ಈ ವರ್ಷ 3,000 ರೂ,ಒಳಗೆ ಲಭ್ಯವಿರುವ ಐದು ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳು!

|

ಟೆಕ್‌ ವಲಯದಲ್ಲಿ ಸ್ಮಾರ್ಟ್‌ಫೋನ್‌ ಮಾತ್ರವಲ್ಲ ಸ್ಮಾರ್ಟ್‌ವಾಚ್‌ಗಳು ಕೂಡ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಹೀಗಾಗಿ ಹಲವು ಕಂಪೆನಿಗಳು ಹಲವು ಅತ್ಯುತ್ತಮ ಫೀಚರ್ಸ್‌ಗಳಿರುವ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿವೆ. ಅಗ್ಗದ ಬೆಲೆಯಿಂದ ಹಿಡಿದು ಹೈ ಎಂಡ್‌ ಬೆಲೆಯವರೆಗೂ ಸ್ಮಾರ್ಟ್‌ವಾಚ್‌ಗಳು ಲಭ್ಯವಿವೆ. ಅದರಲ್ಲೂ ಬ್ರ್ಯಾಂಡ್‌ ಕಂಪೆನಿಗಳ ವಾಚ್‌ಗಳಿಗಂತೂ ಹೆಚ್ಚು ಡಿಮ್ಯಾಂಡ್‌ ಇದ್ದೆ ಇದೆ.

ಸ್ಮಾರ್ಟ್‌ವಾಚ್‌ಗಳು

ಹೌದು, ಸ್ಮಾರ್ಟ್‌ವಾಚ್‌ಗಳು ಇಂದು ಹಲವು ಕಾರ್ಯಗಳನ್ನು ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಇದೇ ಕಾರಣಕ್ಕೆ ಗ್ರಾಹಕರು ಅತ್ಯುತ್ತಮವಾದ ಸ್ಮಾರ್ಟ್‌ವಾಚ್‌ಗಳನ್ನು ಹೊಂದಲು ಬಯಸುತ್ತಾರೆ. ಅದರಲ್ಲೂ ಹಾಟ್‌ಬೀಟ್‌ ಟ್ರ್ಯಾಕಿಂಗ್‌, ನಿದ್ರೆಯ ಸಮಯ, ನಡಿಗೆ ಸಮಯದ ಜೊತೆಗೆ ಫಿಟ್‌ನೆಸ್‌ ಕುರಿತ ಆಯ್ಕೆಗಳನ್ನು ಹೊಂದಿರುವ ಸ್ಮಾರ್ಟ್‌ವಾಚ್‌ಗಳಿಗೆ ಬೇಡಿಕೆ ಹೆಚ್ಚು. ಇನ್ನು ಗ್ರಾಹಕರು ಈ ಎಲ್ಲಾ ಫೀಚರ್ಸ್ ಹೊಂದಿರುವ ಅಗ್ಗದ ಬೆಲೆಯ ಸ್ಮಾರ್ಟ್‌ವಾಚ್‌ಗಳನ್ನು ಹೆಚ್ಚು ಲೈಕ್‌ ಮಾಡುತ್ತಾರೆ. ಹಾಗಾದ್ರೆ ಭಾರತದಲ್ಲಿ ಈ ವರ್ಷ ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳ ಬಗ್ಗೆ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಅಮಾಜ್‌ಫಿಟ್ ಬಿಪ್ S ಲೈಟ್

ಅಮಾಜ್‌ಫಿಟ್ ಬಿಪ್ S ಲೈಟ್

ಅಮಾಜ್‌ಫಿಟ್ ಬಿಪ್ ಎಸ್ ಲೈಟ್ ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ವಾಚ್‌ಗಳಲ್ಲಿ ಒಂದಾಗಿದೆ. ಇದು ಇಂಟರ್‌ಬಿಲ್ಟ್‌ ಜಿಪಿಎಸ್ ಒಳಗೊಂಡಿರುವ ಸ್ಮಾರ್ಟ್‌ವಾಚ್‌ ಆಗಿದೆ. ಇದು 1.28-ಇಂಚಿನ ಟ್ರಾನ್ಸ್‌ಫ್ಲೆಕ್ಟಿವ್ ಟಿಎಫ್‌ಟಿ ಡಿಸ್ಪ್ಲೇಯೊಂದಿಗೆ ಬರುತ್ತದೆ. ಈ ಡಿಸ್‌ಪ್ಲೇ ಯಾವಾಗಲೂ ಬಣ್ಣವನ್ನು ಪ್ರದರ್ಶಿಸುವ ಫೀಚರ್ಸ್ ನೀಡುತ್ತದೆ. ಅಲ್ಲದೆ ಸಿಂಗಲ್‌ ಚಾರ್ಜ್‌ನಲ್ಲಿ 30 ದಿನಗಳವರೆಗೆ ಇರುತ್ತದೆ ಎಂದು ರೇಟ್ ಮಾಡಲಾಗಿದೆ. ಇನ್ನು ಈ ವಾಚ್‌ ಫಿಟ್‌ನೆಸ್ ಟ್ರ್ಯಾಕರ್ ಆಗಿದ್ದು, ಟ್ರೆಡ್‌ಮಿಲ್, ಹೊರಾಂಗಣ ಓಟ, ವಾಕಿಂಗ್, ಒಳಾಂಗಣ ಸೈಕ್ಲಿಂಗ್, ಹೊರಾಂಗಣ ಸೈಕ್ಲಿಂಗ್, ಯೋಗ, ಎಲಿಪ್ಟಿಕಲ್ ಟ್ರೈನರ್ ಮತ್ತು ಫ್ರೀಸ್ಟೈಲ್ ಸೇರಿದಂತೆ ಎಂಟು ವಿಭಿನ್ನ ಕ್ರೀಡಾ ವಿಧಾನಗಳನ್ನು ಹೊಂದಿದೆ. ಸದ್ಯ ಇದರ ಬೆಲೆ 2,999ರೂ.ಆಗಿದೆ.

NoiseFit Endure

NoiseFit Endure

ಭಾರತದ ಅತ್ಯಂತ ಜನಪ್ರಿಯ ವೆರಿಯೆಬಲ್ಸ್‌ ತಯಾರಕರಲ್ಲಿ ಒಬ್ಬರಾದ ನಾಯ್ಸ್‌ ಸಂಸ್ಥೆ ಕಳೆದ ಕೆಲವು ವರ್ಷಗಳಿಂದ ಹಲವಾರು ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಾಯ್ಸ್‌ಫಿಟ್ ಎಂಡೂರ್ ಸ್ಮಾರ್ಟ್‌ವಾಚ್‌ ಅಗ್ಗದ ಬೆಲೆಯಲ್ಲಿ ದೊರೆಯುವ ಸ್ಮಾರ್ಟ್‌ವಚ್‌ ಆಗಿದೆ. ಇದು ಸ್ಟೇನ್‌ಲೆಸ್ ಸ್ಟೀಲ್ ಬೆಜೆಲ್‌ಗಳು ಮತ್ತು ವಾಟರ್‌ ಪ್ರೂಫ್‌ ಐಪಿ 68 ರೇಟಿಂಗ್‌ನೊಂದಿಗೆ ಬರುತ್ತದೆ. ಕ್ಲಾಸಿಕ್ ಲುಕಿಂಗ್ ಸ್ಮಾರ್ಟ್ ವಾಚ್ 1.28 ಇಂಚಿನ ಎಲ್ಸಿಡಿ ಕಲರ್ ಡಿಸ್ಪ್ಲೇಯನ್ನು ಹೊಂದಿದ್ದು, 100 ಕ್ಕೂ ಹೆಚ್ಚು ವಾಚ್ ಫೇಸ್ ಸ್ಟೋರೇಜ್‌ ಹೊಂದಿದೆ. ಇದರಲ್ಲಿ ನಿಮ್ಮ ರಕ್ತ-ಆಮ್ಲಜನಕದ ಮಟ್ಟವನ್ನು ಅಳೆಯಲು SpO2 ಸೆನ್ಸಾರ್‌ ಅನ್ನು ನೀಡಲಾಗಿದೆ. ಈ ಸ್ಮಾರ್ಟ್ ವಾಚ್ ಒಂಬತ್ತು ಕ್ರೀಡಾ ವಿಧಾನಗಳೊಂದಿಗೆ ಬರುತ್ತದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 20 ದಿನಗಳವರೆಗೆ ಇರುತ್ತದೆ.ಇದು 24 ಗಂಟೆಗಳ ಹೃದಯ ಬಡಿತದ ದಾಖಲೆಯನ್ನು ಕಾಯ್ದುಕೊಳ್ಳಲಿದೆ. ಇದನ್ನು ಸಹ 2,999.ರೂ,ಗಳಿಗೆ ಖರೀದಿಸಬಹುದಾಗಿದೆ.

ಬೋಟ್ ಎಕ್ಸ್‌ಪ್ಲೋರರ್

ಬೋಟ್ ಎಕ್ಸ್‌ಪ್ಲೋರರ್

ಬೋಟ್ ಎಕ್ಸ್‌ಪ್ಲೋರರ್ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಬೋಟ್‌ ಬ್ರಾಂಡ್‌ನ ಹೊಸ ಕೊಡುಗೆಯಾಗಿದೆ. ಈ ವಾಚ್‌ ಅನ್ನು ನಿಮ್ಮ ಫೋನ್‌ನಿಂದ ಚಾಲನೆಯಲ್ಲಿರುವ, ಸ್ವತಂತ್ರವಾಗಿ ನಡೆಯುವಂತಹ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಬಹುದು. ಬೋಟ್ ಎಕ್ಸ್‌ಪ್ಲೋರರ್ 1.3 ಇಂಚಿನ ಪೂರ್ಣ-ಬಣ್ಣದ ಟಚ್‌ಸ್ಕ್ರೀನ್ 2.5 ಡಿ ಬಾಗಿದ ಡಿಸ್‌ಪ್ಲೇ ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಒಳಾಂಗಣ ವಾಕ್, ರನ್, ಸೈಕ್ಲಿಂಗ್, ಎಲಿಪ್ಟಿಕಲ್ ಮೆಷಿನ್, ರೋವರ್, ಈಜು, ಯೋಗ, ವಾಕಿಂಗ್ ಮತ್ತು ಓಟಕ್ಕೆ ಸ್ವಯಂಚಾಲಿತ ಕ್ರೀಡಾ ಗುರುತಿಸುವಿಕೆಯೊಂದಿಗೆ ಪಾದಯಾತ್ರೆಯನ್ನು ಟ್ರ್ಯಾಕ್ ಮಾಡಬಹುದು. ಆರೋಗ್ಯ ಸಂಬಂಧಿತ ಫೀಚರ್ಸ್‌ಗಳಲ್ಲಿ ಕ್ಷೇಮ ಮೋಡ್, ನಿದ್ರೆ ಮತ್ತು ಹೃದಯ ಬಡಿತ ಮಾನಿಟರ್‌ನೊಂದಿಗೆ ಬರುತ್ತದೆ. ಬೋಟ್ ಎಕ್ಸ್‌ಪ್ಲೋರರ್‌ನ ಸ್ಮಾರ್ಟ್ ಫೀಚರ್ಸ್‌ಗಳಲ್ಲಿ ಎಸ್‌ಎಂಎಸ್, ಇಮೇಲ್, ಸೋಷಿಯಲ್ ಮೀಡಿಯಾ ಅಪ್ಲಿಕೇಶನ್ ಎಚ್ಚರಿಕೆಗಳು, ಕ್ಲೌಡ್-ಆಧಾರಿತ ವಾಚ್ ಮ್ಯೂಸಿಕ್‌ ಕಂಟ್ರೋಲ್‌ ಅನ್ನು ಸಹ ಹೊಂದಿದೆ. ಇದನ್ನು 2,999 ರೂ,ಗಳಿಗೆ ಖರೀದಿಸಬಹುದು.

ನಾಯ್ಸ್‌ ಕಲರ್ ಫಿಟ್ ಪ್ರೊ 2

ನಾಯ್ಸ್‌ ಕಲರ್ ಫಿಟ್ ಪ್ರೊ 2

ನಾಯ್ಸ್‌ ಸಂಸ್ಥೆಯ ಮತ್ತೊಂದು ಅಗ್ಗದ ಸ್ಮಾರ್ಟ್‌ವಾಚ್‌ ನಾಯ್ಸ್‌ ಕಲರ್ ಫಿಟ್ ಪ್ರೊ 2 ಆಗಿದೆ. ಇದು 1.3 ಇಂಚಿನ ಕಲರ್‌ ಡಿಸ್‌ಪ್ಲೇಯನ್ನು ಹೊಂದಿದೆ. ಸ್ಮಾರ್ಟ್‌ವಾಚ್ ವೀಕ್ಷಿಸಲು ನಿಮ್ಮ ಫೋನ್‌ನಿಂದ ಪುಶ್ ಅಧಿಸೂಚನೆಗಳನ್ನು ಕಳುಹಿಸಬಹುದು. ಅಲ್ಲದೆ ಇದು ನಿಮ್ಮ ಫೋನ್‌ನಲ್ಲಿ ಮೀಡಿಯಾ ಪ್ಲೇಬ್ಯಾಕ್ ಅನ್ನು ಸಹ ಕಂಟ್ರೋಲ್‌ ಮಾಡುವ ವಿಶೇಷತೆ ಹೊಂದಿದೆ. ನಿಯಂತ್ರಿಸಬಹುದು. ಇನ್ನು ಫಿಟ್‌ನೆಸ್ ಫೀಚರ್ಸ್‌ಗಳಲ್ಲಿ ವಾಕ್, ರನ್, ಹೈಕ್, ಬೈಕು, ಟ್ರೆಡ್‌ಮಿಲ್, ವರ್ಕ್-, ಟ್, ಕ್ಲೈಂಬಿಂಗ್, ಸ್ಪಿನ್ ಮತ್ತು ಯೋಗ ಸೇರಿದಂತೆ ಒಂಬತ್ತು ಕ್ರೀಡಾ ವಿಧಾನಗಳನ್ನು ಬೆಂಬಲಿಸುತ್ತದೆ. ಇದು ಹೃದಯ ಬಡಿತ ಮಾನಿಟರ್ ಮತ್ತು ಸ್ಲೀಪ್ ಟ್ರ್ಯಾಕರ್‌ನೊಂದಿಗೆ ಬರುತ್ತದೆ. ಸಿಂಗಲ್‌ ಚಾರ್ಜ್‌ನಲ್ಲಿ 10 ದಿನಗಳವರೆಗೆ ಇರುತ್ತದೆ ಎಂದು ರೇಟ್ ಮಾಡಲಾಗಿದೆ. ಇದರ ಬೆಲೆ 2,599ರೂ.ಆಗಿದೆ.

ಫೈರ್ ಬೋಲ್ಟ್ ಎಸ್‌ಪಿಒ 2

ಫೈರ್ ಬೋಲ್ಟ್ ಎಸ್‌ಪಿಒ 2

ಫೈರ್ ಬೋಲ್ಟ್ ಈಗಾಗಲೇ ಭಾರತದಲ್ಲಿ ಕೆಲವು ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಫೈರ್ ಬೋಲ್ಟ್ ಎಸ್‌ಪಿಒ 2 ವಿಶೇಷ ಸ್ಮಾರ್ಟ್‌ವಾಚ್‌ ಆಗಿದೆ. ಇದು ವೆರಿಯೆಬಲ್‌ ರಕ್ತದೊತ್ತಡ ಟ್ರ್ಯಾಕಿಂಗ್ ಫೀಚರ್ಸ್‌ ಹೊಂದಿದೆ. ಇದು 1.4-ಇಂಚಿನ ಬಣ್ಣ ಟಚ್ ಸ್ಕ್ರೀನ್ ಡಿಸ್‌ಪ್ಲೇ ಹೊಂದಿದೆ. ಸಿಂಗಲ್‌ ಚಾರ್ಜ್‌ನಲ್ಲಿ ಎಂಟು ದಿನಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ. ಇದು ಓಟ, ಸೈಕ್ಲಿಂಗ್, ಸ್ಕಿಪ್ಪಿಂಗ್, ಬ್ಯಾಡ್ಮಿಂಟನ್, ಫುಟ್ಬಾಲ್, ಬಾಸ್ಕೆಟ್‌ಬಾಲ್ ಮತ್ತು ವಾಕಿಂಗ್‌ನಂತಹ ಏಳು ಕ್ರೀಡಾ ವಿಧಾನಗಳನ್ನು ಬೆಂಬಲಿಸುತ್ತದೆ. ಇದರ ಬೆಲೆ 2,999ರೂ.ಆಗಿದೆ.

Best Mobiles in India

English summary
Smartwatches under Rs 3,000 are something that most people would like to start their smartwatch journey within India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X