆಲ್‌ ಮತ್ತು ಜಿಯೋ ಟೆಲಿಕಾಂಗಳು ಗ್ರಾಹಕರಿಗೆ ತಮ್ಮ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಹೆಚ್ಚುವರಿಯಾಗಿ ಏನೆಲ್ಲಾ ಆಫರ್‌ ನೀಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ

ಜಿಯೋ ಟೆಲಿಕಾಂ ಗ್ರಾಹಕರು ಕೆಲವು ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಕ್ಯಾಶ್‌ಬ್ಯಾಕ್‌ ಪಡೆಯಬಹುದಾಗಿದೆ. ಈ ಆಫರ್‌ಗಳನ್ನು My Jio ಅಪ್ಲಿಕೇಶನ್ ಅಥವಾ Jio ವೆಬ್‌ಸೈಟ್‌ನಿಂದ ರೀಚಾರ್ಜ್‌ಗಳನ್ನು ಮಾಡುವ ಮೂಲಕ ಪಡೆದುಕೊಳ್ಳಬಹುದು. ಜಿಯೋ ಟೆಲಿಕಾಂನ ಕ್ಯಾಶ್‌ಬ್ಯಾಕ್ ಆಫರ್ 249ರೂ, 555ರೂ ಮತ್ತು 599ರೂ ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಮಾನ್ಯವಾಗಿದೆ. ಈ ಪ್ಲಾನ್‌ಗಳಲ್ಲಿ ಕ್ರಮವಾಗಿ 50ರೂ, 111ರೂ ಮತ್ತು 120ರೂ ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಈ ಮೂರು ಯೋಜನೆಗಳೊಂದಿಗೆ ತಮ್ಮ ಪ್ರಿಪೇಯ್ಡ್ ಸಂಖ್ಯೆಗಳನ್ನು ರೀಚಾರ್ಜ್ ಮಾಡುವ ಗ್ರಾಹಕರು 20% ಕ್ಯಾಶ್‌ಬ್ಯಾಕ್ ಪಡೆಯಲಿದದ್ದಾರೆ. ಅಲ್ಲದೆ ಜಿಯೋ ಮಾರ್ಟ್, ರಿಲಯನ್ಸ್ ಡಿಜಿಟಲ್, ಜಿಯೋ ರೀಚಾರ್ಜ್ ಮತ್ತು ಇತರ ಸೇವೆಗಳಿಂದ ಕ್ಯಾಶ್‌ಬ್ಯಾಕ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಪ್ರಿಪೇಯ್ಡ್

ಇನ್ನು ಜಿಯೋದ 249ರೂ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್‌ ಸೌಲಭ್ಯ ಲಭ್ಯ. ಈ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಹಾಗೆಯೇ 555ರೂ ಪ್ರಿಪೇಯ್ಡ್‌ಪ್ಲಾನ್‌ ದಿನಕ್ಕೆ 1.5ಜಿಬಿ ಡೇಟಾ ಪ್ರಯೋಜನ ನೀಡಲಿದೆ. ಇದು 84 ದಿನಗಳ ಮಾನ್ಯತೆಯನ್ನು ಹೊಂದಿದ್ದು, ಅನಿಯಮಿತ ಕರೆ ಪ್ರಯೋಜನಗಳನ್ನು ನೀಡಲಿದೆ. ಇದಲ್ಲದೆ 599ರೂ ಪ್ಲಾನ್‌ ಕೂಡ 84 ದಿನಗಳ ವ್ಯಾಲಿಡಿಟಿ ಹೊಂದಿದ್ದು, ದಿನಕ್ಕೆ 2GB ಪ್ರಯೋಜನವನ್ನು ನೀಡುತ್ತದೆ. ಇದರಲ್ಲಿ ಡೈಲಿ 100 SMS ಮತ್ತು ಅನಿಯಮಿತ ವಾಯ್ಸ್‌ ಕಾಲ್‌ ಪ್ರಯೋಜನ ಸಿಗಲಿದೆ. ಈ ಮೂರು ಪ್ಲಾನ್‌ಗಳು JioTV, JioCinema, JioSecurity, JioNews ಮತ್ತು JioCloud ಗೆ ಅಪ್ಲಿಕೇಶನ್ ಚಂದಾದಾರಿಕೆಯನ್ನು ಸಹ ನೀಡಲಿವೆ.

ಏರ್‌ಟೆಲ್‌

ಜಿಯೋ ಟೆಲಿಕಾಂ ಮಾದರಿಯಲ್ಲಿಯೇ ಏರ್‌ಟೆಲ್‌ ಕೂಡ ತನ್ನ ಬಳಕೆದಾರರಿಗೆ ಹೆಚ್ಚುವರಿ ಡೇಟಾ ಮತ್ತು ಡೇಟಾ ವೋಚರ್‌ ನೀಡುವ ಪ್ಲಾನ್‌ಗಳನ್ನು ಪರಿಚಯಿಸಿದೆ. ಜಿಯೋ ಕ್ಯಾಶ್‌ಬ್ಯಾಕ್‌ ಆಫರ್‌ ನೀಡಿದರೆ, ಏರ್‌ಟೆಲ್‌ ಉಚಿತ ಡೇಟಾ ವೋಚರ್‌ ನೀಡುತ್ತಿದೆ. ಈ ಮೂಲಕ ಹೆಚ್ಚಿನ ಡೇಟಾ ಬಯಸೋರಿಗೆ ಏರ್‌ಟೆಲ್‌ ಗಾಳ ಹಾಕುತ್ತಿದೆ. ಅದರಲ್ಲೂ ಕೆಲವು ಅರ್ಹತೆಯನ್ನು ಪೂರೈಸುವ ಏರ್‌ಟೆಲ್‌ ನ ಆಯ್ದ ಗ್ರಾಹಕರಿಗೆ ಉಚಿತ ಡೇಟಾ ಕೂಪನ್‌ಗಳನ್ನು ನೀಡಲಾಗುತ್ತದೆ.

ಏರ್‌ಟೆಲ್

ಇನ್ನು ಏರ್‌ಟೆಲ್ ಡೇಟಾ ವೋಚರ್‌ ನೀಡುವ ಪ್ರಿಪೆಯ್ಡ್‌ ಪ್ಲಾನ್‌ಗಳಲ್ಲಿ 289ರೂ ಪ್ಲಾನ್‌ ಕೂಡ ಸೇರಿದೆ. ಈ ಪ್ರಿಪೇಯ್ಡ್ ಪ್ಲಾನ್‌ ದಿನಕ್ಕೆ 1.5GB ಡೇಟಾ ಪ್ರಯೋಜನ ನೀಡಲಿದೆ. ಜೊತೆಗೆ ಅನಿಯಮಿತ ಕರೆಗಳು ಮತ್ತು 100 SMS ಪ್ರಯೋಜನ ನೀಡಲಿದ್ದು 28 ​​ದಿನಗಳ ಮಾನ್ಯತೆಯನ್ನು ಪಡೆದಿದೆ. ಇದಲ್ಲದೆ ಈ ಪ್ಲಾನ್‌ನಲ್ಲಿ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಸೇವೆಗಳನ್ನು ಉಚಿತ HelloTunes ಜೊತೆಗೆ ನೀಡುತ್ತದೆ. ಇದರಲ್ಲಿರುವ ಉಚಿತ ಡೇಟಾ ಕೂಪನ್ 1GB ಡೇಟಾದ 2 ಕೂಪನ್‌ಗಳನ್ನು ನೀಡುತ್ತದೆ, ಅದು 28 ದಿನಗಳವರೆಗೆ ಮಾನ್ಯವಾಗಿರುತ್ತದೆ.

ಏರ್‌ಟೆಲ್

ಹಾಗೆಯೇ ಏರ್‌ಟೆಲ್ 599ರೂ ಪ್ಲಾನ್‌ ಕೂಡ ಡೇಟಾ ವೊಚರ್‌ ನೀಡಲಿದೆ. ಈ ಪ್ಲಾನ್‌ ನಿಮಗೆ ಡಿಸ್ನಿ+ ಹಾಟ್‌ಸ್ಟಾರ್‌ಗೆ ಉಚಿತ ವಾರ್ಷಿಕ ಮೊಬೈಲ್ ಚಂದಾದಾರಿಕೆ ನೀಡಲಿದೆ. ಇದು ದೈನಂದಿನ 3GB ಡೇಟಾ ಜೊತೆಗೆ ಅನಿಯಮಿತ ಕರೆ ಪ್ರಯೋಜನ ನೀಡಲಿದ್ದು, 56 ದಿನಗಳ ಮಾನ್ಯತೆ ಹೊಂದಿದೆ. ಈ ಯೋಜನೆಯು 1GB ಡೇಟಾದ 4 ಕೂಪನ್‌ಗಳನ್ನು ತರುತ್ತದೆ. ಇದರೊಂದಿಗೆ 1GB ಯ 2 ಕೂಪನ್‌ಗಳನ್ನು ನೀಡುವ ಉಚಿತ ಡೇಟಾ ವೋಚರ್‌ಗಳನ್ನು 249ರೂ, 279ರೂ, 289ರೂ, 298ರೂ, 349ರೂ ಮತ್ತು 398ರೂ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Jio’s cashback offer is valid on plans priced at Rs 249, Rs 555 and Rs 599. Airtel has prepaid plans that offer data coupons with additional data to users.to know more visit to kannada.gizbot.com.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+