Subscribe to Gizbot

ಇಲ್ಲಿರುವ ಐದು ಆಫರ್‌ಗಳಲ್ಲಿ ಜಿಯೋ-BSNL ಬೆಸ್ಟ್‌: ನೀವು ಯಾವುದನ್ನು ಆಯ್ಕೆ ಮಾಡ್ತೀರಾ..?

Written By:

ಟೆಲಿಕಾಂ ವಲಯದಲ್ಲಿ ದರ ಸಮರವೂ ಜೋರಾಗಿ ನಡೆಯುತ್ತಿದ್ದು, ಖಾಸಗಿ ಟೆಲಿಕಾಂ ಕಂಪನಿಗಳ ಒಂದ ಹಿಂದೆ ಒಂದರಂತೆ ಭರ್ಜರಿ ಆಫರ್ ನೀಡುತ್ತಿದ್ದರೇ, ಸರ್ಕಾರಿ ಸ್ವಾಮ್ಯದ BSNL ಕೂಡ ಸ್ಪರ್ಧಾತ್ಮಕ ಆಫರ್ ಘೋಷಣೆ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸದ್ಯ ಟೆಲಿಕಾಂ ಮಾರುಕಟ್ಟೆಯಲ್ಲಿ ಲಭ್ಯ ವಿರುವ ಬೆಸ್ಟ್ ಆಫರ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಇಲ್ಲಿರುವ ಐದು ಆಫರ್‌ಗಳಲ್ಲಿ ಜಿಯೋ-BSNL ಬೆಸ್ಟ್‌

ಜಿಯೋ ಆಫರ್ ನೀಡಿದರೆ ಆದರ ಹಿಂದೆಯೇ ಏರ್‌ಟೆಲ್‌ ಸಹ ಅದೇ ಮಾದರಿಯ ಆಫರ್ ಘೋಷಣೆ ಮಾಡುತ್ತದೆ. ಬೆನ್ನ ಹಿಂದೆಯೇ ವೊಡಾಫೋನ್ ಮತ್ತು ಐಡಿಯಾ ಸಹ ಆ ಆಫರ್ ಅನ್ನು ಕಾಪಿ ಮಾಡಿ ಹೊಸ ಬಣ್ಣ ಹೊಡೆದು ಮತ್ತೇ ಬೇರೆ ಆಫರ್ ನೀಡುತ್ತಿವೆ. ಈ ಹಿನ್ನಲೆಯಲ್ಲಿ ಗ್ರಾಹಕರ ಜೇಬಿಗೆ ಹೊರೆಯಾಗದಂತೆ ಇರುವ ಡೇಟಾ ಮತ್ತು ವಾಯ್ಸ್ ಆಫರ್ ಗಳನ್ನು ಹೊಂದಿರುವ ವಿವಿಧ ಟೆಲಿಕಾಂ ಕಂಪನಿಗಳ ಪ್ಲಾನ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ ರೂ.199 ಪ್ಲಾನ್:

ಏರ್‌ಟೆಲ್ ರೂ.199 ಪ್ಲಾನ್:

ಏರ್‌ಟೆಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ 28 ದಿನಗಳ ಅವಧಿಗೆ ಉಚಿತ ಆನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು ಮತ್ತು ಉಚಿತ ರೋಮಿಂಗ್ ಕರೆಗಳನ್ನು ನೀಡುವುದರೊಂದಿಗೆ 100 SMS ಮತ್ತು 1GB ಹೈಸ್ಪೀಡ್ ಡೇಟಾವನ್ನು ಈ ಪ್ಲಾನ್‌ನಲ್ಲಿ ನೀಡುತ್ತಿದೆ.

ವೊಡಾಫೋನ್ ರೂ.199 ಪ್ಲಾನ್:

ವೊಡಾಫೋನ್ ರೂ.199 ಪ್ಲಾನ್:

ವೊಡಾಫೋನ್‌ ಸಹ ಏರ್‌ಟೆಲ್ ಮಾದರಿಯಲ್ಲಿ ರೂ. 199 ಪ್ಲಾನ್ ಘೊಷಣೆ ಮಾಡಿದ್ದು, 28 ದಿನಗಳ ಅವಧಿಗೆ ಇಲ್ಲಿ ಗ್ರಾಹಕರು 1GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದು, ಅಲ್ಲದೇ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಜಿಯೋ ರೂ. 149 ಪ್ಲಾನ್:

ಜಿಯೋ ರೂ. 149 ಪ್ಲಾನ್:

ಜಿಯೋ 28 ದಿನಗಳ ಅವಧಿ ಪ್ಲಾನ್ ಘೋಷಣೆ ಮಾಡಿದ್ದು, ಇದರಲ್ಲಿ ಉಚಿತ ಆನ್‌ಲಿಮಿಟೆಡ್ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು ಮತ್ತು ಉಚಿತ ರೋಮಿಂಗ್ ಕರೆಗಳ ಸೌಲಭ್ಯವನ್ನು ನೀಡಿದ್ದು ಮತ್ತು ಅನ್‌ಲಿಮಿಟೆಡ್ ಡೇಟಾ ನೀಡಿದ್ದು, ಜೊತೆಗೆ 4.2GB ಹೈ ಸ್ಪೀಡ್ ಡೇಟಾವನ್ನು ಬಳಕೆಗೆ ನೀಡುತ್ತಿದೆ.

ಐಡಿಯಾ 198 ಪ್ಲಾನ್:

ಐಡಿಯಾ 198 ಪ್ಲಾನ್:

ವೊಡಾಫೋನ್-ಏರ್‌ಟೆಲ್ ಮಾದರಿಯಲ್ಲಿ ರೂ. 198 ಪ್ಲಾನ್ ಘೊಷಣೆ ಮಾಡಿರುವ ಐಡಿಯಾ, 28 ದಿನಗಳ ಅವಧಿಗೆ 1GB ಡೇಟಾವನ್ನು ಅಲ್ಲದೇ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ನೀಡಲಿದೆ.

BSNL 187 ಪ್ಲಾನ್:

BSNL 187 ಪ್ಲಾನ್:

ಸರ್ಕಾರಿ ಒಡೆತನದ BNSL 28 ದಿನಗಳ ಅವಧಿಗೆ 187 ಪ್ಲಾನ್ ಘೋಷಣೆ ಮಾಡಿದೆ. ಇಲ್ಲಿಯೂ ಅನ್‌ಲಿಮಿಡೆಟ್ ಕರೆ ಮತ್ತು ಡೇಟಾ ಸೇವೆ ದೊರೆಯಲಿದೆ. ಅಲ್ಲದೇ 1GB ಹೈಸ್ಪೀಡ್ ಡೇಟಾ ಬಳಕೆಗೆ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Best Tariff Plans From Telecom Operators Aimed at Heavy Voice Calling Users Under Rs 200. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot