Home
ಸುದ್ದಿಜಾಲ

ಈ ಸ್ಮಾರ್ಟ್‌ವಾಚ್‌ಗಳು ನಿಮ್ಮ ಪ್ರಾಣವನ್ನೂ ಉಳಿಸುತ್ತವೆ!: ಆರೋಗ್ಯ ಟ್ರ್ಯಾಕಿಂಗ್‌ಗೆ ಬೆಸ್ಟ್‌ ವಾಚ್‌ಗಳಿವು

ಸ್ಮಾರ್ಟ್‌ವಾಚ್‌ಗಳು (Smartwatches) ಯುವಜನತೆಗೆ ಎಷ್ಟು ಹುಚ್ಚು ಹಿಡಿಸಿವೆ ಅನ್ನೋದನ್ನು ಬಿಡಿಸಿ ಹೇಳಬೇಕಾಗಿಲ್ಲ. ಟೆಕ್ನಾಲಿಜಿಯಿಂದ ನಮಗೆ ಅನೇಕ ಅನುಕೂಲ ಹಾಗೂ ಅಷ್ಟೇ ಅಪಾಯವೂ ಇದೆ. ಸರಿಯಾಗಿ ಬಳಕೆ ಮಾಡಿಕೊಂಡರೆ ತಂತ್ರಜ್ಞಾನವು ಬದುಕಿನ ಯಶಸ್ಸಿಗೆ ಹಲವು ಕೊಡುಗೆಗಳನ್ನು ನೀಡುತ್ತದೆ. ಹಲವು ಬಾರಿ ಇದೇ ಟೆಕ್ನಾಲಿಜಿಗಳು ದೇಶ, ಮಾನವ ಸಂಕುಲವನ್ನೇ ಅಪಾಯದಿಂದ ಪಾರು ಮಾಡಿವೆ. ನಾವು ಕೈಯಲ್ಲಿ ಕಟ್ಟಿಕೊಳ್ಳುವ ಸ್ಮಾರ್ಟ್‌ವಾಚ್‌ಗಳು ಕೆಲವೊಮ್ಮೆ ಪ್ರಾಣ ಉಳಿಸುತ್ತವೆ. ಇಂತಹ ವಾಚ್‌ಗಳೂ ಇವೆಯೇ? ಎಂಬ ಗೊಂದಲವಿದೆಯೇ? ಹೌದು, ನಮ್ಮ ಆರೋಗ್ಯಕ್ಕೆ (Health Tracking) ಕೊಡುಗೆ ನೀಡುವ ವಾಚ್‌ಗಳು ಲಭ್ಯವಿದೆ. ಈ ಬಗ್ಗೆ ನಾವು ತಿಳಿಸಿಕೊಡುತ್ತೇವೆ.

ನಾವು ಬಳಸುವ Smartwatch‌ಗಳು ಕೇವಲ ಸ್ಟೈಲ್ ಮತ್ತು ದೇಹದ ಬಗ್ಗೆ ಮಾಹಿತಿ ಕೊಡುವುದಷ್ಟೇ ಅಲ್ಲ, ಜೀವ ರಕ್ಷಕವೂ ಆಗಿವೆ. ಕೇವಲ ಯುವಕರಿಗೆ ಮಾತ್ರವಲ್ಲ, ವಯಸ್ಕರಿಗೂ ತುಂಬಾ ಉಪಯುಕ್ತವಾಗಿವೆ. ಇಂದು ಪ್ರತಿಯೊಬ್ಬರೂ ಆಧುನಿಕ ಜೀವನದಿಂದ ಬೇಸತ್ತಿದ್ದಾರೆ. ಅದಕ್ಕಾಗಿಯೇ ಆರೋಗ್ಯಕರ ಜೀವನಶೈಲಿಯತ್ತ ಗಮನಹರಿಸುತ್ತಿದ್ದಾರೆ. ನೀವು ಸಹ ಫಿಟ್‌ನೆಸ್‌ಗೆ ಆದ್ಯತೆ ನೀಡುತ್ತೀರಾ? ದಿನವೂ ಆರೋಗ್ಯ ಮಾನಿಟರಿಂಗ್ ಅವಶ್ಯಕತೆ ಇದೆಯೇ? ಹಾಗಾದ್ರೆ, ಆರೋಗ್ಯ ಟ್ರ್ಯಾಕಿಂಗ್ (Health Tracking) ಫೀಚರ್ಸ್‌ ಹೊಂದಿರುವ ಟಾಪ್-5 Smartwatchಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

Smartwatch: ಈ ಸ್ಮಾರ್ಟ್‌ವಾಚ್‌ಗಳು ನಿಮ್ಮ ಪ್ರಾಣವನ್ನೂ ಉಳಿಸುತ್ತವೆ!

ಟಾಪ್ 5 ಬೆಸ್ಟ್ Health Tracking ವಾಚ್‌ಗಳು

Apple Watch Series 8: ಆರೋಗ್ಯದ ಟ್ರ್ಯಾಕಿಂಗ್‌ಗಾಗಿ (Health Tracking) ಆ್ಯಪಲ್ ವಾಚ್ ಸಿರೀಸ್ 8 ಸ್ಮಾರ್ಟ್‌ವಾಚ್ ಉತ್ತಮ ಚಾಯ್ಸ್‌. ಇದು​ ಫಿಟ್‌ನೆಸ್ ಫ್ರೀಕ್‌ಗಳಿಗೆ ಉತ್ತಮವಾಗಿದೆ. ಈ Smartwatch ಸುಧಾರಿತ ಸಂವೇದಕಗಳನ್ನು ಹೊಂದಿದೆ. ಬೆಲೆ ಕೊಂಚ ದುಬಾರಿಯಾಗಿದ್ರೂ ಈ ಸ್ಮಾರ್ಟ್ ವಾಚ್ ಸಾಕಷ್ಟು ಉತ್ತಮ ಫೀಚರ್​ಗಳನ್ನು ಹೊಂದಿದೆ.

  • ಬ್ರಾಂಡ್: ಆ್ಯಪಲ್
  • ಮಾದರಿ: ಸರಣಿ 8
  • ಬೆಲೆ : 30,900 ರೂಪಾಯಿ
  • ಗಾತ್ರ: 45 ಮಿಮೀ
  • ಕೇಸ್ ಮೆಟೀರಿಯಲ್: ಮಿಡ್ನೈಟ್ ಅಲ್ಯೂಮಿನಿಯಂ
  • ಬ್ಯಾಂಡ್ ಮೆಟೀರಿಯಲ್: ಮಿಡ್ನೈಟ್ ಸ್ಪೋರ್ಟ್ ಬ್ಯಾಂಡ್
  • ಡಿಸ್​​ಪ್ಲೇ : ರೆಟಿನಾ ಡಿಸ್​​ಪ್ಲೇ
  • ಆರೋಗ್ಯ ವೈಶಿಷ್ಟ್ಯಗಳು: ರಕ್ತದ ಆಮ್ಲಜನಕ ಮತ್ತು ಇಸಿಜಿ ಅಪ್ಲಿಕೇಶನ್‌ಗಳು, ಸ್ಲೀಪಿಂಗ್ ಹಂತಗಳನ್ನ ಟ್ರ್ಯಾಕಿಂಗ್ ಮಾಡುತ್ತದೆ
  • ಆವೃತ್ತಿ : iOS ಆವೃತ್ತಿಯೊಂದಿಗೆ iPhone 8 ಅಥವಾ ನಂತರದ ಆವೃತ್ತಿ

Samsung Galaxy Watch 6: ಸ್ಯಾಮ್​ಸಂಗ್ ಗ್ಯಾಲಾಕ್ಸಿ ವಾಚ್​ 6​ ಫಿಟ್‌ನೆಸ್ ಟ್ರ್ಯಾಕಿಂಗ್ (Health Tracking) ಅಪ್ಲಿಕೇಶನ್‌ಗಳನ್ನು ಹೊಂದಿದೆ. ಇದರೊಂದಿಗೆ ನೀವು ಬಿಪಿ, ಹೃದಯ ಬಡಿತ, ಇಸಿಜಿ, ಮಲಗುವ ಸಮಯವನ್ನು ಟ್ರ್ಯಾಕ್ ಮಾಡಬಹುದು.

  • ಬ್ರ್ಯಾಂಡ್: ಸ್ಯಾಮ್​ಸಂಗ್
  • ಮಾದರಿ: ಗ್ಯಾಲಕ್ಸಿ ವಾಚ್
  • ಬೆಲೆ: 29,999 ರೂಪಾಯಿ
  • ಗಾತ್ರ: 40 ಮಿಮೀ
  • ಸಂಪರ್ಕ: ಬ್ಲೂಟೂತ್
  • ಬಣ್ಣ: ಗ್ರ್ಯಾಫೈಟ್
  • ಡಿಸ್​​ಪ್ಲೇ ಗಾತ್ರ: 4 ಸೆಂ ಮೀ
  • ಆರೋಗ್ಯ ವೈಶಿಷ್ಟ್ಯಗಳು: ಬಿಪಿ ಮಾನಿಟರಿಂಗ್, ಇಸಿಜಿ, ಸ್ಲೀಪಿಂಗ್ ಸ್ಟೇಜ್ ಟ್ರ್ಯಾಕಿಂಗ್
  • ಆವೃತ್ತಿ: ಆಂಡ್ರಾಯ್ಡ್

Garmin Venu 2S: ಈ ಗಾರ್ಮಿನ್ ವೆನು 2S Smartwatch ಮೂಲಕ ಥರ್ಮಾಮೀಟರ್, ಗೈರೊಸ್ಕೋಪ್, ರಕ್ತದ ಆಮ್ಲಜನಕ ಮಾನಿಟರಿಂಗ್, ಜಿಪಿಎಸ್ ಟ್ರ್ಯಾಕ್ (Health Tracking) ಮಾಡಬಹುದು. ಇದು ಪ್ರಕಾಶಮಾನವಾದ AMOLED ಡಿಸ್​ಪ್ಲೇಯನ್ನು ಹೊಂದಿದೆ. ಹಾಡುಗಳನ್ನು ಕೇಳಲು ಇದನ್ನು ವೈರ್‌ಲೆಸ್ ಹೆಡ್‌ಫೋನ್‌ಗಳೊಂದಿಗೆ ಸಂಪರ್ಕಿಸಬಹುದು.

  • ಬ್ರಾಂಡ್: ಗಾರ್ಮಿನ್
  • ಮಾದರಿ: ವೆನು 2 ಎಸ್
  • ಬೆಲೆ : 37,990 ರೂಪಾಯಿ
  • ಗಾತ್ರ: 40mm
  • ಶೈಲಿ: ಆಧುನಿಕ
  • ಬಣ್ಣ: ತಿಳಿ ಮರಳು
  • ಡಿಸ್​​ಪ್ಲೇ ಗಾತ್ರ: 1.3 ಇಂಚುಗಳು
  • ಬ್ಯಾಟರಿಡಿಸ್​​ಪ್ಲೇ ಬಾಳಿಕೆ: 10 ದಿನಗಳು
  • ಆರೋಗ್ಯ ವೈಶಿಷ್ಟ್ಯಗಳು: ಥರ್ಮಾಮೀಟರ್, ಗೈರೊಸ್ಕೋಪ್, ರಕ್ತದ ಆಮ್ಲಜನಕ ಮಾನಿಟರಿಂಗ್, ಜಿಪಿಎಸ್

Amazfit T-Rex Ultra: ಈ ಅಮಾಜ್ಫಿಟ್ ಸ್ಮಾರ್ಟ್‌ವಾಚ್‌ನೊಂದಿಗೆ ಗೈರೊಸ್ಕೋಪ್, ಬ್ಯಾರೊಮೆಟ್ರಿಕ್ ಆಲ್ಟಿಮೀಟರ್ ಟ್ರ್ಯಾಕ್ (Health Tracking) ಮಾಡಬಹುದು. ಬಜೆಟ್‌ನಲ್ಲಿ ಸ್ಮಾರ್ಟ್‌ವಾಚ್ ಖರೀದಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇದರ ಬ್ಯಾಟರಿ ಸಾಮರ್ಥ್ಯವು ಉತ್ತಮವಾಗಿದೆ. ಇದು -30 ಡಿಗ್ರಿ ತಾಪಮಾನದಲ್ಲಿಯೂ ಕಾರ್ಯನಿರ್ವಹಿಸುತ್ತದೆ.

  • ಬ್ರ್ಯಾಂಡ್: ಅಮಾಜ್ಫಿಟ್
  • ಬೆಲೆ: 8,494 ರೂಪಾಯಿ.
  • ವಿಶೇಷ ವೈಶಿಷ್ಟ್ಯಗಳು: ಜಿಪಿಎಸ್
  • ಪ್ರದರ್ಶನ: HD AMOLED
  • ನೀರಿನ ಪ್ರತಿರೋಧ (ವಾಟರ್ ಫ್ರೂಫ್) : 100 ಮೀಟರ್ ವರೆಗೆ
  • ಬ್ಯಾಟರಿ ಬಾಳಿಕೆ: 20 ದಿನಗಳು
  • ಆರೋಗ್ಯ ವೈಶಿಷ್ಟ್ಯಗಳು: ಗೈರೊಸ್ಕೋಪ್, ಬ್ಯಾರೊಮೆಟ್ರಿಕ್ ಆಲ್ಟಿಮೀಟರ್

Redmi Watch 3 Active: ಬಜೆಟ್‌ನಲ್ಲಿ ಸ್ಮಾರ್ಟ್‌ವಾಚ್ ಖರೀದಿಸಲು ಬಯಸುವವರಿಗೆ ರೆಡ್ಮಿ ವಾಚ್ 3 ಆ್ಯಕ್ಟಿವ್ ಉತ್ತಮ ಆಯ್ಕೆಯಾಗಿದೆ. ಇದರೊಂದಿಗೆ ಚಟುವಟಿಕೆ ಟ್ರ್ಯಾಕರ್, ಸಿಟ್ಟಿಂಗ್ ಅಲರ್ಟ್​, ನಿದ್ರೆ ಮಾನಿಟರ್, ಹೃದಯ ಬಡಿತ ಟ್ರ್ಯಾಕ್ (Health Tracking) ಮಾಡಬಹುದು. ಇದು ಉತ್ತಮ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

  • ಬ್ರಾಂಡ್: ರೆಡ್ಮಿ
  • ಮಾದರಿ: ರೆಡ್ಮಿ ವಾಚ್ 3
  • ಬೆಲೆ: 2,450 ರೂಪಾಯಿ
  • ಗಾತ್ರ: 46 ಮಿಮೀ
  • ಶೈಲಿ : ಆಧುನಿಕ 3 ಸಕ್ರಿಯ ಪ್ಲಾಟಿನಂ ಬೂದು
  • ಬಣ್ಣ: ಬೂದು
  • ಡಿಸ್​​ಪ್ಲೇ ಗಾತ್ರ: 1.83 ಇಂಚುಗಳು
  • ಬ್ಯಾಟರಿ ಬಾಳಿಕೆ: 12 ದಿನಗಳು
  • ಆರೋಗ್ಯ ವೈಶಿಷ್ಟ್ಯಗಳು: ಚಟುವಟಿಕೆ ಟ್ರ್ಯಾಕರ್, ಸಿಟ್ಟಿಂಗ್ ಅಲರ್ಟ್​, ನಿದ್ರೆ ಮಾನಿಟರ್, ಹೃದಯ ಬಡಿತ

ಆರೋಗ್ಯ ವಿಷಯಗಳನ್ನು ಟ್ರ್ಯಾಕ್ ಮಾಡಬಹುದು

ಒಟ್ನಲ್ಲಿ, ನಮ್ಮ ದೈನಂದಿನ ಚಟುವಟಿಕೆಗಳು ಮತ್ತು ವ್ಯಾಯಾಮಗಳನ್ನು ಟ್ರ್ಯಾಕ್ (Health Tracking) ಮಾಡಲು ಈ ಸ್ಮಾರ್ಟ್‌ವಾಚ್‌ಗಳು ತುಂಬಾ ಪ್ರಯೋಜನಕಾರಿಯಾಗಿವೆ. ಮುಖ್ಯವಾಗಿ ಹೃದಯ ಬಡಿತ, ಬಿಪಿ, ನಿದ್ರೆಯ ಟ್ರ್ಯಾಕಿಂಗ್, ಕ್ಯಾಲೋರಿ ಎಣಿಕೆ, ದೇಹದಲ್ಲಿನ ಆಮ್ಲಜನಕದ ಮಟ್ಟವನ್ನು ಈ ವಾಚ್‌ಗಳ ಮೂಲಕ ತಿಳಿದುಕೊಳ್ಳಬಹುದು. ಇವುಗಳ ಮೂಲಕ ಅನೇಕ ಆರೋಗ್ಯ ವಿಷಯಗಳನ್ನು ಟ್ರ್ಯಾಕ್ ಮಾಡಬಹುದು. ನಾವು ತಿಳಿಸಿಕೊಟ್ಟ ಟಾಪ್ 5 ಬೆಸ್ಟ್‌ ಆರೋಗ್ಯದ ಟ್ರ್ಯಾಕಿಂಗ್‌ (Health Tracking) ವಾಚ್‌ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬುವುದನ್ನು ಕಾಮೆಂಟ್ ಮಾಡಿ. ನಿಮಗಿಷ್ಟವಾದ ಸ್ಮಾರ್ಟ್‌ವಾಚ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿ.

ಗಿಜ್‌ಬಾಟ್‌ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್‌ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Best Mobiles in India

English summary
Do you prioritize fitness? Need daily health monitoring? So, we will tell you about the top-5 smartwatches with the best sports modes and health tracking features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+