Home
ಸುದ್ದಿಜಾಲ

Jio v/s Airtel v/s vi: ಬೆಲೆ ಏರಿಕೆ ನಂತರ ಬೆಸ್ಟ್‌ ಎನಿಸುವ ಪ್ರಿಪೇಯ್ಡ್‌ ಪ್ಲಾನ್‌ಗಳು!

ಕಳೆದ ಕೆಲವು ದಿನಗಳಿಂದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ. ಪ್ರಮುಖ ಟೆಲಿಕಾಂ ಕಂಪೆನಿಗಳು ತಮ್ಮ ಪ್ರಿಪೇಯ್ಡ ಪ್ಲಾನ್‌ಗಳ ಬೆಲೆಯಲ್ಲಿ ಹೆಚ್ಚಳವನ್ನು ಮಾಡಿವೆ. ನಾಲ್ಕೈದು ದಿನಗಳ ಹಿಂದೆ ಏರ್‌ಟೆಲ್‌ ಮತ್ತು ವಿ ಟೆಲಿಕಾಂ ತಮ್ಮ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆ ಹೆಚ್ಚಳ ಮಾಡಿ ಗ್ರಾಹಕರಿಗೆ ಶಾಕ್‌ ನೀಡಿದ್ದವು. ಈ ಸಾಲಿಗೆ ಇದೀಗ ರಿಲಯನ್ಸ್ ಜಿಯೋ ಕೂಡ ಸೇರಿಕೊಂಡಿರೋದು ನಿಮಗೆಲ್ಲಾ ತಿಳಿದೆ ಇದೆ. ಜಿಯೋ ಟೆಲಿಕಾಂ ಪ್ರಿಪೇಯ್ಡ್ ಪ್ಲಾನ್‌ಗಳ ಹೊಸ ಬೆಲೆ ಡಿಸೆಂಬರ್ 1 ರಿಂದ ಜಾರಿಗೆ ಬರಲಿದೆ.

ಟೆಲಿಕಾಂ

ಹೌದು, ಟೆಲಿಕಾಂ ಕಂಪೆನಿಗಳು ತಮ್ಮ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಳ ಮಾಡಿವೆ. ಏರ್‌ಟೆಲ್‌ , ವಿ ಟೆಲಿಕಾಂ ನಂತರ ಜಿಯೋ ಟೆಲಿಕಾಂ ಕೂಡ ಪ್ರಿಪೇಯ್ಡ್‌ ರೀಚಾರ್ಜ್ ಯೋಜನೆಗಳನ್ನು ಪರಿಷ್ಕರಿಸಿದೆ. ಸದ್ಯ ಮೂರು ಟೆಲಿಕಾಂಗಳು ತಮ್ಮ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಬೆಲೆ ಹೆಚ್ಚಳ ಮಾಡಿರುವುದರಿಂದ ಹೊಸದಾಗಿ ರೀಚಾರ್ಜ್‌ ಮಾಡಿಸುವುದಕ್ಕೆ ನಿಮಗೆ ಯಾವ ಪ್ಲಾನ್‌ ಸೂಕ್ತ? ಅದರಲ್ಲೂ ನೀವು 250ರೂ. ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಪ್ರಿಪೇಯ್ಡ್ ಪ್ಲಾನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಪ್ರಿಪೇಯ್ಡ್ ಪ್ಲಾನ್‌ಗಳು

ಜಿಯೋ ಪ್ರಿಪೇಯ್ಡ್ ಪ್ಲಾನ್‌ಗಳು

ಜಿಯೋ ಟೆಲಿಕಾಂ ಕೈಗೆಟುಕುವ ಬೆಲೆಯಲ್ಲಿ ಅನೇಕ ಪ್ರಯೋಜನ ನೀಡುವ ಪ್ಲಾನ್‌ಗಳನ್ನು ಹೊಂದಿದೆ. ಇದರಲ್ಲಿ 179ರೂ.ಗಳ ಪ್ರಿಪೇಯ್ಡ್ ಪ್ಲಾನ್‌ ಸೂಕ್ತ ಎನಿಸಲಿದೆ. ಇನ್ನು ಈ ಪ್ಲಾನ್‌ ದೈನಂದಿನ 1GB ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಪ್ರಯೋಜನವನ್ನು ನೀಡಲಿದೆ. ಇದು 24 ದಿನಗಳ ಮಾನ್ಯತೆಯನ್ನು ಪಡೆದಿದೆ. ಇದಲ್ಲದೆ 1.5GB ದೈನಂದಿನ ಡೇಟಾವನ್ನು ಬಯಸುವವರು 239ರೂ. ಪ್ರಿಪೇಯ್ಡ್ ಯೋಜನೆಯನ್ನು ಖರೀದಿಸಬಹುದು. ಇದು ದೈನಂದಿನ ಅನಿಯಮಿತ ವಾಯ್ಸ್‌ ಕಾಲ್‌, ದಿನಕ್ಕೆ 100 SMS ಪ್ರಯೋಜನವನ್ನು ಸಹ ನೀಡಲಿದೆ. ಈ ಪ್ಲಾನ್‌ 28 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ. ಇನ್ನು ಹೆಚ್ಚಿನ ಡೇಟಾ ಅಗತ್ಯವಿಲ್ಲದವರು 155ರೂ. ಪ್ಲಾನ್‌ ಪರಿಶೀಲಿಸಬಹುದು. ಈ ಪ್ಲಾನ್‌ ದೈನಂದಿನ 2GB ಡೇಟಾ ಮತ್ತು 50 SMS ಪ್ರಯೋಜನವನ್ನು ಹೊಂದಿದ್ದು, 28 ದಿನಗಳ ಮಾನ್ಯತೆ ನೀಡಲಿದೆ.

ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ಗಳು

ಏರ್‌ಟೆಲ್ ಪ್ರಿಪೇಯ್ಡ್ ಪ್ಲಾನ್‌ಗಳು

ಏರ್‌ಟೆಲ್ ಟೆಲಿಕಾಂನ 179ರೂ.ಬೆಲೆಯ ಪ್ರಿಪೇಯ್ಡ್ ಪ್ಲಾನ್‌ ಕೈಗೆಟಕುವ ಪ್ಲಾನ್‌ ಎನಿಸಿಕೊಂಡಿದೆ. ಇನ್ನು ಈ ಪ್ಲಾನ್‌ ದೈನಂದಿನ 2GB ಡೇಟಾ, 300 SMS ಪ್ರಯೋಜನ ನೀಡಲಿದ್ದು, 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರೊಂದಿಗೆ 239ರೂ. ಪ್ಲಾನ್‌ ಕೂಡ ಅಯ್ಕೆಗೆ ಲಭ್ಯವಿದೆ. ಈ ಪ್ಲಾನ್‌ನಲ್ಲಿ ನೀವು ಪ್ರತಿನಿತ್ಯ 1GB ಡೇಟಾ, 100 SMS ಮತ್ತು 24 ದಿನಗಳವರೆಗೆ ಅನಿಯಮಿತ ಕರೆ ಪ್ರಯೋಜನ ಪಡೆಯಬಹುದಾಗಿದೆ. ಇನ್ನು ಈ ಎರಡೂ ಯೋಜನೆಗಳು ಅಮೆಜಾನ್ ಪ್ರೈಮ್ ಮೊಬೈಲ್ ಆವೃತ್ತಿ ಚಂದಾದಾರಿಕೆಗೆ ಉಚಿತ ಪ್ರವೇಶವನ್ನು ನೀಡಲಿವೆ.

ವಿ ಟೆಲಿಕಾಂ ಪ್ರಿಪೇಯ್ಡ್‌ ಪ್ಲಾನ್‌ಗಳು

ವಿ ಟೆಲಿಕಾಂ ಪ್ರಿಪೇಯ್ಡ್‌ ಪ್ಲಾನ್‌ಗಳು

ವಿ ಟೆಲಿಕಾಂ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ 179ರೂ. ಸೂಕ್ತವಾಗಿದೆ. ಇದು 28 ದಿನಗಳ ಮಾನ್ಯತೆಯ ಅವಧಿಯೊಂದಿಗೆ ಬರುತ್ತದೆ. ಅನಿಯಮಿತ ಕರೆ ಪ್ರಯೋಜನಗಳನ್ನು ಮತ್ತು 300 SMS ಗಳನ್ನು ನೀಡುತ್ತದೆ. ಇನ್ನು 269ರೂ. ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ 28 ದಿನಗಳವರೆಗೆ ಮಾನ್ಯತೆಯನ್ನು ಪಡೆದಿದೆ. ಈ ಪ್ಲಾನ್‌ 2GB ಡೇಟಾವನ್ನು ಮಾತ್ರ ನೀಡುತ್ತದೆ.

ಬೆಲೆ ಏರಿಕೆಯ ನಂತರ ಪ್ರಿಪೇಯ್ಡ್‌ಗಳ ಹೊಸ ದರ

ಬೆಲೆ ಏರಿಕೆಯ ನಂತರ ಪ್ರಿಪೇಯ್ಡ್‌ಗಳ ಹೊಸ ದರ

ಏರ್‌ಟೆಲ್‌ ಟೆಲಿಕಾಂ ಪ್ರೀಪೇಯ್ಡ್‌ ಯೋಜನೆಗಳ ಜೊತೆಗೆ ಕಂಪನಿಯ ಡೇಟಾ ವೋಚರ್‌ಗಳು ಸಹ ಬೆಲೆ ಏರಿಕೆಯನ್ನು ಪಡೆದಿವೆ. 48ರೂ, 98ರೂ ಮತ್ತು 251ರೂ, ವೋಚರ್‌ಗಳು ಈಗ ದರದ ಏರಿಕೆ ಕಂಡಿದ್ದು, ಕ್ರಮವಾಗಿ 58ರೂ, 118ರೂ ಮತ್ತು 301ರೂ ಬೆಲೆಯಲ್ಲಿ ಲಭ್ಯವಿರುತ್ತವೆ. ಎಲ್ಲಾ ಯೋಜನೆಗಳ ಪ್ರಯೋಜನಗಳ ಪ್ರಯೋಜನಗಳು ಮೊದಲಿನಂತೆ ಇರಲಿವೆ. ಆದರೆ ಈಗ ದುಬಾರಿ ಬೆಲೆಯಲ್ಲಿ ಲಭ್ಯವಿರುತ್ತವೆ.

ವಿ ಟೆಲಿಕಾಂ ಪ್ರಿಪೇಯ್ಡ್‌ ಪ್ಲಾನ್‌

ವಿ ಟೆಲಿಕಾಂ ಪ್ರಿಪೇಯ್ಡ್‌ ಪ್ಲಾನ್‌

ಇನ್ನು ವಿ ಟೆಲಿಕಾಂನ 149ರೂ.ಗಳ ಪ್ಲಾನ್‌ ಬೆಲೆ ಇದೀಗ 179ರೂ.ಗಳಿಗೆ ಏರಿಕೆಯಾಗಿದೆ. ಇನ್ನು ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌, 300 SMS ಹಾಗೂ 2GB Data ಪ್ರಯೋಜನ ದೊರೆಯಲಿದೆ. ಇದಲ್ಲದೆ 219ರೂ.ಬೆಲೆಯ ಪ್ಲಾನ್‌ ಇದೀಗ 269ರೂ.ಬೆಲೆ ಪಡೆದಿದೆ. ಇದರಲ್ಲಿ ಅನಿಯಮಿತ ಕರೆ, ದಿನಕ್ಕೆ 100 SMS ಹಾಗೂ ದೈನಂದಿನ 1GB ಡೇಟಾ ಪ್ರಯೋಜನ ದೊರೆಯಲಿದೆ. ಈ ಎಲ್ಲಾ ಪ್ಲಾನ್‌ಗಳು 28ದಿನಗಳ ಮಾನ್ಯತೆ ಪಡೆದಿವೆ.

ವಿ ಟೆಲಿಕಾಂ 249ರೂ. ಪ್ರಿಪೇಯ್ಡ್‌ ಪ್ಲಾನ್ ಬೆಲೆ ಇದೀಗ 299ರೂ.ಗೆ ಏರಿಕೆ

ವಿ ಟೆಲಿಕಾಂ 249ರೂ. ಪ್ರಿಪೇಯ್ಡ್‌ ಪ್ಲಾನ್ ಬೆಲೆ ಇದೀಗ 299ರೂ.ಗೆ ಏರಿಕೆ

ವಿ ಟೆಲಿಕಾಂ 249ರೂ. ಪ್ಲ್ಯಾನ್ ಬೆಲೆ ಇದೀಗ 299ರೂ.ಗೆ ಏರಿಕೆಯಾಗಿದೆ. ಈ ಪ್ರಿಪೇಯ್ಡ್‌ ಪ್ಲಾನ್‌ ಅಲ್ಪಾವಧಿಯ ಪ್ಲ್ಯಾನ್‌ ಆಗಿದ್ದು, ಒಟ್ಟು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಈ ಅವಧಿಯಲ್ಲಿ ಅನಿಯಮಿತ ಉಚಿತ ಕರೆಗಳ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ಪ್ರತಿದಿನ 1.5GB ಡೇಟಾ ಮತ್ತು ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಸೌಲಭ್ಯ ದೊರೆಯಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳ ಪ್ರಯೋಜನ ದೊರೆಯಲಿದೆ. ಇದರೊಂದಿಗೆ ವೀಕೆಂಡ್ ಡೇಟಾ ರೋಲ್‌ಓವರ್ ಸೌಲಭ್ಯ ಪಡೆದಿದೆ.

ಜಿಯೋ 129ರೂ. ಪ್ಲಾನ್ - ಹೊಸ ದರ 155ರೂ.

ಜಿಯೋ 129ರೂ. ಪ್ಲಾನ್ - ಹೊಸ ದರ 155ರೂ.

ಜಿಯೋದ ಈ ಪ್ಲ್ಯಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300 ಎಸ್‌ಎಮ್‌ಎಸ್‌ಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇನ್ನು ಈ ಪ್ಲಾನ್ ಒಟ್ಟು 28 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಜಿಯೋದ 149ರೂ. ಪ್ಲಾನ್ - ಹೊಸ ದರ 175ರೂ.

ಜಿಯೋದ 149ರೂ. ಪ್ಲಾನ್ - ಹೊಸ ದರ 175ರೂ.

ಜಿಯೋದ ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 24 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಪ್ರತಿದಿನ 1GB ಡಾಟಾ ಪ್ರಯೋಜನ ಸಿಗಲಿದೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್‌ಎಮ್ಎಸ್‌ಗಳು ಹಾಗೂ ಜಿಯೋ ಸೇರಿದಂತೆ ಇತರೆ ನೆಟ್‌ವರ್ಕ್‌ಗಳಿಗೆ ಪೂರ್ಣ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನ ಸಿಗಲಿದೆ.

Best Mobiles in India

English summary
If you are someone who used to recharge with prepaid plans under Rs 250, then check out the latest comparison of Jio, Vi and Airtel recharge plans in the same price range.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+