Home
ಸುದ್ದಿಜಾಲ

ನೀವು ಪ್ರವಾಸ ಮಾಡುವಾಗ ಈ ಅಪ್ಲಿಕೇಶನ್‌ಗಳು ನಿಮಗೆ ಸಹಾಯಕ್ಕೆ ಬರಲಿವೆ!

ಪ್ರಸ್ತುತ ದಿನಗಳಲ್ಲಿ ಪ್ರವಾಸಕ್ಕೆ ಹೊರಡುವುದು ಎಂದರೆ ಎಲ್ಲರಿಗೂ ಕೂಡ ಅಚ್ಚುಮೆಚ್ಚು. ಆದರೆ ಪ್ರವಾಸಕ್ಕೆ ಹೊರಡುವಾಗ ಕೆಲವು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅವಶ್ಯಕ. ನೀವು ಯಾವ ಸ್ಥಳಕ್ಕೆ ಪ್ರವಾಸ ಹೋಗುತ್ತಿದ್ದೀರಾ? ಯಾವಾಗ ಹೋಗುತ್ತಿದ್ದೀರಾ? ಅಲ್ಲಿಯ ವಿಶೇಷತೆ ಏನು ಎಲ್ಲವೂ ಕೂಡ ಪ್ರಮುಖವಾಗಲಿದೆ. ಇದಲ್ಲದೆ ನೀವು ಪ್ರವಾಸಕ್ಕೆ ಹೊರಡುವ ಮುನ್ನ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಅಗತ್ಯವಾದ ಅಪ್ಲಿಕೇಶನ್‌ಗಳನ್ನು ಹೊಂದಿದ್ದರೆ ಅದು ನಿಮಗೆ ಸಹಾಯಕವಾಗಲಿದೆ.

ಅಪ್ಲಿಕೇಶನ್‌ಗಳು

ಹೌದು, ಪ್ರವಾಸಕ್ಕೆ ಹೋಗುವ ಮುನ್ನ ಕೆಲವು ಅಪ್ಲಿಕೇಶನ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿದ್ದರೆ ಸೂಕ್ತ. ಪ್ರವಾಸಕ್ಕೆ ಹೋಗುವವರಿಗಾಗಿಯೇ ಹಲವು ಅಪ್ಲಿಕೇಶನ್‌ಗಳು ಲಭ್ಯವಿದೆ. ಈ ಅಪ್ಲಿಕೇಶನ್‌ಗಳ ಸಹಾಯದಿಂದ ನೀವು ಪ್ರವಾಸಕ್ಕೆ ಹೊರಡುವ ಸ್ಥಳಗಳ ಬಗ್ಗೆ ಮಾಹಿತಿಯನ್ನು ತಿಳಿಯಬಹುದು. ಅಲ್ಲದೆ ನಿಮಗೆ ಅಗತ್ಯವಾಗಿರುವ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಹಾಗಾದ್ರೆ ಪ್ರವಾಸಕ್ಕೆ ಹೊರಡುವ ಮುನ್ನ ನಿಮಗೆ ಸೂಕ್ತ ಎನಿಸುವ ಅತ್ಯುತ್ತಮ ಟ್ರಾವೆಲ್‌ ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಲಾಂಜ್ ಬಡ್ಡಿ

ಲಾಂಜ್ ಬಡ್ಡಿ

ನೀವು ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಸಮಯ ಕಾಯಬೇಕಾದ ಸನ್ನಿವೇಶ ಬರುತ್ತದೆ ಎಂದುಕೊಳ್ಳಿ. ಇಂತಹ ಸಮಯದಲ್ಲಿ ವಿಶ್ರಾಂತಿಗಾಗಿ ಸ್ಥಳ ಹುಡುಕಬೇಕಾದ ಅನಿವಾರ್ಯತೆ ಬರಬಹುದು. ಅಲ್ಲದೆ ಲಾಂಜ್‌ಗಳಿಗೆ ನಿಮಗೆ ಸೂಕ್ತ ಸಮಯದಲ್ಲಿ ಪ್ರವೇಶ ಸಿಗದಿರಬಹುದು. ಆಗ ನಿಮಗೆ ಲಾಂಜ್‌ ಬಡ್ಡಿ ಅಪ್ಲಿಕೇಶನ್‌ ಸಹಾಯ ಮಾಡಲಿದೆ. ನಿಮ್ಮ ಕ್ರೆಡಿಟ್ ಕಾರ್ಡ್, ಏರ್‌ಲೈನ್ ಸ್ಟೇಟಸ್‌ ಮತ್ತು ಲೌಂಜ್ ಮೆಂಬರ್‌ಶಿಪ್‌ಗಳನ್ನು ನಮೂದಿಸಿದ ನಂತರ ನೀವು ಯಾವ ಲಾಂಜ್‌ ಪ್ರವೇಶಿಸಬೇಕು ಎನ್ನುವ ಮಾಹಿತಿಯನ್ನು ಈ ಅಪ್ಲಿಕೇಶನ್ ತಿಳಿಸಿಕೊಡಲಿದೆ. ಅಲ್ಲದೆ ಯಾವುದೇ ಉಚಿತ ಲಾಂಜ್‌ಗಳು ಅಥವಾ ನೀವು ದಿನದ ಪಾಸ್ ಅನ್ನು ಖರೀದಿಸಬಹುದ ಇಲ್ಲವೇ ಎನ್ನುವ ವಿಚಾರಗಳ ಬಗ್ಗೆ ಮಾಹಿತಿ ನೀಡಲಿದೆ.

ಹಾಸ್ಟೆಲ್‌ ವರ್ಲ್ಡ್

ಹಾಸ್ಟೆಲ್‌ ವರ್ಲ್ಡ್

ಟ್ರಾವಲ್‌ ಮಾಡುವಾಗ ನೀವು ಉಳಿದುಕೊಳ್ಳುವುದಕ್ಕೆ ವಸತಿ ಬುಕಿಂಗ್ ಮಾಡುವುದಕ್ಕೆ ಅವಕಾಸ ನೀಡಲಿದೆ. ನೀವು ನಿರೀಕ್ಷಿಸುವ ಎಲ್ಲಾ ಸಾಮಾನ್ಯ ಕೆಲಸಗಳನ್ನು ಹಾಸ್ಟೆಲ್‌ವರ್ಲ್ಡ್‌ ಅಪ್ಲಿಕೇಶನ್ ಮಾಡಲಿದೆ. ವಸತಿ ಗೃಹಗಳು, ಹುಡುಕಾಟಗಳು, ವಿವರಣೆಗಳು, ಫಿಲ್ಟರ್‌ಗಳನ್ನು ಕೂಡ ಇದು ಹೊಂದಿದೆ. ನೀವು ಇಷ್ಟಪಡುವ ಹಾಸ್ಟೆಲ್ ನೀವು ಎಲ್ಲಿ ಇರಬೇಕೆಂದು ಬಯಸುತ್ತೀರೋ ಅಲ್ಲಿ ಅವಕಾಶ ಇದೆಯೇ ಇಲ್ಲವೇ ಎನ್ನುವ ವಿಚಾರಗಳನ್ನು ಈ ಅಪ್ಲಿಕೇಶನ್‌ ಮೂಲಕ ತಿಳಿದುಕೊಳ್ಳಬಹುದಾಗಿದೆ. ಇನ್ನು ಈ ಹಾಸ್ಟೆಲ್‌ ವರ್ಲ್ಡ್‌ ಅಪ್ಲಿಕೇಶನ್‌ iOS ಮತ್ತು ಆಂಡ್ರಾಯ್ಡ್‌ ಎರಡರಲ್ಲೂ ಕೂಡ ಲಭ್ಯವಿದೆ.

ಸ್ಕೈ ಸ್ಕ್ಯಾನರ್

ಸ್ಕೈ ಸ್ಕ್ಯಾನರ್

ಅಗ್ಗದ ಬೆಲೆಯಲ್ಲಿ ಫ್ಲೈಟ್‌ ಟಿಕೆಟ್‌ ಬುಕ್‌ ಮಾಡುವುದಕ್ಕೆ ಸ್ಕೈಸ್ಕ್ಯಾನರ್ ಅಪ್ಲಿಕೇಶನ್‌ ಸೂಕ್ತವಾಗಿದೆ. ಈ ಅಪ್ಲಿಕೇಶನ್‌ 1,200ಕ್ಕೂ ಹೆಚ್ಚು ಮೂಲಗಳಿಂದ ಲಕ್ಷಾಂತರ ಫ್ಲೈಟ್‌ಗಳನ್ನು ಸರ್ಚ್‌ ಮಾಡಲಿದೆ. ನಂತರ ನಿಮಗೆ ನಿಮಗೆ ಲಭ್ಯವಿರುವ ವಿಮಾನಗಳ ಆಯ್ಕೆಗಳನ್ನು ನೀಡುತ್ತದೆ. ಇದರಲ್ಲಿ ನಿಮಗೆ ಸೂಕ್ತವಾದ ಚಾರ್ಟ್ ಫೀಚರ್ಸ್‌ ಲಭ್ಯವಾಗಲಿದ್ದು, ನೀವು ತಲುಪಬೇಕಾದ ಸ್ಥಳಕ್ಕೆ ಲಭ್ಯವಿರುವ ಅವಕಾಶದ ಬಗ್ಗೆ ಮಾಹಿತಿ ನೀಡಲಿದೆ. ಅಲ್ಲದೆ ನಿಮಗೆ ದಿನದಿಂದ ದಿನಕ್ಕೆ ಹೇಗೆ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಿದೆ.

ಹೋಟೆಲ್ ಟುನೈಟ್

ಹೋಟೆಲ್ ಟುನೈಟ್

ಪ್ರವಾಸದ ಸಂದರ್ಭದಲ್ಲಿ ಹೋಟೆಲ್‌ ಟು ನೈಟ್‌ ಅಪ್ಲಿಕೇಶನ್‌ ಸೂಕ್ತ ಎನಿಸಿಲಿದೆ. ಇದರಿಂದ ನೀವು ಪ್ರವಾಸಕ್ಕೆ ಹೋದ ಸ್ಥಳಗಳಲ್ಲಿ ಉಳಿದುಕೊಳ್ಳುವುದಕ್ಕೆ ಹೋಟೆಲ್‌ಗಳ ಬಗ್ಗೆ ಮಾಹಿತಿ ನೀಡಲಿದೆ. ಅಲ್ಲದೆ ಲಭ್ಯವಿರುವ ಹೋಟೆಲ್ ರೂಂ ಗಳಲ್ಲಿ ಕೊನೆಯ ನಿಮಿಷದ ರಿಯಾಯಿತಿಗಳನ್ನು ನೀಡುತ್ತದೆ. ಅಲ್ಲದೆ ಈ ಅಪ್ಲಿಕೇಶನ್‌ ಮೂಲಕ ರೂಂಗಳನ್ನು ಕಡಿಮೆ ಬೆಲೆಯಲ್ಲಿ ರಿಸರ್ವ್‌ ಮಾಡಲು ಸಾಧ್ಯವಾಗಲಿದೆ. ಅಲ್ಲದೆ ಇದು 24/7 ಕಸ್ಟಮರ್‌ ಕೇರ್‌ ವ್ಯವಸ್ಥೆಯನ್ನು ಕೂಡ ಹೊಂದಿದೆ.

ಟ್ರಿಪ್ಇಟ್

ಟ್ರಿಪ್ಇಟ್

ಟ್ರಿಪ್ಇಟ್ ಅಪ್ಲಿಕೇಶನ್‌ನಲ್ಲಿ ನೀವು ನಿಮ್ಮ ಹೋಟೆಲ್, ರೆಸ್ಟೋರೆಂಟ್, ಫ್ಲೈಟ್ ಮತ್ತು ಕಾರು ಬಾಡಿಗೆ ದೃಢೀಕರಣ ಇಮೇಲ್‌ಗಳನ್ನು [email protected] ಗೆ ಫಾರ್ವರ್ಡ್ ಮಾಡಬೇಕಾಗುತ್ತದೆ. ನಂತರ ಅದು ಸ್ವಯಂಚಾಲಿತವಾಗಿ ಎಲ್ಲಾ ಮಾಹಿತಿಯನ್ನು ನಿಮ್ಮ ಮಾಸ್ಟರ್ ಟ್ರಾವಲ್‌ಗೆ ವರ್ಗಾಯಿಸುತ್ತದೆ. ಇದರಿಂದಾಗಿ ನಿಮ್ಮ ಮುಂಬರುವ ಎಲ್ಲಾ ಪ್ಲಾನ್‌ಗಳನ್ನು ಸುಲಭವಾಗಿ ವೀಕ್ಷಿಸಬಹುದು.

ಓಪನ್ ರೈಸ್

ಓಪನ್ ರೈಸ್

ಓಪನ್ ರೈಸ್ ಹೆಸರೇ ಸೂಚಿಸುವಂತೆ ನೀವು ಪ್ರವಾಸದಲ್ಲಿರುವ ನಗರದ ಅತ್ಯಂತ ಜನಪ್ರಿಯ ರೆಸ್ಟೋರೆಂಟ್‌ಗಳು, ರೇಟಿಂಗ್‌ಗಳು, ಮೆನುಗಳು, ಬುಕಿಂಗ್ ಸಂಖ್ಯೆಗಳು ಎಲ್ಲದರ ಮಾಹಿತಿಯನ್ನು ತೋರಿಸುತ್ತದೆ. ಇದು ಆಗ್ನೇಯ ಏಷ್ಯಾದಲ್ಲಿ ವ್ಯಾಪಕವಾಗಿದೆ. ಇದು ಹಾಂಗ್ ಕಾಂಗ್, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ್, ಥೈಲ್ಯಾಂಡ್ ಮತ್ತು ಫಿಲಿಪೈನ್ಸ್‌ ಪಟ್ಟಿಗಳನ್ನು ಹೊಂದಿದೆ.

ಹವಾಮಾನ ಅಪ್ಲಿಕೇಶನ್

ಹವಾಮಾನ ಅಪ್ಲಿಕೇಶನ್

ಪ್ರಯಾಣಿಕರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವೆಂದರೆ ಹವಾಮಾನವನ್ನು ಪರಿಶೀಲಿಸುವುದು. ನೀವು ಪ್ರವಾಸದಲ್ಲಿರುವಾಗ, ನೀವು ಹವಾಮಾನವನ್ನು ಪರಿಶೀಲಿಸಬೇಕು- ಮಳೆ ಬೀಳುತ್ತದೆಯೇ, ಅಥವಾ ಗಾಳಿ ಬೀಸುತ್ತದೆಯೇ ಅಥವಾ ಬಿಸಿಲು ಬೀಳುತ್ತದೆಯೇ ಎಂದು ತಿಳಿಯಲು ಮತ್ತು ಅದಕ್ಕೆ ಅನುಗುಣವಾಗಿ ನೀವು ಸಿದ್ಧರಾಗಿ ಹೊರಡಬಹುದು. ದಿನ ವ್ಯರ್ಥವಾಗದಿರಬಹುದು. ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಯಾವುದೇ ಹವಾಮಾನ ಅಪ್ಲಿಕೇಶನ್ ಅನ್ನು ನೀವು ಆಯ್ಕೆ ಮಾಡಬಹುದು.

XE ಕರೆನ್ಸಿ

XE ಕರೆನ್ಸಿ

ನೀವು ಬಹು ದೇಶಗಳಿಗೆ ಭೇಟಿ ನೀಡುವವರಾಗಿದ್ದರೆ XE ಕರೆನ್ಸಿ ಹೊಂದಲು ಉತ್ತಮ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಬಹು ದೇಶಗಳಿಗೆ ಕರೆನ್ಸಿ ವಿನಿಮಯ ದರಗಳ ಕುರಿತು ಇತ್ತೀಚಿನ ಮಾಹಿತಿಯನ್ನು ನಿಮಗೆ ತಿಳಿಸುತ್ತದೆ ಇದರಿಂದ ಬಳಕೆದಾರರು ಅದಕ್ಕೆ ಅನುಗುಣವಾಗಿ ಟ್ರ್ಯಾಕ್ ಮಾಡಬಹುದು.

ಗೂಗಲ್ ಟ್ರಾನ್ಸ್‌ಲೇಟ್

ಗೂಗಲ್ ಟ್ರಾನ್ಸ್‌ಲೇಟ್

ಗೂಗಲ್ ಟ್ರಾನ್ಸ್‌ಲೇಟ್ ನೀವು ವಿದೇಶಕ್ಕೆ ಪ್ರಯಾಣಿಸುತ್ತಿದ್ದರೆ ಮತ್ತು ಭಾಷೆಯ ನಿರ್ಬಂಧಗಳ ಬಗ್ಗೆ ನೀವು ಚಿಂತೆ ಮಾಡುತ್ತಿದ್ದರೆ ಇದು ಸರಿಯಾದ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಶನ್ ಮೂಲಕ, ನೀವು ಏನು ಬೇಕಾದರೂ ಅರ್ಥಮಾಡಿಕೊಳ್ಳಬಹುದು ಮತ್ತು ಯಾರೊಂದಿಗೂ ಏನು ಬೇಕಾದರೂ ಮಾತನಾಡಬಹುದು, ಆದರೆ ವಾಸ್ತವಿಕವಾಗಿ. ನಾನು ಬ್ಯಾಂಕಾಕ್‌ನ ಮಾರುಕಟ್ಟೆಯಲ್ಲಿ ಶಾಪಿಂಗ್ ಮಾಡುವಾಗ ಮತ್ತು ಇಂಗ್ಲಿಷ್ ತಿಳಿದಿಲ್ಲದ ಅಂಗಡಿಯವನೊಬ್ಬನಿದ್ದಾಗ ಈ ಅಪ್ಲಿಕೇಶನ್ ನನಗೆ ಹೇಗೆ ಸಹಾಯ ಮಾಡಿತು ಮತ್ತು ಅವರ ಗೂಗಲ್ ಟ್ರಾನ್ಸ್‌ಲೇಟರ್ ಸಂರಕ್ಷಕನಂತೆ ವರ್ತಿಸಿತು ಎಂದು ನನಗೆ ನೆನಪಿದೆ. ಆದ್ದರಿಂದ, ನಿಮ್ಮ ಪ್ರವಾಸದಲ್ಲಿರುವಾಗ ನೀವು ಈ ಅಪ್ಲಿಕೇಶನ್ ಅನ್ನು ಹೊಂದಿರಬೇಕು.

Best Mobiles in India

English summary
Best travelling apps of 2022 that every traveller should have
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+