ಅಮೆಜಾನ್ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿಗಳ ಮೇಲೆ ಭರ್ಜರಿ ಡಿಸ್ಕೌಂಟ್!
ಜನಪ್ರಿಯ ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್ ಬಹುನಿರೀಕ್ಷಿತ ಅಮೆಜಾನ್ ಗ್ರೇಟ್ ಫ್ರೀಡಂ ಇಂಡಿಯನ್ ಫೆಸ್ಟಿವಲ್ ಅನ್ನು ಆಯೋಜಿಸಿದೆ. ಇಂದಿನಿಂದ ಶುರುವಾಗಿರುವ ಈ ಸೇಲ್ ಇಂದಿನಿಂದ ಐದು ದಿನಗಳ ಕಾಲ ನಡೆಯಲಿದೆ. ಇನ್ನು ಈ ವಿಶೇಷ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಸ್ಮಾರ್ಟ್‌ಟಿವಿ ಸೇರಿದಂತೆ ಎಲೆಕ್ಟ್ರಾನಿಕ್ಸ್ ಪ್ರಾಡಕ್ಟ್‌ಗಳ ಮೇಲೂ ಭರ್ಜರಿ ಡಿಸ್ಕೌಂಟ್ ನೀಡಲಿದೆ. ಅದರಲ್ಲೂ ಸ್ಮಾರ್ಟ್‌ಟಿವಿಗಳ ವ್ಯವಹಾರದಲ್ಲಿ 37% ವರೆಗೆ ರಿಯಾಯಿತಿ ದೊರೆಯಲಿದೆ.

ಹೌದು, ಅಮೆಜಾನ್ ಗ್ರೇಟ್ ಫ್ರೀಡಂ ಇಂಡಿಯನ್ ಫೆಸ್ಟಿವಲ್ ಸೇಲ್ ಇಂದಿನಿಂದ ಶುರುವಾಗಿದೆ. ಇಂದಿನಿಂದ ಸತತ ಐದು ದಿನಗಳವರೆಗೆ ಈ ವಿಶೇಷ ರಿಯಾಯಿತಿ ಸೇಲ್ ನಡೆಯಲಿದೆ. ಈ ಸೇಲ್‌ನಲ್ಲಿ ಪ್ರಮುಖವಾಗಿ ಸ್ಮಾರ್ಟ್‌ಟಿವಿಗಳ ಮೇಲೆ ಭರ್ಜರಿ ಆಫರ್ ನೀಡಿದೆ. ಡಿಸ್ಕೌಂಟ್ ದರದಲ್ಲಿ ಸ್ಮಾರ್ಟ್‌ಟಿವಿ ಖರೀದಿಸುವವರಿಗೆ ಇದು ಉತ್ತಮ ಸಮಯವಾಗಿದೆ. ಹಾಗಾದ್ರೆ ಅಮೆಜಾನ್ ಗ್ರೇಟ್ ಫ್ರೀಡಂ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳಿಗೆ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಮಿ 108 cm 4K ಅಲ್ಟ್ರಾ ಹೆಚ್‌ಡಿ ಆಂಡ್ರಾಯ್ಡ್ ಸ್ಮಾರ್ಟ್ LED TV
ಮಿ 43 ಇಂಚು 4K ಅಲ್ಟ್ರಾ ಹೆಚ್‌ಡಿ ಆಂಡ್ರಾಯ್ಡ್ ಸ್ಮಾರ್ಟ್ ಎಲ್ಇಡಿ ಟಿವಿ 29,999 ರೂ ಮೂಲಬೆಲೆ ಹೊಂದಿದೆ. ಇದು ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ 28,999 ರೂ ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 3840x2160 ಸ್ಕ್ರೀನ್ ರೆಸಲ್ಯೂಶನ್ ಹೊಂದಿದ್ದು, 60 ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಇದು 2 ಯುಎಸ್‌ಬಿ ಪೋರ್ಟ್‌ಗಳು ಮತ್ತು 3.5mm ಆಡಿಯೋ ಜ್ಯಾಕ್ ಅನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಯುಟ್ಯೂಬ್, ಡಿಸ್ನಿ+ ಹಾಟ್‌ಸ್ಟಾರ್‌ನಂತಹ ಇಂಟರ್‌ನೆಟ್ ಸೇವೆಗಳನ್ನು ಬೆಂಬಲಿಸಲಿದೆ.

ಸೋನಿ ಬ್ರಾವಿಯಾ 139cm 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ LED Google TV KD-55X80J
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಟಿವಿಗಳಲ್ಲಿ ಸೋನಿ ಬ್ರಾವಿಯಾ 139cm 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಟಿವಿ ಕೂಡ ಒಂದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 1,09,900 ರೂ ಮೂಲ ಬೆಲೆ ಹೊಂದಿದೆ. ಆದರೆ ಅಮೆಜಾನ್ ಸೇಲ್‌ನಲ್ಲಿ ಈ ಸ್ಮಾರ್ಟ್‌ಟಿವಿ ಮೇಲೆ 22% ರಿಯಾಯಿತಿ ನೀಡಲಾಗಿದ್ದು, ಇದನ್ನು ಕೇವಲ 85,490 ರೂ,ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 4K ಅಲ್ಟ್ರಾ HD ರೆಸಲ್ಯೂಶನ್ ಹೊಂದಿದ್ದು, 60 ಹರ್ಟ್ಜ್ ರಿಫ್ರೆಶ್ ರೇಟ್ ಹೊಂದಿದೆ. ಇದು ಗೇಮಿಂಗ್ ಕನ್ಸೋಲ್ ಅನ್ನು ಕನೆಕ್ಟ್ ಮಾಡಲು 4HDMI ಪೋರ್ಟ್‌ಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, HDR ಗೇಮಿಂಗ್, ಅನ್ನು ಬೆಂಬಲಿಸಲಿದೆ.
LG 109.2cm 4K ಅಲ್ಟ್ರಾ HD ಸ್ಮಾರ್ಟ್ LED TV 43UP7500PTZ
ಅಮೆಜಾನ್ ಸೇಲ್‌ನಲ್ಲಿ LG 109.2cm 4K ಅಲ್ಟ್ರಾ HD ಸ್ಮಾರ್ಟ್ LED TV 43UP7500PTZ ಮೇಲೆ 37% ರಿಯಾಯಿತಿಯನ್ನು ನೀಡಲಾಗ್ತಿದೆ. 59,990 ರೂ ಮೂಲ ಬೆಲೆಯ ಸ್ಮಾರ್ಟ್‌ಟಿವಿ ರಿಯಾಯಿತಿ ದರದಲ್ಲಿ 37,999 ರೂ ಗಳಿಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಟಿವಿ 43 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 4K ಅಲ್ಟ್ರಾ HD ರೆಸಲ್ಯೂಶನ್, 60 ಹರ್ಟ್ಜ್ ರಿಫ್ರೆಶ್ ರೇಟ್ ಪಡೆದುಕೊಂಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜೀ5, ಇರೋಸ್‌ನೌ, ವೂಟ್, ಸೋನಿಲೈವ್, ಅನ್ನು ಬೆಂಬಲಿಸಲಿದೆ.

ಒನಿಡಾ 107 cm ಫುಲ್ ಹೆಚ್‌ಡಿ ಸ್ಮಾರ್ಟ್ ಐಪಿಎಸ್ ಎಲ್ಇಡಿ ಫೈರ್ ಟಿವಿ 42FIF
ಸ್ಮಾರ್ಟ್‌ಟಿವಿ ವಲಯದಲ್ಲಿ ಒನಿಡಾ ಸಂಸ್ಥೆ ಕೂಡ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇದೇ ಕಾರಣಕ್ಕೆ ಅಮೆಜಾನ್ ಸೇಲ್‌ನಲ್ಲಿ ಒನಿಡಾ ಸ್ಮಾರ್ಟ್‌ಟಿವಿಗಳ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗ್ತಿದೆ. ಸದ್ಯ ಅಮೆಜಾನ್ ಸೇಲ್‌ನಲ್ಲಿ 34,990 ರೂ ಮೂಲಬೆಲೆಯ ಒನಿಡಾ ಐಪಿಎಸ್ ಎಲ್ಇಡಿ ಫೈರ್ ಟಿವಿ 42FIF ರಿಯಾಯಿತಿ ದರದಲ್ಲಿ 26,999 ರೂ,ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 42 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಜೀ5, ಇರೋಸ್‌ನೌ, ವೂಟ್, ಸೋನಿಲೈವ್ ನಂತಹ ಇಂಟರ್‌ನೆಟ್ ಸೇವೆಗಳನ್ನು ಬೆಂಬಲಿಸಲಿದೆ.


Click it and Unblock the Notifications








