ಆದಾಯ ತೆರಿಗೆ ಮರುಪಾವತಿ ಎಸ್ಎಂಎಸ್ ಬಗ್ಗೆ ಎಚ್ಚರವಿರಲಿ..!

By GizBot Bureau
|

ಈಗಿನ ತಂತ್ರಜ್ಞಾನದ ಜಗತ್ತಿನಲ್ಲಿ ಮೋಸಮಾಡುವವರು ಒಂದು ಸಣ್ಣ ಅವಕಾಶವನ್ನೂ ಬಿಡುವುದಿಲ್ಲ ಮತ್ತು ಅದನ್ನು ಬಳಸಿಕೊಂಡು ಮಕ್ಮಲ್ ಟೋಪಿ ಹಾಕೋಕೆ ಸರ್ವಪ್ರಯತ್ನವನ್ನೂ ಮಾಡುತ್ತಾರೆ. ಸದ್ಯ ಭಾರತೀಯರಿಗೆ ತೆರಿಗೆ ಪಾವತಿ ಮತ್ತು ಮರುಪಾವತಿ ಮಾಡಿಕೊಳ್ಳುವ ಸಮಯವಾಗಿದ್ದು, ಇದನ್ನೇ ಲೂಟಿಕೋರರು ತಮ್ಮ ಬಂಡವಾಳವಾಗಿ ಮಾಡಿಕೊಂಡಿದ್ದಾರೆ.

ಹೊಸ ಸೈಬರ್ ಕ್ರೈಮ್ ವರದಿಯಂತೆ ಕಳ್ಳರು ಆದಾಯ ತೆರಿಗೆಯ ಎಸ್ಎಂಎಸ್ ಮಾದರಿಯನ್ನು ತಮ್ಮ ಬಂಡವಾಳವಾಗಿ ಮಾಡಿಕೊಂಡಿದ್ದು ಜನರಿಗೆ ಮಂಕುಬೂದಿ ಎರಚುವ ಕೆಲಸಕ್ಕೆ ಇದನ್ನೇ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆದಾಯ ತೆರಿಗೆ ಮರುಪಾವತಿ ಎಸ್ಎಂಎಸ್ ಬಗ್ಗೆ ಎಚ್ಚರವಿರಲಿ..!

ತೆರಿಗೆ ಇಲಾಖೆ - ಸೈಬರ್ ಕ್ರೈಂ

ದಿ ಹಿಂದೂ ವರದಿ ಮಾಡಿರುವಂತೆ, ಮೆಸೇಜ್ ನಲ್ಲಿ ಆದಾಯ ತೆರಿಗೆ ಮರುಪಾವತಿ ಅನುಮೋದಿಸಲಾಗಿದೆ ಮತ್ತು ನಿಮ್ಮ ಬ್ಯಾಂಕಿನ ವಿಳಾಸ ತಪ್ಪಾಗಿದೆ ಎಂದು ನಮೂದಿಸಲಾಗಿರುತ್ತದೆ ಮತ್ತು ಮೆಸೇಜ್ ಪಡೆದವರ ಬಳಿ ತಮ್ಮ ಬ್ಯಾಂಕ್ ಖಾತೆಯ ವಿವರವನ್ನು ಖಾತ್ರಿ ಪಡಿಸುವಂತೆ ಕೋರಲಾಗುತ್ತದೆ. ಒಂದು ವೇಳೆ ನಿಮ್ಮ ಬ್ಯಾಂಕಿನ ವಿಳಾಸ ತಪ್ಪಾಗಿದ್ದಲ್ಲಿ ಸರಿಯಾದ ವಿಳಾಸವನ್ನು ನೀಡಲು ಮೆಸೇಜಿನಲ್ಲಿರುವ ಲಿಂಕನ್ನು ಕ್ಲಿಕ್ಕಿಸಿ ಸರಿಯಾದ ಬ್ಯಾಂಕ್ ವಿಳಾಸವನ್ನು ನೀಡುವಂತೆ ಕೋರಲಾಗುತ್ತದೆ.

ಬ್ಯಾಂಕಿನ ವಿಳಾಸ ತಪ್ಪಾಗಿರುವುದರಿಂದಾಗಿ ಹೆಚ್ಚಿನ ಬಳಕೆದಾರರು ಲಿಂಕ್ ನ್ನು ಕ್ಲಿಕ್ಕಿಸುತ್ತಾರೆ ಮತ್ತು ಹಾಗೆ ಮಾಡುವುದರಿಂದಾಗಿ ತೆರಿಗೆ ಇಲಾಖೆಯ ವೆಬ್ ಸೈಟ್ ನಂತಹ ಪೇಜ್ ಒಂದು ತೆರೆದುಕೊಳ್ಳುತ್ತದೆ. ಅಲ್ಲಿ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಹಾಕಲು ಕೂಡ ಸ್ಥಳವಕಾಶವಿರುತ್ತದೆ. ಮುಂದಿನ ಹಂತದಲ್ಲಿ ಅದು ಸರಿಯಾದ ಬ್ಯಾಂಕ್ ವಿಳಾಸವನ್ನು ಕೇಳುತ್ತದೆ ಮತ್ತು ಸುಲಭದಲ್ಲಿ ಅವರು ಬ್ಯಾಂಕ್ ವಿಳಾಸದ ಅಡ್ರೆಸ್ ಪಡೆದು ನಿಮ್ಮ ಖಾತೆಯಿಂದ ಹಣ ಲಪಟಾಯಿಸುವ ದಂಧೆಯಲ್ಲಿ ತೊಡಗಿಕೊಳ್ಳುತ್ತಾರೆ.

ಒಮ್ಮೆ ಬ್ಯಾಂಕಿನ ಸರಿಯಾದ ನಂಬರ್ ಅವರಿಗೆ ತಿಳಿದ ನಂತರ, ಅವರು ಐಟಿ ಅಧಿಕಾರಿಗಳಂತೆ ನಿಮಗೆ ಕರೆ ಮಾಡುತ್ತಾರೆ ಮತ್ತು ನಿಮ್ಮಿಂದ ಐಟಿ ಮರುಪಾವತಿ ಹಂತಗಳಲ್ಲಿ ನೀಡಲಾಗಿರುವ ಮಾಹಿತಿಗಳು ತಪ್ಪಾಗಿದೆ ಮತ್ತು ಅದಕ್ಕಾಗಿ ನೀವು ದಂಡವನ್ನು ತೆತ್ತಬೇಕು ಎಂದು ಬೆದರಿಕೆ ಕರೆ ಮಾಡುತ್ತಾರೆ. ನಂತರ ಅವರು ಡಾರ್ಕ್ ನೆಟ್ ಮೂಲಕ ನಿಮ್ಮ ಹಣವನ್ನು ದೋಚುತ್ತಾರೆ.

ಐಟಿ ಡಿಪಾರ್ಟ್ ಮೆಂಟ್ ನಂತಹ ವೆಬ್ ಸೈಟ್ ನಲ್ಲಿ ನೀಡಲಾಗಿರುವ ಮಾಹಿತಿಯ ಅನುಸಾರ ಅವರು ನಿಮ್ಮ ಖಾತೆಯ ಹಣವನ್ನು ಅವರ ಅಕೌಂಟಿಗೆ ಟ್ರ್ಯಾನ್ಸ್ಫರ್ ಮಾಡಿಕೊಳ್ಳುವ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿರುತ್ತಾರೆ ಮತ್ತು ನಿಮ್ಮ ಹಣ ನಿಮ್ಮ ಖಾತೆಯಿಂದ ಮಂಗಮಾಯವಾಗುವಂತೆ ಮಾಡುತ್ತಾರೆ ಚಾಲಾಕಿಗಳು.

ಇಂತಹ ಹಗರಣಗಳಿಂದ ಸುರಕ್ಷಿತವಾಗಿರುವುದು ಹೇಗೆ ?

ಇಂತಹ ಹಗರಣಗಳಿಂದ ನಿಮ್ಮನ್ನ ನೀವು ಕಾಪಾಡಿಕೊಳ್ಳಲು, ಇಂತಹ ಅನುಮಾನಾಸ್ಪದ ಮೆಸೇಜ್ ಗಳಿಗೆ ಪ್ರತ್ಯುತ್ತರ ನೀಡುವುದು ಮತ್ತು ಇಮೇಲ್ ಗಳಿಗೆ ಪ್ರತಿಕ್ರಿಯಿಸುವ ಕೆಲಸವನ್ನು ಮಾಡಬಾರದು. ತಪ್ಪು ಅಕ್ಷರಗಳು ಮತ್ತು ವ್ಯಾಕರಣ ತಪ್ಪು ಇರುವ ಮೆಸೇಜ್ ಗಳಿಗೆ ಯಾವುತ್ತೂ ಬೆಲೆ ನೀಡಬೇಡಿ. ಯುಆರ್ ಎಲ್ ನಲ್ಲೂ ಕೂಡ ಅಕ್ಷರಗಳು ತಪ್ಪಿರುತ್ತವೆ, ಅವುಗಳನ್ನು ಗಮನಿಸಿ. ಇಂತಹ ಪ್ರಕರಣಗಳನ್ನು ಗಮನಿಸಿದಾಗ ಕೂಡಲೇ ದೂರು ದಾಖಲಿಸುವುದನ್ನು ಮರೆಯಬೇಡಿ. ಹೀಗೆ ಮಾಡುವುದರಿಂದಾಗಿ ನೀವು ಹಗರಣಗಳಿಂದ ಸುರಕ್ಷಿತವಾಗಿ ಇರಲು ಸಾಧ್ಯವಾಗುತ್ತದೆ ಎಂಬುದನ್ನು ಮರೆಯಬೇಡಿ.

Most Read Articles
Best Mobiles in India

English summary
Beware of fraud Income Tax refund SMS. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more