ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಸ್ಮಾರ್ಟ್‌ಟಿವಿ ಮೇಲೆ ಇದೀಗ 60% ಡಿಸ್ಕೌಂಟ್!
ನೀವು ಜನಪ್ರಿಯ ಸೋನಿ, ಎಲ್‌ಜಿ ಕಂಪೆನಿಯ ಸ್ಮಾರ್ಟ್‌ಟಿವಿ ಖರೀದಿಸಬೇಕೆಂದು ಕೊಂಡಿದ್ದೀರಾ? ಆದರೆ ಜನಪ್ರಿಯ ಬ್ರ್ಯಾಂಡ್ ಸ್ಮಾರ್ಟ್‌ಟಿವಿಗಳಿಗೆ ಬೆಲೆ ಜಾಸ್ತಿ ಅಂತಾ ಯೋಚನೆ ಮಾಡ್ತಾ ಇದ್ದೀರಾ? ಇದೀಗ ಆ ಯೋಚನೆ ಮಾಡಬೇಕಾದ ಅಗತ್ಯವಿಲ್ಲ. ಯಾಕಂದ್ರೆ ನಿಮ್ಮ ನೆಚ್ಚಿನ ಸೋನಿ, ಎಲ್‌ಜಿ ಸ್ಮಾರ್ಟ್‌ಟಿವಿಗಳ ಮೇಲೆ 50% ಕ್ಕಿಂತ ಹೆಚ್ಚಿನ ರಿಯಾಯಿತಿ ನೀಡಲಾಗ್ತಿದೆ.
ಹೌದು, ಸೋನಿ, ಎಲ್‌ಜಿ, ಸ್ಯಾಮ್‌ಸಂಗ್ ಕಂಪೆನಿಯ ಸ್ಮಾರ್ಟ್‌ಟಿವಿಗಳಿಗೆ ಇ-ಕಾಮರ್ಸ್ ಸೈಟ್‌ಗಳಲ್ಲಿ ವಿಶೇಷ ಆಫರ್ ನೀಡಲಾಗ್ತಿದೆ. ಅದು ಕೂಡ 50% ಕ್ಕಿಂತ ಹೆಚ್ಚಿನ ಡಿಸ್ಕೌಂಟ್‌ನಲ್ಲಿ ಅಂದ್ರೆ ಸುಮ್ನೆನಾ? ಹಾಗಾದ್ರೆ 50% ಕ್ಕಿಂತ ಹೆಚ್ಚಿನ ರಿಯಾಯಿತಿಯಲ್ಲಿ ನೀವು ಖರೀದಿಸಬಹುದಾದ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಿ ಶಿಯೋಮಿ 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ ಆಂಡ್ರಾಯ್ಡ್ OLED ವಿಷನ್ ಟಿವಿ
ಮಿ ಶಿಯೋಮಿ 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ ಆಂಡ್ರಾಯ್ಡ್ OLED ವಿಷನ್ ಟಿವಿ 55% ಡಿಸ್ಕೌಂಟ್ ಪಡೆದುಕೊಂಡಿದೆ. ಇದರಿಂದ 1,99,999 ರೂ. ಬೆಲೆಯ ಸ್ಮಾರ್ಟ್‌ಟಿವಿಯನ್ನು ಕೇವಲ 89,999ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಟಿವಿ ಪ್ರತ್ಯೇಕವಾದ ಲೈಟ್ ಪಿಕ್ಸೆಲ್‌ಗಳನ್ನು ಹೊಂದಿದೆ. ಇದು ಪ್ರೀಮಿಯಂ ಮೆಟಲ್ ಬೆಜೆಲ್-ಲೆಸ್ ವಿನ್ಯಾಸವನ್ನು ಪಡೆದಿದ್ದು, ಮನೆಯಲ್ಲಿಯೇ ಕುಳಿತು IMAX ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಡಾಲ್ಬಿ ವಿಷನ್ ಮತ್ತು ಸೌಂಡ್ ಸಿಸ್ಟಂ ಅನ್ನು ಸಹ ನೀಡಲಾಗಿದೆ.
ಟಿಸಿಎಲ್ 65 ಇಂಚಿನ ಬೆಜೆಲ್-ಲೆಸ್ ಸರಣಿ 4K ಅಲ್ಟ್ರಾ HD ಸ್ಮಾರ್ಟ್ LED ಗೂಗಲ್ ಟಿವಿ
ಟಿಸಿಎಲ್ ಕಂಪೆನಿಯ 65 ಇಂಚಿನ ಬೆಜೆಲ್ ಲೆಸ್ ಸಿರೀಸ್ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್‌ಇಡಿ ಗೂಗಲ್ ಟಿವಿ 60% ಡಿಸ್ಕೌಂಟ್ ಪಡೆದಿದೆ. ಇದರಿಂದ ಈ ಸ್ಮಾರ್ಟ್‌ಟಿವಿ ಕೇವಲ 49,990ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಸ್ಮಾರ್ಟ್‌ಟಿವಿ ನಿಮ್ಮ ಮನೆಯ ಮನರಂಜನಾ ಅನುಭವವನ್ನು ಹೆಚ್ಚಿಸಲು ಅಗತ್ಯವಾದ ಫೀಚರ್ಸ್‌ಗಳನ್ನು ಹೊಂದಿದೆ. ಇದರಲ್ಲಿ ಗೂಗಲ್ ಅಸಿಸ್ಟೆಂಟ್ ಅನ್ನು ಸಹ ನೀಡಲಾಗಿದೆ. ಈ ಟಿವಿ ಡಾಲ್ಬಿ ಆಡಿಯೋ ಸಿಸ್ಟಂ ಅನ್ನ ಒಳಗೊಂಡಿದೆ.

ಎಲ್‌ಜಿ 65 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ OLED ಟಿವಿ
ಎಲ್‌ಜಿ 65 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ OLED ಟಿವಿ ಬಳಕೆದಾರರ ಮನಗೆಲ್ಲುವಲ್ಲಿ ಮುಂಚೂಣಿಯಲ್ಲಿದೆ. ಈ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ 50% ಡಿಸ್ಕೌಂಟ್ ಪಡೆದಿದೆ. ಇದರಿಂದ ಸ್ಮಾರ್ಟ್‌ಟಿವಿ 2,99,990ರೂ. ಬದಲಿಗೆ ಕೇವಲ 1,49,990 ರೂ.ಬೆಲೆಯಲ್ಲಿ ನಿಮ್ಮ ಮನೆ ಸೇರಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ಸೆಲ್ಫಿ ಫಿಟ್ ಒಎಲ್‌ಇಡಿ, ಸರೌಂಡ್ ಸೌಂಡ್, ಅಮೆಜಾನ್ ಅಲೆಕ್ಸಾದಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.
ಸೋನಿ ಬ್ರಾವಿಯಾ 55 ಇಂಚಿನ XR ಸರಣಿ 4K ಅಲ್ಟ್ರಾ HD ಸ್ಮಾರ್ಟ್ OLED ಗೂಗಲ್ ಟಿವಿ
ಸೋನಿ ಬ್ರಾವಿಯಾ 55 ಇಂಚಿನ XR ಸರಣಿ 4K ಅಲ್ಟ್ರಾ HD ಸ್ಮಾರ್ಟ್ OLED ಗೂಗಲ್ ಟಿವಿಯು ಅಮೆಜಾನ್‌ನಲ್ಲಿ ಆಫರ್ ಪಡೆದುಕೊಂಡಿರುವ ಅತ್ಯುತ್ತಮ ಸ್ಮಾರ್ಟ್‌ಟಿವಿಗಳಲ್ಲಿ ಒಂದೆನಿಸಿಕೊಂಡಿದೆ. 2,49,900ರೂ. ಮೂಲಬೆಲೆಯ ಈ ಸ್ಮಾರ್ಟ್‌ಟಿವಿ 50% ಡಿಸ್ಕೌಂಟ್ ಪಡೆದುಕೊಂಡಿದೆ. ಆದರಿಂದ ಇದನ್ನು ನೀವು ಕೇವಲ 1,24,990ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಸ್ಮಾರ್ಟ್‌ಟಿವಿ XR ಪ್ರೊಸೆಸರ್, ಕಾಂಟ್ರಾಸ್ಟ್, ಡಾಲ್ಬಿ ವಿಷನ್, ಗೂಗಲ್ ಟಿವಿ, ಡಾಲ್ಬಿ ಸೌಂಡ್, ವಾಯ್ಸ್ ಸರ್ಚ್ ನಂತಹ ಅಗತ್ಯ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ರೆಡ್ಮಿ 32 ಇಂಚಿನ HD ರೆಡಿ ಸ್ಮಾರ್ಟ್ LED ಫೈರ್ ಟಿವಿ
ರೆಡ್ಮಿ ಕಂಪೆನಿಯ ಈ ಸ್ಮಾರ್ಟ್‌ಟಿವಿ ಮೇಲೆ ಅಮೆಜಾನ್ 50% ಡಿಸ್ಕೌಂಟ್ ನೀಡಿದೆ. ಇದರಿಂದ ಸ್ಮಾರ್ಟ್‌ಟಿವಿಯನ್ನು ಕೇವಲ 12,499ರೂ. ಬೆಲೆಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 32 ಇಂಚಿನ HD ರೆಡಿ ಸ್ಮಾರ್ಟ್ LED ಡಿಸ್‌ಪ್ಲೇಯನ್ನು ಹೊಂದಿದೆ. ಇದು ನಿಮಗೆ ಸಿನಿಮ್ಯಾಟಿಕ್ ಅನುಭವವನ್ನು ಮನೆಯಲ್ಲಿಯೇ ನೀಡಲಿದೆ.


Click it and Unblock the Notifications








