Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ 30,000 ರೂ ಒಳಗೆ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್‌ಗಳು!

ಟೆಕ್‌ ವಲಯದಲ್ಲಿ ಸಾಕಷ್ಟು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಪ್ರತಿನಿತ್ಯ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ಭರಾಟೆ ಜೋರಾಗಿಯೇ ಇದೆ. ಈಗಾಗಲೇ ಹಲವು ಕಂಪೆನಿಗಳು ತಮ್ಮ ಬಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿವೆ. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳನ್ನೇ ಖರೀದಿಸುತ್ತಾರೆ. ಇನ್ನು ರಿಯಾಯಿತಿ ದರದಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಲು ದೀಪಾವಳಿ ಹಬ್ಬ ಸೂಕ್ತವಾದ ಸಮಯವಾಗಿದ್ದು, ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಸಹ ನೀಡಲಾಗ್ತಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು, ಪ್ರೀಮಿಯಂ, ಹೈ ಎಂಡ್‌ ಬಜೆಟ್‌ ವರೆಗಿನ ಸ್ಮಾರ್ಟ್‌ಫೋನ್‌ಗಳು ಸಹ ಲಭ್ಯವಿವೆ. ಸದ್ಯ ದೀಪಾವಳಿ ಪ್ರಯುಕ್ತ ನಿವು ಹೊಸ ಸ್ಮಾರ್ಟ್‌ಫೋನ್‌ ಖರೀದಿಸಲು ಬಯುವುದಾದರೆ, 30,000 ಕ್ಕಿಂತ ಕಡಿಮೆ ಬೆಲೆ ಇರುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬೇಕೆಂದುಕೊಂಡಿದ್ದರೆ, ಯಾವುದನ್ನು ಖರೀದಿಸಬೇಕೆಂಬ ಗೊಂದಲದಲ್ಲಿದ್ದರೆ ಚಿಂತಿಸುವ ಅಗತ್ಯವಿಲ್ಲ. ನಿಮಗಾಗಿ ಈ ಲೇಖನದಲ್ಲಿ 30,000 ಕ್ಕಿಂತ ಕಡಿಮೆ ಬೆಲೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ತಿಳಿಸಿಕೊಡ್ತೀವಿ ಓದಿರಿ.

ಒಪ್ಪೋ F17 ಪ್ರೊ ದೀಪಾವಳಿ ಆವೃತ್ತಿ

ಒಪ್ಪೋ F17 ಪ್ರೊ ದೀಪಾವಳಿ ಆವೃತ್ತಿ

ಇತ್ತೀಚಿಗಷ್ಟೇ ಒಪ್ಪೋ ತನ್ನ f17 ಸರಣಿಯಡಿಯಲ್ಲಿ ಎರಡು ಹೊಸ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಅದರಲ್ಲೂ ಒಪ್ಪೋ F17 ಪ್ರೊ ದೀಪಾವಳಿ ಆವೃತ್ತಿಯನ್ನ ದೀಪಾವಳಿ ವಿಶೇಷವಾಗಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ಸ್‌ಗಳನ್ನ ಒಳಗೊಂಡಿದ್ದು, ಇದರ ಬೆಲೆ 23,900 ರೂ ಆಗಿದೆ. ಇದು ಒಪ್ಪೋ F17 ಪ್ರೊ ರೂಪಾಂತರಗಳಿಗಿಂತ ಭಿನ್ನವಾಗಿದ್ದು, ದೀಪಾವಳಿ ಆವೃತ್ತಿಯು ಮ್ಯಾಟ್ ಗೋಲ್ಡ್ ಬಣ್ಣದಲ್ಲಿ ಬರುತ್ತದೆ, ಜೊತೆಗೆ ಈ ಸ್ಮಾರ್ಟ್‌ಫೋನ್‌ ಬಾಕ್ಸ್‌ನಲ್ಲಿ ಒಪ್ಪೋ 10,000mAh ಪವರ್ ಬ್ಯಾಂಕ್ ಅನ್ನು ಸಹ ನೀಡಲಾಗುತ್ತೆ. ಈ ಸ್ಮಾರ್ಟ್‌ಫೋನ್‌ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಒಳಗೊಂಡ ಕ್ವಾಡ್ ಕ್ಯಾಮೆರಾ ಸೆಟಪ್‌ ಹಾಗೂ ಡ್ಯುಯಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಒನ್‌ಪ್ಲಸ್ ನಾರ್ಡ್

ಒನ್‌ಪ್ಲಸ್ ನಾರ್ಡ್

ಒನ್‌ಪ್ಲಸ್‌ ಕಂಪನಿಯ ಹೊಸ ಒನ್‌ಪ್ಲಸ್ ನಾರ್ಡ್ ಆರಂಭಿಕ ಬೆಲೆ 24,999 ರೂ. ಆಗಿದೆ. ಹಾಗೆಯೇ 12GB RAM ಮತ್ತು 256GB ಸಂಗ್ರಹದ ಟಾಪ್-ಎಂಡ್ ವೇರಿಯಂಟ್ ದರವು 29,999 ರೂ. ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 1080x2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ.

ವಿವೋ v20

ವಿವೋ v20

ವಿವೋ V20 ಸ್ಮಾರ್ಟ್‌ಫೋನ್‌ 25 ಸಾವಿರ ರೂ.ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಇದೀಗ 24,999 ರೂ.ಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ 6.44 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್‌ 720G SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ಫಂಟೌಚ್ ಓಎಸ್ 11 ರೊಂದಿಗೆ ಕಾರ್ಯನಿರ್ವಹಿಸಲಿದೆ. ಇದರ ಬೇಸ್‌ ಮಾಡೆಲ್ 8GB+128GB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ವಿವೋ V20 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M51

ಸ್ಯಾಮ್‌ಸಂಗ್ ಗ್ಯಾಲಕ್ಸಿ M51

ಮಧ್ಯ ಶ್ರೇಣಿಯ ವಿಭಾಗದಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ m51 ಕೂಡ ಒಂದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.7 ಇಂಚಿನ ಹೆಚ್‌ಡಿ + ರೆಸಲ್ಯೂಶನ್‌ ಹೊಂದಿರುವ ಸ್ಯಾಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು ಇನ್ಫಿನಿಟಿ-ಒ ಡಿಸ್‌ಪ್ಲೇ ಆಗಿದೆ. ಇದು ಗ್ಯಾಲಕ್ಸಿ m51 ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 730G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 7,000mAh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 24,999 ರೂ ಆರಂಭಿಕ ಬೆಲೆಗೆ ಲಭ್ಯವಿದೆ.

ರೆಡ್ಮಿ K20 ಪ್ರೊ

ರೆಡ್ಮಿ K20 ಪ್ರೊ

ಶಿಯೋಮಿಯ ರೆಡ್‌ಮಿ k20 ಪ್ರೊ ಸ್ಮಾರ್ಟ್‌ಫೋನ್‌ ಯೋಗ್ಯವಾದ ಕ್ಯಾಮೆರಾ ಮತ್ತು ಕಾರ್ಯಕ್ಷಮತೆಯನ್ನು ನೀಡುವ ಸಮಗ್ರ ಪ್ಯಾಕೇಜ್ ಅನ್ನು ಹುಡುಕುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.39-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855 ಪ್ರೊಸೆಸರ್, ಅನ್ನು ಹೊಂದಿದೆ. ಹಾಗೇಯೇ ಇದು 8GB RAM ಮತ್ತು 256GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇದು 4,000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ಪ್ರಸ್ತುತ ಈ ಸ್ಮಾರ್ಟ್‌ಫೋನ್‌ 22,999 ರೂ, ಆರಂಭಿಕ ಬೆಲೆಗೆ ಆನ್‌ಲೈನ್‌ನಲ್ಲಿ ಲಭ್ಯವಿದೆ.

Best Mobiles in India

English summary
best Android smartphones under ₹30,000 to buy on this Diwali festival.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+