ನಿಮ್ಮ ಫೋನ್ ರಕ್ಷಣೆಗೆ ಇರಲಿ 'ವಾಟರ್‌ ಪ್ರೂಫ್' ಕವರ್‌!

|

ಮಾರುಕಟ್ಟೆಯಲ್ಲಿ ವಾಟರ್‌ ಪ್ರೂಫ್ ಫೋನ್‌ಗಳಿಗೆ ಉತ್ತಮ ಬೇಡಿಕೆ ಇದೆ. ಇನ್ನೇನು ಕೆಲವೇ ಸಮಯದಲ್ಲಿ ಮಳೆಗಾಲ ಆರಂಭವಾಗಲಿದ್ದು, ಗ್ರಾಹಕರು ಈಗಲೇ ವಾಟರ್ಪ್ರೂಫ್ ಬ್ರ್ಯಾಂಡ್ ಮೊಬೈಲ್ಗಳನ್ನೇ ಆಯ್ಕೆ ಮಾಡುತ್ತಿದ್ದಾರೆ. ಆದರೆ, ವಾಟರ್‌ ಪ್ರೂಫ್ ಪೋನ್‌ಗಳ ಬೆಲೆ ಹೆಚ್ಚಿರುವುದರಿಂದ ಎಲ್ಲರಿಗೂ ವಾಟರ್‌ ಪ್ರೂಫ್ ಬ್ರ್ಯಾಂಡ್ ಫೋನ್‌ಗಳನ್ನು ಖರೀದಿಸಲು ಸಾಧ್ಯವಿಲ್ಲ.

ಹಾಗಾಗಿ, ನೀರಿನಿಂದ ಫೋನ್‌ ರಕ್ಷಿಸುವ ಸಲುವಾಗಿ ಮಾರುಕಟ್ಟೆಯಲ್ಲಿ ವಾಟರ್‌ ಪ್ರೂಫ್ ಕವರ್‌ ಕೂಡ ಬಂದಿದೆ. ಯಾವುದೇ ಫೋನನ್ನು ನೀರಿನಿಂದ ರಕ್ಷಿಸಲು ಇದು ಸಹಾಯ ಮಾಡುತ್ತದೆ. ಇದು ಬ್ಯಾಗ್‌ನ ರೀತಿಯಲ್ಲಿ ಇದ್ದು, ಸಾಮಾನ್ಯವಾಗಿ ಹೊರಗಡೆ ತೆರಳುವ ಸಮಯದಲ್ಲಿ ಈ ವಾಟರ್‌ ಪ್ರೂಫ್ ಬ್ಯಾಗ್‌ ಅನ್ನು ಗ್ರಾಹಕರು ಮುಂಜಾಗ್ರತಾ ಕ್ರಮವಾಗಿ ಬಳಸಿಕೊಳ್ಳಬಹುದಾಗಿದೆ.

ನಿಮ್ಮ ಫೋನ್ ರಕ್ಷಣೆಗೆ ಇರಲಿ 'ವಾಟರ್‌ ಪ್ರೂಫ್' ಕವರ್‌!

ಈ ವಾಟರ್‌ ಪ್ರೂಫ್ ಕವರ್‌ ಒಂದು ಬ್ಯಾಗ್ ಆಗಿರುವುದರಿಂದ, ಮೊಬೈಲ್‌ಗಿಂತ ಸ್ವಲ್ಪ ದೊಡ್ಡದಿರುತ್ತದೆ. ಹಾಗಾಗಿ, ಫೋನ್ ಸೇರಿದಂತೆ ಇನ್ನಿತರ ಚಿಕ್ಕಪುಟ್ಟ ವಸ್ತುಗಳನ್ನು ಇದರಲ್ಲಿಡಲು ಸಾಧ್ಯವಾಗುತ್ತದೆ. ಇದನ್ನು ಹೆಚ್ಚಾಗಿ ಸ್ವಿಮ್ಮಿಂಗ್‌, ನೀರಿನ ಆಟ ಆಡುವ ವೇಳೆಯಲ್ಲಿ ಬಳಕೆ ಮಾಡುತ್ತಾರೆ. ಜೊತೆಗೆ ಮಳೆಗಾಲದಲ್ಲಿ ಇದನ್ನು ಫೋನ್ ರಕ್ಷಕನಾಗಿ ಬಳಸಿಕೊಳ್ಳಬಹುದಾಗಿದೆ.

ಸ್ವಿಮ್ಮಿಂಗ್‌, ನೀರಿನ ಆಟ ಆಡುವ ವೇಳೆಯಲ್ಲಿ ಮಾತ್ರವಲ್ಲದೇ, ಮಳೆಗಾಲದಲ್ಲಿ ಅಥವಾ ನೀರಿರುವ ಕೈಯಿಂದ ಮೊಬೈಲ್ ಮುಟ್ಟಿದರೆ ಮೊಬೈಲ್ ಹಾಳಾಗುವ ಪ್ರಮೇಯ ಹೆಚ್ಚಿರುತ್ತದೆ. ಈ ವೇಳೆ ಸಾಮಾನ್ಯ ಮೊಬೈಲ್ ಸುರಕ್ಷೆಗೆ ವಾಟರ್‌ ಪ್ರೂಫ್ ಬ್ಯಾಗ್‌ ಅನ್ನು ಉಪಯೋಗ ಮಾಡಬಹುದು. ಹಾಗಾದರೆ, ಯಾವ ವಾಟರ್‌ ಪ್ರೂಫ್ ಕವರ್‌ ಎಂಬುದಕ್ಕೂ ಸಹ ನಮ್ಮಲ್ಲಿ ಉತ್ತರವಿದೆ.

ನಿಮ್ಮ ಫೋನ್ ರಕ್ಷಣೆಗೆ ಇರಲಿ 'ವಾಟರ್‌ ಪ್ರೂಫ್' ಕವರ್‌!

YOSH ಕಂಪೆನಿಯ ವಾಟರ್ ಪ್ರೂಫ್ ಕವರ್‌ ಬಳಸುವುದರಿಂದ ನಿಮ್ಮ ಸ್ಮಾರ್ಟ್‌ಫೋನ್ ಸುಧಾರಿತವಾದ ರಕ್ಷಣೆ ಪಡೆಯುತ್ತದೆ. ಭದ್ರತೆಯ ಈ ಹೆಚ್ಚುವರಿ ಪದರವನ್ನು ಹೊಂದಿರುವ ಈ ವಾಟರ್‌ ಪ್ರೂಫ್ ಬ್ಯಾಗ್‌ ಸುರಕ್ಷತೆಗೆ ಹೇಳಿ ಮಾಡಿಸಿದಂತಿದೆ. ಎರಡು ನಿರಂತರ ಗಂಟೆಗಳವರೆಗೆ ನೀರಿನಲ್ಲಿ ಮೊಬೈಲ್ ಮುಳುಗಿದ್ದರೂ ನೀರು ಒಳ ಬರದಿರುವುದನ್ನು ಖಚಿತಪಡಿಸುತ್ತದೆ.

ಓದಿರಿ: ಉತ್ತರ ಕೋರಿಯಾಗಿಂತಲೂ ವಿಚಿತ್ರ ಕಾನೂನುಗಳು ಚೀನಾದಲ್ಲಿವೆ ಎಂದರೆ ನೀವು ನಂಬಲ್ಲ!!

Best Mobiles in India

English summary
water is still the mortal enemy of many electronics. Even though many modern phones now feature some level of water resistance, they’ll typically be rated for very brief immersion, and only in freshwater. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X