ನಿಮ್ಮ ಮೂಡ್‌ಗೆ ತಕ್ಕಂತೆ ಬೆಳಕು ಬೇಕಾ..? ಹಾಗಾದ್ರೆ ಇಲ್ಲಿವೆ ಬೆಸ್ಟ್‌ ಅಂದ್ರೆ ಬೆಸ್ಟ್‌ ಸ್ಮಾರ್ಟ್‌ ಬಲ್ಬ್‌ಗಳು..!

By Gizbot Bureau
|

ಕಳೆದ ಕೆಲ ವರ್ಷಗಳಿಂದ ನಮ್ಮ ಮನೆಗಳಲ್ಲಿ ಸ್ಮಾರ್ಟ್‌ ಬಲ್ಬ್‌ಗಳು ಸ್ಥಾನಪಡೆದಿವೆ. ಪ್ರತಿಯೊಂದು ಜನಪ್ರಿಯ ಎಲೆಕ್ಟ್ರಿಕ್ ಕಂಪನಿಯು ಅಗ್ಗದ ಸ್ಮಾರ್ಟ್‌ ಬಲ್ಬ್‌ಗಳನ್ನು ಬಿಡುಗಡೆ ಮಾಡಿವೆ. ಸ್ಮಾರ್ಟ್ ಬಲ್ಬ್‌ಗಳ ಬಳಕೆಯಿಂದ ಅನೇಕ ಅನುಕೂಲಗಳಿದ್ದು, ಪ್ರಮುಖವಾಗಿ ವಿದ್ಯುತ್‌ ಬಳಕೆಯನ್ನು ಕಡಿಮೆ ಮಾಡುತ್ತದೆ. ನೀವು ಸ್ಮಾರ್ಟ್ ಬಲ್ಬ್‌ಗಳನ್ನು ಖರೀದಿಸಲು ಬಯಸಿದರೆ, ಇಲ್ಲಿ ನಿಮಗಾಗಿಯೇ ಭಾರತದಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಸ್ಮಾರ್ಟ್‌ ಬಲ್ಬ್‌ಗಳನ್ನು ನಾವು ಪಟ್ಟಿ ಮಾಡಿದ್ದು, ಅಮೆಜಾನ್‌ನಲ್ಲಿ ಲಭ್ಯವಿವೆ.

ಜನಪ್ರಿಯ ಬ್ರಾಂಡ್‌

ಅತ್ಯಂತ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿರುವ ಫಿಲಿಪ್ಸ್‌ ಕಂಪನಿಯ ಸ್ಮಾರ್ಟ್‌ ಬಲ್ಬ್‌ಗಳು ಅಮೆಜಾನ್‌ನಲ್ಲಿ ಸುಲಭವಾಗಿ ಲಭ್ಯವಿವೆ. ಫಿಲಿಪ್ಸ್ ಹ್ಯೂ 9.5W E27 ಸ್ಮಾರ್ಟ್ ಬಲ್ಬ್, ಫಿಲಿಪ್ಸ್ ಹ್ಯೂ 10W E27 ಸ್ಮಾರ್ಟ್ ಬಲ್ಬ್, ಮತ್ತು ಫಿಲಿಪ್ಸ್ 1st Gen LED ಲ್ಯಾಂಪ್ ಹ್ಯೂ ಸ್ಟಾರ್ಟರ್ ಕಿಟ್ ಲೈಟಿಂಗ್‌ಗಳು ಕೆಲವು ಉದಾಹರಣೆಗಳಾಗಿದ್ದು, ಅಮೆಜಾನ್‌ನಲ್ಲಿ ಸುಲಭವಾಗಿ ಲಭ್ಯವಿವೆ.

ಸಾಮಾನ್ಯವಾಗಿ ರೂಟರ್‌ ಬ್ರ್ಯಾಂಡ್ ಆಗಿರರುವ ಟಿಪಿ-ಲಿಂಕ್‌ ಕೂಡ ಅನೇಕ ಸ್ಮಾರ್ಟ್‌ ಬಲ್ಬ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. TP-Link LB 100 ವೈ-ಫೈ ಸ್ಮಾರ್ಟ್‌ಲೈಟ್ 7W E27 ಮತ್ತು TP-Link LB 120 ವೈ-ಫೈ ಸ್ಮಾರ್ಟ್‌ಲೈಟ್ 10W E27 ಸ್ಮಾರ್ಟ್ ಬಲ್ಬ್‌ಗಳು ಅಮೆಜಾನ್‌ನಲ್ಲಿ ಲಭ್ಯವಿದ್ದು, ಅತ್ಯುತ್ತಮ ಆಯ್ಕೆಗಳಾಗಿವೆ. ಅಮೆಜಾನ್‌ನಲ್ಲಿ ಲಭ್ಯವಿರುವ ಹ್ಯಾಲೊನಿಕ್ಸ್ ವೈ-ಫೈ ಆಧಾರಿತ ಸ್ಮಾರ್ಟ್‌ ಎಲ್ಇಡಿ ಬಲ್ಬ್ 12 ಡಬ್ಲ್ಯೂ ಅನ್ನು ಕೂಡ ನೀವು ಆಯ್ಕೆಯಾಗಿ ಪರಿಗಣಿಸಬಹುದು.

ಇವುಗಳನ್ನು ಹೊರತುಪಡಿಸಿ, ಎಂಐ ಎಲ್ಇಡಿ ಸ್ಮಾರ್ಟ್ ಕಲರ್ ಬಲ್ಬ್ (ಬಿ 22), ಸಿಸ್ಕಾ ವೈ-ಫೈ ಆಧಾರಿತ ಸ್ಮಾರ್ಟ್ ಎಲ್ಇಡಿ ಬಲ್ಬ್ ಬಿ 22 7-ವ್ಯಾಟ್, ಕ್ರಾಂಪ್ಟನ್ ಇಮೆನ್ಸಾ ಸ್ಮಾರ್ಟ್ ವೈ-ಫೈ ಎಲ್ಇಡಿ ಬಲ್ಬ್ ಇ 27 9 ವ್ಯಾಟ್, ಮತ್ತು ವಿಪ್ರೋ ವೈಫೈ ಆಧಾರಿತ ಸ್ಮಾರ್ಟ್ ಎಲ್ಇಡಿ ಬಲ್ಬ್ ಬಿ 22 ಸ್ಮಾರ್ಟ್ ಬಲ್ಬ್‌ಗಳು ಇತರ ಜನಪ್ರಿಯ ಆಯ್ಕೆಗಳಾಗಿವೆ. ಈ ಎಲ್ಲಾ ಸ್ಮಾರ್ಟ್ ಬಲ್ಬ್‌ಗಳು ಅಮೆಜಾನ್‌ನಲ್ಲಿ ಲಭ್ಯವಿದ್ದು, ಸುಲಭವಾಗಿ ಖರೀದಿಸಬಹುದು.

ಫಿಲಿಪ್ಸ್ ಹ್ಯೂ 9.5-ವ್ಯಾಟ್‌ E27

ಫಿಲಿಪ್ಸ್ ಹ್ಯೂ 9.5-ವ್ಯಾಟ್‌ E27

ದರ: 2,249 ರೂ., ಅಮೆಜಾನ್‌ನಲ್ಲಿ ಲಭ್ಯವಿದೆ.

ಪ್ರಮುಖ ಫೀಚರ್ಸ್‌

* ಮಾದರಿ: ಹ್ಯೂ 9.5-ವ್ಯಾಟ್ E27 (ವೈಟ್ ಆಂಬಿಯನ್ಸ್)

* ವಿಧ: ಸ್ಮಾರ್ಟ್ ಬ್ರಿಡ್ಜ್‌

* ಬಲ್ಬ್ ಪ್ರಕಾರ: ಎಲ್ಇಡಿ

* ಬಲ್ಬ್‌ಗಳ ಸಂಖ್ಯೆ: 1

* ಮಾದರಿಗಳು: 16 ಮಿಲಿಯನ್ ಬಣ್ಣಗಳು

* ಬಣ್ಣ: ಬಿಳಿ

* ವ್ಯಾಟೇಜ್: 9.5 ವಾ

* ವಿದ್ಯುತ್ ಅವಶ್ಯಕತೆ: 120 ವೋಲ್ಟ್‌

* ವಿದ್ಯುತ್ ಮೂಲ: ಎಸಿ ಅಡಾಪ್ಟರ್

* ಬೆಂಬಲಿತ ಓಎಸ್: ಆಂಡ್ರಾಯ್ಡ್ 4.4 ಮತ್ತು ಐಒಎಸ್ 9 ಹಾಗೂ ಅದಕ್ಕಿಂತ ಮೇಲಿನ ಓಎಸ್‌ಗಳಿಗೆ ಬೆಂಬಲ

ಟಿಪಿ-ಲಿಂಕ್ LB100 ವೈ-ಫೈ ಸ್ಮಾರ್ಟ್‌ಲೈಟ್ 7W E27 ರಿಂದ B22 ಬೇಸ್ ಎಲ್ಇಡಿ ಬಲ್ಬ್ (ಆಫ್-ವೈಟ್)

ಟಿಪಿ-ಲಿಂಕ್ LB100 ವೈ-ಫೈ ಸ್ಮಾರ್ಟ್‌ಲೈಟ್ 7W E27 ರಿಂದ B22 ಬೇಸ್ ಎಲ್ಇಡಿ ಬಲ್ಬ್ (ಆಫ್-ವೈಟ್)

ದರ: 1,599 ರೂ., ಅಮೆಜಾನ್‌ನಲ್ಲಿ ಲಭ್ಯವಿದೆ.

ಪ್ರಮುಖ ಫೀಚರ್ಸ್‌

* ಹೆಚ್ಚುವರಿ ಹಾರ್ಡ್‌ವೇರ್ ಅಗತ್ಯವಿಲ್ಲ: ಹೆಚ್ಚುವರಿ ಹಾರ್ಡ್‌ವೇರ್ ಅಗತ್ಯವಿಲ್ಲದ ಅನುಕೂಲಕರ ಸ್ಮಾರ್ಟ್ ವೈ-ಫೈ ಬಲ್ಬ್

* ಎಲ್ಲಿಯಾದರೂ ಮತ್ತು ಯಾವಾಗಲಾದರೂ - ಉಚಿತ ಕಾಸಾ ಆಪ್‌ನೊಂದಿಗೆ ಎಲ್ಲಿಂದಲಾದರೂ ಸುಲಭವಾದ ಸೆಟಪ್ ಮತ್ತು ನಿಯಂತ್ರಣ

* ವಿದ್ಯುತ್‌ ಉಳಿತಾಯ - ಹೊಳಪು ಅಥವಾ ಗುಣಮಟ್ಟದಲ್ಲಿ ರಾಜಿಯಾಗದೇ ವಿದ್ಯುತ್‌ ಉಳಿತಾಯ

* ಡಿಮ್ಮೆಬಲ್ ಲೈಟ್ - ಕಸ್ಟಮೈಸ್ ಮಾಡಿದ ಲೈಟಿಂಗ್‌ಗಾಗಿ ಬೆಳಕನ್ನು ಮಬ್ಬಾಗಿಸಬಹುದು, ಹೊಳಪನ್ನು ಹೆಚ್ಚಿಸಬಹುದು.

* ಹೊಂದಾಣಿಕೆ - ಆಂಡ್ರಾಯ್ಡ್, ಐಒಎಸ್ ಮತ್ತು ಅಮೆಜಾನ್ ಅಲೆಕ್ಸಾ ಜೊತೆ ಹೊಂದಿಕೊಳ್ಳುತ್ತದೆ.

ಟಿಪಿ-ಲಿಂಕ್ LB120 ವೈ-ಫೈ ಸ್ಮಾರ್ಟ್ಲೈಟ್ 10W E27 ರಿಂದ B22 ಬೇಸ್ ಎಲ್ಇಡಿ ಬಲ್ಬ್

ಟಿಪಿ-ಲಿಂಕ್ LB120 ವೈ-ಫೈ ಸ್ಮಾರ್ಟ್ಲೈಟ್ 10W E27 ರಿಂದ B22 ಬೇಸ್ ಎಲ್ಇಡಿ ಬಲ್ಬ್

ದರ: 1,599 ರೂ., ಅಮೆಜಾನ್‌ನಲ್ಲಿ ಲಭ್ಯವಿದೆ.

ಪ್ರಮುಖ ಫೀಚರ್ಸ್‌

* ದೂರದಿಂದಲೇ ನಿರ್ವಹಿಸಿ - ಉಚಿತ ಕಾಸಾ ಅಪ್ಲಿಕೇಶನ್ (ಐಒಎಸ್, ಆಂಡ್ರಾಯ್ಡ್) ಬಳಸಿ ನಿಮ್ಮ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್‌ನೊಂದಿಗೆ ಎಲ್ಲಿಂದಲಾದರೂ ಬಲ್ಬ್‌ಗಳನ್ನು ನಿಯಂತ್ರಿಸಬಹುದು.

* ಫೈನ್-ಟ್ಯೂನ್ ಲೈಟಿಂಗ್ - ಮಂದ ಹೊಳಪು ಮತ್ತು ಪ್ರಕಾಶಮಾನವಾದ ಬೆಳಕು (2700 k ಯಿಂದ 6500 k ವರೆಗೆ)

* ಧ್ವನಿ ನಿಯಂತ್ರಣ - ಅಮೆಜಾನ್ ಅಲೆಕ್ಸಾದೊಂದಿಗೆ ಜೋಡಿಸಿ, ಧ್ವನಿ ಮೂಲಕ ಬಲ್ಬ್‌ನ್ನು ನಿಯಂತ್ರಿಸಬಹುದು.

* ಸರ್ಕಾಡಿಯನ್ ಮೋಡ್ - ದಿನದ ಸಮಯಕ್ಕೆ ತಕ್ಕಂತೆ ಬೆಳಕನ್ನು ಸ್ವಯಂಚಾಲಿತವಾಗಿ ಹೊಂದಿಸುತ್ತದೆ

* ವಿದ್ಯುತ್‌ ಬಳಕೆಯ ಮೇಲೆ ನಿಗಾ: ಬಲ್ಬ್‌ ಎಷ್ಟು ವಿದ್ಯುತ್‌ ಬಳಸುತ್ತದೆ ಎಂಬುದನ್ನು ರಿಯಲ್‌-ಟೈಮ್‌ ಟ್ರ್ಯಾಕ್‌ ಮಾಡಬಹುದು.

* ವಿದ್ಯುತ್‌ ಉಳಿಸಿ: 60W ಪ್ರಕಾಶಮಾನ ಬಲ್ಬ್‌ಗೆ ಹೋಲಿಸಿದರೆ ಹೊಳಪು ಅಥವಾ ಗುಣಮಟ್ಟದ ರಾಜಿಯಿಲ್ಲದೇ ವಿದ್ಯುತ್‌ನ್ನು ಶೇ.80ರಷ್ಟು ಉಳಿಸಬಹುದು.

* ಯಾವುದೇ ಹಬ್ ಅಗತ್ಯವಿಲ್ಲ - ಮನೆಯಲ್ಲಿ ನಿಮ್ಮ ವೈ-ಫೈಗೆ ಬಲ್ಬ್ ಅನ್ನು ಸಂಪರ್ಕಿಸಿದರೆ ಸಾಕು.

ಫಿಲಿಪ್ಸ್ ಹ್ಯೂ 10W E27 ಸ್ಮಾರ್ಟ್ ಬಲ್ಬ್

ಫಿಲಿಪ್ಸ್ ಹ್ಯೂ 10W E27 ಸ್ಮಾರ್ಟ್ ಬಲ್ಬ್

ದರ: 3,800 ರೂ., ಅಮೆಜಾನ್‌ನಲ್ಲಿ ಲಭ್ಯವಿದೆ.

ಪ್ರಮುಖ ಫೀಚರ್ಸ್‌

* ಹೋಮ್ ಅವೇ ಕಂಟ್ರೋಲ್

* ಫಿಲಿಪ್ಸ್ ಹ್ಯೂ ಬ್ರಿಡ್ಜ್‌ ಸೇರಿಸಲಾಗಿದೆ

* ಮೂಡ್ ಆಧಾರಿತ ಲೈಟಿಂಗ್, 16 ಮಿಲಿಯನ್ ಬಣ್ಣಗಳು

* ಗೂಗಲ್ ಅಸಿಸ್ಟೆಂಟ್, ಅಲೆಕ್ಸಾ ಮತ್ತು ಆಪಲ್ ಹೋಮ್‌ಕಿಟ್ ಹೊಂದಾಣಿಕೆಯೊಂದಿಗೆ

* ಅಂತ್ಯವಿಲ್ಲದ IFTTT ಸಾಧ್ಯತೆಗಳು, ಎಸಿ ಅಡಾಪ್ಟರ್

* ವಿಧ: ಎಲ್ಇಡಿ

ಫಿಲಿಪ್ಸ್ 1st Geb ಎಲ್ಇಡಿ ಲ್ಯಾಂಪ್ ಹ್ಯೂ ಸ್ಟಾರ್ಟರ್ ಕಿಟ್ ವೈಯಕ್ತಿಕ ವೈರ್‌ಲೆಸ್ ಲೈಟಿಂಗ್

ಫಿಲಿಪ್ಸ್ 1st Geb ಎಲ್ಇಡಿ ಲ್ಯಾಂಪ್ ಹ್ಯೂ ಸ್ಟಾರ್ಟರ್ ಕಿಟ್ ವೈಯಕ್ತಿಕ ವೈರ್‌ಲೆಸ್ ಲೈಟಿಂಗ್

ದರ: 9,999 ರೂ., ಅಮೆಜಾನ್‌ನಲ್ಲಿ ಲಭ್ಯವಿದೆ

ಪ್ರಮುಖ ಫೀಚರ್ಸ್‌

* ಶೇಡ್ಸ್ ಆಫ್ ವೈಟ್

* ಬೆಂಬಲಿತ ಓಎಸ್: ಆಂಡ್ರಾಯ್ಡ್ 2. 3 ಹಾಗೂ ಐಒಎಸ್ 8.0 ಮತ್ತು ಅದಕ್ಕಿಂತ ಮೇಲಿನ ಓಎಸ್‌ ಬೆಂಬಲಿತ

* ಬೆಂಬಲಿತ ಸಾಧನಗಳು: ಐಫೋನ್ (4 ಎಸ್, 5, 5S, 6, 6 ಪ್ಲಸ್), ಐಪ್ಯಾಡ್ (2nd, 3rd, 4th ತಲೆಮಾರಿನ), ಐಪ್ಯಾಡ್ ಏರ್ (1, 2), ಐಪ್ಯಾಡ್ ಮಿನಿ (1, 2, 3), ಐಪಾಡ್ ಟಚ್ (5th ಜನರೇಷನ್), ಗ್ಯಾಲಕ್ಸಿ S2, S3, S4, S5, ಗೂಗಲ್ ನೆಕ್ಸಸ್ 5, ಮೊಟೊರೊಲಾ ನೆಕ್ಸಸ್ 6, ಗೂಗಲ್ ನೆಕ್ಸಸ್ 7, ಒನ್‌ಪ್ಲಸ್ ಒನ್, ಎಚ್‌ಟಿಸಿ ಒನ್, ಸೋನಿ ಎಕ್ಸ್‌ಪೀರಿಯಾ Z3, ಹೋಮ್‌ಕಿಟ್ ಕೇವಲ ಐಒಎಸ್ 9.0ಗೆ ಹೊಂದಿಕೊಳ್ಳುತ್ತದೆ.

* ಬ್ರಿಡ್ಜ್‌ ವ್ಯಾಸ: 100 ಮಿಮೀ, ಡೈಮೆನ್ಶನ್ಸ್‌: 88 x 88 x 26 ಮಿಮೀ

ಸಿಸ್ಕಾ ವೈ-ಫೈ ಸಕ್ರಿಯಗೊಳಿಸಿದ ಸ್ಮಾರ್ಟ್ ಎಲ್ಇಡಿ ಬಲ್ಬ್ B22 7-ವ್ಯಾಟ್

ಸಿಸ್ಕಾ ವೈ-ಫೈ ಸಕ್ರಿಯಗೊಳಿಸಿದ ಸ್ಮಾರ್ಟ್ ಎಲ್ಇಡಿ ಬಲ್ಬ್ B22 7-ವ್ಯಾಟ್

ದರ: 999 ರೂ., ಅಮೆಜಾನ್‌ನಲ್ಲಿ ಲಭ್ಯವಿದೆ

ಪ್ರಮುಖ ಫೀಚರ್ಸ್‌

* ಸ್ಮಾರ್ಟ್ ಕಲರ್ ಲೈಟ್ - ವೈಫೈ ಬಲ್ಬ್

* 3 ಮಿಲಿಯನ್ ಬಣ್ಣಗಳು

* ಬಹು ಬಳಕೆದಾರರು ಬಳಸಬಹುದು

* ಧ್ವನಿ ನಿಯಂತ್ರಣ, ದೈನಂದಿನ ವೇಳಾಪಟ್ಟಿ ಹೊಂದಿಸಬಹುದು

* Google ಅಸಿಸ್ಟಂಟ್‌ನೊಂದಿಗೆ ಹೊಂದಾಣಿಕೆ

* ಸ್ಮಾರ್ಟ್ ಬಲ್ಬ್, ಎಸಿ ಅಡಾಪ್ಟರ್

* ವಿಧ: ಎಲ್ಇಡಿ

Best Mobiles in India

English summary
If you're looking to buy new smart bulbs, we've shortlisted some of the best that are available in India. Here are some of the best smart bulbs available on Amazon to buy in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X