ಬೇಸರ ಕಳೆಯಲು ಆಸರೆ ಆಗುವ ಟಾಪ್‌ ಗೇಮ್ಸ್‌!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಕೈನಲ್ಲಿ ಇಲ್ಲದೆ ಪ್ರಯಾಣ ಹೋಗುವುದಕ್ಕೆ ಆಗೋದೆ ಇಲ್ಲ. ನಿಮ್ಮ ಪ್ರಯಾಣದ ಹಾದಿಯಲ್ಲಿ ಆಗಾಗ ಸ್ಮಾರ್ಟ್‌ಫೋನ್‌ ಪರದೆ ಮೇಲೆ ಕೈ ಆಡಿಸದೆ ಇರದಿದ್ರೆ ಸಮಾಧಾನ ಆಗೋದೆ ಇಲ್ಲ. ಕೆಲವರು ಇಯರ್‌ಫೋನ್‌ ಹಾಕ್ಕೊಂಡ್‌ಮ್ಯೂಸಿಕ್‌ ಕೇಳುತ್ತಾ ಪ್ರಯಾಣವನ್ನ ಮಾಡೋದಕ್ಕೆ ಇಷ್ಟಪಡುತ್ತಾರೆ. ಸ್ಮಾರ್ಟ್‌ಫೋನ್‌ನಲ್ಲಿ ತಮಗೆ ಬೇಕಾದ ಮಾಹಿತಿಯನ್ನ ಕಲೆಹಾಕುತ್ತಾ ಹೋಗುತ್ತಾರೆ. ಇನ್ನು ಕೆಲವರು ಗೇಮಿಂಗ್‌ ಆಡುತ್ತಾ ಪ್ರಯಾಣದ ಅವಧಿಯನ್ನ ಮುಗಿಸುತ್ತಾರೆ.

ಹೌದು

ಹೌದು, ಪ್ರಸ್ತುತ ಜಮಾನದಲ್ಲಿ ಪ್ರಯಾಣದ ಅವಧಿಯನ್ನ ಸುಖಾಸುಮ್ಮನೇ ಕಳೆಯಲು ಆಗೋದೆ ಇಲ್ಲ. ಇದಕ್ಕಾಗಿ ಎಲ್ಲರೂ ತಮ್ಮ ಕೈನಲ್ಲಿರೋ ಸ್ಮಾರ್ಟ್‌ಫೋನ್‌ಗಳತ್ತ ಕೈ ಚಾಚಿ ತಮಗಿಷ್ಟದ ಕೆಲಸ ಮಾಡುತ್ತಿರುತ್ತಾರೆ. ಸದ್ಯ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕಡಿಮೆ ಎಲ್ಲರೂ ಪ್ರಯಾಣದ ಸಂಧರ್ಭದಲ್ಲಿ ಹೆಚ್ಚಿನ ಒಲವನ್ನ ಮೊಬೈಲ್‌ ಗೇಮಿಂಗ್‌ ಕಡೆಗೆ ಕೊಡುತ್ತಾರೆ. ನಿಮ್ಮ ಸಮಯವನ್ನ ಕಳೆಯುತ್ತಾ, ಸಂತೋಷವಾಗಿ,ಯಾವುದೇ ಬೇಸರವಿಲ್ಲದಂತೆ ಪ್ರಯಾಣಿಸಲು ಗೇಮಿಂಗ್‌ ಉತ್ತಮ ಆಯ್ಕೆಯಾಗಿದೆ. ಸದ್ಯ ಈಗಾಗ್ಲೆ ಹಲವಾರು ರೀತಿಯ ಗೇಮಿಂಗ್‌ ಆಪ್ಲಿಕೇಶನ್‌ಗಳು ಪ್ಲೆಸ್ಟೋರ್‌ನಲ್ಲಿ ಲಭ್ಯವಿದ್ದು, ಅವುಗಳಲ್ಲಿ ಅತ್ಯುತ್ತಮವಾದ ಗೇಮಿಂಗ್‌ ಅಪ್ಲಿಕೇಶನ್‌ಗಳ ಬಗ್ಗೆ ತಿಳಿಸಿಕೊಡ್ತೀವಿ ಈ ಲೇಖನವನ್ನ ಓದಿ.

ಟು ಡಾಟ್ಸ್‌

ಟು ಡಾಟ್ಸ್‌

ಸದ್ಯ ಲಭ್ಯವಿರುವ ಅತ್ಯುತ್ತಮ ಗೇಮಿಂಗ್‌ ಆಪ್ಲಿಕೇಶನ್‌ಗಳಲ್ಲಿ ಟು ಡಾಟ್ಸ್‌ ಆಪ್ಲಿಕೇಶನ್‌ ಕೂಡ ಒಂದಾಗಿದೆ. ಈ ಗೇಮಿಂಗ್‌ ನಲ್ಲಿ ಒಂದೇ ಮಾದರಿಯ ಚುಕ್ಕೆಗಳನ್ನು ಕಣ್ಮರೆ ಮಾಡುತ್ತಾ ಸಾಗುವುದು ಈ ಆಟದ ವಿಶೆಷತೆ ಆಗಿದೆ. ಪ್ರತಿ ಹಂತದಲ್ಲೂ ಒಂದೇ ಬಣ್ಣದ ಎಲ್ಲಾ ಚುಕ್ಕೆಗಳನ್ನು ತೆರವುಗೊಳಿಸಲು ಚೌಕಗಳನ್ನು ರೂಪಿಸಲಾಗಿರುತ್ತೆ. ಅಲ್ಲದೆ ನಿಗದಿತ ಗುರಿಯನ್ನು ತಲುಪಲು ಸೀಮಿತ ಸಂಖ್ಯೆಯ ತಿರುವುಗಳನ್ನು ಮಾತ್ರ ನೀಡಲಾಗಿರುತ್ತೆ. ಇಲ್ಲಿ ಬೆಂಕಿ ಹಾಗೂ ಜೀರುಂಡೆ ಮಾದರಿಗಳು ಸಹ ಎದುರಾಗುತ್ತವೆ. ಇವೆಲ್ಲವನ್ನು ಸರಿದೂಗಿಸಿಕೊಂಡು ನಿಗಧಿತ ಹಂತ ಮುಟ್ಟ ಬೇಕಿರುತ್ತದೆ. ಪ್ರತಿ ಹಂತಕ್ಕೂ ಅಂಕಗಳನ್ನ ಪಡೆಯಬಹುದಾಗಿದ್ದು, 5 ಬಿಲಿಯನ್‌ಗೂ ಅಧಿಕ ಸ್ಕೋರ್‌ ಮಾಡಬಹುದಾಗಿದೆ. ಇದೊಂದು ರೀತಿಯ ಮೈಂಡ್‌ ಗೇಮ್‌ ಆಗಿದ್ದು ಆಟದಲ್ಲಿ ತಲ್ಲೀನ ಆದರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ.

2048

2048

ಇದು ಕೂಡ ಒಂದು ರೀತಿಯ ಪಝಲ್‌ ಗೇಮ್‌ ಆಗಿದೆ, ಹೆಸರೇ ಸೂಚಿಸುವಂತೆ ಇದೊಂದು ಅಂಕಿ ಸಂಖ್ಯೆಯ ಆಟ ಆಗಿದ್ದು, ಎಲ್ಲಾ ದಿಕ್ಕಿನ್ಲಲೂ ಸಂಖ್ಯೆಗಳನ್ನ ಸೇರಿಸುತ್ತಾ ಸಾಗುವುದು, ಪ್ರತಿ ಅಂಚಿನಿಂದಲೂ ಕೂಡಿದಾಗ, ಇಲ್ಲವೇ ಕಳೆದಾಗ, ಇಲ್ಲವೇ ಗುಣಿಸಿದಾಗ ಅಂತಿಮವಾಗಿ 2048 ಅಂಕಿ ಬರುವಂತೆ ಮಾಡಬೇಕಿರುತ್ತದೆ. ಈ ಆಟದಲ್ಲಿ ಗೆಲ್ಲಬೇಕಾದರೆ ಕೆಲವೂ ಸೂಕ್ಷ್ಮಗಳಿದ್ದು, ನಿಮ್ಮ ಬುದ್ದಿವಂತಿಕೆಗೆ ತುಂಬಾನೆ ಕೆಲಸ ಕೊಡಬೇಕಾಗಿರುತ್ತದೆ. ಒಂದೇ ಒಂದು ಕಡೆ ತಪ್ಪು ಅಂಕಿಯ್ನನ ಕೂಡಿಸಿದರೆ ನೀವು ಗೆಲುವಿನ ಹಂತ ತಲುಪುವುದಕ್ಕೆ ಸಾಧ್ಯವೇ ಆಗೋದಿಲ್ಲ. ಈ ಗೇಮ್‌ ಆಪ್ಲಿಕೇಶನ್‌ ಆಂಡ್ರಾಯ್ಡ್‌, ಐಒಎಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿರಲಿದೆ.

ಕ್ರಾಸಿ ರೋಡ್‌

ಕ್ರಾಸಿ ರೋಡ್‌

ಈ ಗೇಮ್‌ ಒಂದು ಮಾದರಿಯ ಫ್ರಾಗರ್‌ನ ಅಂತ್ಯವಿಲ್ಲದ ಆವೃತ್ತಿಯಾಗಿದೆ, ಐಸೊಮೆಟ್ರಿಕ್ ಪಿಕ್ಸೆಲ್ ಕಲೆ ಮತ್ತು ತೀಕ್ಷ್ಣ ಬುದ್ದಿವಂತಿಕೆ ಇದ್ದರೆ ಮಾತ್ರ ಈ ಆಟದಲ್ಲಿ ಗೆಲುವು ಸುಲಭವಾಗಲಿದೆ. ಇದು ಕೂಡ ಹೆಸರೇ ಸೂಚಿಸುವಂತೆ ರಸ್ತೆಯನ್ನ ದಾಟುವುದು ಹೇಗೆ, ಅಲ್ಲಿ ಅಡ್ಡ ಬರುವ ಎದುರಾಳಿಗಳನ್ನ ತಪ್ಪಿಸಿಕೊಂಡು ಹೋಗುವುದು ಹೇಗೆ ಅನ್ನೊದು ಸೂಕ್ಷ್ಮವಾಗಿ ತಿಳಿದಿರಬೇಕಿರುತ್ತದೆ. ಈ ಗೇಮ್‌ನಲ್ಲಿ ನೀವು ಒಮ್ಮೆ ತೊಡಗಿ ಕೊಂಡರೆ ಸಾಕು ನೀವು ದೀರ್ಘ ಪ್ರಯಾಣ ಮಾಡಿದರೂ ಬೇಸರ ಎನಿಸೋದು ಇಲ್ಲ. ಬದಲಿಗೆ ಗೇಮ್‌ನಲ್ಲಿಯೇ ಸಂಪೂರ್ಣವಾಗಿ ಮುಳುಗಿರುತ್ತೀರಿ.

ಪಿಫಲ್

ಪಿಫಲ್

ಈ ಗೇಮ್‌ ಕೂಡ ಕ್ರಾಸಿ ರೋಡ್‌ ಆಪ್ಲಿಕೇಶನ್‌ ಸಂಸ್ಥೆಯೆ ಅಭಿವೃದ್ದಿ ಪಡಿಸಿರುವ ಗೇಮ್‌ ಅಪ್ಲಿಕೇಶನ್ ಅಗಿದೆ. ಈ ಗೇಮ್‌ನಲ್ಲಿ ಕೆಳಗಿನಿಂದ ಮೇಲಿನ ಬ್ಲಾಕ್‌ಗಳನ್ನ ಹೊಡೆದು ಹಾಕಿಬೇಕಾಗಿರುತ್ತದೆ. ಕೆಳಹಂತದಲ್ಲಿ ನಿಮಗೆ ಬೆಕ್ಕಿನ ಮಾದರಿಯ ಚಿತ್ರಣ, ಚೆಂಡು,ಇತ್ಯಾದಿ ಪರಿಕರುಗಳು ಲಭ್ಯವಾಗಲಿವೆ. ಇವುಗಳನ್ನ ಬಳಸಿಕೊಂಡು ಆಟವನ್ನ ಆಡಬೇಕಿರುತ್ತದೆ. ಹಂತಹಂತವಾಗಿ ಮೇಲ್ಬಾಗದಲ್ಲಿ ಕಾಣುವ ಬ್ಲಾಕ್‌ಗಳನ್ನ ಹೊಡೆಯುತ್ತಾ ಸಾಗಿದರೆ ನೀವು ಅಂದುಕೊಂಡ ಗುರಿ ಸಾಗಲು ಸಾಧ್ಯವಾಗಲಿದೆ. ಈ ಗೇಮ್‌ ಆಪ್ಲಿಕೇಶನ್‌ ಆಂಡ್ರಾಯ್ಡ್‌, ಹಾಗೂ ಐಒಎಸ್‌ ಆಧಾರಿತ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಾಗಲಿದೆ.

ಮಿನಿ ಮೆಟ್ರೋ

ಮಿನಿ ಮೆಟ್ರೋ

ಇದು ಒಂದು ರೀತಿಯಲ್ಲಿ ಮಸ್ಸಿಗೆ ಥ್ರಿಲಿಂಗ್‌ ಅನುಭವ ನೀಡುವ ಗೇಮ್‌ ಆಗಿದೆ. ಇಲ್ಲಿ ಹೆಸರೇ ಸೂಚಿಸುವಂತೆ ರಸ್ತೆಯಲ್ಲಿ ಮೆಟ್ರೋ ಮಾದರಿಯ ವಾಹನವನ್ನ ಚಲಾಯಿಸುವುದೇ ಗೇಮ್‌ನ ವೈಶೀಷ್ಟ್ಯತೆ ಆಗಿದೆ. ಆದರೆ ಇಲ್ಲಿನ ರಸ್ತೆಗಳು ಸುರುಳಿ ಆಕಾರದಲ್ಲಿರುತ್ತವೆ. ಆಟ ಪ್ರಾರಂಭವಾದಗ ನಿಧಾನವಾಗಿ ಸಾಗುವ ಮೆಟ್ರೊ ಮುಂದೆ ಮುಂದೆ ಹೋಗುತ್ತಾ ವೇಗದ ಗತಿಯನ್ಉ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತದೆ. ಆದರೆ ನೀವು ಎದುರುಗಡೆ ಇರುವ ವಾಹನಕ್ಕೆ ಆಗಲಿ, ಇಲ್ಲವೇ ರಸ್ತಿ ಬಿಟ್ಟು ಬೆರೆ ಕಡೆಗೆ ವಾಹನ ಸಾಗದಂತೆ ನೋಡಿಕೊಂಡು ತಾಳ್ಮೆಯಿಂದ ಆಟವಾಡ ಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಸೂಕ್ಷ್ಮತೆ ಹಾಗೂ ಚತುರತೆ ಹಾಗೂ ಆಟದ ಮೇಲಿನ ನಿಯಂತ್ರಣ ಕಲಿಕೆ ಬೇಕಾಗುತ್ತದೆ, ಈ ಆಟದಲ್ಲಿ ನೀವು ಮಗ್ನರಾದರೆ ಸಾಕು ಸಮಯವನ್ನ ಕಳೆಯುವುದೇ ತಿಳಿಯುವುದಿಲ್ಲ.

ಫೈರ್‌ ಎಂಬ್ಲೆಮ್‌ ಹಿರೋಸ್‌

ಫೈರ್‌ ಎಂಬ್ಲೆಮ್‌ ಹಿರೋಸ್‌

ಇದು ಕೂಡ ಅತ್ಯುತ್ತಮ ಗೇಮಿಂಗ್‌ ಆಪ್ಲಿಕೇಶನ್‌ ಆಗಿದೆ. ಇದು ಇಬ್ಬರು ವೀರರು ಪರಸ್ಪರ ಹೋರಾಟ ನಡೆಸುವುದು. ಗೆಲ್ಲುವುದಕ್ಕಾಗಿ ನಾನಾ ರೀತಿಯ ಆಯುಧಗಳನ್ನ ಬಳಸುವುದು ನಡೆಯುತ್ತದೆ. ಇಲ್ಲಿ ನೀವು ನಿಮಗೆ ಬೇಕಾದ ಹೀರೋನಾ ಆಯ್ಕೆ ಮಾಡಿಕೊಂಡು ಆಟವಾಡಬಹುದಾಗಿರುತ್ತದೆ. ಅಷ್ಟೇ ಅಲ್ಲ ಈ ಗೇಮ್‌ನಲ್ಲಿ ನೀವು ಒಂದು ಸಲ ಎಂಟ್ರಿ ಕೊಟ್ಟರೆ ಗೇಮ್‌ ಇನ್ನಷ್ಟು ಆಡೋಣ ಅನ್ನುವ ಮನಸ್ಥಿತಿ ನಿಮ್ಮಲ್ಲಿ ಸೃಷ್ಟಿಯಾಗಲಿದೆ ಅನ್ನೊದು ಗೇಮ್‌ ಪ್ರೀಯರ ಅನಿಸಿಕೆ ಆಗಿದೆ. ಇನ್ನು ಈ ಗೇಮ್‌ ಆಪ್ಲಿಕೇಶನ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಲಬ್ಯವಾಗಲಿದೆ.

Most Read Articles
Best Mobiles in India

English summary
Tiny phone screens aren't the best platform for first person shooters, however, and many find them more frustrating than fun.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X