Home
ಸುದ್ದಿಜಾಲ

ಹೃದಯಾಘಾತದ ಮುನ್ಸೂಚನೆ ನೀಡಲಿರುವ ಬೆಸ್ಟ್‌ ಸ್ಮಾರ್ಟ್‌ ಗ್ಯಾಜೆಟ್ಸ್‌ಗಳ ವಿವರ ಇಲ್ಲಿದೆ!

ಇತ್ತೀಚಿನ ದಿನಗಳಲ್ಲಿ ವಯಸ್ಸಲ್ಲದ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಸಾವನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ 30 ರಿಂದ 40 ವರ್ಷ ವಯಸ್ಸಿನೊಳಗಿನ ಯುವಜನತೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಇದೀಗ ನಟ ವಿಜಯ ರಾಘವೇಂದ್ರ ಅವರ ದರ್ಮಪತ್ನಿ ಸ್ಪಂದನಾ ಕೂಡ ಹಾರ್ಟ್‌ ಅಟ್ಯಾಕ್‌ಗೆ ಬಲಿಯಾಗಿದ್ದಾರೆ.

ಹೌದು, ಇಂದಿನ ದಿನಗಳಲ್ಲಿ ಹೃದಯದ ಆರೋಗ್ಯದ ಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ಕಷ್ಟವಾಗಿದೆ. ವಯಸ್ಸಲ್ಲದ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಬೇಸರದ ಸಂಗತಿ. ಹೃದಯದ ಆರೋಗ್ಯ ಮಟ್ಟದ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಟೆಕ್‌ ವಲಯವೂ ಹೊಸ ಪ್ರಯೋಗಗಳಿಗೆ ಒಗ್ಗಿಕೊಂಡಿದೆ. ಅದರ ಪರಿಣಾಮ ನಮ್ಮ ಹೃದಯದ ಆರೋಗ್ಯ ಮಟ್ಟವನ್ನು ಟ್ರ್ಯಾಕ್‌ ಮಾಡಬಲ್ಲ ಅನೇಕ ಡಿವೈಸ್‌ಗಳಿಂದು ಮಾರುಕಟ್ಟೆಯಲ್ಲಿವೆ. ಹಾಗಾದ್ರೆ ಹೃದಯ ಆರೋಗ್ಯವನ್ನು ಮಾನಿಟರ್‌ ಮಾಡಬಲ್ಲ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಹೃದಯಾಘಾತದ ಮುನ್ಸೂಚನೆ ನೀಡಲಿರುವ ಸ್ಮಾರ್ಟ್‌ ಗ್ಯಾಜೆಟ್ಸ್‌ ವಿವರ ಇಲ್ಲಿದೆ

ಗಾರ್ಮಿನ್ ಫೋರ್‌ರನ್ನರ್ 945
ನಿಮ್ಮ ಹೃದಯದ ಆರೋಗ್ಯದ ಮಟ್ಟವನ್ನು ಅಳೆಯುವ ಬೆಸ್ಟ್‌ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಗಾರ್ಮಿನ್ ಫೋರ್‌ರನ್ನರ್ 945 ಕೂಡ ಒಂದಾಗಿದೆ. ಇದು ಪ್ರೀಮಿಯಂ ಜಿಪಿಎಸ್ ಸ್ಮಾರ್ಟ್ ವಾಚ್ ಆಗಿದ್ದು, ಕ್ರೀಡಾಪಟುಗಳನ್ನು ಗುರಿಯಾಗಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಇನ್ನು ಸ್ಮಾರ್ಟ್‌ವಾಚ್‌ ಮಣಿಕಟ್ಟಿನ-ಆಧಾರಿತ ಹೃದಯ ಬಡಿತದ ಮಾನಿಟರ್‌ ಮತ್ತು ಬ್ಯಾರೋಮೆಟ್ರಿಕ್ ಆಲ್ಟಿಮೀಟರ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಿಂದ ನಿಮ್ಮ ಹೃದಯದ ಆರೋಗ್ಯ ಮಟ್ಟವನ್ನು ಆಗಾಗ ಪರೀಕ್ಷಿಸಿಕೊಳ್ಳುವುದಕ್ಕೆ ಅವಕಾಶ ಸಿಗಲಿದೆ.

ಫಿಟ್‌ಬಿಟ್ ಚಾರ್ಜ್ 4
ಜನಪ್ರಿಯ ಹೃದಯ ಬಡಿತ ಮಾನಿಟರ್‌ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಫಿಟ್‌ಬಿಟ್ ಚಾರ್ಜ್ 4 ಕೂಡ ಒಂದಾಗಿದೆ. ಈ ಸ್ಮಾರ್ಟ್‌ವಾಚ್‌ ಜನಪ್ರಿಯ ಹೃದಯ ಅಪ್ಲಿಕೇಶನ್ ಮತ್ತು ಫಿಟ್‌ನೆಸ್ ಟ್ರ್ಯಾಕರ್ ಅನ್ನು ಒಳಗೊಂಡಿದೆ. ಇದು ಸ್ಮಾರ್ಟ್‌ವಾಚ್‌ ಪ್ರಿಯರ ಆಕ್ಟಿವಿಟಿ ಮತ್ತು ಫಿಟ್‌ನೆಸ್ ಲೆವೆಲ್‌ ಟ್ರ್ಯಾಕ್‌ ಮಾಡುವವರಿಗೆ ಇದು ಸೂಕ್ತವಾಗಿದೆ. ಈ ಸ್ಮಾರ್ಟ್‌ವಾಚ್‌ GPS ಟ್ರ್ಯಾಕಿಂಗ್, ಹೃದಯ ಬಡಿತ ಮಾನಿಟರಿಂಗ್, ಸ್ಲಿಪ್‌ ಟ್ರ್ಯಾಕಿಂಗ್ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು ನಿರಂತರ ಹೃದಯ ಬಡಿತ ಮಾನಿಟರಿಂಗ್ ಅನ್ನು ಹೊಂದಿದ್ದು, ಬಳಕೆದಾರರು ದಿನವಿಡೀ ಹೃದಯ ಬಡಿತವನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡಲಿದೆ.

ಪೋಲಾರ್ ವಾಂಟೇಜ್ V2
ಪೋಲಾರ್ ವಾಂಟೇಜ್ V2 ಸ್ಮಾರ್ಟ್‌ವಾಚ್‌ ಹೈ-ಲೆವೆಲ್‌ ಮಲ್ಟಿಸ್ಪೋರ್ಟ್ ವಾಚ್ ಆಗಿದೆ. ಈ ಸ್ಮಾರ್ಟ್‌ವಾಚ್‌ ತಮ್ಮ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಲು ಅವಕಾಶ ನೀಡಲಿದೆ. ಇದು GPS, ಮಣಿಕಟ್ಟಿನ-ಆಧಾರಿತ ಹೃದಯ ಬಡಿತ ಮಾನಿಟರಿಂಗ್‌ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ಮಣಿಕಟ್ಟಿನ-ಆಧಾರಿತ ಹೃದಯ ಬಡಿತವನ್ನು ಟ್ರ್ಯಾಕ್‌ ಮಾಡಲು ಸಾದ್ಯವಾಗಲಿದೆ. ಇದು ಕೂಡ ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಬೆಸ್ಟ್‌ ಡಿವೈಸ್‌ ಎನಿಸಿಕೊಂಡಿದೆ.

ಹೃದಯಾಘಾತದ ಮುನ್ಸೂಚನೆ ನೀಡಲಿರುವ ಸ್ಮಾರ್ಟ್‌ ಗ್ಯಾಜೆಟ್ಸ್‌ ವಿವರ ಇಲ್ಲಿದೆ

ಆಪಲ್ ವಾಚ್ ಸರಣಿ 6
ಆಪಲ್ ವಾಚ್ ಸರಣಿ 6 ಕೂಡ ನಿಮ್ಮ ಹೃದಯದ ಆರೋಗ್ಯ ಮಟ್ಟವನ್ನು ಅಳೆಯಬಲ್ಲ ಬೆಸ್ಟ್‌ ಡಿವೈಸ್‌ಗಳಲ್ಲಿ ಒಂದೆನಿಸಿಕೊಂಡಿದೆ. ಇದಯ ಹೈ ಲೆವೆಲ್‌ ಫೀಚರ್ಸ್‌ಗಳನ್ನು ಒಳಗೊಂಡ ಸ್ಮಾರ್ಟ್‌ವಾಚ್‌ ಎನಿಸಿಕೊಂಡಿದೆ. ಇದು ಹೃದಯ ಬಡಿತದ ಮೇಲ್ವಿಚಾರಣೆ, ಫಿಟ್‌ನೆಸ್ ಟ್ರ್ಯಾಕಿಂಗ್ ಮತ್ತು ಸ್ಮಾರ್ಟ್‌ಫೋನ್ ಏಕೀಕರಣ ಸೇರಿದಂತೆ ಅನೇಕ ಫೀಚರ್ಸ್‌ಗಳನ್ನು ನೀಡಲಿದೆ. ಇದಲ್ಲದೆ ರಕ್ತದಲ್ಲಿನ ಆಮ್ಲಜನಕದ ಶುದ್ಧತ್ವ ಮಟ್ಟವನ್ನು ಅಳೆಯಲಿದೆ. ಜೊತೆಗೆ ದಿನವಿಡೀ ರಿಯಲ್‌-ಟೈಂ ಹೃದಯ ಬಡಿತ ಡೇಟಾವನ್ನು ಒದಗಿಸುವ ಸಾಮರ್ಥ್ಯವನ್ನು ಪಡೆದಿದೆ.

ಗಾರ್ಮಿನ್ ವಿವೋಸ್ಮಾರ್ಟ್ 4
ಗಾರ್ಮಿನ್ ವಿವೋಸ್ಮಾರ್ಟ್ 4 ಸ್ಮಾರ್ಟ್‌ವಾಚ್‌ ಮಿಡ್‌ರೇಂಜ್‌ ಫಿಟ್‌ನೆಸ್ ಟ್ರ್ಯಾಕರ್ ಆಗಿದೆ. ಇದು ಹೃದಯ ಬಡಿತದ ಮೇಲ್ವಿಚಾರಣೆ, ಫಿಟ್‌ನೆಸ್ ಟ್ರ್ಯಾಕಿಂಗ್ ಮತ್ತು ನಿದ್ರೆ ಟ್ರ್ಯಾಕಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಮಣಿಕಟ್ಟಿನ-ಆಧಾರಿತ ಹೃದಯ ಬಡಿತ ಮಾನಿಟರ್ ಅಪ್ಲಿಕೇಶನ್ ಅನ್ನು ಒಳಗೊಂಡಿದೆ. ಆದರಿಂದ ನಿಮ್ಮ ಹೃದಯ ಬಡಿತದ ಡೇಟಾವನ್ನು ನೀವು ಪಡೆದುಕೊಳ್ಳಬಹುದಾಗಿದೆ. ಇದರ ಪರಿಣಾಮ ನಿಮ್ಮ ಹೃದಯದ ಆರೋಗ್ಯ ಮಟ್ಟ ಹೇಗಿದೆ? ಹೃದಯಾಘಾತದ ಮುನ್ಸೂಚನೆ ಸೇರಿದಂತೆ ಹಲವು ಆರೋಗ್ಯಕರ ಮಾಹಿತಿ ಲಭ್ಯವಾಗಲಿದೆ.

Best Mobiles in India

English summary
Best smart gadgets that will predict heart attack; Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+