ಪ್ರವಾಸಿಗರಿಗಾಗಿ ಇಂತಹ ಆಪ್‌ಗಳು ಇವೆ ಎಂಬ ಕಲ್ಪನೆಯೂ ಇರುವುದಿಲ್ಲ!!

|

ಕಳೆದ ತಿಂಗಳು ಸಪ್ಟೆಂಬರ್ 27 ರಂದು 'ವಿಶ್ವ ಪ್ರವಾಸೋದ್ಯಮ ದಿನ'ದ ಆಚರಣೆಯ ಪ್ರಯುಕ್ತ ವಿಶ್ವಸಂಸ್ಥೆ 'ಪ್ರವಾಸೋದ್ಯಮ ಮತ್ತು ಡಿಜಿಟಲ್‌ ಪರಿವರ್ತನೆ'(Tourism and the Digital Transformation) ಎಂಬ ಘೋಷವಾಕ್ಯ ಪ್ರಕಟಿಸಿದೆ. ತದ ನಂತರ ಡಿಜಿಟಲೀಕರಣ ಮತ್ತು ಪ್ರವಾಸೋದ್ಯಮಗಳು ಈಗ ಒಂದೇ ನಾಣ್ಯದ ಎರಡು ಮುಖಗಳಾಗಿ ಕಾಣಿಸತೊಡಗಿವೆ.

ಹೌದು, ಪ್ರವಾಸದ ಅಗತ್ಯವನ್ನು ಪೂರೈಸಲು ಅದಾಗಲೇ ಬಹಳಷ್ಟು ಮೊಬೈಲ್ ಆಪ್‌ಗಳು ನಿರಂತರ ಕಾರ್ಯಾಚರಣೆಯಲ್ಲಿವೆ. ಏಕಾಂಗಿ ಅಥವಾ ಇಡೀ ಕುಟುಂಬದ ಪ್ರವಾಸವಾಗಲಿ ಎಲ್ಲವನ್ನೂ ಬಹಳ ಸಲೀಸುಗೊಳಿಸುವ ಸಲುವಾಗಿಯೇ ಹತ್ತಾರು ಆಪ್‌ಗಳು ಈಗ ನಮಗೆ ಲಭ್ಯವಿವೆ. ಡಿಜಿಟಲೀಕರಣದಿಂದ ಪ್ರಯಾಣಗಳು ಈಗ ಪರಿವರ್ತನೆ ಕಡೆಗೆ ಮುಖಮಾಡಿವೆ.

ಪ್ರವಾಸಿಗರಿಗಾಗಿ ಇಂತಹ ಆಪ್‌ಗಳು ಇವೆ ಎಂಬ ಕಲ್ಪನೆಯೂ ಇರುವುದಿಲ್ಲ!!

ನಮ್ಮ ದೇಶದ ಗಡಿಯನ್ನು ದಾಟಿ ಇನ್ನಾವುದೇ ದೇಶಕ್ಕೆ ಪ್ರಯಾಣ ಬೆಳೆಸಿದರೂ ಅಲ್ಲೊಬ್ಬ ಸ್ನೇಹಿತ ನಿಮಗಾಗಿ ಕಾದಿರುತ್ತಾನೆ. ಮುಖ ನೋಡಿರದಿದ್ದರೂ, ನಿಮಗಾಗಿ ತನ್ನ ಮನೆಯಲ್ಲಿಯೇ ವಾಸ್ತವ್ಯಕ್ಕೆ ಅಣಿಗೊಳಿಸಿರುತ್ತಾನೆ. ಉಚಿತವಾಗಿ ಊಟದ ವ್ಯವಸ್ಥೆಯನ್ನೂ ಮಾಡುತ್ತಾನೆ. ಇದಕ್ಕೆಲ್ಲಾ ಸಾಹಾಯ ಮಾಡುತ್ತಿರುವುದು ಈ ಡಿಜಿಟಲ್ ಪ್ರಪಂಚದ ಆಪ್‌ಗಳು ಮಾತ್ರ.!

ಕೌಚ್ ಸರ್ಫಿಂಗ್(CouchSurfing)!

ಕೌಚ್ ಸರ್ಫಿಂಗ್(CouchSurfing)!

ಕೌಚ್ ಸರ್ಫಿಂಗ್ ಎಂಬ ಆಪ್‌ ಬಗ್ಗೆ ತಿಳಿದುಕೊಳ್ಳದಿದ್ದರೆ ಇಂದು ಈ ಆಪ್‌ ಬಗ್ಗೆ ನೀವು ತಿಳೀದುಕೊಳ್ಳಲೇಬೇಕು. ಉಚಿತವಾಗಿ ಊಟ, ವಾಸ್ತವ್ಯಕ್ಕೆ ನೆರವಾಗುತ್ತಾರೆ ಎಂದು ಹೇಳಿದೆನಲ್ಲ. ಅದಕ್ಕೆ ಇರುವ ಆಪ್ ಇದು. ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಕೌಚ್ ಸರ್ಫಿಂಗ್ ಸಮೂಹದ ಸದಸ್ಯ ಸಿಗಬಹುದು. ನೋಂದಾಯಿಸಿಕೊಂಡಿರುವ 4 ಲಕ್ಷ ಮಂದಿ, 40 ಲಕ್ಷ ಮಂದಿ ಪಯಣಿಗರು ಈ ಸಮೂಹದಲ್ಲಿದ್ದಾರೆ.

ಆಡಿಯೊ ಕಾಂಪಾಸ್ (AudioCompass)

ಆಡಿಯೊ ಕಾಂಪಾಸ್ (AudioCompass)

ಭಾರತ ಪ್ರವಾಸೋದ್ಯಮ ಇಲಾಖೆಯು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 'ಆಡಿಯೊ ಕಾಂಪಾಸ್' ಆಪ್‌ ಅನ್ನು ಹೊರತಂದಿದೆ. ಈ ಆಪ್‌ನಿಂದ ಯಾವುದೇ ಮಾಹಿತಿ ಉಚಿತವಾಗಿಯೇ ಸಿಗುತ್ತಿದ್ದು, ಎಲ್ಲ ಜಾಗಗಳ ಆಡಿಯೊ ವಿವರಣೆ ಕೇಳಲು ಕೇವಲ 49ರೂ. ನೀಡಿ ನೋಂದಾಯಿಸಿಕೊಳ್ಳಬಹುದು ಗೈಡ್‌ನಂತೆ ದೇಶ, ವಿದೇಶಗಳ ಪ್ರಮುಖ ಸ್ಥಳಗಳ ಮಾಹಿತಿಯನ್ನು ಸ್ಪಷ್ಟವಾಗಿ ಪಡೆಯಬಹುದು.

ಗೂಗಲ್‌ ಟ್ರಿಪ್ಸ್(Google Trips)

ಗೂಗಲ್‌ ಟ್ರಿಪ್ಸ್(Google Trips)

ಕಾಯ್ದಿರಿಸಿದ ಟಿಕೆಟ್, ಸಾಗುವ ಹಾದಿ, ಭೇಟಿ ನೀಡಲಿರುವ ಸ್ಥಳ, ಹೋಟೆಲ್ ಸೇರಿದಂತೆ ಎಲ್ಲ ಮಾಹಿತಿಯನ್ನು ನಿಮ್ಮ ಜಿಮೇಲ್‌ನಿಂದ ಪಡೆದು ಸಮಯ ಹಾಗೂ ದಿನಾಂಕದ ಅನ್ವಯ ಪಟ್ಟಿ ಸಿದ್ಧಪಡಿಸುವ ಗೂಗಲ್ ಟ್ರಿಪ್ಸ್ ಆಪ್ ಇಲ್ಲದೆ ಪ್ರವಾಸಕ್ಕೆ ಹೊರಡುವುದಾದರೂ ಹೇಗೆ? ಎಲ್ಲ ಹುಟುಕಾಟವನ್ನೂ ಗೂಗಲ್‌ನಲ್ಲಿಯೇ ನಡೆಸುವುದರಿಂದ ಗೂಗಲ್‌ ಟ್ರಿಪ್ಸ್ ನಮ್ಮ ಪ್ರವಾಸದಲ್ಲಿ ಸಮಯ ಯೋಜನೆಯಲ್ಲಿ ಸಹಕಾರಿಯಾಗಿದೆ. ಈ ಆಪ್ ಪ್ರಯಾಣಕ್ಕೂ ಹಿಂದಿನ ದಿನದಿಂದಲೇ ಸೂಚನೆ ನೀಡುತ್ತಿರುತ್ತದೆ.

ಟ್ರಾವೆಲ್ ಖಾನಾ(travelkhana)

ಟ್ರಾವೆಲ್ ಖಾನಾ(travelkhana)

ರೈಲು ಪ್ರಯಾಣದ ವೇಳೆ ಬಿಸಿಯಾದ ಹಾಗೂ ರುಚಿಕರವಾದ ಊಟ ತಿಂಡಿ ತಿನ್ನಬೇಕು ಎಂದರೆ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ದಿನದ 24 ಗಂಟೆಯೂ ಕಾರ್ಯಾಚರಿಸುವ ಆಪ್ ಇದಾಗಿದ್ದು, ನಾವು ಪ್ರಯಾಣಿಸುತ್ತಿರುವ ಮಾರ್ಗದಲ್ಲಿಯೇ ಆಹಾರ ಪೂರೈಕೆ ಮಾಡುತ್ತಾರೆ. ಪಿಎನ್‌ಆರ್‌ ಸಂಖ್ಯೆ ಹಾಗೂ ರೈಲ್ವೆ ನಿಲ್ದಾಣದ ಮಾಹಿತಿ, ನಿಗದಿತ ಬೆಲೆ ನೀಡಿದರೆ ಗುಣಮಟ್ಟದ ಊಟ ನಿಮಗೆ ಸಿಗಲಿದೆ.

ಸ್ಪ್ಲಿಟ್‌ವೈಸ್ (Splitwise)

ಸ್ಪ್ಲಿಟ್‌ವೈಸ್ (Splitwise)

ಈಗೆಲ್ಲಾ ಬೈಕುಗಳಲ್ಲಿ ಹತ್ತಾರು ಜನ ಒಟ್ಟಿಗೆ ಪ್ರವಾಸ ಹೋಗುವುದು ಕಾಮನ್. ಅಂತಹ ಸಮಯದಲ್ಲಿ ಹಣವನ್ನು ಗುಂಪಾಗಿ ಖರ್ಚು ಮಾಡಿದರೂ ಅದರ ಲೆಕ್ಕವನ್ನು ಪಕ್ಕವಾಗಿಡಲು ಈ ಆಪ್ ಸಹಾಯಕ. ಪ್ರಯಾಣದಲ್ಲಿರುವ ಎಲ್ಲರೂ ಈ ಆಪ್‌ ಹೊಂದಿರಬೇಕು ಹಾಗೂ ಮಾಡುವ ಖರ್ಚಿನ ಲೆಕ್ಕವನ್ನು ನಮೂದಿಸುತ್ತ ಹೋದರೆ ಸಾಕು. ಅಂತಿಮವಾಗಿ ಆಗಿರುವ ಒಟ್ಟು ಖರ್ಚು, ತಲಾ ಖರ್ಚಿನ ಮೊತ್ತ ಹಾಗೂ ಪ್ರತ್ಯೇಕವಾಗಿ ಬಾಕಿಯಿರುವ ಹಣ ಎಲ್ಲವೂ ಕ್ಷಣದಲ್ಲಿ ಲೆಕ್ಕ ಮಾಡಿ ತೋರಿಸುತ್ತದೆ.

Best Mobiles in India

English summary
Download some of the 15 best travel apps before your next trip and ... Smart travelersload up their smartphones with an array of handy apps to. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X